ಮಹಾಶಿವರಾತ್ರಿ

February 21st, 2020 – 6pm – 6am

ಈಶ ಯೋಗ ಕೇಂದ್ರ

“ಮಹಾಶಿವರಾತ್ರಿಯಂದು, ವೆಳ್ಳಿಯಂಗಿರಿಯ ತಪ್ಪಲಿನಲ್ಲಿ, ನೀವು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದ್ದೀರಿ. ನಿಮ್ಮನ್ನು ನೀವು ಗ್ರಹಣಶೀಲರಾಗಿರಿಸಿಕೊಂಡರೆ, ಇದು ಜಾಗೃತಿಯ ರಾತ್ರಿಯಾಗಬಲ್ಲದು”. – ಸದ್ಗುರು

ಖುದ್ದಾಗಿ ಪಾಲ್ಗೊಳ್ಳಲು

ರಾತ್ರಿಯುದ್ದಕ್ಕೂ ನಡೆಯುವ ಆಚರಣೆಯ ವಿಶೇಷತೆಗಳು:

Midnight Meditation

ಮಧ್ಯರಾತ್ರಿಯ ಧ್ಯಾನ

ಮಧ್ಯರಾತ್ರಿಯ ಹೊತ್ತಿಗೆ ಸರಿಯಾಗಿ ಸದ್ಗುರುಗಳು ನೆರೆದಿರುವ ಜನಸಮೂಹವನ್ನು ಶಕ್ತಿಯುತ ಧ್ಯಾನಸ್ಥಿತಿಗೆ ಕರೆದೊಯ್ಯುತ್ತಾರೆ. ಇದು ಮಹಾಶಿವರಾತ್ರಿಯ ಅತ್ಯಂತ ಕಾತರದಿಂದ ಎದುರುನೋಡಲಾಗುವ ಕಾರ್ಯಕ್ರಮ.

Musical Performances

ಸಂಗೀತ ಪ್ರಸ್ತುತಿಗಳು

ಈಶದಲ್ಲಿ ಪ್ರತಿವರ್ಷ ಮಹಾಶಿವರಾತ್ರಿಯನ್ನು, ಎಲ್ಲರೂ ಅದರಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಅದರಿಂದ ಲಾಭವನ್ನು ಪಡೆಯುವಂತಾಗಲು, ರಾತ್ರಿಯಿಡೀ ಹೆಸರಾಂತ ಕಲಾವಿದರ ಸಂಗೀತ-ನೃತ್ಯ ಪ್ರಸ್ತುತಿಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ರುದ್ರಾಕ್ಷ ಪ್ರಸಾದ

ರುದ್ರಾಕ್ಷ ಪ್ರಸಾದ

ಮಹಾಶಿವರಾತ್ರಿಯಂದು ಈಶ ಯೋಗ ಕೇಂದ್ರದಲ್ಲಿರುವ ಭಕ್ತರು ರುದ್ರಾಕ್ಷ ಮಣಿಯನ್ನ ಪ್ರಸಾದದ ರೂಪದಲ್ಲಿ ಪಡೆಯುತ್ತಾರೆ. ಈ ಮಣಿಯು ಕಳೆದೊಂದು ವರ್ಷದಲ್ಲಿ ಆದಿಯೋಗಿಯನ್ನು ಅಲಂಕರಿಸಿದ ಒಂದು ಲಕ್ಷದ ಎಂಟು ರುದ್ರಾಕ್ಷ ಮಣಿಗಳಲ್ಲೊಂದಾಗಿರುತ್ತದೆ.

Sarpa Sutra

ಸರ್ಪಸೂತ್ರ

ಈ ವರ್ಷದ ಮಹಾಶಿವರಾತ್ರಿಯ ಉತ್ಸವಕ್ಕೆ ಈಶ ಯೋಗ ಕೇಂದ್ರಕ್ಕೆ ಬರುವ ಭಕ್ತಾದಿಗಳು ಸರ್ಪಸೂತ್ರವನ್ನು ಪಡೆಯಬಹುದಾಗಿದೆ. ತಾಮ್ರದಿಂದ ಮಾಡಲಾಗಿರುವ ಸರ್ಪಸೂತ್ರವನ್ನು ಎಡಗೈಯ ಉಂಗುರದ ಬೆರಳಿನಲ್ಲಿ ತೊಡಬೇಕು. ಇದು ಸ್ಥಿರತೆ ಮತ್ತು ಸೌಖ್ಯವನ್ನು ತರುವಲ್ಲಿ ಬೆಂಬಲವನ್ನು ನೀಡುತ್ತದೆ.

Bhairavi Maha Yatra

ಭೈರವಿ ಮಹಾಯಾತ್ರೆ

ಮಹಾಶಿವರಾತ್ರಿಯಂದು, ಲಿಂಗ ಭೈರವಿಯ ಉತ್ಸವಮೂರ್ತಿ, ಲಿಂಗ ಭೈರವಿಯ ಆವಾಸಸ್ಥಾನದಿಂದ ಆದಿಯೋಗಿಯ ಬಳಿಗೆ ಭವ್ಯ ಮೆರವಣಿಗೆಯಲ್ಲಿ ಬರುತ್ತಾಳೆ. ಮೊಟ್ಟಮೊದಲ ಬಾರಿಗೆ, ಈ ತೇಜೋಮಯ ಮಹಾ ಯಾತ್ರೆಯ ಭಾಗವಾಗಲು ನಿಮಗೊಂದು ಅನನ್ಯ ಅವಕಾಶವಿದೆ. ದೇವಿಯ ವೈಭವ, ಭಾವಪರವಶತೆ ಮತ್ತು ಅನುಗ್ರಹದಲ್ಲಿ ತೊಯ್ದುಹೋಗಿ.

Adiyogi Pradakshina

ಆದಿಯೋಗಿ ಪ್ರದಕ್ಷಿಣೆ

ಒಂದು ಪ್ರಬಲ ಶಕ್ತಿ ಮೂಲದ ಚೈತನ್ಯವನ್ನು ಮೈಗೂಡಿಸಿಕೊಳ್ಳಲು ಅದನ್ನು ಸುತ್ತುಬರುವ ಪ್ರಕ್ರಿಯೆಯನ್ನು ಪ್ರದಕ್ಷಿಣೆಯೆನ್ನುತ್ತಾರೆ. ಆದಿಯೋಗಿ ಪ್ರದಕ್ಷಿಣೆಯ ಮೂಲಕ ನೀವು ಆದಿಯೋಗಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಈ ಅನುಗ್ರಹವು ನಿಮ್ಮ ಪರಮ ಮುಕ್ತಿಯೆಡೆಗಿನ ನಿಮ್ಮ ಹಾತೊರೆತವನ್ನು ಉತ್ತೇಜಿಸುವುದು.

ಈಶ ಯೋಗ ಕೇಂದ್ರದ ಮಹಾಶಿವರಾತ್ರಿಯ ಆಚರಣೆಯು ಎಲ್ಲರಿಗೂ ಮುಕ್ತವಾಗಿದೆ. ನೀವು ನೀಡುವ ಕಾಣಿಕೆಗಳು ಈ ರಾತ್ರಿಯ ಸಾಧ್ಯತೆಗಳನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಲಭ್ಯವಾಗಿಸಲು ನಮಗೆ ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು

ವಿಚಾರಣೆಗಾಗಿ:

ದೂರವಾಣಿ: 83000 83111

ಇಮೇಲ್: