ಮನುಷ್ಯನ ಗ್ರಹಣಶಕ್ತಿಯನ್ನು ತರ್ಕದ ಪರಿಮಿತಿಯನ್ನು ಮೀರಿ ಎಷ್ಟೋ ಮೇಲಕ್ಕೆ ಕೊಂಡುಹೋಗಬಹುದು ಎಂದು ಸದ್ಗುರುಗಳು ಇಲ್ಲಿ ಸೂಚಿಸುತ್ತಾರೆ. ಸ್ವಾಮಿ ವಿವೇಕಾನಂದರ ಜೀವನದ ಒಂದು ಅದ್ಭುತ ಘಟನೆಯನ್ನು ಅದಕ್ಕೆ ಉದಾಹರಣೆಯನ್ನಾಗಿ ನೀಡುತ್ತಾರೆ.
Swami Vivekanandaru pustakavannu oduttiddiddu hege
ಲಿಪ್ಯಂತರ:
ಸದ್ಗುರು: ಮನುಷ್ಯನ ಗ್ರಹಣಶಕ್ತಿ ಬರೀ ಪದಗಳನ್ನು ಅರ್ಥೈಸೋದಕ್ಕಿಂತ್ಲೂ ತುಂಬಾ ಮೀರಿದ್ದು. ನಾನೀಗ ಮಾತಾಡ್ತಾ ಇದೀನಿ. ನಿಮ್ಮ ಗ್ರಹಣಶಕ್ತಿ ನಿಜವಾಗಿ ಬರೀ ನೀವು ಕೇಳ್ತಾ ಇರೋ ಪದಗಳಿಗಿಂತ್ಲೂ ತುಂಬಾ ಹೆಚ್ಚಿದೆ. ಆದ್ರೆ ಈವಾಗ ಮನಸ್ಸಿಗೆ training ಆಗ್ಬಿಟ್ಟಿದೆ -- ಬರೀ ಕೇಳೋದಷ್ಟೆ ಅಲ್ಲ, ರೆಕಾರ್ಡ್ ಮಾಡೋದು, ನೆನಪಿಸ್ಕೊಳೋದು, ನೋಟ್ಸ್ ತಗೋಳೋದು. ಕೆಲವ್ರ್ ಕೈ ತುರಿಸ್ತಾ ಇದೆ. ನಿಮಗೆ ಏನಾದ್ರೂ important ಅನ್ಸಿದ್ರೆ ಅದನ್ನ ಬರೀಲೇಬೇಕು (ನಗು). ಆದ್ರೆ ಮನುಷ್ಯನ ಗ್ರಹಣಶಕ್ತಿ ಇದನ್ನೆಷ್ಟೋ ಮೀರಿದ್ದು.
ಇತ್ತೀಚೆಗೆ, ನಾಲ್ಕು ದಿನಗಳ ಹಿಂದೆ, ನಾನು ಈ ದೇಶದ ಒಬ್ಬ ಪ್ರಮುಖ ಪರಿಸರ ವಿಜ್ಞಾನಿ ಜೊತೆ ಮಾತುಕತೆಯಾಡ್ತಿದ್ದಾಗ ಇದ್ರ್ ಬಗ್ಗೆ ಮಾತಾಡಿದ್ವಿ. ಊಟದ್ ಸಮಯ್ದಲ್ಲಿ ಹಲವಾರು ವಿಷ್ಯಗಳನ್ನ ಚರ್ಚಿಸಿದ್ವಿ. ಅವ್ರ್ ಕೇಳಿದ್ರು, "ಸದ್ಗುರು, ನೀವ್ ಯಾವ ಪುಸ್ತಕಗಳನ್ನ ಓದ್ತೀರ?" ನಾನಂದೆ "ಏಸ್ಟೆರಿಕ್ಸ್ ಮತ್ತು ಡೆನ್ನಿಸ್ ದ ಮೆನೆಸ್ ಕಾಮಿಕ್ಸ್. (ನಗು) ಅದೇ ನನ್ನ ಓದು" ನನಗೆ ಓದಕ್ಕೆ ಸಮಯಾನೇ ಸಿಗಲ್ಲ, ಯಾಕಂದ್ರೆ ನಾನ್ ಯಾವಾಗ್ಲೂ ಓಡಾಡ್ತಾನೇ ಇರ್ತೀನಿ, ನ್ಯೂಸ್ ಪೇಪರ್ ಓದಿದ್ರೇನೇ ದೊಡ್ ವಿಷ್ಯ. "ಹಾಗಿದ್ರೆ ನಿಮ್ಗೆ ಎಲ್ಲ ಮಾಹಿತಿಗಳು ಎಲ್ಲಿಂದ ಸಿಗುತ್ವೆ?" "ನಾನು ನಿಮ್ಮಿಂದ ತಗೊಳ್ತೀನಿ. ನೀವು ಎಲ್ಲ ಅಧ್ಯಯನ ಮಾಡಿದೀರ. ನಾನ್ಯಾಕೆ ಪುನಃ ಅದನ್ ಓದ್ಲಿ? ನಾನ್ ಆ ಪುಸ್ತಕಗಳನ್ನೆಲ್ಲ ತೆರಿಯಲ್ಲ. ನೀವಿಲ್ಲಿ ಕೂತಿದೀರ. ನಾನು ನಿಮ್ಮಿಂದ್ಲೇ ಎಲ್ಲ ಪಡ್ಕೊಳ್ತಾ ಇದೀನಿ." "ಆದ್ರೆ ಎಲ್ಲ technical ಪದಗಳು ಎಲ್ಲಿಂದ ಸಿಗುತ್ತೆ ನಿಮ್ಗೆ?" ನಾನಂದೆ ಅದೀಗ ನಿಮ್ ಮೆದುಳಲ್ಲಿದೆ ತಾನೆ. ನಾನಲ್ಲಿಂದ್ಲೇ ತಗೊಳ್ತೀನಿ, ನನಗ್ ಬೇಕಾದ್ದೆಲ್ಲ. ನಾನದನ್ನೆಲ್ಲ ಓದ್ತಾ ಕೂರಲ್ಲ, ಹೇಗಿದ್ರೂ ಭಾರೀ ಭಾರೀ ಪದಗಳು ನನಗೆ ಹಿಡಿಸಲ್ಲ.
ಯಾಕಂದ್ರೆ ಮನುಷ್ಯನ ಗ್ರಹಣಶಕ್ತಿ ಇದನ್ನೆಲ್ಲ ಎಷ್ಟೋ ಮೀರಿದ್ದು. ಅದಿಕ್ಕೆ ನಾನ್ ನಿಮ್ಗೆ ಯಾವಾಗ್ಲೂ ಹೇಳೋದು, "ನನ್ನೊಂದಿಗೆ ಇರಿ, ನನ್ನೊಂದಿಗೆ ಇರಿ" ಅಂತ. ನೀವು ನನ್ನೊಂದಿಗೆ ಸುಮ್ನೆ ಇರೋದಾದ್ರೆ ನಿಮ್ಮ ಗ್ರಹಣಶಕ್ತಿ ನಾನ್ ಹೇಳೋ ಪ್ರತಿಯೊಂದು ಪದವನ್ನ ನೋಟ್ ಮಾಡೋದಿಕ್ಕಿಂತ್ಲೂ ಎಷ್ಟೋ ಹೆಚ್ಚಿದೆ. ಈ ಎಲ್ಲ ಪದಗಳನ್ನ ನೀವ್ ಒಟ್ ಹಾಕಿದ್ರೂ ನಿಜ್ವಾಗಿ ನಿಮಗ್ ಏನೂ ಗೊತ್ತಾಗಲ್ಲ. ನಿಮಗೊಂದು ರಹಸ್ಯ ಹೇಳ್ಲಾ? ಒಂದ್ ಆಕ್ಸ್-ಫರ್ಡ್ ಡಿಕ್ಶ್-ನರಿ ತಗೊಳಿ. ನಾನ್ ಹೇಳೋದೆಲ್ಲ ಅದ್ರಲ್ಲಿದೆ (ನಗು). ಅಲ್ವಾ? ನೀವ್ ಬರೀ ಪದಗಳನ್ನ ಜೋಡಿಸ್ಬೇಕು ಅಷ್ಟೆ. ಅದ್ರಿಂದ ಏನೂ ಆಗಲ್ಲ. ಹಾಗಾಗಿ ಗ್ರಹಣಶಕ್ತಿಯನ್ನ ಹೆಚ್ಚಿಸೋದು ಬಹಳ ಮುಖ್ಯ. ಯಾಕಂದ್ರೆ, ನೀವು ಗ್ರಹಿಸೋದು ಮಾತ್ರ ನಿಮಗ್ ನಿಜ್ವಾಗ್ ಗೊತ್ತು. ಉಳ್ದಿದ್ದೆಲ್ಲ ಬರೀ ಕತೆ ಮತ್ತು ಕಲ್ಪನೆಗಳು, ಅಲ್ವಾ? ನೀವ್ ಏನನ್ನ ಗ್ರಹಿಸ್ತೀರೋ, ಅನುಭವಪೂರ್ವಕವಾಗಿ ತಿಳ್ಕೋತೀರೋ, ಅದು ಮಾತ್ರ ನಿಮಗ್ ಗೊತ್ತು. ಉಳ್ದಿದ್ದೆಲ್ಲಾ ಟೊಳ್ಳು ಕತೆಗಳು. ಕತೆ ಎಷ್ಟು ಚೆನ್ನಾಗಿದ್ರೂ ಸಹ, ಅದು ಟೊಳ್ಳೇ, ಯಾಕಂದ್ರೆ ಅದು ನಿಮ್ ಜೀವನ್ದಲ್ಲಿ ಏನೂ ಬದಲಾವಣೆ ಉಂಟ್ ಮಾಡಲ್ಲ. ನಿಮ್ ಜೀವನ್ದಲ್ಲಿ ಬದಲಾವಣೆ ಉಂಟಾಗ್ ಬೇಕಾದ್ರೆ ಆ ತಿಳಿವಳಿಕೆ ಹಿಂದೆ ಅನುಭವ ಇರ್ಬೇಕು. ಅದಾಗೋದು ನೀವು ಗ್ರಹಣಶೀಲರಾದ್ರೆ ಮಾತ್ರ. ವಿವೇಕಾನಂದ ಕೇಳಿದೀರ? ಮ್? ಅವ್ರು ಈ ದೇಶಕ್ಕೆ ಬಂದಂತ ಮೊದಲ್ನೇ ಯೋಗಿ 1893ರಲ್ಲಿ. ಆ ದಿನಗಳಲ್ಲಿ ಜನ್ರಲ್ಲಿ ಸಂಚಲನವನ್ನ ಉಂಟ್ ಮಾಡಿದ್ರು. ಅವ್ರು ಅಮೇರಿಕಾದಿಂದ ವಾಪಸ್ ಹೋಗೋವಾಗ ಯೂರೋಪಿಗೂ ಹೋಗಿದ್ರು, ಹಾಗೂ ಅಲ್ಲಿ ಒಬ್ಬ ಜರ್ಮನ್ ಫಿಲಾಸಫರ್ನ ಅತಿಥಿಯಾಗಿದ್ರು. ರಾತ್ರಿ ಊಟದ್ ನಂತ್ರ ಅವ್ರು ಸ್ಟಡಿ ರೂಮ್ ನಲ್ಲಿ ಭೇಟಿಯಾಗಿ ಅದೂ ಇದೂ ಮಾತಾಡ್ತಿದ್ರು. ಒಂದ್ ದೊಡ್ ಪುಸ್ತಕ ಇತ್ತು ಮೇಜಿನ್ ಮೇಲೆ. 700 ಪುಟಕ್ಕೂ ಹೆಚ್ಚಿಂದು. ಆ ವ್ಯಕ್ತಿ ಆ ಪುಸ್ತಕದ್ ಬಗ್ಗೆ ಬಹಳ ಹೊಗಳಿ ಮಾತಾಡ್ತಿದ್ರಿಂದ ವಿವೇಕಾನಂದ ಅಂದ್ರು ಆ ಪುಸ್ತಕವನ್ನ ನನಗೆ ಒಂದ್ ಗಂಟೆ ಕಾಲ ಕೊಡ್ತೀರ ಅಂತ. ನಾನ್ ನೋಡ್ತೀನಿ ಅದ್ರಲ್ ಏನಿದೆ ಅಂತ. ಅವ್ರು ನಕ್ರು. ಒಂದ್ ಗಂಟೆಯಲ್ಲಿ ಈ ಪುಸ್ತಕ ಓದ್ತೀರಾ ಅಂದ್ರು. ನಾನ್ ಅದನ್ನ ವಾರಗಳಿಂದ ಓದ್ತಾ ಇದೀನಿ, ನನಗೇನೂ ಅರ್ಥ ಆಗ್ತಿಲ್ಲ, ಅಷ್ಟು ಕ್ಲಿಷ್ಟವಾಗಿದೆ ಅದು. ಅದೂ ಅಲ್ದೆ ಅದು ಜರ್ಮನ್ ಭಾಷೆಯಲ್ಲಿದೆ. ನಿಮಗ್ ಆ ಭಾಷೇನೂ ಗೊತ್ತಿಲ್ಲ. ಒಂದ್ ಗಂಟೆನಲ್ ಏನ್ ಮಾಡ್ತೀರ ನೀವು? ವಿವೇಕಾನಂದ ಪರ್ವಾಗಿಲ್ಲ ಒಂದ್ ಗಂಟೆಗ್ ಕೊಡಿ, ನೊಡೋಣ ಅಂದ್ರು. ಆ ವ್ಯಕ್ತಿ ಪುಸ್ತಕಾನ ಕೊಟ್ರು. ಅವ್ರ್ ಪುಸ್ತಕನ ತಗೊಂಡು ತಮ್ ಕೈಗಳ ನಡುವೆ ಇಟ್ಕೊಂಡು ಕಣ್ ಮುಚ್ಚಿ ಸುಮ್ನೆ ಕೂತ್ರು. ಒಂದ್ ಗಂಟೆ ನಂತ್ರ ಪುಸ್ತಕಾನ ವಾಪಸ್ ಕೊಟ್ಟು "ಇದ್ರಲ್ಲಿ ಮಹತ್ವವಾದ್ದು ಏನೂ ಇಲ್ಲ" ಅಂದ್ರು (ನಗು). ಆ ವ್ಯಕ್ತಿ ಅಂದ್ ಕೊಂಡ್ರು ಇದು ದುರಹಂಕಾರದ್ ಪರಮಾವಧಿ. ನೀವು ಪುಸ್ತಕವನ್ನ ತೆರೀಲೂ ಇಲ್ಲ, ಅದ್ರ್ ಮೇಲೆ ಅದ್ರ್ ಬಗ್ಗೆ ಕಾಮೆಂಟ್ ಮಾಡ್ತಾ ಇದೀರ. ನಿಮಗ್ ಆ ಭಾಷೇನೂ ಗೊತ್ತಿಲ್ಲ. ಹಾಗಾಗಿ ಅವ್ರಿಗೆ ಸ್ವಲ್ಪ ಕಿರಿಕಿರಿಯಾಯ್ತು, ಅವ್ರಂದ್ರು "ಇದೇನು ಅಸಂಬದ್ಧ". ವಿವೇಕಾನಂದ ಹೇಳಿದ್ರು, ಆ ಪುಸ್ತಕದ್ ಬಗ್ಗೆ ಏನ್ ಬೇಕಿದ್ರೂ ಕೇಳಿ, ಹೇಳ್ತೀನಿ. "ಸರಿ, ಪುಟ 633ರಲ್ಲಿ ಏನಿದೆ?" ಒಂದ್ ಪದವನ್ನೂ ಬಿಡ್ದೆ ವಿವೇಕಾನಂದ ಹೇಳಿಬಿಟ್ರು. ಯಾವ್ದೇ ಪುಟವನ್ನ ಕೇಳಿ. ಬರೀ ಪುಟ ಸಂಖ್ಯೆಯನ್ನ ಹೇಳಿದ್ರೆ ಸಾಕು ಅವ್ರು ಆ ಪುಟವನ್ನ ಒಂದ್ ಪದವನ್ನೂ ಬಿಡ್ದೆ ಹೇಳ್ತಾರೆ. ಆ ವ್ಯಕ್ತಿ ಕೇಳಿದ್ರು, ಇದು ಹೇಗೆ ಸಾಧ್ಯ? ನೀವ್ ಪುಸ್ತಕವನ್ನ ತೆರೀಲೂ ಇಲ್ಲ, ಇದ್ ಹೇಗೆ ಸಾಧ್ಯ? ಅವ್ರಂದ್ರು "ಅದಿಕ್ಕೆ ಜನ್ರು ನನ್ನನ್ನ ವಿವೇಕಾನಂದ ಅಂತ ಕರಿಯೋದು" (ನಗು) ವಿವೇಕ ಅಂದ್ರೆ ಗ್ರಹಣಶಕ್ತಿ. ಅವ್ರ್ ಹೆಸ್ರು ನರೇಂದ್ರ. ಅವ್ರ್ ಗುರು ಅವರ ಗ್ರಹಣಶಕ್ತಿಯನ್ನ ನೋಡಿ ಅವ್ರನ್ನ ವಿವೇಕಾನಂದ ಅಂತ ಕರೆದ್ರು. ಹಾಗಾಗಿ ಅವರಂದ್ರು "ಅದಿಕ್ಕೆ ನನ್ನನ್ನ ವಿವೇಕಾನಂದ ಅಂತ ಕರಿಯೋದು" ಹಾಗಾಗಿ ನಿಮ್ಮ ತಾರ್ಕಿಕ ಮನಸ್ಸಿನಿಂದ ಜೀವನದ ಎಲ್ಲ ಅಂಶಗಳನ್ನ ಗ್ರಹಿಸೋದಿಕ್ಕಾಗೋದಿಲ್ಲ. ಯಾಕಂದ್ರೆ ಜೀವನದ ಹಲವಾರು ಆವಶ್ಯಕ ವಿಷ್ಯಗಳನ್ನ ನಮ್ಮ ತರ್ಕ filter ಮಾಡಿ ತೆಗೆದ್ ಹಾಕ್ಬಿಡತ್ತೆ.