ಯೋಗದಿಂದ ಹೇಗೆ ದೇಹವು ಸಹಜವಾಗಿ ತನ್ನ ಅತ್ಯುತ್ತಮ ತೂಕಕ್ಕೆ ಬರುತ್ತದೆ ಎಂದು ಸದ್ಗುರಗಳು ಇಲ್ಲಿ ನೋಡುತ್ತಾರೆ. ಅದ್ಯಾಗೂ, ದೇಹದ ತೂಕ ಇಳಿಸಲಿಕ್ಕಾಗಿ ಮಾಡುವ ಯೋಗವು, ಬಹಳಷ್ಟು ಆಯಾಮಗಳ ಬಾಗಿಲನ್ನು ತೆರೆಯಬಹುದಾದ ಈ ಅದ್ಭುತವಾದ "ಆಂತರಿಕ ತಂತ್ರಜ್ಞಾನ"ದ ಒಂದು ಸಣ್ಣ ಅನುಷ್ಠಾನ ಮಾತ್ರ.

ಸದ್ಗುರು: ನೀವು ಯೋಗ ಮಾಡುತ್ತಿದ್ದರೆ, ಅಧಿಕ ತೂಕವು ಖಂಡಿತವಾಗಿಯೂ ಹೋಗುತ್ತದೆ. ಉದಾಹರಣೆಗೆ, ಕ್ರಿಯಾ ಯೋಗವನ್ನು ಪ್ರಾರಂಭಿಸಿದಾಗ, ಕೆಲವರು ತೂಕವನ್ನು ಇಳಿಸಲು ಪ್ರಾರಂಭಿಸುತ್ತಾರೆ, ಇನ್ನು ಕೆಲವರು ತೂಕವನ್ನು ಹೆಚ್ಚು ಮಾಡಿಕೊಳ್ಳುತ್ತಾರೆ. ನಿಮ್ಮ ಜೀರ್ಣಕ್ರಿಯೆಯು ಕ್ಷೀಣಗೊಂಡಿದ್ದು, ಆಹಾರವನ್ನು ಅಂಗಾಂಶವಾಗಿ ಪರಿವರ್ತಿಸುವ ನಿಮ್ಮ ಸಾಮರ್ಥ್ಯವು ತೃಪ್ತಿಕರವಾಗಿಲ್ಲದಿದ್ದರೆ, ನೀವು ಕ್ರಿಯಾ ಅಭ್ಯಾಸ ಮಾಡುವುದನ್ನು ಪ್ರಾರಂಭಿಸಿದಾಗ, ನಿಮ್ಮ ಜಠರಾಗ್ನಿಯು ಸಕ್ರಿಯಗೊಳ್ಳುತ್ತದೆ. ಜೀರ್ಣಕ್ರಿಯೆಯು ಸುಧಾರಣೆಯಾದ ಕಾರಣ, ಆಹಾರವನ್ನು ಅಂಗಾಂಶಕ್ಕೆ ಪರಿವರ್ತಿಸುವ ಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಹಾಗೂ ನೀವು ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಾರಂಭಿಸುತ್ತೀರಿ.

ನಿಮ್ಮ ಜಠರಾಗ್ನಿಯು ಈಗಾಗಲೇ ತೃಪ್ತಿಕರವಾಗಿದ್ದರೆ, ನೀವು ಕ್ರಿಯಾ ಅಭ್ಯಾಸವನ್ನು ಪ್ರಾರಂಭಿಸಿದ ನಂತರ ಪರಿವರ್ತಿನೆಯ ಪ್ರಮಾಣವು ಇನ್ನೂ ಸುಧಾರಿಸುತ್ತದೆ. ಆದರೆ, ಆಹಾರವನ್ನು ಅಂಗಾಂಶಕ್ಕೆ ಪರಿವರ್ತಿಸುವ ಬದಲಾಗಿ, ಇದು ಆಹಾರವನ್ನು ಶಕ್ತಿಯ ಒಂದು ಸೂಕ್ಷ್ಮ ಆಯಾಮವನ್ನಾಗಿ ಪರಿವರ್ತಿಸುತ್ತದೆ. ಈಗ, ನೀವೆಷ್ಟು ತಿಂದರೂ, ದೇಹದ ತೂಕವು ಇಳಿಯುವುದನ್ನು ನೋಡುವಿರಿ. ನೀವು ಕ್ರಿಯೆಗಳ ಅಭ್ಯಾಸವನ್ನು ಮಾಡುತ್ತಿದ್ದರೆ, ಹೆಚ್ಚೆಚ್ಚು ಅಹಾರ ತಿನ್ನುತ್ತಿದ್ದರೂ ನಿಮ್ಮ ದೇಹದ ತೂಕವು ಹೆಚ್ಚಾಗದಿರುವುದನ್ನು ಕಾಣವಿರಿ, ತೂಕ ಕಡಿಮೆಯೂ ಆಗಬಹುದು. ಅಥವಾ, ಇದು ಇನ್ನೊಂದು ರೀತಿಯಲ್ಲೂ ಆಗಬಹುದು: ನಿಮ್ಮ ಆಹಾರದ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಬಹುದು; ಆದರೆ, ನೀವು ತೂಕವನ್ನೇನು ಕಳೆದುಕೊಳ್ಳುವುದಿಲ್ಲ – ಏಕೆಂದರೆ, ಕ್ರಿಯಾ ಅಭ್ಯಾಸದಿಂದ ನಿಮ್ಮ ಪರಿವರ್ತಿನೆಯ ಅನುಪಾತವು (ratio) ಬದಲಾಗುತ್ತದೆ.

ದೇಹದ ತೂಕ ಇಳಿಸಲು ಆಹಾರದ ಪರಿಗಣನೆ

ಯೋಗವು ನಿಮ್ಮ ಶರೀರ ವ್ಯವಸ್ಥೆಯ ಕಳೆಯೇರಿಸುತ್ತದೆ – ಮತ್ತು ನಿಮಗೆ ಎಷ್ಟು ವಿವೇಕ ನೀಡುತ್ತದೆಯೆಂದರೆ, ನಿಮಗೆ ಜಾಸ್ತಿ ತಿನ್ನಲು ಸಾಧ್ಯವೇ ಆಗುವುದಿಲ್ಲ. ನಿಮ್ಮ ದೇಹದಲ್ಲಿ ಅಂತಹ ಒಂದು ಮಟ್ಟದ ತಿಳುವಳಿಕೆಯು ಉಂಟಾದಾಗ, ನಿಮ್ಮ ದೇಹ ಹೇಗಾಗುತ್ತದೆಯೆಂದರೆ, ಅಗತ್ಯವಾದಷ್ಟನ್ನು ಬಿಟ್ಟು ಹೆಚ್ಚೇನು ತಿನ್ನುವುದಿಲ್ಲ. ನೀವು ನಿಮ್ಮ ಬದುಕನ್ನು ಹೇಗೋ ಅಂಕೆಯಲ್ಲಿಟ್ಟುಕೊಂಡಿರುವಿರಿ ಅಥವಾ ಹತೋಟಿಯಲ್ಲಿಟ್ಟುಕೊಂಡಿರುವಿರಿ, ಅಥವಾ ಯಾರೋ ನೀವು diet ಮಾಡಬೇಕೆಂದು ಹೇಳುತ್ತಿದ್ದಾರೆ ಎಂದೇನು ಅಲ್ಲ. ಇನ್ನಿತರೆ ವ್ಯಾಯಾಮಗಳು ಅಥವಾ diet-ಗಳನ್ನು ಮಾಡಿದರೆ, ನಿಮ್ಮನ್ನು ನೀವು ಸದಾ ಕಾಲ ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಆದರೆ, ಯೋಗಾಭ್ಯಾಸ ಮಾಡುವುದರಿಂದ ನಿಮ್ಮನ್ನು ನೀವು ಹತೋಟಿಯಲ್ಲಿಟ್ಟುಕೊಳ್ಳಬೇಕಿಲ್ಲ. ನೀವು ಅಭ್ಯಾಸವನ್ನಷ್ಟೆ ಮಾಡಿ –ಅಗತ್ಯಕ್ಕಿಂತ ಹೆಚ್ಚು ತಿನ್ನಲು ಅನುಮತಿಸದ ರೀತಿಯಲ್ಲಿ ಇದು ನಿಮ್ಮ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಯೋಗದಿಂದಾಗುವ ದೊಡ್ಡ ವ್ಯತ್ಯಾಸವೇ ಇದು.

ಅಂಗಮರ್ದನ ಹಾಗೂ ಉಪ-ಯೋಗ

ಯೋಗವು ವ್ಯಾಯಾಮದ ಒಂದು ರೂಪವಲ್ಲ. ಇದು ಇತರ ಆಯಾಮಗಳನ್ನು ಹೊಂದಿದೆ. ಆದರೆ “ಉಪ-ಯೋಗ” ಎಂದು ಕರೆಯಲ್ಪಪಡುವೊಂದಿದೆ: ಯಾವುದೇ ಆಧ್ಯಾತ್ಮಿಕ ಆಯಾಮವನ್ನು ಸೇರಿಸಿರದ ಇದು ಯೋಗಕ್ಕೆ ಒಂದು ಸಹಾಯಕ ಪ್ರಕ್ರಿಯೆ. ನೀವು ಉಪ-ಯೋಗ ಅಥವಾ ಅಂಗಮರ್ದನವನ್ನು ಮಾಡಿದರೆ, fitness ಹೊಂದುವುದು ಖಚಿತ. ಜೊತೆಗೆ, ನಿಮಗೆ ಯಾವುದೇ ಉಪಕರಣಗಳ ಅಗತ್ಯವಿರುವುದಿಲ್ಲ – ನಿಮಗೆ ಬೇಕಾಗಿರುವುದು ಆರಡಿ-ಆರಡಿ ಜಾಗವಷ್ಟೆ. ನೀವು ಗಟ್ಟಿಮುಟ್ಟಾಗಿ, ಮಾಂಸಖಂಡಗಳನ್ನು ಬೆಳಸಬಹುದು. ಆದರೆ, ಬೇಕಿದ್ದಕ್ಕಿಂತ ಹೆಚ್ಚಾಗಿ ಸ್ನಾಯುಗಳು ಬೆಳೆಯುವುದಿಲ್ಲ. ಬಹಳ ಮಂದಿ, ತಾವು fit ಆಗಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ನಾನು ಬರಿ ತಾಕಾತ್ತು ಅಥವಾ ಮಾಂಸಖಂಡಗಳ ಉಬ್ಬುವಿಕೆಯ ಬಗ್ಗೆ ಮಾತನಾಡುತ್ತಿಲ್ಲ, ದೇಹವು ಎಷ್ಟು ಬಳಕುತನ ಹೊಂದಿದೆ ಎಂಬುದು ಕೂಡ ನಿಮ್ಮ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಮುಖ್ಯವಾಗಿದೆ. 

ಯೋಗದಲ್ಲಿ, ನಾವು ಮಾಂಸಖಂಡಗಳ ಬಲವನ್ನು ವರ್ಧಿಸುವುದನ್ನು ಮಾತ್ರ ನೋಡುವುದಿಲ್ಲ. ಅಂಗಾಂಗಗಳ ಆರೋಗ್ಯವೂ ಬಹಳ ಮುಖ್ಯ. ಅಂಗಾಂಗಗಳ ಆರೋಗ್ಯಕ್ಕಾಗಿಯೇ ಯೋಗದ ಪದ್ಧತಿ ರೂಪುಗೊಂಡಿದ್ದು. ದೊಡ್ಡ ಗಾತ್ರದ  ಮಾಂಸಖಂಡಗಳನ್ನು ಹೊಂದಿ, ನಿಮ್ಮ ಯಕೃತ್ (liver) ಸರಿಯಾಗಿ ಕೆಲಸ ಮಾಡದಿದ್ದರೆ, ಏನು ಪ್ರಯೋಜನ? ನಿಮ್ಮ ದೇಹವನ್ನು ಸರಿಯಾಗಿ ಬಗ್ಗಿಸಲಿಕ್ಕಾಗುವುದು, ಬಳಸಲಿಕ್ಕಾಗುವುದು ಬಹಳ ಮುಖ್ಯ.

ಯೋಗ – ತೂಕ ನಿರ್ವಹಣೆ ಹಾಗೂ ದೇಹದಾರ್ಢ್ಯತೆ

ಮಾನವನ ಮಾಂಸಪುಷ್ಟಿಯ ವ್ಯವಸ್ಥೆಯು ಅದ್ಭುತವಾದದು. ನಮ್ಮ ಮಾಂಸಖಂಡಗಳು ಏನೆಲ್ಲ ಮಾಡುತ್ತವೆ! ಅವುಗಳನ್ನು ಬಲಪಡಿಸುವ ಮೂಲಕ ಇದನ್ನು ವರ್ಧಿಸಬಹುದು ಹಾಗೂ ಅದೇ ಸಮಯದಲ್ಲಿ ಅವುಗಳನ್ನು ನಮ್ಯಗೊಳಿಸಬಹುದು (flexible). ನೀವು ಭಾರವನ್ನು ಎತ್ತುವ ವ್ಯಾಯಾಮವನ್ನು ಮಾಡಿದರೆ, ನಿಮ್ಮ ಮಾಂಸಖಂಡಗಳು ನಮ್ಯತೆಯಿಲ್ಲದೆ ದೊಡ್ಡದಾಗಿ ಕಾಣುತ್ತವೆ. ದೇಹವನ್ನು ಬೆಳಸಿಕೊಂಡಿರುವ ಜನರನ್ನು ನೀವು ನೋಡಿದರೆ, ಅವರಿಗೆ ಸರಿಯಾಗಿ ನಮಸ್ಕಾರವನ್ನೂ ಮಾಡಲಿಕ್ಕಾಗುವುದಿಲ್ಲ, ದೇಹವನ್ನು ಬಗ್ಗಿಸುವುದಕ್ಕಾಗುವುದಿಲ್ಲ. 

ಅಂಗಮರ್ದನವು, ದೇಹವನ್ನು ಗಟ್ಟಿ ಮಾಡುವಲ್ಲಿ ತೂಕ ಎತ್ತುವ ವ್ಯಾಯಾಮದಷ್ಟೆ ಪರಿಣಾಮಕಾರಿಯಾಗಿದೆ. ಆದರೆ, ಇದು ದೇಹದಲ್ಲಿ ಯಾವುದೇ ಅನಗತ್ಯ ಒತ್ತಡವನ್ನು ಸೃಷ್ಟಿಸುವುದಿಲ್ಲ.

ನೀವು ಚೆನ್ನಾಗಿ ಕಾಣುವ ಸ್ನಾಯುಗಳನ್ನು ಬಯಸಿದರೆ, ಈ ದಿನಗಳಲ್ಲಿ ಅದನ್ನು ಮಾಡಲು ಸುಲಭ ಮಾರ್ಗಗಳಿವೆ. ನೀವು bicep implant-ಗಳನ್ನು ಪಡೆಯಬಹುದು. ಸಿಲಿಕೋನ್ ಕೇವಲ ಸ್ತನಕ್ಕಾಗಿ ಅಲ್ಲ, ಇದು ತೋಳಿನ ಸ್ನಾಯಗಳಿಗೆ, ಕರು ಸ್ನಾಯುಗಳಿಗೂ ಮತ್ತಿತರ ಜಾಗಗಳಲ್ಲಿಯೂ ಹಾಕಿಸಿಕೊಳ್ಳಬಹುದು. ಇದು ನಿಷ್ಪ್ರಯೋಜಕ ಎನ್ನುವುದು ಪ್ರಸ್ತುತವಾಗುವುದಿಲ್ಲ. ನೀವು ಕಷ್ಟಪಟ್ಟು ಕೆಲಸ ಮಾಡಬೇಕಿಲ್ಲ, ಕೊರ್ಟಿಸೋನ್ಸ್ ಮತ್ತು ಹಾರ್ಮೋನುಗಳನ್ನು ತೆಗೆದುಕೊಂಡು ಭಾರಗಳನ್ನು ಎತ್ತುತ್ತಾ ಇರಿ. ಚೆನ್ನಾಗಿ ಕಾಣಿಸುವದಷ್ಟೆ ನಿಮ್ಮ ಗುರಿಯಾಗಿದ್ದರೆ, ಅದಕ್ಕೆ ಸುಲಭವಾದ ಮಾರ್ಗಗಳಿವೆ.

ಹೌದು, body-building ಮಾಡುವುದರಿಂದ ನಿಮಗೆ ಮೃಗೀಯ ಶಕ್ತಿಯನ್ನು ನೀಡುತ್ತದೆ. ಆದರೆ ನೀವು ಅದೇ ರೀತಿಯ ಬಲವನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಬೆಳಸಬಹುದು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ, ಬಹಳ ಮುಖ್ಯವಾಗಿ, ನಿಮ್ಮ ದೇಹವನ್ನು ನಮ್ಯವಾಗಿಯೂ ಇರಿಸಬಹುದು. ಯೋಗಕ್ಷೇಮದ ವಿವಿಧ ಅಂಶಗಳಿವೆ: ಆರೋಗ್ಯ, ಚೈತನ್ಯ, ಮಾನಸಿಕ ಮತ್ತು ಆಧ್ಯಾತ್ಮಿಕ. ಬೆಳಗ್ಗೆ, ೩೦ ನಿಮಿಷದಿಂದ ೧ ಗಂಟೆ ಕಾಲ ನಾವು ಇದಕ್ಕಾಗಿ ಮೀಸಲಿಟ್ಟಾಗ, ಎಲ್ಲ ಕಡೆಯಲ್ಲೂ ಇದರ ಲಾಭವು ನಮಗೆ ಕಾಣಬೇಕು, ಕೇವಲ ತೋಳಿನ ಸ್ನಾಯಗಳನ್ನು ದೊಡ್ಡದಾಗಿ ಮಾಡುವುದು ಮಾತ್ರವಲ್ಲ. 

ಅಂದರೆ, ನೀವು ಸ್ನಾಯುಗಳನ್ನು ಬೆಳೆಸಲು ಬಯಸಿದರೆ, ನೀವು ಯಾವುದೇ ತೂಕವನ್ನು ಎತ್ತಬಾರದೇ? ಎತ್ತಬಹುದು, ಏಕೆಂದರೆ ಆಧುನಿಕ ತಂತ್ರಜ್ಞಾನವು, ದೈಹಿಕ ವ್ಯಾಯಾಮ ಮತ್ತು ಚಟುವಟಿಕೆಗಳನ್ನು ನಮ್ಮ ಜೀವನದಿಂದ ಹೊರಗೆ ಹಾಕಿದೆ. ಇಂದು, ನಾವು ಬಕೆಟ್-ನಲ್ಲಿ ನೀರನ್ನು ತರಬೇಕಾಗಿಲ್ಲ ಅಥವಾ ಈ ತರಹದ ಇನ್ಯಾವುದೋ ಕೆಲಸಗಳನ್ನು ಮಾಡಬೇಕಾಗಿಲ್ಲ. ಎಲ್ಲವೂ ಯಂತ್ರಗಳಿಂದ ಮಾಡಲಾಗುತ್ತದೆ. ನಿಮ್ಮ iPhone ಹೊರತುಪಡಿಸಿ, ನೀವು ನಿಜವಾಗಿಯೂ ಏನನ್ನೂ ಹೊರಬೇಕಿಲ್ಲ, ಅಲ್ಲವೇ? ಆದ್ದರಿಂದ, ನೀವು ದಿನವಿಡೀ ನಿಮ್ಮ ಅಂಗಾಂಗಗಳನ್ನು ಬಳಸದಿರುವ ಕಾರಣ, ತೂಕಗಳನ್ನು ಎತ್ತುವ ಹಗುರವಾದ ವ್ಯಾಯಾಮದಿಂದ ಯಾವುದೇ ಹಾನಿ ಇಲ್ಲ.

ಆದರೆ ಉಪ-ಯೋಗವು ವ್ಯಾಯಾಮ ಮಾಡಲು ನಿಮ್ಮ ಸ್ವಂತ ದೇಹದ ತೂಕವನ್ನು ಬಳಸಿಕೊಳ್ಳುತ್ತದೆ. ಅಂಗಮರ್ದನವೆಂದರೆ ಇಷ್ಟೆ: ಎಲ್ಲಾ ರೀತಿಯ ವ್ಯಾಯಾಮ ಮಾಡಲು ನಿಮ್ಮ ಸ್ವಂತ ದೇಹದ ತೂಕವನ್ನು ಬಳಸುವುದು. ನಂತರ, ಸುತ್ತಮುತ್ತ ಯಾವುದೇ gym ಇಲ್ಲ ಎಂದು ನೆಪ ಹೇಳಲಾಗುವುದಿಲ್ಲ. ನೀವೆಲ್ಲಿದ್ದರೂ ವ್ಯಾಯಾಮವನ್ನು ಮಾಡಬಹುದು, ಏಕೆಂದರೆ ನಿಮ್ಮ ದೇಹವು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಇದು ಯಾವುದೇ ಭಾರ ಎತ್ತುವ ವ್ಯಾಯಾಮವಷ್ಟೆ, ದೇಹವನ್ನು ಕಟ್ಟಲು ಪರಿಣಾಮಕಾರಿಯಾಗಿದೆ ಮತ್ತು ಇದು ದೇಹದಲ್ಲಿ ಯಾವುದೇ ಅನಗತ್ಯ ಒತ್ತಡವನ್ನು ಉಂಟು ಮಾಡುವುದಿಲ್ಲ. ಇದು ನಿಮ್ಮನ್ನು ಒಂದು ಸಂವೇದನಾಶೀಲ ಮನುಷ್ಯರನ್ನಾಗಿ ಮಾಡುತ್ತದೆ  ಹಾಗೂ ನಿಮ್ಮನ್ನು ಬಲಗೊಳಿಸುತ್ತದೆ – ಪ್ರಬಲಗೊಳಿಸುತ್ತದೆ. 

ಯೋಗ – ಅಸ್ತಿತ್ವದ ಆಯಾಮಗಳು

ತೂಕ ಇಳಿಸಲೊಸುಗ ನಾವು ಯೋಗವನ್ನು ಕಲಿಸುವುದಿಲ್ಲ. ತೆಳ್ಳಗಾಗಲೋ, ಬೆನ್ನುನೋವು ಅಥವಾ ತಲೆನೋವುನ್ನು ಉಪಶಮನ ಮಾಡಲಿಕ್ಕಾಗಿಯೋ ಅದನ್ನು ಮಾಡುವುದಿಲ್ಲ. ಹೌದು, ಅವುಗಳು ಆಗಿಯೇ ಆಗುತ್ತದೆ. – ಆರೋಗ್ಯ ಸುಧಾರಿಸುವುದು, ಶಾಂತಿಯಿಂದ, ಪ್ರೀತಿಯಿಂದ, ಸೌಮ್ಯವಾಗಿರುವುದು - ಆದರೆ ಇವುಗಳು ಯೋಗದ ಅಡ್ಡಪರಿಣಾಮಗಳು, ಯೋಗದ ಗುರಿಯಲ್ಲ. ತೂಕ ಕಡಿಮೆ ಮಾಡಲಿಕ್ಕಾಗಿ ನೀವು ಯೋಗವನ್ನೇ ಮಾಡಬೇಕಾಗಿಲ್ಲ. ಕೇವಲ ಜವಾಬ್ದಾರಿಯುತವಾಗಿ ತಿನ್ನಬೇಕು, ಆಟ ಆಡಬೇಕು, ಈಜಲಿಕ್ಕೆ ಹೋಗಬೇಕು, ಇವುಗಳೆಲ್ಲ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ – ಯೋಗ ಮಾಡಬೇಕಿಲ್ಲ. ಭೌತಿಕ ಆಯಾಮದ ಆಚೆಗೆ ಇರುವ ಮತ್ತೊಂದು ಆಯಾಮವನ್ನು ನಿಮ್ಮೊಳಗೆ ಜೀವಂತಗೊಳಿಸುವುದು ಯೋಗದ ಪ್ರಾಧಾನ್ಯ. ಇದು ಜೀವಂತವಾಗಿದ್ದಾಗ ಮಾತ್ರ, ನಿಧಾನವಾಗಿ ಅಸ್ತಿತ್ವವು ಒಂದು ದಶಲಕ್ಷ ವಿವಿಧ ರೀತಿಯಲ್ಲಿ ನಿಮಗೆ ತೆರೆದುಕೊಳ್ಳುತ್ತದೆ. ಭೌತಿಕ ಆಯಾಮದ ಆಚೆಗೆ ಇರುವ ಆಯಾಮವು ಜೀವಂತವಾಗಿರುವುದರಿಂದ, ನೀವು ಯೋಚನೆ ಮಾಡಲೂ ಸಾಧ್ಯವಾದಂತಹ ಸಂಗತಿಗಳು ನಿಮಗೆ ವಾಸ್ತವತೆಯಾಗಿ ಮಾರ್ಪಡುತ್ತವೆ.

ಸಂಪಾದಕರ ಟಿಪ್ಪಣಿ: ಈಶ ಹಠ ಯೋಗ,ವಿಶ್ವದಾದ್ಯಂತ ಪ್ರಮಾಣೀಕೃತ ಶಿಕ್ಷಕರ ಮೂಲಕ ಅಂಗಮರ್ದನ ಮತ್ತು ಉಪ-ಯೋಗದ ಘಟಕಗಳನ್ನು ಒದಗಿಸುತ್ತದೆ.

ಹತ್ತಿರದ ಹಠ ಯೋಗ ಶಿಕ್ಷಕರನ್ನು ಹುಡುಕಿ