Join Us And Watch Yaksha Live Performances

Yaksha 2021 Archives

ಶ್ರೀ ಸಂದೀಪ್ ನಾರಾಯಣ್, ಕರ್ನಾಟಕ ಸಂಗೀತ – ಗಾಯನ

ಹಿಂದೂಸ್ತಾನಿ ಸಂಗೀತ, ಶ್ರೀಮತಿ ಕೌಶಿಕಿ ಚಕ್ರವರ್ತಿ

detail-seperator-icon

ಯಕ್ಷ – ಸಂಗೀತ ಮತ್ತು ನೃತ್ಯದ ಉತ್ಕೃಷ್ಟತ

ಮಾರ್ಚ್ 8 – 10, 2021 (ಮಹಾಶಿವರಾತ್ರಿಯ ಮುನ್ನ) ಈಶ ಯೋಗ ಕೇಂದ್ರದಲ್ಲಿ

ಸಾವಿರಾರು ವರ್ಷಗಳ ಕಾಲ ವಿಕಸನಗೊಂಡಿರುವ ಭಾರತದ ವಿವಿಧ ಲಲಿತಕಲಾ ಪ್ರಕಾರಗಳು, ಕೇವಲ ಈ ನೆಲದ ವೈವಿಧ್ಯಮಯ ಸಂಸ್ಕೃತಿಯ ಪ್ರತಿಫಲನವಾಗಿರದೇ, ಆಧ್ಯಾತ್ಮಿಕ ಸ್ಫೂರ್ತಿಯ ಆಗರವೂ ಆಗಿದೆ. ಹಲವಾರು ತಲೆಮಾರುಗಳ ಕಾಲ ಇವುಗಳು ತಮ್ಮ ಕಲಾಸಿರಿಯಿಂದ ಈ ದೇಶವನ್ನು ಶ್ರೀಮಂತವಾಗಿಸಿದ್ದವು, ಆದರೀಗ ಇವುಗಳು ಬಹುಬೇಗ ನಮ್ಮ ಜೀವನದ ಒಂದು ಕಳೆದುಹೋದ ಆಯಾಮವಾಗುತ್ತಿವೆ. ನಮ್ಮ ದೇಶದ ಪ್ರದರ್ಶನ ಕಲೆಗಳ ವೈಶಿಷ್ಟತೆ, ಶುದ್ಧತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ, ಈಶ ಫೌಂಡೇಶನ್ ಹೆಸರಾಂತ ಕಲಾವಿದರ ಪ್ರದರ್ಶನದೊಂದಿಗೆ ವಾರ್ಷಿಕವಾಗಿ, “ಯಕ್ಷ” ಎಂಬ ಮೂರು ದಿನದ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವಕ್ಕೆ ಭಾರತದ ಪುರಾಣಗಳಲ್ಲಿ ಉಲ್ಲೇಖವಾಗಿರುವ ದೇವಲೋಕದ ವಾಸಿಯಾದ “ಯಕ್ಷ”ನ ಹೆಸರಿಡಲಾಗಿದೆ. ‘ಯಕ್ಷ’ವು ಮಹಾನ್ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುವ ಮತ್ತು ಕಲಾರಸಿಕರಿಗೆ ಈ ಪ್ರಾಚೀನ ಕಲೆಗಳನ್ನು ಆಸ್ವಾದಿಸುವ ವೇದಿಕೆಯನ್ನೊದಗಿಸುತ್ತದೆ.

detail-seperator-icon

2021 ರ ಸಂಗೀತ ಕಾರ್ಯಕ್ರಮಗಳು

ಭಾರತದ ಭವ್ಯ ಪ್ರಾಚೀನ ಸಂಸ್ಕೃತಿಯ ಪರಂಪರೆಯಲ್ಲಿ ತಲ್ಲೀನವಾಗಲು ಮತ್ತು ಆಳವಾದ ಅನುಭವವನ್ನು ಹೊಂದಲು ನಿಮ್ಮನ್ನು ನಾವು ಆಮಂತ್ರಿಸುತ್ತಿದ್ದೇವೆ.

ಮೊದಲನೇ ದಿನ – ಮಾರ್ಚ್ 8, 2021

ಶ್ರೀಮತಿ ಕೌಶಿಕಿ ಚಕ್ರವರ್ತಿ

ಹಿಂದೂಸ್ತಾನಿ ಸಂಗೀತ

ಶ್ರೀಮತಿ. ಕೌಶಿಕಿ ಚಕ್ರವರ್ತಿ ಒಬ್ಬ ಭಾರತೀಯ ಶಾಸ್ತ್ರೀಯ ಗಾಯಕಿ. ಸಂಗೀತ್ ರಿಸರ್ಚ್ ಅಕಾಡೆಮಿಯಲ್ಲಿ ವ್ಯಾಸಂಗ ಪಡೆದ ಅವರು ಪಟಿಯಾಲ ಘರಾನಾದಲ್ಲಿ ಪಾಂಡಿತ್ಯ ಪಡೆದವರಾಗಿದ್ದಾರೆ ಮತ್ತು ಅವರ ಪಾಂಡಿತ್ಯವು ಖಯಾಲ್ಸ್ ಮತ್ತು ಅರೆ-ಶಾಸ್ತ್ರೀಯ ಠುಮ್ರೀಸ್ ಅನ್ನು ಒಳಗೊಂಡಿರುತ್ತದೆ. ವಿಶ್ವ ಸಂಗೀತಕ್ಕಾಗಿ ನೀಡುವ ಪ್ರಶಸ್ತಿಗಳಲ್ಲಿ, ಏಷ್ಯಾ-ಪೆಸಿಫಿಕ್ ವಿಭಾಗದ 2005 ರ ಬಿಬಿಸಿ ರೇಡಿಯೋದ 3 ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ.

ಎರಡನೇ ದಿನ- ಮಾರ್ಚ್ 9, 2021

ಶ್ರೀ ಸಂದೀಪ್ ನಾರಾಯಣ್

ಕರ್ನಾಟಕ ಸಂಗೀತ – ಗಾಯನ

ಸಂದೀಪ್ ನಾರಾಯಣ್ ಅವರು ಇಂದು ಕರ್ನಾಟಕ ಸಂಗೀತದಲ್ಲಿ ಹೆಚ್ಚು ಬೇಡಿಕೆಯ ಗಾಯಕರಲ್ಲಿ ಒಬ್ಬರು. ಅಮೇರಿಕಾದಲ್ಲಿ ಹುಟ್ಟಿ ಬೆಳದು ಕರ್ನಾಟಕ ಸಂಗೀತವನ್ನು ಪೂರ್ಣ ಸಮಯದ ವೃತ್ತಿಜೀವನವಾಗಿ ತೆಗೆದುಕೊಳ್ಳಲು ಭಾರತಕ್ಕೆ ಬಂದ ಮೊದಲ ಸಂಗೀತಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಸಂದೀಪ್ ಅವರು ಎಲ್ಲಾ ಗಡಿಗಳನ್ನು ಮುರಿದು ಅನೇಕ ಮಹತ್ವಾಕಾಂಕ್ಷಿ ಸಂಗೀತಗಾರರಿಗೆ ಆದರ್ಶಪ್ರಾಯವಾಗಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಾಸ್ಕರ’, ‘ಕಲಾ ರತ್ನ’ ಮತ್ತು ‘ಯುವ ಪುರಂದರ’ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

ಮೂರನೇ ದಿನ – ಮಾರ್ಚ್ 10, 2021

ಈಶಾ ಸಂಸ್ಕೃತಿ

ಭರತನಾಟ್ಯ

‘ಈಶಾ ಸಂಸ್ಕೃತಿ’ ಸದ್ಗುರುಗಳಿಂದ ಸ್ಥಾಪಿಸಲಾಗಿದ್ದು, ಇದನ್ನು ಮಕ್ಕಳಿಗೆ ಒಂದು ಅರ್ಪಣೆಯಾಗಿ ಕಲ್ಪಿಸಲಾಗಿದೆ. ಮಕ್ಕಳು ತಮ್ಮೊಳಗೆ ಮತ್ತು ಅವರ ಸುತ್ತಲಿನ ಪ್ರಪಂಚದೊಂದಿಗೆ ಸಾಮರಸ್ಯವನ್ನು ಹೊಂದಲು ಇಲ್ಲಿ ಸೂಕ್ತವಾದ ವಾತಾವರಣವನ್ನು ಒದಗಿಸಿಕೊಡಲಾಗುತ್ತದೆ.

ಯೋಗಾಭ್ಯಾಸ, ಭಾರತೀಯ ಶಾಸ್ತ್ರೀಯ ಕಲೆಗಳಾದ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಮತ್ತು ಕಲರಿ ಪಯಟ್ಟುವಿನಂತಹ ಸಮರ ಕಲೆಗಳನ್ನು ಒಳಗೊಂಡಿರುವ ಈ ಶಿಕ್ಷಣ ವ್ಯವಸ್ಥೆಯು, ಮಕ್ಕಳ ದೇಹ ಮತ್ತು ಮನಸ್ಸಿಗೆ ಸಮತೋಲನ ಮತ್ತು ಸ್ಥಿರತೆಯನ್ನು ತರುತ್ತದೆ. ಈ ಸಂಕೀರ್ಣವಾದ ಕಲಾ ಪ್ರಕಾರಗಳನ್ನು ಕೇವಲ ಮನರಂಜನೆ ಅಥವಾ ಹವ್ಯಾಸವಾಗಿ ಅಲ್ಲದೆ, ಒಂದು ಆಧ್ಯಾತ್ಮಿಕ ಪ್ರಕ್ರಿಯೆಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಆಧ್ಯಾತ್ಮಿಕತೆಯಲ್ಲಿ ಮಹತ್ವ ಪಡೆದ ಸಾಟಿಯಿಲ್ಲದ ಭಾಷೆಯಾದ ಸಂಸ್ಕೃತ, ಮಕ್ಕಳ ಕಲಿಕೆಯ ಪ್ರಮುಖ ಭಾಗವಾಗಿದೆ. ಜೊತೆಗೆ ಮಕ್ಕಳು ಇಂಗ್ಲಿಷ್ ಮತ್ತು ಮೂಲ ಗಣಿತವನ್ನೂ ಕಲಿಯುತ್ತಾರೆ.

detail-seperator-icon

ಯಕ್ಷ 2020 ರೆಕಾರ್ಡ್ ಮಾಡಿರುವ ಪ್ರಸ್ತುತಿಗಳು

Hyderabad Brothers, Carnatic Classical Vocals

Kala Ramnath, Hindustani Classical Violin

ಯಕ್ಷ 2019 ರೆಕಾರ್ಡ್ ಮಾಡಿರುವ ಪ್ರಸ್ತುತಿಗಳು

Kalapini Komkali, Hindustani Vocal Performance