ಸದ್ಗುರು: ದಂತಕಥೆಗಳ ಪ್ರಕಾರ, ಕೈಲಾಸದ ಸುತ್ತಮುತ್ತಲ ಜಾಗವನ್ನು ಶಿವ ಓಡಾಡಿಕೊಂಡಿದ್ದ ಸ್ಥಳ ಎಂದು ಹೇಳಲಾಗುತ್ತದೆ. ಕೈಲಾಸ ಪರ್ವತದ ವಿಷಯಕ್ಕೆ ಬಂದಾಗ, ಅದಕ್ಕೆ ಮೂರು ಆಯಾಮಗಳಿವೆ. ಮೊದಲನೆಯದು, ಆ ಪರ್ವತದ ಅನುಪಮ ಸಾನ್ನಿಧ್ಯ. ಎರಡನೆಯದು, ಅಲ್ಲಿ ನಿಕ್ಷೇಪಿಸಲ್ಪಟ್ಟಿರುವ ಅಗಾಧ ಪ್ರಮಾಣದ ಜ್ಞಾನನಿಧಿ. ಮೂರನೆಯದು, ಕೈಲಾಸದ ಮೂಲವೇ ಆಗಿದೆ.

ಕೈಲಾಸ - ಸೌಂದರ್ಯವನ್ನು ಮೀರಿದ ಸಾನಿಧ್ಯ

Sadhguru bowing down to Kailash | The Three Dimensions of Kailash

 

ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಅನೇಕ ಪರ್ವತ ಶಿಖರಗಳಿವೆ, ಮತ್ತವು ಕೈಲಾಸಕ್ಕಿಂತ ದೊಡ್ಡದಾಗಿ ಹಾಗೂ ಇನ್ನೂ ಹೆಚ್ಚು ಸುಂದರವಾಗಿವೆ. ಹಿಮಾಲಯದಲ್ಲಿ 24,000 ಅಡಿ ಎತ್ತರವನ್ನು ಮೀರಿರುವ ಸುಮಾರು ನೂರಕ್ಕಿಂತಲೂ ಹೆಚ್ಚು ಶಿಖರಗಳಿವೆ. ವಿಶೇಷವಾಗಿ, ಭಾರತದ ಕೆಲವು ಭಾಗಗಳಿಂದ ಜನರು ನಡೆದು ಬಂದರೆ, ಅವರು ದಾರಿಯಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ನೋಡಬಹುದಾಗಿದೆ. ಆಕಾರ ಮತ್ತು ಭವ್ಯತೆಯ ವಿಷಯದಲ್ಲಿ, ಅದನ್ನು ನೋಡಿದ ನಂತರ ನೋಡಲು ಬೇರಿನ್ನೇನೂ ಉಳಿದಿರುವುದಿಲ್ಲ.

ಆದ್ದರಿಂದ, ನಾವು ಪ್ರಕೃತಿಯ ಸೌಂದರ್ಯವನ್ನು ನೋಡಲು ಕೈಲಾಸಕ್ಕೆ ಹೋಗುವುದಿಲ್ಲ. ಪರ್ವತ ಶ್ರೇಣಿಯ ಇತರ ದೊಡ್ಡ ಶಿಖರಗಳನ್ನು ಬಿಟ್ಟು, ಜನ ಕೈಲಾಸ ಪರ್ವತವನ್ನೇ ಅರಸುತ್ತಾ ಏಕೆ ಹೋದರೆಂದರೆ, ಕೈಲಾಸದ ಸಾನ್ನಿಧ್ಯ ಅಮೋಘವಾಗಿದೆ ಎಂಬ ಕಾರಣಕ್ಕಾಗಿ.

 

ನೀವು ಅಕ್ಷರಮಾಲೆಯ ಮೊದಲ ಕೆಲವು ಅಕ್ಷರಗಳಾದ ಅಆಇಈ-ಯನ್ನಷ್ಟೇ ತಿಳಿದಿರುವ ಮಗುವೆಂದು ನಾವೆಂದುಕೊಳ್ಳೋಣ. ಆಗ ನಿಮ್ಮನ್ನು ಯಾರೋ ಒಬ್ಬರು ಲಕ್ಷಾಂತರ ಪುಸ್ತಕಗಳಿರುವ ಗ್ರಂಥಾಲಯಕ್ಕೆ ಕರೆದುಕೊಂಡು ಹೋದರು ಎಂದಿಟ್ಟುಕೊಳ್ಳಿ. ಅಲ್ಲಿ ನೀವು "ಅ"ಯಿಂದ ಆರಂಭವಾಗುವ ಹೆಸರುಳ್ಳ ಸಾವಿರಾರು ಪುಸ್ತಕಗಳನ್ನು ನೋಡಿದಿರಿ, ನಂತರ, "ಆ"ಯಿಂದ ಆರಂಭವಾಗುವ ಹೆಸರುಳ್ಳ ಸಾವಿರಾರು ಪುಸ್ತಕಗಳನ್ನು ನೋಡಿದಿರಿ. ಕೋಟ್ಯಾನುಕೋಟಿ ಅಕ್ಷರಗಳಿರುವ ಕೋಟ್ಯಂತರ ಪುಸ್ತಕಗಳನ್ನು ನೀವಲ್ಲಿ ನೋಡುತ್ತೀರಿ! ಆಗ ನೀವು ದಂಗು ಬಡಿದವರಂತಾಗುವಿರಿ, ಅಲ್ಲವೇ? ಕೈಲಾಸದ ಅನುಭೂತಿಯೂ ಸಹ ಹಾಗೆಯೇ ಇರುತ್ತದೆ.

ನಿಮ್ಮ ಗಮನ ಕೈಲಾಸವನ್ನು ನಿಮ್ಮೆರಡು ಬೆರಳುಗಳ ನಡುವೆ ಹಿಡಿದು, ಅದರ ಚಿತ್ರವನ್ನು ಸೆರೆಹಿಡಿಯಬೇಕೆನ್ನುವ ಕಡೆಗಿದ್ದರೆ, ನೀವದರ ಸನ್ನಿಧಿಯನ್ನು ಅನುಭವಿಸದೇ ಇರಬಹುದು. ಇಲ್ಲದಿದ್ದರೆ, ಅದರ ಉಪಸ್ಥಿತಿಯನ್ನು ಗಮನಿಸದೇ ಇರಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಷ್ಟು ಅತಿಶಯವಾಗಿದೆ.

ಅಲ್ಲಿರುವುದರ ಭಾವಪರವಶಗೊಳಿಸುವ ಸನ್ನಿಧಿಯು ಎಲ್ಲರ ಅರಿವಿಗೂ ಸಹ ಬರುತ್ತದೆ. ನೀವು ಯಾವಾಗಲೂ ಬಿಗುಮಾನದಿಂದಿದ್ದು ಮತ್ತು ಕೈಲಾಸ ಪರ್ವತದೊಂದಿಗೆ ಸೆಲ್ಫಿಯನ್ನು ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದ ಹೊರತು, ನಿಮಗದರ ಅನುಭವವಾಗದೇ ಇರಲು ಸಾಧ್ಯವೇ ಇಲ್ಲ. ನಿಮ್ಮ ಗಮನ ಕೈಲಾಸವನ್ನು ನಿಮ್ಮೆರಡು ಬೆರಳುಗಳ ನಡುವೆ ಹಿಡಿದು, ಅದರ ಚಿತ್ರವನ್ನು ಸೆರೆಹಿಡಿಯಬೇಕೆನ್ನುವ ಕಡೆಗಿದ್ದರೆ, ನೀವದರ ಸನ್ನಿಧಿಯನ್ನು ಅನುಭವಿಸದೇ ಇರಬಹುದು. ಇಲ್ಲದಿದ್ದರೆ, ಅದರ ಉಪಸ್ಥಿತಿಯನ್ನು ಗಮನಿಸದೇ ಇರಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಷ್ಟು ಅತಿಶಯವಾಗಿದೆ.

ನೀವು ಕೈಲಾಸವನ್ನು ಗಮನಿಸದೇ ಇರುವುದನ್ನು ನಿಮ್ಮ ಉಸಿರಾಟಕ್ಕೆ  ಹೋಲಿಸಬಹುದು. ಈಗ ನೀವಿರುವ ಕೋಣೆಯಲ್ಲಿ ಗಾಳಿಯಿದೆ ಮತ್ತು ನೀವು ಅದರ ಅರಿವಿಲ್ಲದಂತೆಯೇ ಸುಮ್ಮನೆ ಉಸಿರಾಡಿದರೂ ಸಹ ಅದು ನಿಮ್ಮನ್ನು ಜೀವಂತವಾಗಿಡುತ್ತದೆ ಹಾಗೂ ಪೋಷಿಸುತ್ತದೆ. ಆದರೆ, ನೀವು ಪ್ರಜ್ಞಾಪೂರ್ವಕವಾಗಿ ಉಸಿರಾಡಿದರೆ, ಆಗ ನಿಮ್ಮ ಅನುಭವವೇ ಬೇರೆಯಾಗಿರುತ್ತದೆ. ಅಥವಾ ಇಂದು ನೀವಿದನ್ನು ನಿಮ್ಮ ಊಟದೊಂದಿಗೆ ಪ್ರಯೋಗ ಮಾಡಿ ನೋಡಬಹುದು. ಅತ್ಯಂತ ಪೌಷ್ಟಿಕ ಆಹಾರವನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ರುಬ್ಬಿ, ಒಂದು ಲೀಟರಷ್ಟನ್ನು ನೇರವಾಗಿ ನಿಮ್ಮ ಗಂಟಲಿಗೆ ಸುರಿದುಕೊಳ್ಳಿ. ಅದರಿಂದ ನಿಮ್ಮ ಪೋಷಣೆ ಆಗುತ್ತದೆಯಾದರೂ, ನೀವು ತಿನ್ನುವುದರ ಸವಿ ಹಾಗೂ ಆನಂದವನ್ನು ಅನುಭವಿಸುವುದಿಲ್ಲ. ಕೈಲಾಸದಲ್ಲೂ ನಿಮಗೆ ಇದೇ ರೀತಿ ಆಗಬಹುದು. ಅಂತಹ ಪರಿಸ್ಥಿತಿಯನ್ನು ನಿಮಗೆ ನೀವೇ ತಂದುಕೊಳ್ಳಬೇಡಿ. ಕೈಲಾಸವು ನಿಮ್ಮನ್ನು ಹೇಗಿದ್ದರೂ ಪೋಷಿಸುತ್ತದೆ, ಆದರೆ ಅದರ ರುಚಿಯನ್ನು ಸವಿಯುವುದು ಒಳ್ಳೆಯದು.

ಅರಿವು ಮತ್ತು ಜ್ಞಾನದ ಬೃಹತ್ ಗ್ರಂಥಾಲಯ

Sadhguru's Poem "Kailash" | The Three Dimensions of Kailash

 

ಕೈಲಾಸದ ಎರಡನೇ ಆಯಾಮವೆಂದರೆ, ಅಲ್ಲಿರುವ ಅಗಾಧವಾದ ಅರಿವು ಮತ್ತು ಜ್ಞಾನ. ಗ್ರಂಥಾಲಯವು ನಿಮ್ಮನ್ನು ದಂಗಾಗಿಸುವುದು ಒಂದು ವಿಷಯವಾದರೆ, ಅಲ್ಲಿನ ಪುಸ್ತಕಗಳನ್ನು ನೀವು ಓದಬೇಕೆಂದುಕೊಳ್ಳುವುದು ಬೇರೆಯದ್ದೇ ಒಂದು ವಿಷಯ. ಕೇವಲ ಇಂಗ್ಲೀಷ್ ಭಾಷೆಯನ್ನು ಸರಿಯಾಗಿ ಕಲಿಯಲು, ಅದರ ಮೇಲೆ ತಕ್ಕ ಮಟ್ಟಿನ ಹಿಡಿತವನ್ನು ಸಾಧಿಸಲು – ಪೂರ್ಣ ಪ್ರಭುತ್ವವನ್ನಲ್ಲ – ನೀವು ಹತ್ತರಿಂದ ಹದಿನೈದು ವರ್ಷಗಳನ್ನು ತೆಗೆದುಕೊಂಡಿರಿ. ಮತ್ತು ನಿಮಗೆ ಕೈಲಾಸದಲ್ಲಿ ಅಡಗಿರುವ ಜ್ಞಾನ ಲಭ್ಯವಾಗಬೇಕಿದ್ದರೆ, ಅದಕ್ಕೆ ಸಿದ್ಧತೆ ಮತ್ತು ತೊಡಗಿಸಿಕೊಳ್ಳವಿಕೆಯ ಒಂದು ಸಂಪೂರ್ಣವಾದ ಬೇರೆಯೇ ಆಯಾಮವು ಬೇಕಾಗುತ್ತದೆ.

ಕೆಲ ಸಮಯದ ಹಿಂದೆ, ಯಾರೋ ನನ್ನನ್ನು, "ಜನಸಾಮಾನ್ಯರಿಗೆ ಕೈಲಾಸವು ಲಭ್ಯವಾಗುವಂತೆ ಮಾಡಲು ಏನು ಅಗತ್ಯ?" ಎಂದು ಕೇಳಿದರು. ನೀವು ನಿಜವಾಗಿಯೂ ಸಾಮಾನ್ಯ ವ್ಯಕ್ತಿಯೇ ಆಗಿದ್ದರೆ, ಅದು ನಿಮಗೆ ಸುಲಭವಾಗಿ ಲಭ್ಯವಾಗುತ್ತದೆ.

ಕೆಲ ಸಮಯದ ಹಿಂದೆ, ಯಾರೋ ನನ್ನನ್ನು, "ಜನಸಾಮಾನ್ಯರಿಗೆ ಕೈಲಾಸವು ಲಭ್ಯವಾಗುವಂತೆ ಮಾಡಲು ಏನು ಅಗತ್ಯ?" ಎಂದು ಕೇಳಿದರು. ನೀವು ನಿಜವಾಗಿಯೂ ಸಾಮಾನ್ಯ ವ್ಯಕ್ತಿಯೇ ಆಗಿದ್ದರೆ, ಅದು ನಿಮಗೆ ಸುಲಭವಾಗಿ ಲಭ್ಯವಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ನನಗೆ ಗೊತ್ತಿಲ್ಲ. ನೀವು ಸಾಮಾನ್ಯ ವ್ಯಕ್ತಿಯನ್ನು ಎಲ್ಲಿಯಾದರೂ ನೋಡಿದ್ದೀರಾ? ನಿಮ್ಮ ಹೆಂಡತಿಯ ಮುಂದೆ ನಿಮ್ಮನ್ನು ನೀವು ಸಾಮಾನ್ಯದವನು ಎಂದು ಹೇಳಿಕೊಳ್ಳುತ್ತೀರಾ?

ನೀವು ನಿಜವಾಗಿಯೂ ಸಾಮಾನ್ಯದವರಾಗಿದ್ದರೆ, ನಾನು ಕೈಲಾಸದಲ್ಲಿರುವ ಜ್ಞಾನವನ್ನು ನಿಮ್ಮೊಳಗೆ ಸುರಿದುಬಿಡುತ್ತೇನೆ - ಅದು ಬಹಳ ಸುಲಭ. ಸಾಮಾನ್ಯವೆನ್ನುವುದರ ಅರ್ಥ ನಿಮಗೇನೂ ತಿಳಿದಿಲ್ಲ ಎಂದು. ಆದರೆ ನೀವು ಅಂತಹವರಲ್ಲ. ನೀವು ತುಂಬಾ ಜಾಣರು – ಬೇರೆಯವರು ನಿಮ್ಮ ಬಗ್ಗೆ ಹಾಗೆ ತಿಳಿದಿದ್ದಾರೋ ಇಲ್ಲವೋ, ನೀವಂತೂ ಹಾಗೆ ಯೋಚಿಸುತ್ತೀರಿ. ಎಲ್ಲರೂ ಅವರವರ ವ್ಯಾಪ್ತಿಗಳಲ್ಲಿ ತಾವೇ ಜಾಣರು ಎಂದು ಭಾವಿಸುತ್ತಾರೆ. ಯಾರೋ ಒಬ್ಬ, ತನ್ನ ಚಿಕ್ಕದಾದ ಮನೆಯಲ್ಲಿ ತಾನೇ ಜಾಣ. ಮತ್ತೊಬ್ಬ ಸ್ವಲ್ಪ ವಿಸ್ತಾರವಾದ ಗಡಿಯನ್ನು ನಿರ್ಮಿಸಿಕೊಂಡಿರಬಹುದು ಅಷ್ಟೆ, ಆದರೆ ಪ್ರತಿಯೊಬ್ಬರೂ ಸಹ ವಿಶೇಷ ವ್ಯಕ್ತಿಗಳೇ. ಸಾಮಾನ್ಯ ವ್ಯಕ್ತಿಗಳು ಎಲ್ಲೂ ಇಲ್ಲ.

ನೀವು ನಿಜವಾಗಿಯೂ ಬುದ್ಧಿವಂತರಾಗಿದ್ದು ಮತ್ತು ನಿಮ್ಮ ಸುತ್ತಲಿನ ವಿಷಯಗಳಿಗೆ ಗಮನ ನೀಡಿದ್ದರೆ, ಅದು ಒಂದು ಹೂವು ಅಥವಾ ಎಲೆಯ ಕಡೆಗಾಗಿರಬಹುದು - ನಿಮ್ಮ ಬುದ್ಧಿವಂತಿಕೆ ಎಷ್ಟು ಸಣ್ಣದೆಂದು ನಿಮಗೆ ಗೊತ್ತಾಗುತ್ತದೆ.

ಜನರನ್ನು ಪರ್ವತಗಳ ಮಧ್ಯದಲ್ಲೆಲ್ಲಾ ನಡೆಸಿಕೊಂಡು ಹೋಗಿ ಅಥವಾ ಇನ್ನೇನನ್ನಾದರೂ ಮಾಡುವ ಮೂಲಕ ನಿಜವಾಗಿಯೂ ನಾವು ಸಾಮಾನ್ಯರನ್ನು ಸೃಷ್ಟಿಸಿದ್ದೇ ಆದರೆ, ನಾವೇನು ಹೇಳುತ್ತೇವೆಯೋ ಅದನ್ನು ಸುಮ್ಮನೆ ಕೇಳಲು ಸಿದ್ಧರಿರುವಷ್ಟು ಸಾಮಾನ್ಯರನ್ನಾಗಿ ನಾವವರನ್ನು ಮಾಡಿದರೆ, ಆಗ ನಾವು ಜ್ಞಾನವನ್ನು ಅವರೊಳಗೆ ಸುರಿಯಬಹುದು.

ಅಥವಾ, ಅವರು ನಿಜವಾಗಿಯೂ ಬುದ್ಧಿವಂತರಾಗಿರಬೇಕು. ಬುದ್ಧಿವಂತಿಕೆ ಎನ್ನುವುದು ಎಂದಿಗೂ ಬೇರೆಯವರ ಹೋಲಿಕೆಯಲ್ಲಲ್ಲ. ಜಾಣತನವನ್ನು ಯಾವಾಗಲೂ ಬೇರೆಯವರ ಹೋಲಿಕೆಯಲ್ಲಿ ಅಳೆಯಲಾಗುವುದು. “ನೀವು ಜಾಣರು" ಎಂದು ನಾವು ಹೇಳಿದಾಗ, ನೀವು ನಿಮ್ಮ ಪಕ್ಕದಲ್ಲಿರುವವರಿಗಿಂತ ಸ್ವಲ್ಪ ಮೇಲಾಗಿದ್ದೀರಿ ಎಂದರ್ಥ. ಜಾಣತನಕ್ಕೆ ಅಂತಹ ಮಹತ್ವವೇನೂ ಇಲ್ಲ. ನಿಮ್ಮ ಜಾಣತನವೇನಿದ್ದರೂ ಒಂದಿಷ್ಟು ಹಣ ಗಳಿಸಿ, ಸಮಾಜದಲ್ಲಿ ಬದುಕಲು ಸಹಾಯ ಮಾಡಬಹುದಷ್ಟೆ, ಆದರೆ ಅಸ್ತಿತ್ವದ ಮೂಲಭೂತ ಹಂತದಲ್ಲಿ, ಅದು ನಿಮ್ಮನ್ನೆಲ್ಲಿಗೂ ಕೊಂಡೊಯ್ಯುವುದಿಲ್ಲ.

ಬುದ್ಧಿವಂತಿಕೆಯು ಹೋಲಿಕೆಯನ್ನು ಬೇಡುವುದಿಲ್ಲ. ಬುದ್ಧಿವಂತಿಕೆಗೆ ಹೋಲಿಕೆ ಮಾಡಲು ಸಮಯ ಅಥವಾ ಆಸಕ್ತಿಯಿಲ್ಲ, ಏಕೆಂದರೆ ಅದಕ್ಕೆ ತಾನೆಷ್ಟು ಅಲ್ಪವೆಂದು ತಿಳಿದಿದೆ. ನೀವು ನಿಜವಾಗಿಯೂ ಬುದ್ಧಿವಂತರಾಗಿದ್ದು ಮತ್ತು ನಿಮ್ಮ ಸುತ್ತಲಿನ ವಿಷಯಗಳಿಗೆ ಗಮನ ನೀಡಿದ್ದರೆ, ಅದು ಒಂದು ಹೂವು ಅಥವಾ ಎಲೆಯ ಕಡೆಗಾಗಿರಬಹುದು - ನಿಮ್ಮ ಬುದ್ಧಿವಂತಿಕೆ ಎಷ್ಟು ಸಣ್ಣದೆಂದು ನಿಮಗೆ ಗೊತ್ತಾಗುತ್ತದೆ. ತಾನೇನು ಎಂಬುದರ ಇತಿಮಿತಿಗಳನ್ನು ಕಂಡುಕೊಳ್ಳುವುದೇ ಬುದ್ಧಿವಂತಿಕೆಯ ಲಕ್ಷಣ.

ಒಬ್ಬ ಸಾಮಾನ್ಯ ವ್ಯಕ್ತಿಯು ಬುದ್ಧಿವಂತ ವ್ಯಕ್ತಿ, ಏಕೆಂದರೆ ನಿಮ್ಮ ಸುತ್ತಲಿರುವ ಎಲ್ಲದರ ಕಡೆ ನೀವು ಗಮನ ಕೊಟ್ಟರೆ, ಒಂದು ಸಣ್ಣ ಎಲೆ, ಒಂದು ಹೂವು ಅಥವಾ ಒಂದು ಮರಳಿನ ಕಣವೂ ಸಹ ನಿಮಗಿಂತ ಹೆಚ್ಚು ಬುದ್ಧಿವಂತವಾಗಿದೆ ಎನ್ನುವುದು ನಿಮಗೆ ತಿಳಿಯುತ್ತದೆ. ಆಗ ನೀವು ಸಾಮಾನ್ಯರಾಗುತ್ತೀರಿ.

ಕೈಲಾಸದ ಮೂಲ

Sadhguru's Poem "To Kailash" | The Three Dimensions of Kailash

 

ಕೈಲಾಸದ ಮೂರನೇ ಆಯಾಮ ಅದರ ಮೂಲ. ಆ ಮೂಲದ ಉಪಸ್ಥಿತಿ ಅಲ್ಲಿದ್ದರೂ, ಅದು ತುಂಬಾ ಸೂಕ್ಷ್ಮವಾಗಿದೆ. ಶಾರೀರಿಕ, ಮಾನಸಿಕ ಮತ್ತು ಪ್ರಾಣಶಕ್ತಿಯ ವಿಷಯಗಳಲ್ಲಿ ಅತಿ ಹೆಚ್ಚಿನ ಮಟ್ಟದ ಋಜುತ್ವ ನಿಮ್ಮಲ್ಲಿದ್ದರೆ – ನೀವು ಕೈಲಾಸದ ಮೂಲವನ್ನು ಸ್ಪರ್ಶಿಸಬಹುದು. ಕೈಲಾಸದ ಮೂಲ ಶೂನ್ಯಾಕಾಶವಿದ್ದಂತೆ, ಅದು ಯಾವಾಗಲೂ ಇದ್ದೇ ಇರುತ್ತದೆ.

ನೀವು ಆಗಸವನ್ನು ನೋಡಿದರೆ, ನಿಮಗೆ ಚಂದ್ರ ಮತ್ತು ನಕ್ಷತ್ರಗಳು ಕಾಣಿಸುತ್ತವೆ, ಆದರೆ ಹೆಚ್ಚಿನ ಜನ, ಅಲ್ಲಿನ ಅತಿ ದೊಡ್ಡ ಇರುವಿಕೆಯಾದ ಶೂನ್ಯಾಕಾಶವನ್ನು ನೋಡುವುದೇ ಇಲ್ಲ. ತೊಂಬತ್ತೊಂಬತ್ತು ಪ್ರತಿಶತದಷ್ಟು ಬ್ರಹ್ಮಾಂಡವು ಶೂನ್ಯವಾಗಿದೆಯಾದರೂ ಹೆಚ್ಚಿನವರು ಅದನ್ನೆಂದೂ ಗಮನಿಸುವುದಿಲ್ಲ. ಅದು ತುಂಬಾ ಸೂಕ್ಷ್ಮವಾಗಿರುವ ಕಾರಣ, ಅದು ಅವರ ಅನುಭವಕ್ಕೆ ಬರುವುದಿಲ್ಲ.

ಶಾರೀರಿಕ, ಮಾನಸಿಕ ಮತ್ತು ಪ್ರಾಣಶಕ್ತಿಯ ವಿಷಯಗಳಲ್ಲಿ ಅತಿ ಹೆಚ್ಚಿನ ಮಟ್ಟದ ಋಜುತ್ವ ನಿಮ್ಮಲ್ಲಿದ್ದರೆ – ನೀವು ಕೈಲಾಸದ ಮೂಲವನ್ನು ಸ್ಪರ್ಶಿಸಬಹುದು.

ಅದು ಬಹಳ ಸೂಕ್ಷ್ಮವಾದರೂ ಸಹ, ಅದೊಂದು ಸಾಧ್ಯತೆಯಾಗಿದೆ. ಏಕೆಂದರೆ ಅದಕ್ಕೆ ಬೇಕಿರುವುದು ಸಾಮರ್ಥ್ಯವಲ್ಲ. ಅದಕ್ಕೆ ಬೇಕಿರುವುದು ಕೇವಲ ಋಜುತ್ವವಷ್ಟೆ - ಒಂದು ನಿರ್ದಿಷ್ಟ ಶಾರೀರಿಕ, ಮಾನಸಿಕ ಮತ್ತು ಪ್ರಾಣಶಕ್ತಿಯ ಋಜುತ್ವ. ಪ್ರಾಣಶಕ್ತಿಯ ಋಜುತ್ವವನ್ನು ಅಲ್ಪಾವಧಿಯಲ್ಲಿ ಉಂಟುಮಾಡಲು ಸಾಧ್ಯವಿಲ್ಲ. ಅದು ಒಂದು ನಿರ್ದಿಷ್ಟ ಮೊತ್ತದ ಕೆಲಸವನ್ನು ಬೇಡುತ್ತದೆ. ಆದರೆ ನೀವು ಶಾರೀರಿಕ ಮತ್ತು ಮಾನಸಿಕ ಋಜುತ್ವವನ್ನು ಕೆಲ ದಿನಗಳಲ್ಲಿ ಸೃಷ್ಟಿಸಬಹುದು. ಅದಕ್ಕೆ ಕೆಲವು ಸರಳ ಅಂಶಗಳು ಬೇಕಷ್ಟೆ.

ನೀವು ಕೈಲಾಸಕ್ಕೆ ತೆರಳುತ್ತಿದ್ದರೆ, ಕೇವಲ ಆ ಕೆಲವು ದಿನಗಳ ಮಟ್ಟಿಗೆ, ದಿನಕ್ಕೆ ನೀವೆಷ್ಟು ಬಾರಿ ತಿನ್ನುತ್ತೀರಿ ಎಂಬುದನ್ನು ನಿರ್ಧರಿಸಿ ನಿಯಂತ್ರಿಸಿಕೊಳ್ಳಿ. ಮತ್ತು ಆ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ತಿನ್ನಲು ಹೋಗಬೇಡಿ. ಅದಲ್ಲದೆ, ನೀವು ನಿಮ್ಮ ಫೋನ್ ಅನ್ನು ಬಳಸುವ ಅಥವಾ ಅದರಲ್ಲಿ ಮಾತನಾಡುವ ಸಮಯವನ್ನೂ ಸಹ ನಿಗದಿಮಾಡಿಕೊಳ್ಳಿ. ನೀವದರ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಅತಿ ಉತ್ತಮ. ಇಲ್ಲವಾದಲ್ಲಿ, ನಿಮ್ಮ ಅವಶ್ಯಕತೆಗೆ ತಕ್ಕಂತೆ ಅದನ್ನು ನಿಗದಿಪಡಿಸಿ.

ನಿಮಗೆ ಮಾತನಾಡದೇ ಸುಮ್ಮನಿರಲು ಸಾಧ್ಯವಾಗದೇ ಇರುವುದು ಒಂದು ವಿವಶತೆ. ನಿಮಗೆ ಅದೇ ಅಸಂಬದ್ಧ ವಿಷಯಗಳನ್ನು ಪದೇ ಪದೇ ಹೇಳುತ್ತಿರಬೇಕು. ಕಡೇ ಪಕ್ಷ, ನೀವು ಕೈಲಾಸಕ್ಕೆ ಹೋಗುವಾಗಲಾದರೂ, ಇವುಗಳನ್ನು ಬಿಡಿ. ನಿಮ್ಮಷ್ಟಕ್ಕೆ ನೀವು ಕುಳಿತುಕೊಳ್ಳಿ, ಮಂತ್ರಗಳನ್ನು ಪಠಿಸಿ, ಏಕಾಗ್ರಚಿತ್ತರಾಗಿ, ನಿಮ್ಮ ಸುತ್ತಲಿನ ಎಲ್ಲದರ ಬಗ್ಗೆಯೂ ಜಾಗೃತರಾಗಿರಿ, ಏಕೆಂದರೆ ನಿಮ್ಮ ಜೀವವ್ಯವಸ್ಥೆಯು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅದು ಏನನ್ನೂ ಅರಿಯದೇ ಹೋಗುತ್ತದೆ. 

ನಾವು ಕೈಲಾಸ ಎಂದು ಕರೆಯುವ ಶಕ್ತಿಯು ಒಂದು ಅತ್ಯಮೋಘವಾದ ಸಾಧ್ಯತೆಯಾಗಿದೆ.

ನಾವು ಕೈಲಾಸ ಎಂದು ಕರೆಯುವ ಶಕ್ತಿಯು ಒಂದು ಅತ್ಯಮೋಘವಾದ ಸಾಧ್ಯತೆಯಾಗಿದೆ. "ನಾನು ತಿನ್ನಬಾರದೆ ಸದ್ಗುರು? ಸರಿ, ನಾನು ಮೂರು ದಿನಗಳವರೆಗೆ ತಿನ್ನುವುದಿಲ್ಲ!" ಹೀಗೆ ನೀವು ಮಾಡಿದರೆ,  ಕೈಲಾಸಕ್ಕೆ ಮತ್ತೆಂದೂ ನೀವು ಬಾರದಿರಬಹುದು! ಇಲ್ಲಿ ವಿಷಯ ಅದಲ್ಲ. ನೀವು ದಿನಕ್ಕೆ ಎಷ್ಟು ಬಾರಿ ತಿನ್ನಲು ಮತ್ತು ಮಾತನಾಡಲು ಬಾಯಿ ತೆರೆಯುತ್ತೀರಿ ಎನ್ನುವುದನ್ನು ನೀವೇ ನಿರ್ಧರಿಸಿ. ನಿಮಗೆ ದಿನಕ್ಕೆ ಮೂರು ಬಾರಿ ತಿನ್ನಬೇಕಿದ್ದರೆ, ಅದನ್ನು ಮೂರಕ್ಕೆ ನಿಗದಿ ಪಡಿಸಿ - ನಾಲ್ಕನೇ ಬಾರಿ ತಿನ್ನಲು ಹೋಗಬೇಡಿ. ಆಯ್ಕೆ ನಿಮ್ಮದು, ಆದರೆ ನೀವದನ್ನು ನಿಗದಿಪಡಿಸಿಬೇಕು. ಹೇಳಿದಂತೆಯೇ ನಡೆದುಕೊಳ್ಳುವುದು ಋಜುತ್ವ. ಋಜುತ್ವ ಎಂಬುದು ದಿನಕ್ಕೆ ಒಂದು ಬಾರಿ ತಿನ್ನುವುದರಲ್ಲೋ ಅಥವಾ ಐದು ಬಾರಿ ತಿನ್ನುವುದರಲ್ಲೋ ಇಲ್ಲ. ಋಜುತ್ವ ಇರುವುದು "ನಾನಿದನ್ನು ನಿಗದಿ ಪಡಿಸಿಕೊಂಡಿದ್ದೇನೆ, ಮತ್ತು ನಾನು ಅದನ್ನೇ ಮಾಡುತ್ತೇನೆ” ಎಂಬುದರಲ್ಲಿ.

ನಾನು ಇಲ್ಲಿ ಶಿಸ್ತಿನ ಬಗ್ಗೆ ಮಾತನಾಡುತ್ತಿಲ್ಲ. ನೀವು ಏನು ಹೇಳುತ್ತೀರೋ, ಅದನ್ನೇ ಮಾಡಬೇಕು - ಅದು ಋಜುತ್ವ. ನಾನು ಸಾಮಾಜಿಕ ಪ್ರಾಮಾಣಿಕತೆಯ ಬಗ್ಗೆ ಮಾತನಾಡುತ್ತಿಲ್ಲ, ನಾನು ಶಾರೀರಿಕ ಹಾಗೂ ಮಾನಸಿಕ ಋಜುತ್ವದ ಕುರಿತು ಮಾತನಾಡುತ್ತಿದ್ದೇನೆ. ಅದು ನಿಮ್ಮಲ್ಲಿ ಬರಬೇಕು. ಆಗ ಮಾತ್ರ ನೀವು ಯಾವುದರಿಂದಲಾದರೂ ಪ್ರಭಾವಕ್ಕೊಳಗಾಗುವ ಮತ್ತು ಅನುಭವಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತೀರಿ.

ಸಂಪಾದಕರ ಟಿಪ್ಪಣಿ: ಕೈಲಾಸ ಸೇಕ್ರೆಡ್ ವಾಕ್ಸ್ (ಕೈಲಾಸ ಯಾತ್ರೆ) - ಈಶ ಸೇಕ್ರೆಡ್ ವಾಕ್ಸ್ ರವರು ನಡೆಸಿಕೊಡುವ ಕಾರ್ಯಕ್ರಮವಾಗಿದ್ದು, ಕೈಲಾಸ ಮಾನಸಸರೋವರಕ್ಕೆ ಪ್ರಯಾಣವನ್ನು ಕೈಗೊಳ್ಳುವ ಒಂದು ಜೀವಮಾನದ ಅವಕಾಶವನ್ನು ನಿಮಗೆ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ sacredwalks.org