ಯಕ್ಷ – ಸಂಗೀತ ಮತ್ತು ನೃತ್ಯದ ಉತ್ಕೃಷ್ಟತ

February 18-20, 2020 (ಮಹಾಶಿವರಾತ್ರಿಯ ಮುನ್ನ) ಈಶ ಯೋಗ ಕೇಂದ್ರದಲ್ಲಿ

ಸಾವಿರಾರು ವರ್ಷಗಳ ಕಾಲ ವಿಕಸನಗೊಂಡಿರುವ ಭಾರತದ ವಿವಿಧ ಲಲಿತಕಲಾ ಪ್ರಕಾರಗಳು, ಕೇವಲ ಈ ನೆಲದ ವೈವಿಧ್ಯಮಯ ಸಂಸ್ಕೃತಿಯ ಪ್ರತಿಫಲನವಾಗಿರದೇ, ಆಧ್ಯಾತ್ಮಿಕ ಸ್ಫೂರ್ತಿಯ ಆಗರವೂ ಆಗಿದೆ. ಹಲವಾರು ತಲೆಮಾರುಗಳ ಕಾಲ ಇವುಗಳು ತಮ್ಮ ಕಲಾಸಿರಿಯಿಂದ ಈ ದೇಶವನ್ನು ಶ್ರೀಮಂತವಾಗಿಸಿದ್ದವು, ಆದರೀಗ ಇವುಗಳು ಬಹುಬೇಗ ನಮ್ಮ ಜೀವನದ ಒಂದು ಕಳೆದುಹೋದ ಆಯಾಮವಾಗುತ್ತಿವೆ. ನಮ್ಮ ದೇಶದ ಪ್ರದರ್ಶನ ಕಲೆಗಳ ವೈಶಿಷ್ಟತೆ, ಶುದ್ಧತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ, ಈಶ ಫೌಂಡೇಶನ್ ಹೆಸರಾಂತ ಕಲಾವಿದರ ಪ್ರದರ್ಶನದೊಂದಿಗೆ ವಾರ್ಷಿಕವಾಗಿ, “ಯಕ್ಷ” ಎಂಬ ಮೂರು ದಿನದ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವಕ್ಕೆ ಭಾರತದ ಪುರಾಣಗಳಲ್ಲಿ ಉಲ್ಲೇಖವಾಗಿರುವ ದೇವಲೋಕದ ವಾಸಿಯಾದ “ಯಕ್ಷ”ನ ಹೆಸರಿಡಲಾಗಿದೆ. ‘ಯಕ್ಷ’ವು ಮಹಾನ್ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುವ ಮತ್ತು ಕಲಾರಸಿಕರಿಗೆ ಈ ಪ್ರಾಚೀನ ಕಲೆಗಳನ್ನು ಆಸ್ವಾದಿಸುವ ವೇದಿಕೆಯನ್ನೊದಗಿಸುತ್ತದೆ.

ಭಾರತದ ಭವ್ಯ ಪ್ರಾಚೀನ ಸಂಸ್ಕೃತಿಯ ಪರಂಪರೆಯಲ್ಲಿ ತಲ್ಲೀನವಾಗಲು ಮತ್ತು ಆಳವಾದ ಅನುಭವವನ್ನು ಹೊಂದಲು ನಿಮ್ಮನ್ನು ನಾವು ಆಮಂತ್ರಿಸುತ್ತಿದ್ದೇವೆ.

detail-seperator-icon

ಪ್ರಸ್ತುತಿಗಳು

ಯಕ್ಷ, ಈಶ ಫೌಂಡೇಶನ್‌ನಿಂದ ವಾರ್ಷಿಕವಾಗಿ ಆಯೋಜಿಸಲ್ಪಡುವ ಸಂಗೀತ ಮತ್ತು ನೃತ್ಯದ ಅದ್ಭುತ ಮತ್ತು ವರ್ಣರಂಜಿತ ರಸದೌತಣದ ಕಾರ್ಯಕ್ರಮ. ಫೆಬ್ರವರಿ / ಮಾರ್ಚಿಯಲ್ಲಿ ಆಚರಿಸಲ್ಪಡುವ ಯಕ್ಷ ಕಾರ್ಯಕ್ರಮದಲ್ಲಿ, ಭಾರತದ ಕೆಲ ಮಹಾನ್ ಕಲಾವಿದರು ಪಾಲ್ಗೊಳ್ಳುತ್ತಾರೆ ಮತ್ತು ಈ ಕಾರ್ಯಕ್ರಮವು ಸಾವಿರಾರು ಉತ್ಸಾಹಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

ಹೆಸರಾಂತ ಕಲಾವಿದರ ಪ್ರಸ್ತುತಿಗಳೊಂದಿಗೆ ವಾರ್ಷಿಕವಾಗಿ ಆಯೋಜಿಸುವ ಮೂರು ದಿನಗಳ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಉತ್ಸವವಾದ “ಯಕ್ಷ” ಕಾರ್ಯಕ್ರಮಕ್ಕೆ ಈಶ ಫೌಂಡೇಶನ್ ನಿಮ್ಮನ್ನು ಆಹ್ವಾನಿಸುತ್ತದೆ

Performers for Yaksha 2020 will be announced soon.

detail-seperator-icon

ಬನ್ನಿ, ಯಕ್ಷ 2020-ರಲ್ಲಿ ಭಾಗಿಯಾಗಿ

ಈಶ ಯೋಗ ಕೇಂದ್ರ, ಕೊಯಮತ್ತೂರು
ಪ್ರವೇಶ ಉಚಿತ. ಎಲ್ಲರಿಗೂ ಆದರದ ಸ್ವಾಗತ
ಸಂಜೆ 6:50 ರಿಂದ ರಾತ್ರಿ 8:30 ವರಗೆ (ಕಾರ್ಯಕ್ರಮ ಆರಂಭವಾಗುವ 10 ನಿಮಿಷಕ್ಕೆ ಮುನ್ನ ಆಸೀನರಾಗಿರಿ)
ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:
ಫೋನ್: 83000 83111 ಅಥವಾ ಇಮೇಲ್ info@mahashivarathri.org

detail-seperator-icon

ಕಳೆದ ವರ್ಷದ ಪ್ರಸ್ತುತಿಗಳು

ಭಾರತದ ಪುರಾಣಗಳಲ್ಲಿ ಉಲ್ಲೇಖವಾಗಿರುವ ದೇವಲೋಕದ ವಾಸಿಗಳಾದ “ಯಕ್ಷ”ರ ಹೆಸರಿಟ್ಟಿರುವ ಈ ಉತ್ಸವವು ಈಶ ಫೌಂಡೇಶನ್‌ನಿಂದ ವಾರ್ಷಿಕವಾಗಿ ಆಯೋಜಿಸಲ್ಪಡುವ ಸಂಗೀತ ಮತ್ತು ನೃತ್ಯದ ಅದ್ಭುತ ಮತ್ತು ವರ್ಣರಂಜಿತ ರಸದೌತಣದ ಕಾರ್ಯಕ್ರಮ. ಫೆಬ್ರವರಿ / ಮಾರ್ಚಿಯಲ್ಲಿ ಆಚರಿಸಲ್ಪಡುವ ಯಕ್ಷ ಕಾರ್ಯಕ್ರಮದಲ್ಲಿ, ಭಾರತದ ಕೆಲ ಮಹಾನ್ ಕಲಾವಿದರು ಪಾಲ್ಗೊಳ್ಳುತ್ತಾರೆ ಮತ್ತು ಈ ಕಾರ್ಯಕ್ರಮವು ಸಾವಿರಾರು ಉತ್ಸಾಹಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

Kalapini Komkali

ಶ್ರೀಮತಿ ಕಲಾಪಿನಿ ಕೋಮ್‌ಕಲಿ

ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ

ಮಧುರ, ಸುಶ್ರಾವ್ಯ ಮತ್ತು ಶ್ರೀಮಂತ ಕಂಠದ ಕಲಾಪಿನಿ ಕೋಮ್‌ಕಲಿಯವರು ಯುವ ಪೀಳಿಗೆಯ ಅತ್ಯುತ್ತಮ ಮತ್ತು ಸುಶಿಕ್ಷಿತ ಶಾಸ್ತ್ರೀಯ ಗಾಯಕರಲ್ಲಿ ಒಬ್ಬರೆಂದು ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಪ್ರಸಿದ್ಧ ಸಂಗೀತಗಾರ ಪಂಡಿತ ಕುಮಾರ ಗಂಧರ್ವರ ಮಗಳು ಹಾಗೂ ಶಿಷ್ಯೆಯಾದ ಕಲಾಪಿನಿಯವರು ಕೌಶಲ್ಯ ಮತ್ತು ಸೃಜನಶೀಲತೆಯ ಸಾಮರ್ಥ್ಯವನ್ನು ಪಾರಂಪರ್ಯವಾಗಿ ಪಡೆದುಕೊಂಡಿದ್ದಾರೆ. ಪಾರಂಪರ್ಯವಾಗಿ ಬಂದ ತಮ್ಮ ಸಂಗೀತ ಕಲೆಯ ಮೇಲಿನ ಹಿಡಿತವನ್ನು ಹೆಚ್ಚಿಸಿಕೊಳ್ಳುತ್ತಲೇ ಅವರು ತಮ್ಮ ಸ್ವಂತ ದೃಷ್ಟಿಕೋನವನ್ನು ಬೆಳೆಸಿಕೊಂಡು ಕಳೆದ ದಶಕದಲ್ಲಿ ಪ್ರಬುದ್ಧ ಮಟ್ಟದ ಸೂಕ್ಷ್ಮತೆ ಮತ್ತು ತೀವ್ರತೆಯನ್ನು ಹೊಂದಿರುವ ಗಾಯಕಿಯಾಗಿ ಹೊರಹೊಮ್ಮಿದರು. ಸೃಜನಶೀಲತೆ, ಕಲಾತ್ಮಕ ಚಿಂತನಶೀಲತೆ ಮತ್ತು ಶಾಸ್ತ್ರೀಯ ಗಾಯನದ ವಿವಿಧ ಅಂಶಗಳ ಮೇಲಿನ ಅವರ ಪ್ರಭುತ್ವವು ಅವರ ಸಂಗೀತ ಪ್ರಸ್ತುತಿಗಳಲ್ಲಿ ಎದ್ದು ಕಾಣುತ್ತದೆ.

Ranjani-Gayatri

ಶ್ರೀಮತಿ ರಂಜಿನಿ ಗಾಯತ್ರಿ

ಕರ್ನಾಟಕ ಶಾಸ್ತ್ರೀಯ ಗಾಯನ

ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗದ ಕ್ಷೇತ್ರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುವ ಕ್ಷೇತ್ರದಲ್ಲಿ, ಈ ಪ್ರತಿಭಾನ್ವಿತ ಸಹೋದರಿಯರಾದ ರಂಜನಿ ಮತ್ತು ಗಾಯತ್ರಿಯವರು ಕಲಾರಸಿಕರನ್ನು ಸಂತುಷ್ಟಗೊಳಿಸಲು ಮತ್ತು ಉತ್ಸಾಹಿತರನ್ನಾಗಿಸಲು ಮತ್ತು ಅದೇ ಸಮಯದಲ್ಲಿ ಜನಸಮಾನ್ಯರನ್ನು ಸಂತೃಪ್ತಗೊಳಿಸಲು ಮತ್ತು ಭಾವಪರವಶರನ್ನಾಗಿಸಲು ದಾರಿಯನ್ನು ಕಂಡುಕೊಂಡಿದ್ದಾರೆ. ಅತ್ಯತ್ತಮ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾದ ರಂಜನಿ ಮತ್ತು ಗಾಯತ್ರಿಯವರು, ಈ ಶಾಸ್ತ್ರೀಯ ಕಲೆಯ ವಿಶಿಷ್ಟ ಸೊಬಗಿನ ಸಂರಕ್ಷಕರು. ಅವರು ಪ್ರಾಚೀನ ಸಂಸ್ಕೃತಿಯಲ್ಲಿ ಹೊಸತನವನ್ನು ತರುವುದನ್ನು ಮುಂದುವರೆಸುತ್ತಲೇ, ಅದನ್ನು ಸಂರಕ್ಷಿಸುತ್ತಿದ್ದಾರೆ ಕೂಡ. ವಾಷಿಂಗ್ಟನ್ ಡಿಸಿ-ಯ ಕೆನಡಿ ಸೆಂಟರ್, ಲಂಡನ್ನಿನ ಸೌತ್ ಬ್ಯಾಂಕ್ ಸೆಂಟರ್, ಇಟಲಿಯಲ್ಲಿನ ರಾವೆನ್ನಾ ಸಂಗೀತ ಉತ್ಸವ, ಪೋಲೆಂಡಿನ ವಾರ್ಸಾದಲ್ಲಿ ಕ್ರಾಸ್ ಕಲ್ಚರ್ ಫೆಸ್ಟಿವಲ್, ಢಾಕಾದಲ್ಲಿನ ಬಂಗಾಳ ಸಂಗೀತ ಉತ್ಸವ, ಸಿಂಗಾಪುರದಲ್ಲಿನ ಎಸ್ಪ್ಲೇನೇಡ್ ಥಿಯೇಟರ್-ಗಳಂತಹ ಪ್ರತಿಷ್ಠಿತ ಸ್ಥಳಗಳಲ್ಲಿ ಮತ್ತು ಉತ್ಸವಗಳಲ್ಲಿ ತಮ್ಮ ಸಂಗೀತ ಕಲೆಯನ್ನು ಪ್ರದರ್ಶಿಸಿದ್ದಾರೆ.

ಯಕ್ಷ ಕಾರ್ಯಕ್ರಮದದ ಕೊನೆಯ ದಿನವು ಭಾರತದ ಪ್ರದರ್ಶನ ಕಲೆಗಳ ಸಂಭ್ರಮಾಚರಣೆಯು ವಿಶೇಷ ಆಕರ್ಷಣೆಯಾಗಿರುತ್ತದೆ.
Leela-Samson

ಲೀಲಾ ಸ್ಯಾಮ್ಸನ್ ಮತ್ತು ಸ್ಪಂದ ನೃತ್ಯ ಸಂಸ್ಥೆ
“ನದಿ” ನೃತ್ಯಕಲಾ ಪ್ರದರ್ಶನ

ಲೀಲಾ ಸ್ಯಾಮ್ಸನ್-ರವರು ಕಲಾಭಿಜ್ಞರು ಮತ್ತು ಭರತನಾಟ್ಯದ ಸೂಕ್ಷ್ಮಾತಿಸೂಕ್ಷ್ಮಗಳ ವ್ಯಾಖ್ಯಾನಕಾರರಾಗಿದ್ದಾರೆ. ಅವರೇ ನೃತ್ಯ ಪ್ರದರ್ಶನ ನೀಡುವುದಲ್ಲದೆ ಸ್ಪಂದ ನೃತ್ಯ ಸಂಸ್ಥೆ ಯೊಂದಿಗೆ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾರೆ. ಲೀಲಾರವರಿಗೆ 1982 ರಲ್ಲಿ ಸಂಸ್ಕೃತಿ ಪ್ರಶಸ್ತಿ, 1990 ರಲ್ಲಿ ಪದ್ಮಶ್ರೀ ಪ್ರಶಸ್ತಿ, 1997 ರಲ್ಲಿ ನೃತ್ಯ ಚೂಡಾಮಣಿ ಪ್ರಶಸ್ತಿ, 2000 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು 2015 ರಲ್ಲಿ ಚೆನ್ನೈ ಸಂಗೀತ ಅಕಾಡೆಮಿಯಿಂದ ನಾಟ್ಯ ಕಲಾ ಆಚಾರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

ಈಶ ಸಂಸ್ಕೃತಿಯ ಪ್ರಸ್ತುತಿ
ಫಕೀರಾ ಖೇತಾ ಖಾನ್ ಮತ್ತು ತಂಡದವರಿಂದ ರಾಜಸ್ಥಾನಿ ಜಾನಪದ ಪ್ರಸ್ತುತಿ (Rajasthan Folk)

ಸೀರೆಯ ಮೇಳ
“ಸಾರೀಸ್: ಟ್ರೆಡಿಷನ್ ಅಂಡ್ ಬಿಯಾಂಡ್” ನ ಪುಸ್ತಕದ ಲೇಖಕಿಯಾದ ರೀಟಾ ಕಪೂರ್ ಚಿಸ್ಟಿಯವರು ನಡೆಸಿಕೊಡುವ, ಸೀರೆಯನ್ನು ಉಡುವ 108 ವಿವಿಧ ಶೈಲಿಗಳನ್ನು ಪ್ರದರ್ಶಿಸುವ ವಿಶೇಷ ಕಾರ್ಯಾಗಾರದಲ್ಲಿ ಮತ್ತು ರನ್ವೇ ಶೋ-ನಲ್ಲಿ ಪಾಲ್ಗೊಳ್ಳಿ

Vidushi Bombay Jayashri – Carnatic Vocal

Shri Ganesh and Shri Kumaresh – Carnatic Violin

Padmashri Geeta Chandran – Bharatanatyam

Padma Bhushan TV Sankaranarayanan – Carnatic Vocal

Ustad Sayeeduddin Dagar – Hindustani Vocal

Malladi Brothers – Carnatic Vocal

Rajan Mishra and Sajan Mishra – Hindustani Vocal

Rama Vaidyanathan – Bharatanatyam

Pandit Ajoy Chakrabarty – Hindustani Vocal

Mysore Brothers – Carnatic Violin

Padmashri Meenakshi Chitharanjan – Bharatanatyam

Bijayini Satpathy and Surupa Sen – Odissi

detail-seperator-icon