ಈಗಾಗಲೇ ನೋಂದಾಯಿಸಿದ್ದೀರಾ ?

ಇನ್ನರ್ ಇಂಜಿನಿಯರಿಂಗ್ ನಿಮ್ಮ ದೇಹ, ಮನಸ್ಸು, ಭಾವನೆಗಳು, ಮತ್ತು ಪ್ರಾಣಶಕ್ತಿಯನ್ನು ಹಿಡಿತಕ್ಕೆ ತೆಗೆದುಕೊಂಡು ಒಂದು ಆನಂದಮಯ ಮತ್ತು ಸಾರ್ಥಕ ಬದುಕನ್ನು ಜೀವಿಸಲು ಸಾಧನಗಳನ್ನು ಸಮರ್ಪಿಸುವ ಒಂದು ಆನ್ಲೈನ್ ಕಾರ್ಯಕ್ರಮ.

ಇನ್ನರ್ ಇಂಜಿನಿಯರಿಂಗ್ ಈಗ ಹೊಸ ಸ್ವರೂಪದಲ್ಲಿ!

ಏನು ಹೊಸತು?

  • ಸದ್ಗುರುಗಳಿಂದ ಹೊಸ ವಿಷಯಗಳು

  • ಆಕರ್ಷಕ ಅನುಭವಕ್ಕಾಗಿ ಹಲವಾರು ಹೊಸ ದೃಶ್ಯಗಳು ಮತ್ತು ಸಂವಾದಾತ್ಮಕ ಅಂಶಗಳಿಂದ ಸಮೃದ್ಧವಾಗಿದೆ

  • ನಿಮ್ಮ ದೈನಂದಿನ ಜೀವನದಲ್ಲಿ ಸಾಧನಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುವಂತೆ, ಸೂಚನೆ ಮತ್ತು ರಿಮೈಂಡರ್‌ಗಳನ್ನು ನಿಮ್ಮ ಮೊಬೈಲ್ ನಲ್ಲಿ ಬರುವಂತೆ ಮಾಡಲಾಗಿದೆ.

ಈ ಕಾರ್ಯಕ್ರಮವು ಈಗ ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್ ಕೋರ್ಸ್‌ನ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಮತ್ತು ಶಕ್ತಿಯುತ 21 ನಿಮಿಷಗಳ ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆಯನ್ನೂ ಒಳಗೊಂಡಿದೆ.

ನೀವು ಈ ಹಿಂದೆ ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್‌ನಲ್ಲಿ ನೋಂದಾಯಿಸಿರುವುದರಿಂದ:

  • ಹೊಸ ಸ್ವರೂಪದ ಕಾರ್ಯಕ್ರಮಕ್ಕೆ ಕಡಿಮೆ ಶುಲ್ಕದಲ್ಲಿ ನೋಂದಾಯಿಸಲು ನಿಮಗೆ ಅವಕಾಶವಿದೆ. ನಿಮ್ಮ ಶುಲ್ಕ ಎಷ್ಟೆಂದು ವೀಕ್ಷಿಸಲು ದಯವಿಟ್ಟು ಕೆಳಗಿನ ಫಾರ್ಮ್‌ನಲ್ಲಿ ನಿಮ್ಮ ವಿವರಗಳನ್ನು ಒದಗಿಸಿ.

  • ನೀವು ಎಲ್ಲಿ ನಿಲ್ಲಿಸಿದ್ದಿರೊ ಅಲ್ಲಿಂದಲೇ ನಿಮ್ಮ ಇನ್ನರ್ ಇಂಜಿನಿಯರಿಂಗ್ ಪ್ರಯಾಣವನ್ನು ಮುಂದುವರಿಸಬಹುದು. ಉದಾಹರಣೆಗೆ, ನೀವು ಹಿಂದಿನ ಕಾರ್ಯಕ್ರಮದ ಆವೃತ್ತಿಯಲ್ಲಿ ಹಂತ 2 ಅನ್ನು ಪೂರ್ಣಗೊಳಿಸಿದರೆ, ಹೊಸ ಕಾರ್ಯಕ್ರಮದಲ್ಲಿ ಹಂತ 3 ರಿಂದ ಪ್ರಾರಂಭಿಸಬಹುದು.

ಈಗಾಗಲೇ ನಿಮಗೆ ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆ ಆಗಿದ್ದರೆ, ಹೊಸ ಕಾರ್ಯಕ್ರಮಕ್ಕೆ ಕಡಿಮೆ ಶುಲ್ಕದಲ್ಲಿ ಮರು-ನೋಂದಣಿ ಮಾಡಿಕೊಳ್ಳುವ ಆಯ್ಕೆ ಸಹ ನಿಮಗಿದೆ.

ಕಾರ್ಯಕ್ರಮದ ಸ್ವರೂಪ

ಒಟ್ಟು ಅವಧಿ: ಸುಮಾರು 25 ಗಂಟೆಗಳು
ಅಥವಾ
ಎಲ್ಲಿ ನಿಲ್ಲಿಸಿದ್ದಿರೊ ಅಲ್ಲಿಂದ ಮುಂದುವರಿಯಿರಿ

ಹಂತ 1 ರಿಂದ 6 : ಸ್ವಯಂ-ಗತಿಯಲ್ಲಿ

ಹಂತ 1

ಅರಿತುಕೊಳ್ಳಿ ಬದುಕಿನ ನಟ್-ಬೋಲ್ಟ್ ಗಳನ್ನು

“ಈ ಭೂಮಿಯ ಅತ್ಯಂತ ಆಧುನಿಕ ಯಂತ್ರವೆಂದರೆ ಅದು ಮಾನವ ದೇಹ. ಆದರೆ ಅದರ ಬಳಕೆಯ ಕುರಿತಾದ ಕೈಪಿಡಿಯನ್ನು ನೀವು ಓದಿಲ್ಲ. ನಾವದನ್ನು ಪರಿಶೋಧಿಸೋಣ.” -ಸದ್ಗುರು 

ಹಂತ 2

ಏಕೈಕ ಬಂಧನ

“ನಿಮ್ಮ ಆಸೆಗಳನ್ನು ಅಮಿತವಾಗಿ ತೆರೆಯಿರಿ; ಅವುಗಳನ್ನು ಅಲ್ಪಕ್ಕೆ ಸೀಮಿತಗೊಳಿಸಬೇಡಿ. ಆಸೆಯ ಅಮಿತತೆಯೇ ನಿಮ್ಮ ಪರಮ ಸ್ವಭಾವ .” - ಸದ್ಗುರು

ಹಂತ 3

ಜೀವನವನ್ನು ಪರಿಪೂರ್ಣವಾಗಿ ಜೀವಿಸಿ

“ನೀವು ಯಾರು ಎಂಬ ಸ್ವರೂಪವನ್ನು ಯಾವುದೇ ಮಿತಿಯಿಲ್ಲದೇ ವಿಸ್ತರಿಸಿಕೊಂಡಾಗಲೇ ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಜೀವಿಸಬಲ್ಲಿರಿ. ನಿಮ್ಮ ಜೀವನದಲ್ಲಿ ನೀವು ತಿಳಿಯಬಹುದಾದ ಏಕೈಕ ನೆರವೇರಿಕೆಯೆಂದರೆ, ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಜೀವಿಸುವುದು.” - ಸದ್ಗುರು 

ಹಂತ 4

ನೀವೇನು ಅಂದುಕೊಂಡಿದ್ದೀರೋ, ನೀವು ಅದಲ್ಲ

“ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸಂಪೂರ್ಣ ಇಚ್ಛೆಯಿಂದ ನಡೆಸಿದರೆ, ಅದನ್ನು ಸ್ವರ್ಗವನ್ನಾಗಿಸಿಕೊಳ್ಳಬಹುದು. ಇಚ್ಛೆಯಿಲ್ಲದೇ ನಡೆಸಿದ ಜೀವನವು ಖಚಿತವಾದ ನರಕ.” - ಸದ್ಗುರು 

ಹಂತ 5

ಮನಸ್ಸು - ಒಂದು ಅದ್ಭುತ ಚಮತ್ಕಾರ

“ಬಹಳಷ್ಟು ಜನರು ತಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಾರೆ. ನಿಮ್ಮ ಮನಸ್ಸನ್ನು ಅದರ ಪೂರ್ಣವಾದ ಸಾಧ್ಯತೆಯೆಡೆಗೆ ಏರಿಸಲು ನಾನು ಬಯಸುತ್ತೇನೆ.” - ಸದ್ಗುರು

ಹಂತ 6

ನಿಮಗೆ ಏನು ಬೇಕೋ ಅದನ್ನು ರೂಪಿಸಿಕೊಳ್ಳಿ

“ನಿಮ್ಮ ಸ್ವಾಸ್ಥ್ಯ ಮತ್ತು ನಿಮ್ಮ ಅನಾರೋಗ್ಯ, ನಿಮ್ಮ ಸಂತೋಷ ಮತ್ತು ನಿಮ್ಮ ದುಃಖ, ಎಲ್ಲವೂ ಸೃಷ್ಟಿಯಾಗುವುದು ನಿಮ್ಮೊಳಗಿನಿಂದಲೇ. ನೀವು ಯೋಗಕ್ಷೇಮವನ್ನು ಬಯಸುತ್ತಿದ್ದರೆ, ಆಂತರ್ಯದ ಕಡೆಗೆ ತಿರುಗುವ ಸಮಯವಿದು.” - ಸದ್ಗುರು

ಆಯ್ಕೆ ಮಾಡಿದ ದಿನಾಂಕಗಳಲ್ಲಿ 7 ನೇ ಹಂತವನ್ನು ನೇರಪ್ರಸಾರದಲ್ಲಿ ಅರ್ಪಿಸಲಾಗುತ್ತದೆ.

ಹಂತ 7

ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆ

“ಸೃಷ್ಟಿಯ ಮೂಲವನ್ನು ಸ್ಪರ್ಶಿಸಲು 'ಶಾಂಭವಿ ಮಹಾಮುದ್ರ ಕ್ರಿಯಾ’ ಒಂದು ಸಾಧನ. ನಿಮ್ಮ ಆಂತರ್ಯವನ್ನು ಆಳವಾಗಿ ಸ್ಪರ್ಶಿಸುವ ಪ್ರಕ್ರಿಯೆಯಲ್ಲಿ, ಪರಿವರ್ತನೆಯಿದೆ.”

— ಸದ್ಗುರು

ಶಾಂಭವಿ ಮಹಾಮುದ್ರ ಕ್ರಿಯೆಯ ಬಗ್ಗೆ ಸದ್ಗುರುಗಳ ಮಾತು

ಕಾರ್ಯಕ್ರಮವನ್ನು

ಮುಂದುವರಿಸಿ

Isha Logo
Loading...

Secure payment gateway is opening.
Do not refresh or press the back button.