ಗುರು ಅಷ್ಟಕಂ – ಸಾಹಿತ್ಯ ಮತ್ತು ಅನುವಾದ

 

ಶರೀರಂ ಸುರೂಪಂ ತಥಾ ವಾ ಕಲತ್ರಂ, ಯಶಶ್ಚಾರು ಚಿತ್ರಂ ಧನಂ ಮೇರು ತುಲ್ಯಮ್ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 1 ||

ಅನುವಾದ : ತಾನು ಸ್ಫುರದ್ರೂಪಿ; ತನ್ನ ಪತ್ನಿಯೂ ಸುಂದರಿ. ತನ್ನ ಯಶಸ್ಸೂ ಎಲ್ಲ ಕಡೆ ಹರಡಿದೆ; ಸಂಪತ್ತು ಮೇರು ಪರ್ವತದಷ್ಟಿದೆ.
ಆದರೆ…! ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

 

ಕಲತ್ರಂ ಧನಂ ಪುತ್ರ ಪೌತ್ರಾದಿಸರ್ವಂ, ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 2 ||

ಅನುವಾದ : ಪತ್ನಿ ಸಿಕ್ಕಳು, ಸಂಪತ್ತು ದೊರೆಯಿತು. ಮಕ್ಕಳು ಆದರು, ಮೊಮ್ಮಕ್ಕಳೂ ಆದರು. ಮನೆ ಕಟ್ಟಿಯಾಯಿತು, ಬಾಂಧವರೂ ಇರುವರು. ಆದರೆ…! ಗುರುಪದಕಮಲದಲ್ಲಿ ಮನಸ್ಸು ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

 

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ, ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 3 ||

ಅನುವಾದ : ವೇದ, ಆರು ವೇದಾಂಗಗಳು, ಶಾಸ್ತ್ರ, ವಿದ್ಯೆಗಳೆಲ್ಲವೂ ನಾಲಿಗೆಯಲ್ಲೇ ಇವೆ. ಒಳ್ಳೆಯ ಪದ್ಯ, ಗದ್ಯಗಳನ್ನು ರಚಿಸುವ ಕವಿತ್ವವಿದೆ. ಆದರೆ...! ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

 

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ, ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 4 ||

ಅನುವಾದ : ವಿದೇಶಗಳಲ್ಲಿ ಬಹುಮಾನ್ಯನು; ಸ್ವದೇಶದಲ್ಲಿ ಧನ್ಯನು. ಸದಾಚಾರದ ಪಾಲನೆಯಲ್ಲಿ ಸಮಾನರಾದ ಮತ್ತೊಬ್ಬನಿಲ್ಲ.
ಆದರೆ…! ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

 

ಕ್ಷಮಾಮಂಡಲೇ ಭೂಪ ಭೂಪಾಲಬೃಂದೈಃ, ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 5 ||

ಅನುವಾದ : ಭೂಮಂಡಲದ ಎಲ್ಲ ರಾಜರಿಂದ, ರಾಜಸಮೂಹದಿಂದ ಪಾದಸೇವೆ ಮಾಡಿಸಿಕೊಳ್ಳಲ್ಪಡುವವನು.
ಆದರೆ…! ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

 

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್, ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 6 ||

ಅನುವಾದ : ದಾನಶೌರ್ಯದಿಂದ ದಶ ದಿಕ್ಕುಗಳಲ್ಲಿಯೂ ಕೀರ್ತಿ ಹಬ್ಬಿದೆ. ಜಗತ್ತಿನ ಎಲ್ಲ ವಸ್ತುಗಳೂ ತನ್ನ ಕೈಯಲ್ಲೇ ಇದೆ. ಆದರೆ…! ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

 

ನ ಭೋಗೇ ನ ಯೋಗೇ ನ ವಾ ವಾಜಿರಾಜೌ, ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 7 ||

ಅನುವಾದ : ಯೋಗದಲ್ಲಿ ಮನಸ್ಸಿಲ್ಲ; ಭೋಗದಲ್ಲೂ ಮನಸ್ಸಿಲ್ಲ. ಅಶ್ವದ ಮೇಲೆ ಮನಸ್ಸಿಲ್ಲ; ರಾಜನಾಗುವ ಮನಸ್ಸಿಲ್ಲ. ಪತ್ನಿಯ ಸಹವಾಸಕ್ಕೂ ಮನಸ್ಸಿಲ್ಲ; ಸಂಪತ್ತಿನಲ್ಲಂತೂ ಮನಸ್ಸಿಲ್ಲವೇ ಇಲ್ಲ. ಆದರೆ…! ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

 

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ, ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಗುರೋರಂಘ್ರಿಪದ್ಮೇ ಮನಶ್ಚೇನ ಲಗ್ನಂ, ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || 8 ||

ಅನುವಾದ : ಅರಣ್ಯದಲ್ಲಿ ಮನಸ್ಸಿಲ್ಲ; ಮನೆಯಲ್ಲಿ ಮನಸ್ಸಿಲ್ಲ. ಕಾರ್ಯದಲ್ಲಿ ಮನಸ್ಸಿಲ್ಲ; ದೇಹದ ಮೇಲೆ ಮನಸ್ಸಿಲ್ಲ. ಅನರ್ಘ್ಯ ವಸ್ತುಗಳ ಮೇಲೂ ಮನಸ್ಸಿಲ್ಲ. ಆದರೆ…! ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ, ಏನು ಫಲ? ಏನು ಫಲ? ಏನು ಫಲ?

ಸಂಪಾದಕರ ಟಿಪ್ಪಣಿ : ಈ ವರ್ಷ, ಗುರು ಪೌರ್ಣಮಿಯ ನೇರ ವೆಬ್ ಪ್ರಸಾರದ ವೀಕ್ಷಣೆಗೆ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ http://isha.co/6DQMvY