ॐ ಎಂಬುದು ಕೇವಲ ಒಂದು ಧರ್ಮಕ್ಕೆ ಸೀಮಿತವಾದುದಲ್ಲ, ಅದು ಸೃಷ್ಟಿಯ ಮೂಲಶಬ್ದ (Universal sound) ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಕ್ರೈಸ್ತಮತ, ಇಸ್ಲಾಮ್ ಇತ್ಯಾದಿ ಜಗತ್ತಿನ ವಿವಿಧ ಸಂಪ್ರದಾಯಗಳಲ್ಲೆಲ್ಲಾ ಅದು ಕಂಡುಬರುತ್ತದೆ ಎಂದವರು ನಮಗೆ ತಿಳಿಯಪಡಿಸುತ್ತಾರೆ.

Om Mantravannu nivu tappagi uccarisuttilla taane?

ಲಿಪ್ಯಂತರ:

ನಾವ್ ಉಚ್ಛರಿಸೋ ಹಲವಾರ್ ತರದ್ ಶಬ್ದಗಳಲ್ಲಿ, ನಾಲಗೆಯನ್ನ ಉಪಯೋಗಿಸ್ದೇನೇ ನಿಮ್ಗೆ ಯಾವ ಶಬ್ದಗಳನ್ನ ಉಚ್ಛರಿಸೋದಿಕ್ಕಾಗುತ್ತೆ? ಪ್ರಯೋಗ ಮಾಡ್ ನೋಡಿ. - ಹೌದು ಖಂಡಿತವಾಗ್ಲೂ "ಆ" ಮಾಡಕಾಗುತ್ತೆ. , ಆಗುತ್ತೆ. , ಹೌದು ಆಗುತ್ತೆ. ಮತ್ತೆ? ಒಂದ್ ವೇಳೆ ನಿಮಗ್ ನಾಲ್ಗೆ ಇರ್ಲಿಲ್ಲ. ನೀವು ಉಚ್ಛರಿಸ್ಬಹುದಾದ ಶಬ್ದಗಳು ಯಾವುವು? "ಆ" ಮಾಡ್ಬಹುದು, "ಊ" ಮಾಡ್ಬಹುದು, "ಮ್" ಮಾಡ್ಬಹುದು. ಬೇರೆ ಯಾವ್ದೇ ಶಬ್ದವನ್ನ ಪ್ರಯತ್ನಿಸಿ. ಮಾತು ಬರ್ದೇ ಇರೋಂತಾವ್ನು, ಒಬ್ಬ ಮೂಗ ವ್ಯಕ್ತಿ - ಮಾತು ಬರ್ದೇ ಇರೋಂತಾವ್ನು, ಅವ್ನು ಮಾಡೋವಂತ ಶಬ್ದಗಳು ಯಾವುವು? . ಯಾಕಂದ್ರೆ ಈ ಮೂರು ಶಬ್ದಗಳಿಗೆ ನಿಮ್ ನಾಲ್ಗೆ ಅಗತ್ಯ ಇಲ್ಲ. ನೀವ್ ನಿಮ್ ನಾಲ್ಗೇನಾ ತೆಗೆದ್ಬಿಟ್ರೆ, ನಿಮಗ್ ಮಾಡೋದಿಕ್ಕಾಗೋದು ಈ ಮೂರು ಶಬ್ದಗಳನ್ನ ಮಾತ್ರ. . ನೀವು ನಾಲ್ಗೇನ್ ಉಪಯೋಗ್ಸಿ, ಅದನ್ನ ಬಾಯೊಳ್ಗೆ ಬೇರೆ ಬೇರೆ ಕಡೆ ಇಟ್ಕೊಂಡು, ಈ ಮೂರು ಶಬ್ದಗಳನ್ನ ಮಿಶ್ರಣ ಮಾಡಿ ಬೇರೆ ಎಲ್ಲಾ ಶಬ್ದಗಳನ್ನ ಉಂಟುಮಾಡ್ತಿದೀರ. ನಿಮ್ಗೆ ಕಲರ್ ಟಿವಿ ಬಗ್ಗೆ ಗೊತ್ತಿದ್ರೆ, ಮೂಲಭೂತವಾದ ಬಣ್ಣಗಳು ಮೂರೇ ಅಂತ ಗೊತ್ತಿರ್ಬಹುದು. ಆ ಮೂರು ಬಣ್ಣಗಳನ್ನ ಉಪಯೋಗಿಸ್ಕೊಂಡು, ಬೇರೆ ಎಲ್ಲಾ ಬಣ್ಣಗಳೂ ಟಿವಿ ಮೇಲೆ ಮೂಡುತ್ತೆ. ಹಾಗೇನೇ, ಮೂಲಭೂತವಾದ ಶಬ್ದಗಳು ಮೂರೇ. ಈ ಮೂರು ಶಬ್ದಗಳನ್ನ ಉಪಯೋಗಿಸ್ಕೊಂಡು, ನಿಮಗ್ ಬೇರೆ ಎಲ್ಲಾ ಶಬ್ದಗಳನ್ನ ಉಂಟ್ ಮಾಡಕ್ಕಾಗುತ್ತೆ. ನಿಮ್ ನಾಲ್ಗೆ ಈ ಮೂರು ಶಬ್ದಗಳನ್ನ ಹಲವಾರು ರೀತಿಗಳಲ್ಲಿ ಮಿಕ್ಸ್ ಮಾಡೋದಿಕ್ಕೆ ನಿಮಗ್ ಸಹಾಯ ಮಾಡ್ತಾ ಇದೆ ಅಷ್ಟೆ.

ಈ ಮೂರು ಶಬ್ದಗಳು - ಅ, ಉ, ಮ - ಇವನ್ನ ನಾವು ಮೂಲಶಬ್ದಗಳು ಅಥ್ವಾ universal sounds ಅಂತ ಕರೀತೀವಿ. ಯಾಕಂದ್ರೆ ಈ ಮೂರು ಶಬ್ದಗಳು ನೀವ್ ಉಚ್ಛರಿಸ್ಬಹುದಾದಂತ ಬೇರೆ ಎಲ್ಲಾ ಶಬ್ದಗಳ ಮೂಲ. ನೀವು ಈ ಮೂರು ಶಬ್ದಗಳನ್ನು ಒಟ್ಟಾಗಿ ಹೇಳಿದ್ರೆ, ಏನ್ ಸಿಗುತ್ತೆ? ಅಲ್ಲ, ಓ ಅಲ್ಲ. . ಹಾಗಾಗಿ ಈ ಮೂರು ಮೂಲಶಬ್ದಗಳು ನೀವು ಉಚ್ಛರಿಸ್ಬಹುದಾದಂತ ಬೇರೆ ಎಲ್ಲಾ ಶಬ್ದಗಳಿಗೂ ಆಧಾರ. ಹಾಗಾಗಿ ಅ-ಉ-ಮ್ ಅನ್ನು universal sound ಅಥವಾ ಸೃಷ್ಟಿಯ ಮೂಲ ಶಬ್ದ ಅಂತ ಕರೀತಾರೆ. ಹಾಗಿದ್ರೆ, ಯಾಕೆ ಬರೀ ಒಂದ್ ಮತದವ್ರು ಮಾತ್ರ ಅದನ್ನ ತಮ್ಮ ಗುರುತಾಗಿ ಉಪಯೋಗಿಸ್ತಿದಾರೆ? ಯಾಕೆ ಬೇರಾರ್ಗೂ ಗೊತ್ತಿಲ್ಲ? ಅದು ನಿಜವಲ್ಲ. ಎಲ್ಲೆಲ್ಲಿ ಆತ್ಮಜ್ಞಾನಿಯೊಬ್ಬ ಇರ್ತಾನೋ, ಅಲ್ಲಿ ಅ-ಉ-ಮ್ ಇರುತ್ತೆ. ಉದಾಹರಣೆಗೆ ಕ್ರೈಸ್ತಮತ ತಗೊಳಿ. ಅದು ಜೆರುಸಲೆಮ್ ನಲ್ಲಿ ಹುಟ್ಟಿದ್ದು, ಆಗ ಅಲ್ಲಿನ್ ಬಾಷೆ ಅರ್ಮೈಕ್. ಅರ್ಮೈಕ್ ಭಾಷೆಗೆ ಅದ್ರದ್ದೇ ಆದ ಶೈಲಿ ಇದೆ. ಅದ್ರಲ್ಲಿ "ನ" ಶಬ್ದ ಪ್ರಧಾನವಾಗಿ ಕಂಡುಬರುತ್ತೆ. ಹಾಗಾಗಿ ಕ್ರಿಸ್ಚಿಯಾನಿಟಿನಲ್ಲಿ ಏನನ್ನೇ ಹೇಳಿ ಮುಗಿಸ್ಬೇಕಾದ್ರೂ, ಅವ್ರು ಆಮೆನ್ ಅಂತಾರೆ. ಇದನ್ನ ವ್ಯಾಟಿಕನ್ ನಲ್ಲಿ ಹೇಗೆ ಹೇಳ್ತಾರೆ ಅಂತ ನೀವು ನೋಡಿದ್ರೆ, ಅವ್ರದನ್ನ ಹೇಳೋದು . ಅದ್ರಲ್ಲಿ "ನ" ಅಕ್ಷರವನ್ನ ತೆಗ್ದು ಆಮೆನ್ ಹೇಳಿ.

ಇದನ್ನ ಅರ್ಥ ಮಾಡ್ಕೋಬೇಕಾದ್ರೆ ಇದೇ ತರದ್ ಮಾರ್ಪಾಡುವಿಕೆಯನ್ನ ನೀವು ತಮಿಳಿನಲ್ ನೋಡ್ಬಹುದು. ಈಗ ನೋಡಿ ಉದಾಹರಣೆಗೆ, ರಾಮ್. ನಿಮಗ್ ರಾಮ್ ಗೊತ್ತಾ? ಅಯೋಧ್ಯೆಯಲ್ಲಿ ಹುಟ್ದವ್ನು. ಅವ್ನು ದಕ್ಷಿಣಕ್ ಬಂದ. ಅವ್ನ್ ದಕ್ಷಿಣಕ್ ಬಂದಾಗ, ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಪ್ರವೇಶಿಸ್ದಾಗ, ಜನ್ರು ಅವ್ನನ್ನ "ರಾಮ" ಅಂತ ಕರ್ದ್ರು. ಅದೇ ಅವ್ನು ತಮಿಳುನಾಡು ಗಡಿಯನ್ನ ದಾಟ್ದಾಗ ಜನ್ರು ಅವ್ನನ್ನ "ರಾಮನ್" ಅಂತ ಕರ್ದ್ರು. ಕೃಷ್ಣ ತಮಿಳುನಾಡಿಗೆ ಬಂದ್ರೆ ನೀವು ಏನ್ಮಾಡ್ತೀರಾ? ಕೃಷ್ಣನ್. ಅರ್ಜುನ ತಮಿಳುನಾಡಿಗೆ ಬಂದ್ರೆ ನೀವು ಏನ್ಮಾಡ್ತೀರಾ? ಅರ್ಜುನನ್. ಭೀಮ ತಮಿಳುನಾಡಿಗೆ ಬಂದ್ರೆ ನೀವು ಏನ್ಮಾಡ್ತೀರಾ? ಭೀಮನ್. ಯಾರೆಲ್ಲ ತಮಿಳುನಾಡು ಗಡಿ ದಾಟ್ತಾರೋ ಅವ್ರೆಲ್ಲಾ "ಅನ್"ವಂತರಾಗ್ತಾರೆ! (ನಗು) ತಮಿಳಿನಲ್ಲಿ ಈ "ಅನ್" ಗಿರೋ ಒತ್ತು ಅರ್ಮೈಕ್ ಗಿಂತ್ಲೂ ಜಾಸ್ತಿಯಿದೆ. "ಆಽಽಽಮೆನ್". ಅದ್ರಲ್ಲಿ "ನ" ತೆಗೆದ್ರೆ, ಅದು ಬರೀ "ಆಽಽಉಮ್" ಇಂದು ಈ ಆಮೆನ್ ಅಮೆರಿಕಾಗೆ ಹೋಗಿ ಏಮೆನ್ ಆಗ್ಬಿಟ್ಟಿದೆ! (ನಗು) ಸಂಸ್ಕೃತಿ ಮತ್ತು ಭಾಷೆಗಳ ಪ್ರಭಾವದಿಂದ ಹೀಗೆ ವಿರೂಪಗೊಳ್ಳೋದು ಆಗ್ತಾ ಇರುತ್ತೆ.

ಇಸ್ಲಾಮ್ ತಗೊಳಿ. ಅದೇ ಪ್ರದೇಶದಲ್ಲಿ ಹುಟ್ಟಿದ್ದು. ಅದೇ ಸಂಸ್ಕೃತಿ ಮತ್ತು ಭಾಷೆಗಳ ಪ್ರಭಾವದಡಿಯಲ್ಲಿ. ಅವ್ರು ಹೇಳೋದು "ಅಮೀನ್". "ನ" ತೆಗ್ದು "ಅಮೀನ್" ಹೇಳಿ. ಅದೇ ಶಬ್ದ. ಯಾಕಂದ್ರೆ ಎಲ್ಲೆಲ್ಲಿ ಮನುಷ್ಯ ತನ್ನ ಆಂತರ್ಯದಲ್ಲಿ ಮೌನವಾದ್ನೋ ಸ್ಕೂಲ್ ಟೀಚರ್ ಸೈಲೆನ್ಸ್ ಅಲ್ಲ, ಕಿವಿ ಮುಚ್ಚೋ ಸೈಲೆನ್ಸ್ ಅಲ್ಲ ನೀವು ನಿಮ್ ಸ್ವಭಾವದಿಂದ್ಲೇ ಮೌನವಾದ್ರೆ, "ಆಉಮ್" ಅನ್ನೋ ಶಬ್ದ ಶರೀರವ್ಯವಸ್ಥೆಯಲ್ಲಿ ಅನುರಣಿಸುತ್ತೆ. ಯಾಕಂದ್ರೆ, ನಿಮ್ಮ ಭೌತಿಕ ಅಸ್ತಿತ್ವದ ಮೂಲ ಶಬ್ದ "ಆಉಮ್". "ಆಉಮ್" ಅನುರಣಿಸೋವಾಗ, ಅದು ಹೊಕ್ಕುಳಿನ ಸ್ವಲ್ಪ ಕೆಳಗಿನಿಂದ ಶುರುವಾಗಿ ಮೂಗಿನ ತುದಿಯಲ್ಲಿ ಕೊನೆಗೊಳ್ಳುತ್ತೆ. ಈ ಅನುರಣಿಸುವಿಕೆ ತನ್ನಿಂದ್ ತಾನೇ ಆಗುತ್ತೆ. ಹಾಗಾಗಿ ಯಾವಾಗೆಲ್ಲ ಮನುಷ್ಯ ನಿಜವಾಗಿ ಮೌನವಾಗಿ ಕೂತ್ನೋ, ತನ್ನೊಳಗೆ ಸಂಪೂರ್ಣ ಮೌನದಲ್ಲಿ ಕೂತ್ನೋ, ಅವ್ನಿಗೆ "ಆಉಮ್" ಶಬ್ದದ ಅರಿವುಂಟಾಯ್ತು. ಅವ್ನದನ್ನ ಬೇರೆಯವ್ರಿಗೆ ಕಲಿಸ್ದಾಗ, ಕಾಲಾಂತರದಲ್ಲಿ ಅದು ವಿರೂಪಗೊಳ್ತು, ಭಾಷೆ ಮತ್ತು ಸಂಸ್ಕೃತಿಯ ಪ್ರಭಾವಗಳಿಂದ. ಭಾರತದಲ್ಲೂ ಕೂಡಾ "ಆಉಮ್" "ಓಮ್" ಆಗ್ಬಿಟ್ಟಿದೆ. ಅದು ಓಮ್ ಅಲ್ಲ. ನೀವ್ ಬಾಯ್ ತೆರ್ದು ಆ ಅನ್ನಿ. ನಿಧಾನವಾಗಿ ಬಾಯನ್ನ ಮುಚ್ಚಿ, ಅದು ಉ ಆಗುತ್ತೆ. ಪೂರ್ತಿ ಮುಚ್ಚಿ, ಅದು ಮ್ ಆಗುತ್ತೆ.

"ಆಉಮ್" ಶಬ್ದದಿಂದ ಹಲವಾರು ಪ್ರಯೋಜನಗಳಿವೆ. ಈವತ್ತೂ ಕೂಡ, ಇಲ್ಲಿಗ್ ಯಾರಾದ್ರೂ ಯಾವ್ದೇ ಮಾನಸಿಕ ತೊಂದ್ರೆ ಇರೋರು ಬಂದ್ರೆ, ಮೊದಲ್ನೇ prescription ಯಾವಾಗ್ಲೂ "ಆಉಮ್". ಇದನ್ನು ಕೆಲವು ವಾರ ಮಾಡಿ, ನೀವು ಸ್ವಲ್ಪ ಸ್ಥಿರವಾದ್ ಮೇಲೆ ನಾವು ಬೇರೆ ವಿಷ್ಯಗಳನ್ನ ನೋಡ್ತೀವಿ. ನಾನ್ ನಿಮ್ಗೆ ನೂರಾರು ಜನ್ರನ್ನ ತೋರಿಸ್ತೀನಿ, ವೈದ್ಯಕೀಯವಾಗಿ ಅವ್ರು ಜೀವನಪೂರ್ತಿ psychiatric medication ನಲ್ಲಿ ಇರ್ಬೇಕು ಅಂತ ಹೇಳಲಾಗಿತ್ತು. ಅಂತವ್ರು ಔಷಧಿಯ ಅಗತ್ಯದಿಂದ ಪೂರ್ತಿಯಾಗಿ ಹೊರಬಂದಿದಾರೆ - ಬರೀ "ಆಉಮ್" ಹೇಳೋದ್ರಿಂದ. ಅತಿಯಾದ ಭಯ, ವಿಚಿತ್ರ ಕನಸುಗಳು, ಕೆಟ್ಟ ಕನಸುಗಳು, ದುಃಸ್ವಪ್ನಗಳು, ಅಸ್ಥಿರವಾದ ಮನಸ್ಸು, ಅಸ್ಥಿರವಾದ ದೇಹ, ನಿಮ್ಮ ದೈಹಿಕ ಪ್ರಕೃತಿ ದುರ್ಬಲವಾಗಿದ್ರೆ, ಜಾಸ್ತಿ ಖಾಯಿಲೆ ಬೀಳೋದ್ ಆಗ್ತಾ ಇದ್ರೆ, ಮುಖ್ಯವಾಗಿ ಮಕ್ಕಳು, ಅವ್ರಿಗೆ ಏಕಾಗ್ರತೆ ತೊಂದ್ರೆಗಳಿದ್ರೆ ಪ್ರತಿದಿನ "ಆಉಮ್" ಹೇಳೋದು, ಕೆಲವು ನಿಮಿಷಗಳಿಗಷ್ಟೆ, ತುಂಬ ದೊಡ್ಡ ಬದಲಾವಣೆಯನ್ನ ತರುತ್ತೆ. ನಿಮ್ ಜೀವನ್ದಲ್ಲಿ ದೃಢ ನಿಶ್ಚಯದಿಂದ ಪ್ರಯತ್ನಿಸಿದ್ರೂ ಏನೂ ಮಾಡೋದಿಕ್ ಆಗ್ದೇ ಇರೋಂತ ಸಮಸ್ಯೆಗಳು ನಿಮ್ಗಿದ್ರೆ, ಪ್ರತಿನಿತ್ಯದ "ಆಉಮ್" ಉಚ್ಛಾರಣೆ ನಿಮ್ ಜೀವನ್ದಲ್ಲಿ ದೊಡ್ಡ ಪರಿವರ್ತನೆಯನ್ನ ಉಂಟು ಮಾಡುತ್ತೆ. ಎರಡೇ ವಾರದೊಳಗೆ, ನೀವು ಇರೋ ರೀತಿಯಲ್ಲಿ ಮಹತ್ತರವಾದ ಬದಲಾವಣೆಯನ್ನ ನೀವು ಗಮನಿಸ್ಬಹುದು. ಯಾಕಂದ್ರೆ ಇದು ನಿಮ್ಮ ಭೌತಿಕ ಅಸ್ತಿತ್ವದ ಮೂಲ ಶಬ್ದ.