ಪ್ರಶ್ನೆ: ನಮಸ್ಕಾರ ಸದ್ಗುರು. ಲಿಂಗ ಭೈರವಿ ದೇವಿಯನ್ನು ಮೂರುವರೆ ಚಕ್ರಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ನೀವು ಹೇಳಿದಿರಿ  – ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ ಮತ್ತು ಅನಾಹತದ ಅರ್ಧ ಭಾಗ. ಆದರೆ ನಾವು ಅವಳನ್ನು ತ್ರಿನೇತ್ರಿಣಿ  -  “ಮೂರು ಕಣ್ಣಿರುವವಳು” ಎಂದೂ ಸಹ ಕರೆಯುತ್ತೇವೆ. ಮೂರನೆ ಕಣ್ಣು ಆಜ್ಞಾ ಚಕ್ರಕ್ಕೆ ಸಂಬಂಧಿಸಿರುವುದಾದರೆ, ಲಿಂಗ ಭೈರವಿಯೂ ಕೂಡ ಆಜ್ಞಾ ಚಕ್ರವನ್ನು ಹೊಂದಿದ್ದಾಳೆ ಎಂದರ್ಥವೇ?

ಸದ್ಗುರು: ಮೂರನೆ ಕಣ್ಣು ನೀವು ತಿಳಿದಿರುವಂತೆ ಭೌತಿಕವಾದ ಸ್ಥಾನವನ್ನು ಹೊಂದಿಲ್ಲ. ನಿಮ್ಮ ಎರಡು ಕಣ್ಣುಗಳು ಮುಖದ ಮೇಲಿರುವ ಕಾರಣ ಮೂರನೆ ಕಣ್ಣು ಅವುಗಳ ಮಧ್ಯದಲ್ಲೆಲ್ಲೋ ಇರಬಹುದು ಎಂದು ನೀವು ಊಹಿಸುತ್ತಿದ್ದೀರಿ ಅಷ್ಟೆ. ಅದು ಹಾಗಲ್ಲ. ನಮ್ಮ ಈ ಎರಡು ಕಣ್ಣುಗಳು, ಕೇವಲ ಬೆಳಕನ್ನು ತಡೆಯುವಂತಹ ವಸ್ತುಗಳನ್ನು ನೋಡಲು ಮಾತ್ರ ಸಾಧ್ಯ. ಒಂದು ವಸ್ತುವು ಬೆಳಕನ್ನು ತಡೆದು ನಿಲ್ಲಿಸುವುದರಿಂದ ಮಾತ್ರ ನೀವದನ್ನು ನೋಡಬಹುದಾಗಿದೆ. ಒಂದು ವೇಳೆ ಬೆಳಕು ಆ ವಸ್ತುವಿನ ಮೂಲಕ ಹಾದು ಹೋಗುವಂತಾದರೆ, ಅದು ಸಂಪೂರ್ಣವಾಗಿ ಪಾರದರ್ಶಕವಾಗಿದ್ದರೆ, ನೀವದನ್ನು ನೋಡುವುದಿಲ್ಲ.

ದೇವಿಯ ಮೂರನೆ ಕಣ್ಣುನ್ನು ಚಿತ್ರಿಸಿರುವುದು ಸಾಂಕೇತಿಕವಾಗಷ್ಟೆ. ಆಜ್ಞಾ ಚಕ್ರವು ಜ್ಞಾನಕ್ಕೆ ಸಂಬಂಧಿಸಿರುವ ಕಾರಣ, ಸಾಮಾನ್ಯವಾಗಿ, ಮೂರನೆ ಕಣ್ಣನ್ನು ಎರಡು ಕಣ್ಣುಗಳ ಮಧ್ಯದಲ್ಲಿರುವಂತೆ ವರ್ಣಿಸಲಾಗಿದೆ.

ಸದ್ಯದಲ್ಲಿ ನೀವು ನಿಮ್ಮ ಸುತ್ತಲಿರುವುದನ್ನು ನೋಡಲು ಸಾಧ್ಯವಾಗುತ್ತಿರುವುದಕ್ಕೆ ಒಂದೇ ಕಾರಣವೆಂದರೆ ಗಾಳಿ ಪಾರದರ್ಶಕವಾಗಿರುವುದು. ಗಾಳಿ ಏನಾದರು ಬೆಳಕನ್ನು ತಡೆದಿದ್ದೇ ಆಗಿದ್ದರೆ, ನೀವೇನನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನಿಮಗಿರುವ ಎರಡು ಕಣ್ಣುಗಳ ಮೂಲಕ ಭೌತಿಕವಾದುದ್ದನ್ನು ನೋಡಲು ಮಾತ್ರ ನಿಮಗೆ ಸಾಧ್ಯ. ಭೌತಿಕವಾದಂತಹ ಆಯಾಮದೊಳಗೂ ಸಹ, ಭೌತಿಕವಾಗಿರುವುದೆಲ್ಲವನ್ನೂ ನೋಡಲು ನಿಮಗಾಗುವುದಿಲ್ಲ. ಭೌತಿಕ ಪ್ರಪಂಚದ ಅತಿ ಸ್ಪಷ್ಟ ಅಥವಾ ಎದ್ದು ಕಾಣುವ ಅಂಶಗಳನ್ನಷ್ಟೇ ನೀವು ನಿಮ್ಮ ಕಣ್ಣುಗಳಿಂದ ನೋಡುತ್ತೀರ. ಗಾಳಿ ಭೌತಿಕವಾದ ಅಸ್ತಿತ್ವವನ್ನು ಹೊಂದಿದ್ದರೂ ಸಹ ನಿಮಗದು ಕಾಣಿಸುವುದಿಲ್ಲ ಏಕೆಂದರೆ ಅದು ಬೆಳಕನ್ನು ತಡೆಯುವುದಿಲ್ಲ. ಭೌತಿಕದಿಂದಾಚೆಗಿನ ಯಾವುದೇ ವಸ್ತು ಅಥವಾ ವಿಷಯವನ್ನು ಈ ನಮ್ಮ ಎರಡು ಕಣ್ಣುಗಳ ಮುಖಾಂತರ ನೋಡುವುದಕ್ಕಾಗುವುದಿಲ್ಲ.

 

ಭೌತಿಕ ಸ್ವರೂಪದಿಂದ ಆಚೆಗಿರುವಂತಹ ಏನನ್ನಾದರನ್ನು ನೀವು ನೋಡಲು, ಅನುಭವಿಸಲು ಮತ್ತು ಗ್ರಹಿಸಲು ಆರಂಭಿಸಿದ ಕ್ಷಣ, ನಿಮ್ಮ ಮೂರನೆ ಕಣ್ಣು ತೆರೆದುಕೊಂಡಿತು ಎಂದು ನಾವು ಹೇಳುತ್ತೇವೆ. ದೇವಿಯ ಮೂರನೆ ಕಣ್ಣನ್ನು ಚಿತ್ರಿಸಿರುವುದು ಸಾಂಕೇತಿಕವಾಗಷ್ಟೆ. ಆಜ್ಞಾ ಚಕ್ರವು ಜ್ಞಾನಕ್ಕೆ ಸಂಬಂಧಿಸಿರುವ ಕಾರಣ, ಸಾಮಾನ್ಯವಾಗಿ, ಮೂರನೆ ಕಣ್ಣನ್ನು ಎರಡು ಕಣ್ಣುಗಳ ಮಧ್ಯದಲ್ಲಿರುವಂತೆ ವರ್ಣಿಸಲಾಗಿದೆ. ಆದರೆ ವಾಸ್ತವದಲ್ಲಿ, ಅದು ಯಾವುದೇ ಒಂದು ಜಾಗದಲ್ಲಿ ಮಾತ್ರ ಉಪಸ್ಥಿತವಾಗಿಲ್ಲ. 

ನಾನು ಯಾವುದಾದರೊಂದು ಜಾಗಕ್ಕೆ ಹೋದಾಗ, ಅಲ್ಲಿ ಯಾವುದೇ ರೀತಿಯ ಶಕ್ತಿಯಿರುವುದು ನನ್ನ ಗಮನಕ್ಕೆ ಬಂದರೆ, ಅಲ್ಲೇನಾಗುತ್ತಿದೆ ಎಂದು ತಿಳಿಯಲು ನಾನು ಮಾಡುವ ಮೊದಲ ಕೆಲಸವೆಂದರೆ, ನನ್ನ ಕಣ್ಣುಗಳನ್ನು ಮುಚ್ಚಿ, ನನ್ನ ಕೈ ಬೆರಳುಗಳನ್ನು ಸಕ್ರಿಯವಾಗಿಸಿ, ನನ್ನ ಎಡಗೈ ಹಸ್ತವನ್ನು ಕೆಳಮುಖವಾಗಿ ಮಾಡಿ ಹಿಡಿದುಕೊಳ್ಳುತ್ತೇನೆ. ಏನಾದರೂ ಬಿಸಿ ಅಥವಾ ತಣ್ಣಗಿದೆಯೇ ಎಂದು ತಿಳಿಯಬೇಕೆಂದಾಗ, ನೀವೂ ಸಹ ನಿಮ್ಮ ಅಂಗೈಯನ್ನು ಅದರ ಮೇಲಾಡಿಸಿ ನೋಡುತ್ತೀರಿ ತಾನೆ? ಅದರರ್ಥ ನಿಮ್ಮ ಮೂರನೆ ಕಣ್ಣು ನಿಮ್ಮ ಬೆರಳುಗಳಲ್ಲಿದೆ ಎಂದಾಗುತ್ತದೆಯೇ? ಒಂದು ರೀತಿಯಲ್ಲಿ ನೋಡಿದರೆ, ಆ ಕ್ಷಣಕ್ಕೆ ಅದು ಸತ್ಯ. ಆದರೆ ಮೂರನೆ ಕಣ್ಣಿಗೆ ಯಾವುದೇ ರೀತಿಯ ಭೌತಿಕ ಸ್ಥಾನವಿಲ್ಲ. ಅದು ಶಾರೀರಿಕವಾದ ಘಟನೆಯಲ್ಲ. ಅದೊಂದು ಗ್ರಹಿಕೆ.

ಹಾಗಾದರೆ, ದೇವಿಗೆ ಮೂರನೆ ಕಣ್ಣಿದೆಯೇ? ಖಂಡಿತವಾಗಿಯೂ ಇದೆ. ಹಾಗೂ ಅವಳು ಮೂರುವರೆ ಚಕ್ರಗಳನ್ನು ಹೊಂದಿದ್ದಾಳೆಯೇ? ನಿಶ್ಚಯವಾಗಿ.

ಭೌತಿಕವಲ್ಲದೇ ಇರುವಂತಹುದ್ದನ್ನು ತಿಳಿಯುವುದರ ಬಗ್ಗೆ ನಾವು ಮಾತನಾಡುತ್ತಿರುವಾಗ, ಮೂರನೆ ಕಣ್ಣನ್ನು ಭೌತಿಕ ಶರೀರದ ಒಂದು ನಿರ್ದಿಷ್ಟ ಜಾಗದಲ್ಲಿರಿಸಲು ಪ್ರಯತ್ನಿಸಬೇಡಿ. ಭೌತಿಕವಲ್ಲದೇ ಇರುವಂತಹುದ್ದಕ್ಕೆ ಅಲ್ಲಿ ಅಥವಾ ಇಲ್ಲಿರುವ ಯಾವುದೇ ರೀತಿಯ ಪ್ರಚೋದನೆಗಳಿಲ್ಲ. ಅದು ಇಲ್ಲಿ, ಅಲ್ಲಿ ಮತ್ತು ಎಲ್ಲಿಬೇಕಾದರೂ ಇರಬಹುದು. ಭೌತಿಕವಲ್ಲದಿರುವುದನ್ನು ನೀವು ಸಂಬೋಧಿಸುವಾಗ, ಅದು ಎಲ್ಲಿದೆ ಎಂಬುದರ ಬಗ್ಗೆ ಯೋಚಿಸಲು ಹೋಗಬಾರದು. ಭೌತಿಕವಲ್ಲದ ಆಯಾಮದ ಬಗ್ಗೆ ಮಾತನಾಡುವಾಗ, ಇಲ್ಲಿ ಮತ್ತು ಅಲ್ಲಿ ಎನ್ನುವುದೆಲ್ಲಾ ಅನ್ವಯಿಸುವುದಿಲ್ಲ. ದೈಹಿಕವಲ್ಲದೇ ಇರುವುದಕ್ಕೆ, ಅದರ ಇರುವಿಕೆಯ ಸ್ಥಳ ಅನ್ವಯಿಸುವುದಿಲ್ಲ. ಭೌತಿಕ ಅಂಶಗಳಿಗೆ ಮಾತ್ರ ಜಾಗ ಮತ್ತು ಸ್ಥಳ ಬೇಕಾಗುತ್ತದೆ. ಭೌತಿಕವಲ್ಲದ ಆಯಾಮಕ್ಕೆ ನಿವಾಸವಿಲ್ಲ, ಭೂಗೋಳಿಕತೆಯೂ ಸಹ ಇಲ್ಲ. ಹಾಗಾದರೆ, ದೇವಿಗೆ ಮೂರನೆ ಕಣ್ಣಿದೆಯೇ? ಖಂಡಿತವಾಗಿಯೂ ಇದೆ. ಹಾಗೂ ಅವಳು ಮೂರುವರೆ ಚಕ್ರಗಳನ್ನು ಹೊಂದಿದ್ದಾಳೆಯೇ? ನಿಶ್ಚಯವಾಗಿ.

 

Yantra 2018

 

ಸಂಪಾದಕರ ಟಿಪ್ಪಣಿ: ಮುಂದಿನ ಯಂತ್ರ ಉತ್ಸವವು ಡಿಸೆಂಬರ್ 22, 2018ರಂದು ಈಶ ಯೋಗ ಕೇಂದ್ರದಲ್ಲಿ ನಡೆಯಲಿದೆ. ಒಂದು ಶಕ್ತಿಯುತವಾದ ಪ್ರಕ್ರಿಯೆಯ ದೀಕ್ಷೆಯನ್ನು ನಿಮಗೆ ನೀಡಲಾಗುತ್ತದೆ ಮತ್ತು ನೀವು ಸದ್ಗುರುಗಳಿಂದ ನೇರವಾಗಿ ಯಂತ್ರವನ್ನು ಸ್ವೀಕರಿಸುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ  here ಅಥವಾ ಈ ಸಂಖ್ಯೆಗೆ ಕರೆ ಮಾಡಿ  844 844 7708.