ಪಾಲ್ಗೊಳ್ಳಿ
ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯನ್ನು ಅನೇಕ ವರ್ಷಗಳಿಂದ ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ಕಣ್ಮನ ಸೆಳೆಯುವ ಸಂಗೀತ ನೃತ್ಯ ಪ್ರದರ್ಶನಗಳು ಮತ್ತು ಸದ್ಗುರುಗಳು ನಡೆಸಿಕೊಡುವ ಶಕ್ತಿಯುತ ಧ್ಯಾನ ಪ್ರಕ್ರಿಯೆಗಳನ್ನೊಳಗೊಂಡಿರುವ ಈ ಸಾಂಸ್ಕೃತಿಕ ಉತ್ಸವವು, ಪ್ರತಿವರ್ಷವೂ ನಿಯತವಾಗಿ ಲಕ್ಷಾಂತರ ಜನರನ್ನು ಸೆಳೆಯುತ್ತದೆ. ಇನ್ನೂ ಹೆಚ್ಚಿನ ಸಂಖ್ಯೆಯ ಜನರು, ನಮ್ಮ ವೆಬ್ ನೇರ ಪ್ರಸಾರ ಮತ್ತು ನಮ್ಮ ಮಾಧ್ಯಮ ಸಹಭಾಗಿದಾರರ ಟಿ.ವಿ. ಪ್ರಸಾರದ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ, ಮತ್ತದರಲ್ಲಿ ಪಾಲ್ಗೊಳ್ಳುತ್ತಾರೆ.
ಮಹಾಶಿವರಾತ್ರಿ
Mar 1st, 2022 : ಸಂಜೆ 6 ರಿಂದ ರಾತ್ರಿಯಿಡಿ
ಮಹಾಶಿವರಾತ್ರಿಯ ಆಚರಣೆಯಲ್ಲಿ ಭಾಗವಹಿಸಲು ನೋಂದಣೆ
ಖುದ್ದಾಗಿ ಪಾಲ್ಗೊಳ್ಳಿ
ಎಲ್ಲರಿಗೂ ಆದರದ ಸ್ವಾಗತ.
ಸಾಮಾನ್ಯ ವಿಚಾರಣೆಗಳಿಗಾಗಿ
ದೂರವಾಣಿ: 83000 83111
ಇಮೇಲ್: info@mahashivarathri.org
ಟಿವಿ ಚಾನಲ್-ಗಳು:
Hindi
Tamil
ಸತ್ಸಂಗ
ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯನ್ನು ವೈಭವೋಪೇತವಾಗಿ ಭಾರೀ ಉತ್ಸಾಹದಿಂದ ಆಚರಿಸಲಾಗುತ್ತದೆ. ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತದ ಲಕ್ಷೋಪಲಕ್ಷ ಜನರು ಸದ್ಗುರುಗಳೊಂದಿಗೆ ಈ ವಿಶಿಷ್ಟವಾದ ರಾತ್ರಿಯಿಡಿ ನಡೆಯುವ ಆಚರಣೆ ಮತ್ತು ಸತ್ಸಂಗದಲ್ಲಿ ಭಾಗವಹಿಸುತ್ತಾರೆ.
ಧ್ಯಾನ
ಉತ್ಸಾಹಭರಿತ ಮತ್ತು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವಿನಲ್ಲಿ ಸದ್ಗುರುಗಳು ರಾತ್ರಿಯುದ್ದಕ್ಕೂ ಶಕ್ತಿಯುತ ಧ್ಯಾನ ಪ್ರಕ್ರಿಯೆಗಳನ್ನು ನಡೆಸಿಕೊಡುತ್ತಾರೆ.
ಮಧ್ಯರಾತ್ರಿಯ ಧ್ಯಾನ
ಮಧ್ಯರಾತ್ರಿಯ ಹೊತ್ತಿಗೆ ಸರಿಯಾಗಿ ಸದ್ಗುರುಗಳು ನೆರೆದಿರುವ ಜನಸಮೂಹವನ್ನು ಶಕ್ತಿಯುತ ಧ್ಯಾನಸ್ಥಿತಿಗೆ ಕರೆದೊಯ್ಯುತ್ತಾರೆ. ಇದು ಮಹಾಶಿವರಾತ್ರಿಯ ಅತ್ಯಂತ ಕಾತರದಿಂದ ಎದುರುನೋಡಲಾಗುವ ಕಾರ್ಯಕ್ರಮ.
ಶಕ್ತಿಯುತ ಮಂತ್ರ ಪಠಣೆ
ಸಾಕ್ಷಾತ್ಕಾರ ಪಡೆದ ಗುರುವಿನ ಸಮ್ಮುಖದಲ್ಲಿ ಒಂದು ಸರಳ ಮಂತ್ರ, ರೂಪಾಂತರದ ಪ್ರಬಲ ಪ್ರಕ್ರಿಯೆಯಾಗುತ್ತದೆ. ಈ ಮಹಾಶಿವರಾತ್ರಿಯಂದು ಸದ್ಗುರುಗಳು ನಡೆಸಿಕೊಡುವ ಧ್ಯಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೇರ ಪ್ರಸಾರವನ್ನು ವೀಕ್ಷಿಸಿ. ಮತ್ತಷ್ಟು ತಿಳಿಯಿರಿ
ಮಹಾಶಿವರಾತ್ರಿಗೆ ಸಿದ್ಧವಾಗಿ – ಮಹಾಶಿವರಾತ್ರಿ ಸಾಧನೆ
ಮಹಾಶಿವರಾತ್ರಿಯ ಸಾಧನೆಯು ಅದ್ಭುತ ಸಾಧ್ಯತೆಗಳ ರಾತ್ರಿಯಾದ ಮಹಾಶಿವರಾತ್ರಿಗೆ ಸಿದ್ಧತೆಯ ಪ್ರಕ್ರಿಯೆಯಾಗಿದೆ. ಏಳು ವರ್ಷದ ಮೇಲ್ಪಟ್ಟ ಯಾರಾದರೂ ಈ ಸಾಧನೆಯಲ್ಲಿ ಭಾಗವಹಿಸಬಹುದು ಮತ್ತಷ್ಟು ತಿಳಿಯಿರಿ
ಮನೆಯಲ್ಲಿ ಮಹಾಶಿವರಾತ್ರಿ
ಅಗತ್ಯವಿರುವ ಸಿದ್ಧತೆಯನ್ನು ಮಾಡಿಕೊಳ್ಳದವರಿಗೆ ಸಾಮಾನ್ಯವಾಗಿ ಸೂಕ್ತವಲ್ಲದ ಕೆಲ ನಿರ್ದಿಷ್ಟ ರೀತಿಯ ಪ್ರಬಲ ಸಾಧನೆಯನ್ನು ಮಾಡಲು ಮಹಾಶಿವರಾತ್ರಿಯಂದು ಉಂಟಾಗುವ ಮಾನವ ಶರೀರದೊಳಗಿನ ಶಕ್ತಿಯ ನೈಸರ್ಗಿಕ ಮೇಲ್-ಸ್ಫುರಣವು ಅನುವು ಮಾಡಿಕೊಡುತ್ತದೆ.
ಹೆಚ್ಚಿನವರಿಗೆ ತಿಳಿದಿರುವ ಹಾಗೆ, “ॐ ನಮಃ ಶಿವಾಯ” ಮಹಾಮಂತ್ರವನ್ನು ಸಾಮಾನ್ಯ ಸಂದರ್ಭಗಳಲ್ಲಿ ಪಠಿಸದಿರಲು ನಾವು ಸೂಚನೆಯನ್ನು ನೀಡುತ್ತೇವೆ. ಆದರೆ, ಮಹಾಶಿವರಾತ್ರಿಯಂದು ಈ ಸಾಧನೆಯನ್ನು ಮಾಡಿ, ಅದರ ಫಲವನ್ನು ಪಡೆದುಕೊಳ್ಳಬಹುದು.
ಮಹಾಶಿವರಾತ್ರಿಯಂದು ಈಶ ಯೋಗ ಕೇಂದ್ರದಲ್ಲಿ ಹಾಜರಿರಲು ಸಾಧ್ಯವಾಗದವರು, ಈ ರಾತ್ರಿಯ ಪ್ರಯೋಜನವನ್ನು ಕೆಳಕಂಡ ವಿಧಾನದಲ್ಲಿ ಪಡೆದುಕೊಳ್ಳಬಹುದು:
- ರಾತ್ರಿಯಿಡಿ ಮಲಗದೆ ಬೆನ್ನುಹುರಿಯನ್ನು ನೇರವಾಗಿರಿಸಿ, ಎಚ್ಚರ ಹಾಗೂ ಜಾಗೃತವಾಗಿರುವುದು ಬಹಳ ಪ್ರಯೋಜನಕಾರಿ.
- ದೀಪ ಅಥವಾ ಲಿಂಗ ಜ್ಯೋತಿಯನ್ನು ಬೆಳಗಿಸುವ ಮೂಲಕ, ಅಥವಾ ಧ್ಯಾನಲಿಂಗ ಯಂತ್ರ ಅಥವಾ ಸದ್ಗುರುಗಳ ಚಿತ್ರದ ಮುಂದೆ ಹೂವು, ಊದಿನ ಬತ್ತಿ ಹಚ್ಚಿ ನಿಮ್ಮ ಕೋಣೆಯನ್ನು ಸಿದ್ಧಪಡಿಸಿಕೊಳ್ಳಿ.
- ನೀವು ಭಕ್ತಿಗೀತೆಗಳು ಅಥವಾ ಮಂತ್ರ ಪಠಣೆಯನ್ನು ಜಪಸಿಬಹುದು, ಹಾಡಬಹುದು ಅಥವಾ ಕೇಳಬಹುದು.
- ನೀವು ಒಂಟಿಯಾಗಿದ್ದರೆ, ಪ್ರಕೃತಿಯೊಂದಿಗಿರಿ ಅಥವಾ ನಡೆದಾಡಿ. ನೀವು ಗುಂಪಿನಲ್ಲಿದ್ದರೆ, ಆದಷ್ಟು ಮೌನವಾಗಿರುವುದು ಉತ್ತಮ
- ಮಧ್ಯರಾತ್ರಿ ಸಾಧನೆಯನ್ನು ಕೆಳಕಂಡ ರೀತಿಯಲ್ಲಿ ಮಾಡಬೇಕು: ರಾತ್ರಿ 11:10 – 11:30 – Nadi Shuddhi; ರಾತ್ರಿ 11:30 – 11:50 ॐ ಪಠಣೆ; ರಾತ್ರಿ 11:50 – 12:10 – “ॐ ನಮಃ ಶಿವಾಯ” ಮಹಾಮಂತ್ರದ ಪಠಣೆ.
- ನೀವು ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದರೆ, ಅಲ್ಲಿ ನೀಡಲಾಗುವ ಧ್ಯಾನದ ಸೂಚನೆಗಳನ್ನು ನೀವು ಅನುಸರಿಸಬಹುದು.