Bharatiyatege sanchakara taraballa mooru sangatigalu
ಲಿಪ್ಯಂತರ:
ದುರದಷ್ಟವಶಾತ್ ನಮ್ ದೇಶದಲ್ಲಿ ಕಲವ್ರು ಈ ವಿವಾದವನ್ನ ಪ್ರಾರಂಭಿಸಿದಾರೆ. ನಾವು ರಾಷ್ಟ್ರಗೀತೆಗೆ ಎದ್ದು ನಿಲ್ಬೇಕಾ ಬೇಡ್ವಾ ಅಂತ. ಆದ್ರೆ ಈ ವಿವಾದದ ಸಂಬಂಧ ಇರೋದು ದೇಶಭಕ್ತಿ ಜೊತೆ ಅಲ್ಲ. ನಿಜ ವಿಷ್ಯ ಇಷ್ಟೆ, ಅವರ್ ಒಂದ್ ಕೈಯಲ್ಲಿ popcorn ಇದೆ, ಮತ್ತು ಇನ್ನೊಂದ್ ಕೈಯಲ್ಲಿ cocacola ಇದೆ. ಅದಿಕ್ಕೆ ಅವ್ರಿಗೆ ನಿಲ್ಲಕ್ಕೆ ಆಗ್ತಿಲ್ಲ. ಜನಗಳು ಯಾಕೆ ಇಷ್ಟು ಕ್ಷುಲ್ಲಕರಾಗ್ತಿದಾರೆ ಅಂದ್ರೆ, ಅವರು ಯಾವ್ದೇ ವಿಪತ್ತುಗಳನ್ನ ಎದುರಿಸಿಲ್ಲ. ಅವರು ವಿಪತ್ತುಗಳನ್ನ ಯಾಕೆ ಎದುರಿಸಿಲ್ಲ ಅಂದ್ರೆ, ಅವರ ದೇಶದ ಗಡಿಗಳಲ್ಲಿ ಧೀರರಾದ ವ್ಯಕ್ತಿಗಳು ಕಾವಲು ನಿಂತಿದಾರೆ. ವಿಶೇಷವಾಗಿ ನಾವು ಭಾರತದವ್ರು ಇದನ್ನ ಮರೀಬಾರ್ದು, ಯಾಕಂದ್ರೆ, ನಾವೀಗ ಸಾವಿರ ವರ್ಷಗಳಷ್ಟು ಕಾಲ ಆಕ್ರಮಣಗಳ ಸರಮಾಲೆಯನ್ನೇ ಎದುರಿಸಿದ್ದೇವೆ. ಮತ್ತು ನಮ್ಮ ಜನರ್ ಜೊತೆ ಎಂಥಾ ಭಯಾನಕ ಸಂಗ್ತಿಗಳು ನಡ್ದಿವೆ. ಆದರೆ ದುರದಷ್ಟವಶಾತ್ ಅವನ್ನ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಸರಿಯಾಗಿ ಬರ್ದೂ ಇಲ್ಲ, ಮತ್ತು ನಮ್ಮ ಫಿಲ್ಮ್ ಗಳಲ್ಲಿ ಸರಿಯಾಗಿ ತೋರಿಸ್ತಾನೂ ಇಲ್ಲ.
ಒಂದು ರಾಷ್ಟ್ರ ಹಲವು ರೀತಿಗಳಲ್ಲಿ ಕಟ್ಟಲ್ಪಡುತ್ತೆ. ಅವುಗಳಲ್ಲಿ ರಾಷ್ಟ್ರವನ್ನ ಕಟ್ಟಬೇಕಾದ ಅತ್ಯಂತ ಪ್ರಮುಖವಾದ ಸ್ಥಳವೆಂದರೆ, ಜನರ ಮನಸ್ಸು ಮತ್ತು ಹೃದಯಗಳು. ದುರದಷ್ಟವಶಾತ್ ನಾವಿದನ್ನ ಮಾಡಿಲ್ಲ. ಇವತ್ತೂ ಕೂಡ, ಜನರು ತಮ್ಮನ್ನ ಗುರುತಿಸಿಕೊಳ್ಳೋದು ಅವರ ಜಾತಿ, ಮತ, ಅವರ ಪಂಗಡ, ಇತ್ಯಾದಿಗಳ ಜೊತೆಯಷ್ಟೆ. ರಾಷ್ಟ್ರೀಯತೆ ಅನ್ನೋದು ಎಲ್ಲೋ ಹಿನ್ನಲೆಯಲ್ಲಿದೆ ಅಷ್ಟೆ. ಇತ್ತೀಚಿನ ತಲೆಮಾರಿನಲ್ಲಿ ಇದು ಸ್ವಲ್ಪ ಪರ್ವಾಗಿಲ್ಲ. ಆದರೆ ಹಿಂದಿನ ತಲೆಮಾರುಗಳನ್ನ ನೋಡಿದ್ರೆ, ಗ್ರಾಮೀಣ ಭಾರತದಲ್ಲಿ ಅವ್ರಿಗೆ ದೇಶದೊಂದಿಗೆ ಪ್ರಬಲವಾದ ನಂಟೇನೂ ಇಲ್ಲ. ಇದು ಸಣ್ಣವಯಸ್ಸಿನಲ್ಲಿ ಆಗ್ಬೇಕು. ತಮ್ಮ ದೇಶದ ಬಗ್ಗೆ ಅವರಿಗೆ ಹೆಮ್ಮೆ, ಅಭಿಮಾನ ಬರ್ಬೇಕು. ಇಲ್ಲಾಂದ್ರೆ, ಯಾರು ದೇಶಕ್ಕೋಸ್ಕರ ದುಡೀತಾರೆ, ಯಾರು ಹೋರಾಟ ಮಾಡ್ತಾರೆ, ಯಾರು ಸಾಯೋದಿಕ್ಕೆ ತಯಾರಾಗಿರ್ತಾರೆ, ದೇಶಭಕ್ತಿ ಬರ್ಲಿಲ್ಲಾಂದ್ರೆ? ನನ್ನನ್ನ ಒಬ್ರು ನ್ಯೂಸ್ anchor ಕೇಳಿದ್ರು, "ಈ ಎದ್ದು ನಿಲ್ಲೋದೆಲ್ಲ ಏನು? ನಾವು ಸಿನೆಮಾ ನೋಡ್ಲಿಕ್ಕೆ ಹೋದ್ರೆ ಎದ್ದು ನಿಲ್ಬೇಕು. ಈ ಭಾವುಕವಾದ ವಿಷ್ಯ ಎಲ್ಲ ಯಾಕೆ ಬೇಕು?" ಅಂತ. ನಾನ್ ಅವ್ರನ್ನ ಒಂದ್ ಸಣ್ಣ ಪ್ರಶ್ನೆ ಕೇಳ್ದೆ "ನಿಮಗೆ ಕುಟುಂಬ ಇದ್ಯಾ?". "ಹೌದು" ಅಂದ್ರು. ನಾನ್ ಕೇಳ್ದೆ "ಭಾವನೆಗಳನ್ನ ಹೂಡದೇನೇ ನಿಮಗೆ ನಿಮ್ಮ ಕುಟುಂಬವನ್ನ ನಿಭಾಯಿಸೋಕಾಗುತ್ತಾ?" "ಇಲ್ಲ" ಅಂದ್ರು. ಪ್ರಯತ್ನಿಸಿ ನೋಡಿ, ನಿಮ್ಮ ಹೆಂಡ್ತಿಗೆ ಬರೀ ಊಟ, ಮನೆ ಎಲ್ಲ ಕೊಡಿ. ಆದ್ರೆ ಅಕೆ ಜೊತೆ ಸ್ವಲ್ಪಾನೂ ಭಾವುಕರಾಗ್ಬೇಡಿ. ನೋಡೋಣ ಎಷ್ಟ್ ದಿನ ಸಂಸಾರ ಉಳಿಯುತ್ತೆ ಅಂತ. ನಾಲ್ಕ್ ಜನ್ರ ಒಂದ್ ಸಣ್ಣ ಕುಟುಂಬ ಕಟ್ಬೇಕಾದ್ರೂ, ನೀವು ನಿಮ್ಮ ಎಲ್ಲ ಭಾವನೆಗಳನ್ನ ಅದ್ರಲ್ಲಿ ಹೂಡ್ಬೇಕು. ರಾಷ್ಟ್ರವನ್ನ ಕಟ್ಬೇಕಾದ್ರೆ, ಭಾವನೆಗಳಿಲ್ಲ ಅಂದ್ರೆ, ಅದನ್ನ ಹೇಗೆ ಕಟ್ತೀರ? ಅದು ಹೇಗೆ ಸಾಧ್ಯ? ರಾಷ್ಟ್ರ ಅನ್ನೋದು ಇರೋದು ನಮ್ಮ ಭಾವನೆಗಳಲ್ಲಿ ಮಾತ್ರ. ಅದು ಬೇರೆಲ್ಲೂ ಇಲ್ಲ. ಅದು ಇರೋದು ಅದ್ರ ಬಗ್ಗೆ ನಮ್ಗಿರೋ ಭಾವನೆಗಳಲ್ಲಿ ಮಾತ್ರ.
ಈ ಕೆಲ್ಸವನ್ನ ನಾವು ದೇಶದಲ್ಲಿ ಸಾಕಷ್ಟು ಮಾಡಿಲ್ಲ, ಇದನ್ನ ನಾವು ಮಾಡ್ಬೇಕು. ನಾನು general ಅವ್ರನ್ನ ಕೇಳಿದ್ದೀನಿ, ಆರ್ಮಿಯ ಒಂದು ವೀಡಿಯೋಗಾಗಿ. ನಾವಿದ್ರ ಬಗ್ಗೆ ನಮ್ ವಿದ್ಯಾರ್ಥಿಗಳೊಂದಿಗೆ ಮಾತಾಡ್ತಾ ಬಂದಿದೀವಿ. ನಾವು ಬೇರೆ 4500 ಸರ್ಕಾರೀ ಶಾಲೆಗಳನ್ನ ದತ್ತು ಕೂಡ ತಗೊಂಡಿದೀವಿ. ಇನ್ಮುಂದೆ ಅಲ್ಲಿ ಈ ಆರ್ಮಿ ವೀಡಿಯೋಗಳನ್ನ ತೋರಿಸ್ತೀವಿ.
ಪ್ರಶ್ನೆ: ಭಾರತದ ಸೇನಾದಳ, ರಾಜಕೀಯವಲ್ಲದ ಮತ್ತು ಜಾತ್ಯತೀತವಾದ ಒಂದು ಸಂಸ್ಥೆ. ಅದು ಯಾವುದೇ ನಿರ್ದಿಷ್ಟ ಗುಂಪನ್ನ ಬೆಂಬಲಿಸೋದಿಲ್ಲ. ಸಂವಿಧಾನವನ್ನ ಎತ್ತಿ ಹಿಡಿಯುತ್ತೆ. ಮತ್ತು ಅಧಿಕಾರದಲ್ಲಿರೋ ಪಕ್ಷದ ಚಿಂತನೆಯನ್ನ ಸ್ಪಷ್ಟವಾಗಿ ತಿಳಿದಿರುತ್ತೆ. ಇಂದಿನ social media ಮತ್ತು ಅತಿಯಾದ ಮಾಹಿತಿಯ ಸಂತೆಯಲ್ಲಿ, ಆರ್ಮಿ ತನ್ನ ಮೂಲತತ್ತ್ವಗಳನ್ನ ಕಾಪಾಡಿಕೊಳ್ಳಲು ಏನಾದ್ರೂ ಹೆಜ್ಜೆಗಳನ್ನ ತೆಗೊಳ್ಬೇಕಾ?
ಸದ್ಗುರು: Social media ದ ಆ ಎಲ್ಲ ಕುಪ್ಪೆನಾ ನೀವು ಕೇಳ್ಸ್ ಕೊಳ್ಳೋ ಅಗತ್ಯ ಇಲ್ಲ ಅನ್ಸುತ್ತೆ. ಸಾಮಾಜಿಕ ಜಾಲತಾಣಗಳಲ್ಲಿ ಅದು ಅನಾಮಧೇಯ commentary ಆಗಿರೋದ್ರಿಂದ ಯಾರು ಏನು ಬೇಕಾದ್ರೂ ಹೇಳ್ಬಹುದು. ಬರೀ ನಿಮ್ ಬಗ್ಗೆ ಅಲ್ಲ. ನನ್ ಬಗ್ಗೆ ಕೂಡ ಹೇಳ್ತಾರೆ (ನಗು). ಒಬ್ಬ ವ್ಯಕ್ತಿ ಏನೇನು ಮಾಡ್ಬಹುದೋ ಮತ್ತು ಮಾಡಲಾರನೋ - ಆ ಎಲ್ಲ ಆರೋಪಗಳನ್ನೂ ಜನ ಹಾಕ್ತಾರೆ ನಮ್ ಮೇಲೆ. ನಿಮಗವ್ರು ಯಾರು ಅಂತಾನೂ ಗೊತ್ತಿರಲ್ಲ. ಆದ್ರೆ ನಿಮ್ ಬದುಕಿನ ಮೇಲೆ ವ್ಯಾಖ್ಯಾನ ಕೊಡ್ತಿರ್ತಾರೆ. ನಿಮ್ ಜೀವನದ ನಿಮ್ಗೇನೇ ಗೊತ್ತಿಲ್ದೇ ಇರೋ ಸಂಗ್ತಿಗಳನ್ನೂ ಅವ್ರು ಹೇಳ್ತಾರೆ! (ನಗು) ನಾವು social media ದಲ್ಲಿ ಸ್ವಲ್ಪ ಪ್ರೌಢತೆಯನ್ನ ಪಡ್ಕೋಬೇಕು ಅಂತನ್ಸುತ್ತೆ. ಏನನ್ನ ನಿರ್ಲಕ್ಷಿಸ್ಬೇಕು, ಏನಕ್ಕೆ ಬೆಲೆ ಕೊಡ್ಬೇಕು ಅಂತ ಕಲೀಬೇಕು. ಯಾಕಂದ್ರೆ ಅದು ಅನಾಮಧೇಯವಾದ ಮಾಧ್ಯಮ. ಸಮಾಜದಲ್ಲಿ ಸ್ವಲ್ಪಾನೂ ಪ್ರಯೋಜನಕ್ಕೆ ಬಾರದ ಯಾವ್ದೇ ಪೆದ್ದ ಕೂಡ ಇಂದು ಎಲ್ಲರ ಮೇಲೆ ವ್ಯಾಖ್ಯಾನ ಬರಿಯೋದಕ್ಕೆ ಸಾಧ್ಯವಾಗಿದೆ. ಹಾಗೇ ಸೇನೆ ಬಗ್ಗೇನೂ ಬರೀತಾರೆ. ಹಾಗಾಗಿ ನಂಗನ್ಸುತ್ತೆ, ನೀವು social media ಕಡೆ ಏನೂ ಗಮನ ಹರಿಸ್ಬೇಕಾಗಿಲ್ಲ.
ಆದ್ರೆ, ಸ್ವಲ್ಪ ಅಧಿಕಾರ ಇರೋ ರಾಜಕೀಯ ಪಕ್ಷಗಳಲ್ಲಿ ಸೇನೆಯ ಬಗ್ಗೆ ಸರಿಯಾದ ಅಭಿಪ್ರಾಯವನ್ನ ಮೂಡಿಸ್ಬೇಕು. ಯಾಕೆಂದ್ರೆ ಇತ್ತೀಚೆಗೆ, ಆರರಿಂದ ಹನ್ನೆರಡು ತಿಂಗಳುಗಳಲ್ಲಿ, ಕೆಲವು ರಾಜಕೀಯ ನಾಯಕರು ಹೇಳಿದ ಕೆಲವು ವಿಷಯಗಳು ಸ್ವೀಕಾರಾರ್ಹವಲ್ಲ. ನಾನಿದ್ರ ಬಗ್ಗೆ ಕೆಲವ್ರತ್ರ ಮಾತಾಡಿದೀನಿ ಕೂಡ. ಇದ್ರ ವಿರುದ್ಧವಾಗಿ ಕಾನೂನು ಇರ್ಬೇಕು ಅಂತ. ಸ್ವಲ್ಪಾನೂ ಸ್ವೀಕಾರಾರ್ಹವಲ್ಲದ ಮಾತುಗಳನ್ನು ಹೇಳಲಾಗಿದೆ. ಯಾವುದೇ ನಿರ್ದಿಷ್ಟ ಹೇಳಿಕೆ ಗಳನ್ನು ಉದಾಹರಿಸಕ್ಕೆ ನಾನು ಇಷ್ಟ ಪಡಲ್ಲ. ಆದ್ರೆ ಏನು ಹೇಳಕ್ಕೆ ಇಷ್ಟ ಪಡ್ತೀನಿ ಅಂದ್ರೆ, ಭಾರತ ಒಂದು ಪರಿವರ್ತನೆಯ ಮೂಲಕ ಸಾಗ್ತಿದೆ ಅನ್ನೋದನ್ನ ನಾವು ಅರ್ಥ ಮಾಡ್ಕೋಬೇಕು. ರಾಜಕೀಯ ಪರಿವರ್ತನೆ. ಆರ್ಥಿಕವಾಗಿ ನಾವು ಸರಿಯಾದ ದಾರಿಯಲ್ಲಿದ್ದೀವಿ. ಇಡೀ ಪ್ರಪಂಚ ಹೇಳ್ತಿದೆ ನಾವು ಸರಿಯಾದ ದಾರಿಯಲ್ಲಿದ್ದೀವಿ ಅಂತ. ಆದರೆ ಕೆಲವ್ರು ದೇಶ ಹಾಳಾಗಿ ಹೋಗ್ತಾ ಇದೆ ಅಂತ ಹೇಳ್ತ ಇರ್ತಾರೆ, ಯಾವಾಗ್ಲೂ. ಋಣಾತ್ಮಕ ಹೇಳಿಕೆಗಳನ್ನೇ ನೀಡ್ತಿರ್ತಾರೆ. ನೀವು ಅದ್ರ ಬಗ್ಗೆ ಹೇಳಿದ್ರಿ ಅನ್ಸುತ್ತೆ. ನೀವು ಅದ್ರ ಕಡೆ ಏನೂ ಗಮನ ಹರಿಸ್ಬೇಕಾಗಿಲ್ಲ. ಅವ್ರಲ್ಲಿ ಹೆಚ್ಚಿನವ್ರು ಮುಂದಿನ 5-10 ವರ್ಷಗಳಲ್ಲಿ ರಾಜಕೀಯದಲ್ಲಿ ಉಳಿಯಲ್ಲ. ಹೊಸ ತಲೆಮಾರಿಗೆ ಅಭಿವೃದ್ಧಿ, ವಿಕಾಸ ಬೇಕು, ಹೊಸ ತಲೆಮಾರಿಗೆ ದೇಶ ಅವ್ರ ಆಕಾಂಕ್ಷೆಗಳನ್ನ ಪೂರೈಸ್ಬೇಕು. ಈ ಮೌಲ್ಯಗಳಿಗೆ ಸಮರ್ಪಿತರಲ್ಲದವ್ರಿಗೆ ಈ ದೇಶದಲ್ಲಿ ಉಳಿಗಾಲವಿಲ್ಲ. ಮುಂದೆ ಹಾಗೇ ಆಗುತ್ತೆ. ಆದ್ರೆ ಈಗ ಪರಿವರ್ತನೆ ಆಗ್ತಾ ಇದೆ. ರಾಜಕೀಯದಲ್ಲಿ ಬದುಕಿ ಉಳಿಯೋದಿಕ್ಕೆ ಕಷ್ಟಪಡ್ತಿರೋ ಕೆಲವ್ರಿದ್ದಾರೆ. ಆದ್ರಿಂದ ನೀವು ಕೆಟ್ಟ ಭಾಷೆ, ಅಸಹ್ಯವಾದ ಮಾತುಗಳನ್ನೆಲ್ಲ ಕೇಳ್ತೀರಿ. ಇದನ್ನೆಲ್ಲ ಸ್ವಲ್ಪ ಕಾಲ ತಡ್ಕೋಬೇಕು.
ದುರದಷ್ಟವಶಾತ್ ಸೇನೆ ಕೆಲ್ಸ ಮಾಡ್ತಿದ್ದಾಗ ಯಾರೋ ಕಲ್ಲು ಬಿಸಾಕ್ತಿದಾರೆ. ಇದನ್ನ ಒಪ್ಕೋಳೋಕೆ ಸಾಧ್ಯವೇ ಇಲ್ಲ. ಇದನ್ನ ನಾವು ಸಾಮಾನ್ಯ ಸಂಗ್ತಿ ಅಂತ ಒಪ್ಕೊಂಡ್ ಬಿಟ್ರೆ, ನಾವು ಮೂಲ ಅಡಿಪಾಯಕ್ಕೇ ಕೈಹಾಕ್ತೀವಷ್ಟೆ, ದೇಶದ್ದು. ರಾಷ್ಟ್ರದ ಮೂಲತತ್ತ್ವಕ್ಕೇ ಸಂಚಕಾರ ಬರುತ್ತೆ. ಇದು ಎಲ್ರಿಗೂ ಅರ್ಥ ಆಗ್ತಿದ್ಯೋ ಇಲ್ವೋ ಅಂತ ನಂಗೊತ್ತಿಲ್ಲ. ದೇಶದ ಮೂಲ ಅಡಿಪಾಯವನ್ನೇ ನಾವು ಅಲ್ಲಾಡಿಸ್ತೀವಿ, ದೇಶಕ್ಕಾಗಿ ಯಾರಾದ್ರೂ ಹೋರಾಡ್ತಿದ್ದಾಗ ನೀವು ಅವನ್ ಮೇಲೆ ಹಲ್ಲೆ ಮಾಡಿದ್ರೆ. ಯಾವ್ದೇ ರೀತಿನಲ್ಲಿ. ಕಲ್ಲೋ, ಚೂರಿನೋ, ಗುಂಡೋ ಅದು ವಿಷ್ಯ ಅಲ್ಲ. ಅವ್ನ ಮೇಲೆ ಹಲ್ಲೆ ಮಾಡ್ಬಹುದು ಅನ್ನೋ ಈ ಒಂದು ಯೋಚನೇನೇ ಭಾರತ ದೇಶದ ರಾಷ್ಟ್ರೀಯತೆಯ ಅಡಿಪಾಯವನ್ನ ಅಲ್ಲಾಡಿಸ್ತಿದೆ. ಇದು ಖಂಡಿತವಾಗಿ ನಿಲ್ಬೇಕು. ಇದ್ರ ಬಗ್ಗೆ ಎರಡು ಮಾತಿಲ್ಲ. ನನ್ ಪ್ರಕಾರ.