ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ನೋಂದಣಿಗೆ ಸಂಬಂಧಪಟ್ಟ ಪ್ರಶ್ನೆಗಳು

ಸ್ಥಳೀಯ ಕೇಂದ್ರಗಳಲ್ಲಿ ಅಥವಾ ಆನ್ಲೈನ್-ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನೋಂದಣಿಯನ್ನು ಎಲ್ಲಿ ಮಾಡಬಹುದು?

ದಯವಿಟ್ಟು ಮಹಾಶಿವರಾತ್ರಿ ವೆಬ್ ಪುಟಕ್ಕೆ ಭೇಟಿ ನೀಡಿ, ಅಲ್ಲಿರುವ “ಖುದ್ದಾಗಿ ಬನ್ನಿ” ಭಾಗದಲ್ಲಿ ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಿ. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ನಿಮ್ಮ ಪ್ರಶ್ನೆಯನ್ನು ಅಲ್ಲಿಯೇ ಕೇಳಬಹುದು. ವಿವಿಧ ಆಸನದ ಆಯ್ಕೆಗಳನ್ನು ನಿಮಗೆ ವಿವರಿಸಲು 4-7 ದಿನಗಳೊಳಗೆ ಸ್ವಯಂ-ಸೇವಕರು ನಿಮ್ಮನ್ನು ಸಂಪರ್ಕಿಸುತ್ತಾರೆ.

ಗಮನಿಸಿ: ಕಾರ್ಯಕ್ರಮಕ್ಕಿರುವ ಅಪಾರವಾದ ಪಾಲ್ಗೊಳ್ಳುವಿಕೆಯ ಕಾರಣದಿಂದ, ನಿಮಗೆ ಈ ಸಮಯದೊಳಗೆ ಕರೆ ಮಾಡಿ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಸಾಧ್ಯವಾಗದಿದ್ದರೆ, ನೀವು ಆಯಾ ಸ್ಥಳೀಯ ಕೇಂದ್ರಗಳಲ್ಲಿರುವ ನೋಂದಣಿ ಕೇಂದ್ರಗಳಿಗೆ ಕರೆ ಮಾಡಬಹುದು.

ನಿಮ್ಮ ಆಯ್ಕೆಯ ವಿಭಾಗವನ್ನು ಸೂಚಿಸಿದ ನಂತರ, ಕಾಣಿಕೆಯ ಲಿಂಕ್-ಅನ್ನು ಹೊಂದಿದ ಇ-ಮೇಲನ್ನು ನಿಮಗೆ 24- 48 ಗಂಟೆಗಳೊಳಗೆ ಕಳುಹಿಸಲಾಗುತ್ತದೆ. ಈ ಇ-ಮೇಲ್-ನ ಶೀರ್ಷಿಕೆ, “please complete your donation” ಎಂದಿರುತ್ತದೆ.

ದಯವಿಟ್ಟು ನಿಮ್ಮ ಸ್ಪ್ಯಾಮ್ ಫೋಲ್ಡರ್-ಅನ್ನು ಪರಿಶೀಲಿಸಿ, ಇಮೇಲ್ ಅಲ್ಲಿಗೆ ಬರುವ ಸಾಧ್ಯತೆಯಿರುತ್ತದೆ. ಕಾಣಿಕೆಯ ಲಿಂಕ್ 30 ದಿನಗಳವರೆಗೆ ಸಕ್ರಿಯವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.


ಫೋಟೋ ಐಡಿ ಕಾರ್ಡ್-ಅನ್ನು ತರಬೇಕೇ?

ಹೌದು, ಮಹಾಶಿವರಾತ್ರಿಯ ನೋಂದಣಿ ಪ್ರಕ್ರಿಯೆಯಲ್ಲಿ ಬಳಸಿದ, ಸರ್ಕಾರದಿಂದ ನೀಡಲಾಗಿರುವ ಅಂಗೀಕಾರಾರ್ಹ ಫೋಟೋ ಐಡಿ ಕಾರ್ಡ್-ಅನ್ನು ದಯವಿಟ್ಟು ತನ್ನಿ.

ಹೊರದೇಶದಿಂದ ಬರುತ್ತಿರುವವರಿಗೆ ಅಂಗೀಕಾರಾರ್ಹ ವೀಸಾ ಸಹಿತವಿರುವ ಪಾಸ್ ಪೋರ್ಟ್ ಕಡ್ಡಾಯ.


ಕಾರ್ಯಕ್ರಮದ ಸ್ಥಳಕ್ಕೆ ನಾನು ಯಾವ ಸಮಯಕ್ಕೆ ಬರಬೇಕು?

ಕಾರ್ಯಕ್ರಮದ ದಿನದಂದು, ನೋಂದಣಿ ಮಾಡಿಕೊಂಡಿರುವವರಿಗೆ ಚೆಕ್-ಇನ್ ಕೌಂಟರ್-ಗಳು ಮಧ್ಯಾಹ್ನ 12:00 ರಿಂದ ತೆರೆದಿರುತ್ತದೆ. ಶೌಚಾಲಯಗಳು ಮತ್ತು ಉಪಹಾರ / ಅಲ್ಪಾಹಾರ ಸೌಲಭ್ಯಗಳು ಆಚರಣೆಯ ಸ್ಥಳದಲ್ಲಿ ಲಭ್ಯವಿದೆ. ಇಮೇಲ್ ಮೂಲಕ ಕಳುಹಿಸಲಾದ ನಿಮ್ಮ ಇ-ಪಾಸ್-ನ ಪ್ರಿಂಟ್ ಔಟ್-ಅನ್ನು ದಯವಿಟ್ಟು ತನ್ನಿ.


ನನಗೆ ತಮಿಳು ಭಾಷೆ ತಿಳಿಯದು; ನಾನು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ?

ಮಹಾಶಿವರಾತ್ರಿಯನ್ನು ಇಂಗ್ಲಿಷಿನ ಜೊತೆ ತಮಿಳು, ಹಿಂದಿ ಮತ್ತು ಮ್ಯಾಂಡರಿನ್ ಅನುವಾದದೊಂದಿಗೂ ನಡೆಸಿಕೊಡಲಾಗುತ್ತದೆ.


ಡಯಾಬಿಟೀಸ್, ಹೃದಯದ ಕಾಯಿಲೆ ಮತ್ತು ಹರ್ನಿಯ ಇರುವವರು ಭಾಗವಹಿಸಬಹುದೇ?

ಹೌದು, ದಯವಿಟ್ಟು ನಿಮ್ಮ ಔಷಧಿಯನ್ನು ಜೊತೆಗೆ ತನ್ನಿ.


ನನಗೆ ನೆಲದ ಮೇಲೆ ಕೂರಲು ಕಷ್ಟವಾಗುತ್ತದೆ.

ಕಾರ್ಯಕ್ರಮದಾದ್ಯಂತ ಕುರ್ಚಿಗಳನ್ನು ಒದಗಿಸಲಾಗುವುದು.


ನನ್ನ ಮಕ್ಕಳನ್ನು ನನ್ನೊಂದಿಗೆ ಕರೆತರಬಹುದೇ? ಭಾಗವಹಿಸಲು ಕನಿಷ್ಠ ವಯಸ್ಸು ಯಾವುದು?

ಮಹಾಶಿವರಾತ್ರಿಯ ಸಂದರ್ಭದಲ್ಲಿ, ಮಕ್ಕಳ ಅಥವಾ ಸಣ್ಣ ವಯಸ್ಸಿನವರ ಆರೈಕೆ ಮಾಡಲು ಸೌಲಭ್ಯಗಳು ನಮ್ಮ ಬಳಿಯಿಲ್ಲ. ನೀವು ಈ ಕಾರ್ಯಕ್ರಮಕ್ಕೆ ಬಂದಾಗ, ಅವರನ್ನು ಮನೆಯಲ್ಲಿ ಯಾರಾದರೂ ನೋಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿಬೇಕೆಂದು ವಿನಂತಿಸುತ್ತೇವೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು 10 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಇಚ್ಛಿಸಿದರೆ ನೀವು ನಿಮ್ಮ ಕುಟುಂಬದೊಂದಿಗೆ ಕೊಯಮತ್ತೂರುನಲ್ಲಿ ತಂಗಬಹುದು ಮತ್ತು ಮಹಾಶಿವರಾತ್ರಿಯಂದು ಎಲ್ಲರನ್ನೂ ಕರೆತರಬಹುದು.


ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ, ನಾನು ಮಹಾಶಿವರಾತ್ರಿಯ ಪಾಸ್-ಗಾಗಿ ನೋಂದಣಿಯನ್ನು ಮಾಡಬಹುದೇ ಅಥವಾ ಕಾಣಿಕೆಯನ್ನು ನೀಡಬಹುದೇ?

ಇದೊಂದು ದೊಡ್ಡ ಪ್ರಮಾಣದ ಕಾರ್ಯಕ್ರಮವಾದ್ದರಿಂದ, ಯಾವುದೇ ನಿರಾಸೆಯನ್ನು ತಪ್ಪಿಸಲು, 15 ದಿನಗಳಿಗಿಂತ ಮುಂಚಿತವಾಗಿ ನೀವು ನೋಂದಣಿ ಮಾಡುವುದು ಉತ್ತಮ. ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವುದು ಆಸನಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.


ನನ್ನ ನೋಂದಣಿ ಪೂರ್ಣಗೊಂಡಿದೆಯೆಂದು ನನಗೆ ಹೇಗೆ ತಿಳಿಯುತ್ತದೆ?

ನೀವು ಕಾಣಿಕೆ ನೀಡಿದ ಒಂದು ದಿನದೊಳಗಾಗಿ, ನಿಮಗೆ ಕಾಣಿಕೆಯ ರಸೀದಿ ಮತ್ತು ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ದೃಢೀಕರಣ ಇಮೇಲ್-ಅನ್ನು ಕಳುಹಿಸಲಾಗುವುದು. ಕಾರ್ಯಕ್ರಮವು ಹತ್ತಿರವಾಗುತ್ತಿದ್ದಂತೆ, ಇಮೇಲ್ ಮೂಲಕ ಪಾಸ್-ಅನ್ನು ಕಳುಹಿಸಲಾಗುವುದು.


ನಾನು ಇನ್ನರ್ ಇಂಜಿನೀಯರಿಂಗ್ ಕಾರ್ಯಕ್ರಮವನ್ನು ಮುಗಿಸಿಲ್ಲ. ನಾನು ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ?

ಹೌದು, ಮಹಾಶಿವರಾತ್ರಿಯ ಕಾರ್ಯಕ್ರಮವು ಎಲ್ಲರಿಗೂ ತೆರದಿರುತ್ತದೆ.


ಒಂದು ಸೀಟಿಂಗ್ ಪಾಸ್-ನೊಂದಿಗೆ ಎಷ್ಟು ಜನರು ಪಾಲ್ಗೊಳ್ಳಬಹುದು?

ಎಲ್ಲಾ ವಿಭಾಗದಲ್ಲೂ, ಒಬ್ಬರಿಗೆ ಒಂದು ಪಾಸ್. ಸೀಟಿಂಗ್ ಪಾಸ್-ಅನ್ನು ವರ್ಗಾಯಿಸಲಾಗದು.


ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೇರೆಯವರು ಕಾಣಿಕೆಯನ್ನು ನೀಡಬಹುದೇ?

ಹೌದು, ಕಾಣಿಕೆಯನ್ನು ಯಾರಾದರೂ ನೀಡಬಹುದು. ಅಂತೆಯೇ, ರಸೀದಿಯನ್ನು ಕಾಣಿಕೆ ನೀಡಿದವರ ಹೆಸರಿನಲ್ಲಿಯೇ ನೀಡಲಾಗುತ್ತದೆ. ನೀವು ಕಾಣಿಕೆಯನ್ನು ಕಂತುಗಳಲ್ಲಿ ಮಾಡಲು ಸಾಧ್ಯವಿಲ್ಲ.


ಭಾಗಶಃ ಕಾಣಿಕೆಯನ್ನು ಕಾರ್ಯಕ್ರಮದ ಮುನ್ನ ಮತ್ತು ಭಾಗಶಃ ನಂತರದಲ್ಲಿ ನೀಡಬಹುದೇ?

ಇಲ್ಲ.


ಕೇಂದ್ರಕ್ಕೆ ವಾಹನಗಳಲ್ಲಿ ಬರಬಹುದೇ? ಪಾರ್ಕಿಂಗ್ ಸೌಲಭ್ಯವಿದೆಯೇ?

ಸೀಮಿತ ಪಾರ್ಕಿಂಗ್ ಸ್ಥಳಗಳು ಲಭ್ಯವಿರುತ್ತದೆ. ವಾಹನಗಳನ್ನು ಪಾರ್ಕ್ ಮಾಡುವುದು ಮಾಲೀಕರ ರಿಸ್ಕ್-ನಲ್ಲಿ ಮತ್ತು ಕಾರ್ಯಕ್ರಮದ ಆಯೋಜಕರು ಯಾವುದೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಿಲ್ಲ.


ಪಾಲ್ಗೊಳ್ಳುವಿಕೆಗೆ ಸಂಬಂಧಪಟ್ಟ ಪ್ರಶ್ನೆಗಳು

ನಾನು ಗರ್ಭಿಣಿಯಾಗಿದ್ದಲ್ಲಿ ಅಥವಾ ನನ್ನ ಋತುಚಕ್ರದ ಅವಧಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದೇ?

ಹೌದು, ನೀವು ಪಾಲ್ಗೊಳ್ಳಬಹುದು.


ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಸ್ತ್ರ ಸಂಹಿತೆ ಏನು?

ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಆಶ್ರಮದಲ್ಲಿರುವಾಗ ಸಭ್ಯ ವಸ್ತ್ರಶೈಲಿಯನ್ನು ಅನುಸರಿಸಿರಿ. ಹೆಂಗಸರು ಮತ್ತು ಗಂಡಸರಿಬ್ಬರೂ ಭುಜಗಳು, ತೋಳಿನ ಮೇಲ್ಭಾಗ, ಮಣಿಗಂಟಿನ ತನಕ ಕಾಲುಗಳು ಮತ್ತು ಮೇಲ್-ಹೊಟ್ಟೆಯು ಮುಚ್ಚುವಂತೆ ಉಡುಗೆಯನ್ನು ಧರಿಸಿರಬೇಕು.
ತಕ್ಕುದಾದ ಪಾಶ್ಚಾತ್ಯ ಉಡುಪುಗಳು: ಪುರುಷರು ಮತ್ತು ಮಹಿಳೆಯರಿಗೆ ಮಣಿಗಂಟಿನ ತನಕದ ಪ್ಯಾಂಟ್ಗಳು (ಕ್ಯಾಪ್ರಿಸ್ ಅಥವಾ ಶಾರ್ಟ್ಸ್-ಗಳು ನಿಷಿದ್ಧ) ಮತ್ತು ಮೇಲ್-ತೋಳುಗಳು ಕಾಣದಿರುವ ಉದ್ದನೆಯ ಶರ್ಟ್ಗಳು. ನಿಮ್ಮ ಆರಾಮಕ್ಕಾಗಿ ಮತ್ತು ಸ್ಥಳೀಯ ಸಂಸ್ಕೃತಿಯ ಬಗ್ಗೆ ಗೌರವದ ಸಂಕೇತವಾಗಿ ಬಿಗಿಯಾದ ಉಡುಪುಗಳನ್ನು ಧರಿಸಬೇಡಿ.

ಯಕ್ಷ ಮತ್ತು ಮಹಾಶಿವರಾತ್ರಿಯ ಸಮಯದಲ್ಲಿ, ಭಾರತೀಯ ಸಂಸ್ಕೃತಿಯ ಉಡುಗೆ ತೊಡುವುದನ್ನು ಪ್ರೋತ್ಸಾಹಿಸಲಾಗುತ್ತದೆ.


ಬೆಚ್ಚಗಿನ ಬಟ್ಟೆಗಳು ಮತ್ತು ರಾತ್ರಿಗೆ ಹೊದ್ದುಕೊಳ್ಳಲು ಹೊದಿಕೆಯನ್ನು ತನ್ನಿ.

ಡಿಸೆಂಬರ್-ನಿಂದ ಮಾರ್ಚಿಯವರೆಗೆ, ಹವಾಮಾನವು ರಾತ್ರಿಯ ಹೊತ್ತು ತಣ್ಣಗೆ ಮತ್ತು ದಿನದಲ್ಲಿ ಬೆಚ್ಚಗಿರುತ್ತದೆ. ಕನಿಷ್ಠ ಉಷ್ಣಾಂಶ 17°C (62.6°F) ಮತ್ತು ಗರಿಷ್ಠ ಉಷ್ಣಾಂಶ 35°C (95°F) ತಲುಪಬಹುದು.


ಬಟ್ಟೆಗಳನ್ನು ತೊಳೆಯಲು ಅವಕಾಶವಿದೆಯೇ?

ಯೋಗ ಕೇಂದ್ರದಲ್ಲಿ ತೀವ್ರತರವಾದ ನೀರಿನ ಕೊರತೆಯ ಕಾರಣದಿಂದ, ಬಟ್ಟೆಗಳನ್ನು ತೊಳೆಯುವುದು ಸಾಧ್ಯವಾಗುವುದಿಲ್ಲ. ಲಾಂಡ್ರಿಯ ಸೌಲಭ್ಯ ಲಭ್ಯವಿರುವುದಿಲ್ಲ. ಕಾರ್ಯಕ್ರಮದ ಪೂರ್ತಿ ಅವಧಿಯವರೆಗೆ ಸಾಕಾಗುವಷ್ಟು ಬಟ್ಟೆಗಳನ್ನು ತನ್ನಿ.


ಕೊಯಮತ್ತೂರಿಗೆ ಬಂದ ನಂತರ, ಅಲ್ಲಿಂದ ಈಶ ಯೋಗ ಕೇಂದ್ರಕ್ಕೆ ಬರುವುದು ಹೇಗೆ?

ಕೊಯಮತ್ತೂರು ನಗರದಿಂದ ಈಶ ಯೋಗ ಕೇಂದ್ರಕ್ಕೆ ಬರಲು ದಿನಪೂರ್ತಿ ಸಿಟಿಬಸ್‌ಗಳೂ, ಟ್ಯಾಕ್ಸೀಗಳೂ ದೊರೆಯುತ್ತವೆ. ಗಾಂಧಿಪುರಂ ಸಿಟಿ ಬಸ್ ನಿಲ್ದಾಣದಿಂದ, ಕೊಯಮತ್ತೂರಿನಿಂದ ಈಶ ಯೋಗ ಕೇಂದ್ರಕ್ಕೆ, ಬೆಳಿಗ್ಗೆ 5.30-ಯಿಂದ ಬಸ್ ನಂ. 14D-ನ ಸೇವೆಯು ಆರಂಭವಾಗುತ್ತದೆ.

ಈಶ ಟ್ರಾವೆಲ್ ಸಹಾಯವಾಣಿ: 9442615436, 0422-2515430

 • ಟ್ಯಾಕ್ಸಿ: 0422-40506070, ಏರ್ಪೋರ್ಟ್ ಪ್ರಿಪೇಯ್ಡ್: 99764 94000,
 • ಫಾಸ್ಟ್ ಟ್ರ್ಯಾಕ್: 0422-2200000 (ದಯವಿಟ್ಟು ಶುಲ್ಕ ಪರಿಶೀಲಿಸಿ ಮತ್ತು ಮುಂಚಿತವಾಗಿ ಕಾಯ್ದಿರಿಸಿ).
 • ಮೊಬೈಲ್ ಯಾಪ್-ಗಳ ಮೂಲಕ ಓಲಾ / ಊಬರ್ ಟ್ಯಾಕ್ಸಿಗಳು.

ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಏನಾದರೂ ಮಾನದಂಡವಿದೆಯೇ?

ಇಲ್ಲ, 10 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಮತ್ತು ದೈಹಿಕವಾಗಿ ಆರೋಗ್ಯವಾಗಿರುವವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.


ಮೋಬೈಲ್ ಫೋನನ್ನು ಬಳಸಬಹುದೇ?

ಕಾರ್ಯಕ್ರಮದ ಸ್ವರೂಪದಿಂದಾಗಿ, ಮತ್ತು ನೀವು ಅದರ ಸಂಪೂರ್ಣ ಲಾಭ ಪಡೆದುಕೊಳ್ಳಲು, ಮೋಬೈಲ್ ಫೋನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

ಗಮನಿಸಿ: ಮೊಬೈಲ್ ಫೋನ್ ಚಾರ್ಜಿಂಗ್ ಸೌಕರ್ಯ ಲಭ್ಯವಿಲ್ಲ.


ಕಾರ್ಯಕ್ರಮದ ಸಮಯದಲ್ಲಿ ನಾನು ಯಾವ ರೀತಿಯ ಆಹಾರವನ್ನು ತರಬೇಕು?

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮಹಾ ಅನ್ನದಾನವನ್ನು ಮಾಡಲಾಗುತ್ತದೆ. ನಿಮ್ಮ ಪಥ್ಯಕ್ಕನುಸಾರವಾಗಿ ನೀವು ಸ್ವಂತ ಆಹಾರವನ್ನು ತರಬೇಕಿದ್ದರೆ, ನೀವು ಆರೋಗ್ಯಕರ ಸಸ್ಯಾಹಾರಿ ಆಹಾರವನ್ನು ತರಬಹುದು.


ನಾನು ಯೋಗ ಮ್ಯಾಟ್ ತರಬೇಕೇ?

ಇಲ್ಲ.


ಕಾರ್ಯಕ್ರಮವು ಯಾವ ಹೊತ್ತಿಗೆ ಆರಂಭವಾಗುತ್ತದೆಯೆಂದು ತಿಳಿಸುವಿರಾ?

ಕಾರ್ಯಕ್ರಮವು ಸಂಜೆ 6-ಕ್ಕೆ ಆರಂಭವಾಗುತ್ತದೆ. ದಯವಿಟ್ಟು 5 ಗಂಟೆಗೆ ಬಂದು ಕುಳಿತುಕೊಳ್ಳಿ. ದೇವಿ ಮೆರವಣಿಗೆಯು ಸುಮಾರು 7 ಗಂಟೆಯಷ್ಟರಲ್ಲಿ ಆರಂಭವಾಗುತ್ತದೆ.


ಕಾರ್ಯಕ್ರಮದ ಹೊತ್ತಿನಲ್ಲಿ ಅಥವಾ ಕಾರ್ಯಕ್ರಮ ಮುಗಿದ ನಂತರ ನಾನು ಸದ್ಗುರುಗಳೊಡನೆ ಮಾತನಾಡಬಹುದೇ?

ಸದ್ಗುರುಗಳು ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುತ್ತಾರೆ. ಆದ ಕಾರಣ, ಇದು ಸಾಧ್ಯವಾಗದಿರಬಹುದು. ನಿಮ್ಮನ್ನು ನೀವು ಸಂಪೂರ್ಣವಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಮ್ಮನ್ನು ನೀವು ನೂರಕ್ಕೆ ನೂರರಷ್ಟು ತೊಡಗಿಸಿಕೊಂಡರೆ, ಸದ್ಗುರುಗಳಿಗೆ ನಮಗೆ ಮಾರ್ಗದರ್ಶನ ನೀಡಲು ಅನುಕೂಲವಾಗುತ್ತದೆ.


ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಪ್ರಶ್ನೆಗಳು

ಆದಿಯೋಗಿ ಪ್ರದಕ್ಷಿಣೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡುವಿರಾ?

ಒಂದು ಪ್ರಬಲ ಶಕ್ತಿ ಮೂಲದ ಚೈತನ್ಯವನ್ನು ಮೈಗೂಡಿಸಿಕೊಳ್ಳಲು ಅದನ್ನು ಬಲಮುರಿಯಾಗಿ ಸುತ್ತುವ ಪ್ರಕ್ರಿಯೆಯನ್ನು ಪ್ರದಕ್ಷಿಣೆಯೆನ್ನುತ್ತಾರೆ. ಈಶ ಯೋಗ ಕೇಂದ್ರವಿರುವ ಹನ್ನೊಂದು ಡಿಗ್ರಿ ಅಕ್ಷಾಂಶದಲ್ಲಿ ಇದು ವಿಶೇಷವಾಗಿ ಪ್ರಭಾವಪೂರ್ಣವಾಗಿರುತ್ತದೆ. ಸದ್ಗುರುಗಳಿಂದ ವಿರಚಿತವಾದ ‘ಆದಿಯೋಗಿ ಪ್ರದಕ್ಷಿಣೆ’ಯ ಪ್ರಕ್ರಿಯೆಯು, ಆದಿಯೋಗಿಯ ಅನುಗ್ರಹಕ್ಕೆ ಪಾತ್ರರಾಗಲು ಸಹಾಯ ಮಾಡುತ್ತದೆ. ಈ ಅನುಗ್ರಹವು ನಿಮ್ಮ ಪರಮ ಮುಕ್ತಿಯೆಡೆಗಿನ ನಿಮ್ಮ ಹಾತೊರೆತವನ್ನು ಉತ್ತೇಜಿಸುವುದು. ಇದನ್ನು ಎಲ್ಲರೂ ಮಾಡಬಹುದು.

ಪ್ರದಕ್ಷಿಣೆಯ ಸಮಯ: ಮಾರ್ಚಿ 4 – ಬೆಳಿಗ್ಗೆ 6:00 ರಿಂದ ಅಪರಾಹ್ನ 2:00 ರವರೆಗೆ. ಮಾರ್ಚಿ 5 – ಬೆಳಿಗ್ಗೆ 6 ರಿಂದ.


ಕಾರ್ಯಕ್ರಮದ ಕಾಲಾವಧಿ ಎಷ್ಟು?

ಯಕ್ಷ ಮೂರು ದಿನದ ಕಾರ್ಯಕ್ರಮವಾಗಿದ್ದು, ಅದರ ನಂತರದ ಮಹಾಶಿವರಾತ್ರಿ ಒಂದು ರಾತ್ರಿಯ ಕಾರ್ಯಕ್ರಮ.

ಮಾರ್ಚಿ 1 – 3: ಯಕ್ಷ (ಪ್ರತಿ ಸಂಜೆ 6 – 8)
ಮಾರ್ಚಿ 4: ಮಹಾಶಿವರಾತ್ರಿ (ಸಂಜೆ 6 ರಿಂದ – ಬೆಳಿಗ್ಗೆ 6 ರವರಗೆ)


ಸೀಟಿಂಗ್ ಪಾಸ್-ಗಳಿಗಲ್ಲದೆ ಸಾಮಾನ್ಯ ಕಾಣಿಕೆ ಅಥವಾ ಅನ್ನದಾನದ ಕಾಣಿಕೆಯನ್ನು ಪ್ರತ್ಯೇಕವಾಗಿ ನೀಡುವ ಅವಕಾಶವಿದೆಯೇ?

ಹೌದು, ನೀವು ಸಾಮಾನ್ಯ ಕಾಣಿಕೆಯನ್ನು ಇಲ್ಲಿ ನೀಡಬಹುದು.

ಗಮನಿಸಿ: ಈ ಲಿಂಕ್ ಬಳಸಿ ನೀಡಿದ ಕಾಣಿಕೆಯನ್ನು ಸೀಟಿಂಗ್ ಪಾಸ್ ಅಥವಾ ಬೇರೆ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವುದಿಲ್ಲ.


ಭಾರತದ ಖಾತೆಯಿಂದ ಅರ್ಧ ಮತ್ತು ವಿದೇಶದ ಖಾತೆಯಿಂದ ಇನ್ನರ್ಧ ನಾನು ಸಾಮಾನ್ಯ ಕಾಣಿಕೆಯನ್ನು ನೀಡಬಹುದೇ?

ಹೌದು, ಈ ರೀತಿಯಾಗಿ ಸಾಮಾನ್ಯ ಕಾಣಿಕೆಯನ್ನು ಕೊಡುವುದು ಸಾಧ್ಯವಿದೆ. ನೀವು ಭಾರತದ ಖಾತೆಯಿಂದ ಕಾಣಿಕೆಯನ್ನು ನೀಡುತ್ತಿದ್ದರೆ, ನೀವು ಭಾರತದ ಮೊಬೈಲ್ ನಂಬರ್, ಭಾರತದ ವಿಳಾಸ ಮತ್ತು ಪ್ಯಾನ್ ನಂಬರ್-ಅನ್ನು ಒದಗಿಸಬೇಕು.

ನೀವು ವಿದೇಶಿ ಖಾತೆಯಿಂದ ಕಾಣಿಕೆಯನ್ನು ನೀಡುತ್ತಿದ್ದರೆ, ನೀವು ವಿದೇಶದ ಮೊಬೈಲ್ ನಂಬರ್, ವಿದೇಶದ ವಿಳಾಸ ಮತ್ತು ಪಾಸ್ಪೋರ್ಟ್ ಪ್ರತಿಯನ್ನು ಒದಗಿಸಬೇಕು.

ಸೀಟಿಂಗ್ ಪಾಸ್-ಗಳ ವಿಷಯದಲ್ಲಿ, ರಾಷ್ಟ್ರೀಯತೆ ಮತ್ತು ವಸತಿಯ ದೇಶವನ್ನವಲಂಬಿಸಿ ಒಂದೇ ಖಾತೆಯಿಂದ (ಭಾರತ ಅಥವಾ ವಿದೇಶೀ) ಹಣವನ್ನು ಪಾವತಿಸಬೇಕು.


ಗರ್ಭಿಣಿಯರು ಮಹಾಶಿವರಾತ್ರಿ ಸಾಧನೆಯನ್ನು ಮಾಡಬಹುದೇ?

ಮಂತ್ರ ಪಠಣೆಯನ್ನು ಮಾಡಬಹುದು.


ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ಮಾರ್ಚಿ 01 – 03 ರಂದು ಸಂಜೆ ನಡೆಯುವ ಯಕ್ಷ ಕಾರ್ಯಕ್ರಮದಲ್ಲಿ ಹಾಜರಾಗಬಹುದೇ?

ಹೌದು.


ನಾನು ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ಸ್ವಯಂಸೇವಕನಾಗಲು ಬಯಸುತ್ತೇನೆ, ದಯವಿಟ್ಟು ನೋಂದಣಿ ಲಿಂಕ್-ಅನ್ನು ತಿಳಿಸುವಿರಾ?

ಈಶ ಯೋಗ ಕೇಂದ್ರದಲ್ಲಿ ಜರಗುವ ಪ್ರತಿ ಮಹಾಶಿವರಾತ್ರಿಯೂ ವಿಶೇಷವಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನ ಇದನ್ನು ವೇಬ್ ನೇರ ಪ್ರಸಾರದಲ್ಲಿ ವೀಕ್ಷಿಸುವ ಮತ್ತು ಲಕ್ಷಾಂತರ ಜನ ಕೇಂದ್ರಕ್ಕೆ ಖುದ್ದಾಗಿ ಬರುವ ಕಾರ್ಯಕ್ರಮವಿದು. ಭಾರತದಾದ್ಯಂತ ಹಾಗೂ ಜಗತ್ತಿನಾದ್ಯಂತದಿಂದ ಆಗಮಿಸುವ ಜನರನ್ನು ಬರ ಮಾಡಿಕೊಳ್ಳುವುದಕ್ಕಾಗಿ ಮತ್ತು ಅವರಿಗೆ ಬೆಂಬೆಲ ನೀಡುವುದಕ್ಕಾಗಿ, ಈಶ ಯೋಗ ಕೇಂದ್ರದೊಳಗೆ ಮತ್ತು ಮಹಾಶಿವರಾತ್ರಿಯ ಆಚರಣೆಯ ಸ್ಥಳದಲ್ಲಿ ನಡೆಯುವ ಬೃಹತ್ ಸಿದ್ಧತೆಯಲ್ಲಿ ಭಾಗವಹಿಸುವುದು ಒಂದು ಸುಯೋಗವೇ ಸರಿ.

ಕೆಲಸದ ಮೂಲಕ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳುವುದೂ, ಈ ಶಕ್ತಿಯುತ ಪ್ರಕ್ರಿಯೆಗೆ ನಿಮ್ಮ ಗ್ರಹಣಶೀಲತೆಯನ್ನು ವರ್ಧಿಸಿಕೊಳ್ಳುವ ಒಂದು ಮಾರ್ಗ.

ಸ್ವಯಂ-ಸೇವಕರ ನೋಂದಣಿ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಘೋಷಿಸಲಾಗುತ್ತದೆ.

ಸ್ವಯಂ-ಸೇವಕರಾಗಿ ಲಿಂಕ್


ಮಹಾಶಿವರಾತ್ರಿ ಸಾಧನೆಯ ಬಗ್ಗೆ ತಿಳಿದುಕೊಳ್ಳಬೇಕು.

ಮಹಾಶಿವರಾತ್ರಿಯ ಸಾಧನೆಯು ಅದ್ಭುತ ಸಾಧ್ಯತೆಗಳ ರಾತ್ರಿಯಾದ ಮಹಾಶಿವರಾತ್ರಿಗೆ ಸಿದ್ಧತೆಯ ಪ್ರಕ್ರಿಯೆಯಾಗಿದೆ. ಏಳು ವರ್ಷದ ಮೇಲ್ಪಟ್ಟ ಯಾರಾದರೂ ಈ ಸಾಧನೆಯಲ್ಲಿ ಭಾಗವಹಿಸಬಹುದು. ಇದನ್ನು ಮಾರ್ಚಿ 4, 2019 ಮಹಾಶಿವರಾತ್ರಿಯಂದು ಮುಕ್ತಾಯವಾಗುವ ರೀತಿಯಲ್ಲಿ 40, 21, 14, 7 ಅಥವಾ 3 ನಿರಂತರ ದಿನಗಳ ಕಾಲಾವಧಿಯಲ್ಲಿ ಮಾಡಬಹುದು. ಈ ಸಾಧನೆಯು ಧ್ಯಾನಲಿಂಗದಲ್ಲಿ ಅಂತ್ಯಗೊಳ್ಳುತ್ತದೆ. (ಅಥವಾ ಮನೆಯಲ್ಲಿ ಅಂತ್ಯಗೊಳ್ಳುತ್ತದೆ)

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಮಹಾಶಿವರಾತ್ರಿ ಸಾಧನೆಯ ಪುಟಕ್ಕೆ ಭೇಟಿ ನೀಡಿ.

ಮಂತ್ರ ಪಠಣೆಯನ್ನು ಮತ್ತು ಶಿವ ನಮಸ್ಕಾರ ಮಾಡುವ ರೀತಿಯನ್ನು ಈ ವೀಡಿಯೋವಿನಲ್ಲಿ ನೋಡಬಹುದು. video here


ಯಕ್ಷ ಎಂದರೇನು?

ಯಕ್ಷ, ಮಹಾಶಿವರಾತ್ರಿಯ ಮುನ್ನ ನಡೆಯುವ ಸಂಗೀತ ಮತ್ತು ನೃತ್ಯದ ಹರ್ಷೋಲ್ಲಾಸಭರಿತ ಉತ್ಸವ. ಇದು ಮಾರ್ಚಿ 1-3, 2019 ರಂದು ನಡೆಯುತ್ತದೆ.

ನಮ್ಮ ದೇಶದ ಪ್ರದರ್ಶನ ಕಲೆಗಳ ವೈಶಿಷ್ಟತೆ, ಶುದ್ಧತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ, ಈಶ ಫೌಂಡೇಶನ್ ವಾರ್ಷಿಕವಾಗಿ ಹೆಸರಾಂತ ಕಲಾವಿದರ ಪ್ರದರ್ಶನಗಳನ್ನೊಳಗೊಂಡ, “ಯಕ್ಷ” ಎಂಬ ಮೂರು ದಿನದ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸುತ್ತದೆ.

ಭಾರತದ ಭವ್ಯ ಪ್ರಾಚೀನ ಸಂಸ್ಕೃತಿಯ ಪರಂಪರೆಯಲ್ಲಿ ತಲ್ಲೀನವಾಗಲು ನಿಮ್ಮನ್ನು ನಾವು ಆಮಂತ್ರಿಸುತ್ತೇವೆ.

ಸಾಧನೆಗೆ ಸಂಬಂಧಪಟ್ಟ ಪ್ರಶ್ನೆಗಳು

ಸುಖಾಸನದಲ್ಲಿ ಕುಳಿತು ಪಠಣೆಯನ್ನು ಮಾಡುವಾಗ ಕೈಗಳು / ಅಂಗೈಗಳು ಯಾವ ಸ್ಥಾನದಲ್ಲಿರಬೇಕು?

ಸದ್ಗುರುಗಳು ಯಾವುದೇ ನಿರ್ದಿಷ್ಟ ಸ್ಥಾನವನ್ನು ಸೂಚಿಸಿಲ್ಲ. ನಿಮಗೆ ಆರಾಮವೆನಿಸುವ ರೀತಿಯಲ್ಲಿ ನಿಮ್ಮ ಕೈಗಳು / ಅಂಗೈಗಳನ್ನು ಇರಿಸಬಹುದು.


ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಯನ್ನು ನಾನು ಸಾಧನೆಯನ್ನು ಅಂತ್ಯಗೊಳಿಸುವ ದಿನದಂದು ಮಾತ್ರ ತೊಡಬೇಕೇ ಅಥವಾ ಇಡೀ ಸಾಧನೆಯ ಅವಧಿಯಲ್ಲಿ ತೊಡಬೇಕೇ?

ಸಾಧನೆಯ ಅವಧಿಯ ಉದ್ದಕ್ಕೂ ತೊಡಬೇಕು.


ಸ್ನಾನದ ಅಥವಾ ಸಮುದ್ರದಲ್ಲಿ ಸ್ನಾನ ಮಾಡುವ ಸಮಯದಲ್ಲಿ ನಾನು ತೋಳಿಗೆ ಕಟ್ಟಿರುವ ಕಪ್ಪು ಬಟ್ಟೆಯನ್ನು ತೆಗೆದಿರಿಸಬಹುದೇ?

ಸಾಧನೆಯ ಅವಧಿಯಲ್ಲಿ ಯಾವುದೇ ಕಾರಣಕ್ಕಾಗಿಯೂ ಕಪ್ಪು ಬಟ್ಟೆಯನ್ನು ತೆಗೆದಿರಿಸಬಾರದು.


ವಿಭೂತಿಯ ದೊರಕದಿದ್ದ ಪಕ್ಷದಲ್ಲಿ, ಬೇರೆ ಏನಾದರನ್ನು ಬಳಸಬಹುದೇ ಅಥವಾ ಏನನ್ನೂ ಬಳಸದಿರುವುದು ಉತ್ತಮವೇ?

ವಿಭೂತಿಯನ್ನು ಮಾತ್ರ ಬಳಸಿ. ನೈಜವಾದ ವಿಭೂತಿಯೆಂದು ಖಚಿತಪಡಿಸಿಕೊಳ್ಳಲು, ಈಶದಿಂದ ಪಡೆದಿರುವ ವಿಭೂತಿಯನ್ನು ಬಳಸುವುದು ಉತ್ತಮ (ಈ ವಿಭೂತಿಯನ್ನು ಪವಿತ್ರೀಕರಿಸಲಾಗಿರುತ್ತದೆ ಕೂಡ).


ಬೇವಿನ ಅಥವಾ ಬಿಲ್ವದ ಎಲೆಗಳು ನನಗೆ ಸಿಗುವುದಿಲ್ಲ. ಬೇವಿನ ಪುಡಿಯನ್ನು ಖರೀದಿಸಿ, ಅದನ್ನು ರಾತ್ರಿ ನೆನೆಸಿಟ್ಟು ಅದನ್ನು ಸೇವಿಸಲೂ ಸಾಧ್ಯವಿಲ್ಲ. ನಾನು ಬೇರೆ ಏನಾದರನ್ನು ಬಳಸಬಹುದೇ (ಯುರೋಪ್-ನಲ್ಲಿ ಬೇ ಲೀಫ್ ಎನ್ನುವುದಿದೆ) ಅಥವಾ ಈ ಹಂತವನ್ನು ಬಿಟ್ಟುಬಿಡಬಹುದೇ? ಸಾಧನೆಯನ್ನು ಅಂತ್ಯಗೊಳಿಸುವ ದಿನದಂದು ಮೂರು ಬೇವಿನ ಎಲೆಗಳ ಬದಲು ಬೇರೆ ಏನನ್ನು ಅರ್ಪಿಸಬಹುದು?

ಸಾಮಾನ್ಯವಾಗಿ ಬೇವಿನ ಅಥವಾ ಬಿಲ್ವದ ಎಲೆಗಳು ಭಾರತೀಯ ಮಳಿಗೆಗಳಲ್ಲಿ ಪ್ರಪಂಚದಾದ್ಯಂತ ದೊರಕುತ್ತದೆ. ನೀವು ಬೇವಿನ ಪುಡಿಯನ್ನು ಖರೀದಿಸಿ, ಅದನ್ನು ಉಂಡೆಯನ್ನಾಗಿ ಮಾಡಿ, ನೀರಿನಲ್ಲಿ ಸೇರಿಸಿ ಸೇವಿಸಬಹುದು. ಇವೆರಡೂ ದೊರಕದಿದ್ದಲ್ಲಿ, ಸಾಧನೆಯ ಅಂತ್ಯದಲ್ಲಿ ಇದನ್ನು ಮಾಡದಿರಬಹುದು.


ಬೆಳಿಗ್ಗೆ ನನ್ನ ಯೋಗಾಭ್ಯಾಸದ ಜೊತೆಯಲ್ಲಿ ಶಿವ ನಮಸ್ಕಾರ ಮತ್ತು ಪಠಣೆಯನ್ನು ಮಾಡಬೇಕೆಂದರೆ, ಯಾವ ಕ್ರಮದಲ್ಲಿ ಮಾಡಬೇಕು?

ಯಾವುದೇ ನಿರ್ದಿಷ್ಟ ಕ್ರಮಾನುಗತಿಯಿಲ್ಲ. ಶಿವನಮಸ್ಕಾರವನ್ನು ಸೂರ್ಯೋದಯದ ಮೊದಲು ಅಥವಾ ಸೂರ್ಯಾಸ್ತದ ನಂತರ ಮಾಡುತ್ತೀರೆಂದು ಖಚಿತಪಡಿಸಿಕೊಳ್ಳಿ.


ಮಹಾಶಿವರಾತ್ರಿ ಸಾಧನೆಯನ್ನು ಮಾಡಲಿರುವ ಸೂಚನೆಗಳೇನು?

ಎಂಟರಿಂದ ಹತ್ತು ಕರಿಮೆಣಸಿನ ಕಾಳು, ಎರಡರಿಂದ ಮೂರು ಬಿಲ್ವ ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದಲ್ಲಿ ರಾತ್ರಿ
ನೆನೆಸಿಡಿ. ಒಂದು ಮುಷ್ಟಿ ನೆಲಗಡಲೆಯನ್ನೂ ನೀರಿನಲ್ಲಿ ನೆನೆಸಿಡಿ. ಶಿವ ನಮಸ್ಕಾರ ಮತ್ತು ಸ್ತೋತ್ರ ಪಠಣೆಯ ನಂತರ,
ಎಲೆಗಳನ್ನು ಅಗೆದು ತಿನ್ನಿ. ಕರಿಮೆಣಸಿನ ಕಾಳು, ಜೇನುತುಪ್ಪದ ಮಿಶ್ರಣಕ್ಕೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಸೇವಿಸಿ.
ನೆನೆಸಿದ ನೆಲಗಡಲೆಯನ್ನೂ ಸೇವಿಸಿ. ಬೇವಿನ ಎಲೆಗಳು ಸಿಗದೇ ಇರುವ ಪಕ್ಷದಲ್ಲಿ, ನೀವದನ್ನು ಈಶ ಶಾಪಿಯಲ್ಲಿ
(IshaShoppe.com) ಖರೀದಿಸಬಹುದು. ಇವುಗಳನ್ನು ಸೇವಿಸುವ ಮೊದಲು ನಿಮ್ಮ ನಿಯಮಿತ ಸಾಧನವಾದ ಶಾಂಭವಿ
ಮಹಾಮುದ್ರೆಯನ್ನು ಪೂರ್ಣಗೊಳಿಸಿ.


ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಾಧನೆಯ ನಂತರ ಬೆಳಗುತ್ತಿರುವ ಮೇಣದ ಬತ್ತಿಯನ್ನು ಆರಿಸಬೇಕೇ, ಅಥವಾ ಉರಿಯಲು ಬಿಡಬೇಕೇ?

ಸಾಧನೆಯ ಆರಂಭದಲ್ಲಿ ದೀಪ ಅಥವಾ ಮೇಣದ ಬತ್ತಿಯನ್ನು ಬೆಳಗಿಸಬೇಕು. ದೀಪವನ್ನು ಬೆಳಗಿಸಿ, ಅದನ್ನು ಸಾಧನೆಯ ನಂತರವೂ ಉರಿಯಲು ಬಿಡುವುದು ಸೂಕ್ತ. ಆದರೆ ನೀವು ದೊಡ್ಡದಾದ ಮೇಣದ ಬತ್ತಿಯನ್ನು ಬೆಳಗಿದ್ದರೆ ಅಥವಾ ಸುರಕ್ಷತೆಯ ಕಳಕಳಿಯಿದ್ದರೆ, ದೀಪವನ್ನು ಗಾಳಿಯಿಂದ ಆರಿಸದೇ, ಹೂವಿನಿಂದ ಆರಿಸುವುದು ಉತ್ತಮ.


ಸಾಧನೆಯ ಸಮಯದಲ್ಲಿ ಕಪ್ಪು ಬಟ್ಟೆಯನ್ನು ಯಾವಾಗ ತೊಡಬೇಕು? ಸ್ತೋತ್ರ ಪಠಣೆ ಮತ್ತು ಶಿವ ನಮಸ್ಕಾರದ ನಂತರ ಅದನ್ನು ತೆಗೆದಿರಿಸಿಬಹುದೇ?

ಸಾಧನೆಯ ಅವಧಿಯುದ್ದಕ್ಕೂ ನೀವು ಕಪ್ಪು ಬಟ್ಟೆಯನ್ನು ತೋಳಿನಲ್ಲಿ ಕಟ್ಟಿಕೊಂಡಿರಬೇಕು (40, 21, 14, 7 ಅಥವಾ 3 ದಿನಗಳು) ಮತ್ತು ಈ ಅವಧಿಯಲ್ಲಿ ಅದನ್ನು ತೆಗೆದಿರಿಸಬಾರದು.


ಸ್ನಾನಕ್ಕಾಗಿ ಬಳಸಬೇಕೆಂದಿರುವ ಹರ್ಬಲ್ ಪುಡಿ ಯಾವ ತರಹದ್ದು?

ಈಶ ಕೇಂದ್ರಗಳಿಂದ ನೀವು ಸ್ನಾನದ ಪುಡಿಯನ್ನು ಪಡೆಯಬಹುದು. ನಿಮಗದು ದೊರಕದಿದ್ದರೆ, ರಾಸಾಯನಿಕದಿಂದ ಮುಕ್ತವಾಗಿರುವ ಯಾವುದೇ ಸಾವಯವ ವಸ್ತುವನ್ನು ಬಳಸಬಹುದು.


ವಿಭೂತಿಯನ್ನು ಮನೆಯಲ್ಲಿ ಮಾಡುವುದು ಹೇಗೆ? ಅದನ್ನು ಮಾಡಲು ಬೇಕಿರುವ ಸಾಮಗ್ರಿಗಳೇನು? ವಿಭೂತಿಯನ್ನು ಸಾಧನೆಯ ಸಮಯದಲ್ಲಿ ಯಾವಾಗ ಹಚ್ಚಿಕೊಳ್ಳಬೇಕು? ಅದನ್ನು ದಿನ ಪೂರ್ತಿ ಹಾಗೆಯೇ ಬಿಡಬೇಕೇ?

ಸಾಧನೆಯನ್ನು ಆರಂಭಿಸುವುದರ ಮುನ್ನ ವಿಭೂತಿಯನ್ನು ಹಚ್ಚಿ, ಅದನ್ನು ದಿನವಿಡಿ ಹಾಗೆಯೇ ಬಿಡಬಹುದು. ವಿಭೂತಿಯನ್ನು ಮನೆಯಲ್ಲಿ ತಯಾರಿಸಲು ಸಾಧ್ಯವಿಲ್ಲ, ಅದನ್ನೊಂದು ವಿಶ್ವಾಸಾರ್ಹ ಮೂಲದಿಂದ ಪಡೆಯುವುದು ಉತ್ತಮ. ನೈಜವಾದ ವಿಭೂತಿಯೆಂದು ಖಚಿತಪಡಿಸಿಕೊಳ್ಳಲು, ಈಶದಿಂದ ಪಡೆದಿರುವ ವಿಭೂತಿಯನ್ನು ಬಳಸುವುದು ಉತ್ತಮ (ಈ ವಿಭೂತಿಯನ್ನು ಪವಿತ್ರೀಕರಿಸಲಾಗಿರುತ್ತದೆ ಕೂಡ).


<h3ನಾನು ಫೆಬ್ರವರಿ 19 ರಂದು ಆಶ್ರಮಕ್ಕೆ ಬರುತ್ತೇನೆ. ಮಹಾಶಿವರಾತ್ರಿ ಸಾಧನೆಯಲ್ಲಿ ತೊಡಗಿರುವವರು 12 ರ ನಂತರ ಆಹಾರ ಸೇವನೆಯನ್ನು ಮಾಡಬೇಕಾದ ಕಾರಣ, ಆ ಸಮಯದಲ್ಲಿ ನಮಗೆ ಊಟ ದೊರಕುತ್ತದೆಯೇ? ಬೆಳಿಗ್ಗೆ ಸೇವಿಸಬೇಕಾದ ಮೆಣಸಿನ ಕಾಳು, ಕಡಲೆ ಕಾಯಿ ಬೀಜ, ಇತ್ಯಾದಿಗಳನ್ನು ನಾವು ತರಬೇಕೇ?ಸಾಧನೆಯಲ್ಲಿ ತೊಡಗಿರುವವರಿಗೆ 12 ರ ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮೆಣಸಿನ ಕಾಳು, ಕಡಲೆ ಕಾಯಿ ಬೀಜ, ಇತ್ಯಾದಿಗಳನ್ನು ನೀವು ತರಬೇಕಾಗುತ್ತದೆ.


ಕಪ್ಪು ಬಟ್ಟೆಯನ್ನು ತೋಳಿಗೆ ಕಟ್ಟದೇ, ಜೇಬಿನಲ್ಲಿಟ್ಟುಕೊಂಡಿರಬಹುದೇ?

ಕಪ್ಪು ಬಟ್ಟೆಯನ್ನು ತೋಳಿನಲ್ಲಿಯೇ ಧರಿಸಬೇಕು.


ಸಾಧನೆಯನ್ನು ಒಂದು ದಿನ ತಪ್ಪಿಸಿದರೆ ಏನಾಗುತ್ತದೆ? ಮರುದಿನದಿಂದ ನಾನು ಮತ್ತೆ ಸಾಧನೆಯನ್ನು ಆರಂಭಿಸಬಹುದೇ?

ನೀವು ಸಾಧನೆಯನ್ನು ಮಾಡಲು ಸಂಕಲ್ಪ ಮಾಡಿದಾಗ, ಪ್ರತಿದಿನ ಸಾಧನೆಯನ್ನು ಮಾಡಲು ನೀವು ಬದ್ಧರಾಗಿರಬೇಕು. ನೀವು ಬದ್ಧರಾಗಿದ್ದರೆ, ಸಾಧನೆಯನ್ನು ಮಾಡಲು ದಾರಿಯನ್ನು ಕಂಡುಕೊಳ್ಳುತ್ತೀರಿ. ನೀವಿದನ್ನು ಸೂರ್ಯೋದಯದ ಮುಂಚೆ ಯಾವಾಗಾದರೂ ಮಾಡಬಹುದು. ಹಾಗಾಗಿ, ಬೆಳಿಗ್ಗೆ ಬೇಗ ಎದ್ದು, ನಿಮ್ಮ ದಿನವನ್ನು ಆರಂಭಿಸುವ ಮುಂಚೆಯೇ ಸಾಧನೆಯನ್ನು ಮಾಡಿ. ಈ ಸಾಧನೆಯು ಬಹಳ ಪ್ರಬಲವಾಗಿದ್ದು, ಇದಕ್ಕೆ ನಿಮ್ಮ ಜೀವನವನ್ನು ಪರಿವರ್ತಿಸುವ ಸಾಧ್ಯತೆಯಿದೆ. ಹಾಗಾಗಿ, ಇದನ್ನು ಹೇಗೆ ಮಾಡುವುದೆಂದು ನೋಡಿ!


ಜಾಗರಣೆಯನ್ನು ಮಾಡುವುದು ಕಡ್ಡಾಯವೇ? ನಾನು ಮಧ್ಯದಲ್ಲಿ ಮಲಗಿದರೆ ಏನಾಗುತ್ತದೆ? ನಾನು ಫಿಲಿಪೀನ್ಸ್-ನ ಮನಿಲಾದಲ್ಲಿ ವಾಸವಾಗಿದ್ದೀನಿ, ಹಾಗಾಗಿ, 2.5 ಗಂಟೆಗಳ ವ್ಯತ್ಯಾಸವಿರುತ್ತದೆ.

ಮಹಾಶಿವರಾತ್ರಿಯಂದು ಜಾಗರಣೆ ಮಾಡುವುದು ಈ ಸಾಧನೆಯ ಅತ್ಯಗತ್ಯವಾದ ಭಾಗ. ನಿಮ್ಮ ಸಾಧನೆಗೆ ನೀವೇನು 40 ದಿನಗಳ ಪರಿಶ್ರಮ ಪಟ್ಟಿದ್ದೀರೋ, ಈ ರಾತ್ರಿಯಂದು ಅದರ ಪ್ರಯೋಜನವನ್ನು ಪಡೆಯುವ ಕಾರಣದಿಂದ ನೀವು ಈ ರಾತ್ರಿಯನ್ನು ಅಧಿಕತಮವಾಗಿ ಬಳಸಿಕೊಳ್ಳಬೇಕು. ನಿಮ್ಮನ್ನು ಎಚ್ಚರವಾಗಿಟ್ಟುಕೊಳ್ಳಲು ಇವುಗಳನ್ನು ಪ್ರಯತ್ನಿಸಿ – ತಣ್ಣನೆ ನೀರಿನ ಸ್ನಾನ, ತಲೆ ಕೂದಲನ್ನು ಒದ್ದೆಯಾಗಿರಿಸಿಕೊಂಡಿರುವುದು, ಎದ್ದು ನಡೆದಾಡುವುದು. ನಿಮ್ಮ ಸ್ಥಳೀಯ ಕೇಂದ್ರದಲ್ಲಿ ನೀವು ಭಾಗವಹಿಸಬಹುದಾದ ಆಚರಣೆಯಿದೆಯೇ ನೋಡಿ. ನೀವು ಈಶ ಯೋಗ ಕೇಂದ್ರದ ವೆಬ್ ನೇರ ಪ್ರಸಾರವನ್ನು ವೀಕ್ಷಿಸಬಹುದು.


ಮಹಾಶಿವರಾತ್ರಿ ಸಾಧನೆ ಮತ್ತು ಶಿವಾಂಗ ಸಾಧನೆ, ಈ ಎರಡನ್ನೂ ಮಾಡಬಹುದೇ?

ಹೌದು, ಮಾಡಬಹುದು.
ಸಾಧನೆಯ ವಿಶದೀಕರಣ
ಮುಂಬರುವ ಮಹಾಶಿವರಾತ್ರಿಗಾಗಿ ಸದ್ಗುರುಗಳು ಕೆಳಗಿನ ಸಾಧನೆಗಳನ್ನು ನೀಡಿದ್ದಾರೆ:
1. ಶಿವಾಂಗ ಸಾಧನೆ: ಪುರುಷರಿಗಾಗಿ – ಈ ಸಾಧನೆಯು ವೆಳ್ಳಂಗಿರಿ ಬೆಟ್ಟದ ಚಾರಣದೊಂದಿಗೆ ಅಂತ್ಯಗೊಳ್ಳುತ್ತದೆ.

ಹೆಚ್ಚಿನ ಮಾಹಿತಿಗಾಗಿ ಶಿವಾಂಗ ಸಾಧನೆ ಮತ್ತು ದೀಕ್ಷೆಯ ವೇಳಾಪಟ್ಟಿಯ ಪುಟವನ್ನು ನೋಡಿ.

2. ಮಹಾಶಿವರಾತ್ರಿ ಸಾಧನೆ: ಪುರುಷರು ಮತ್ತು ಮಹಿಳೆಯರಿಗೆ – 40/21/12/7/3 ದಿನಗಳ ಸಾಧನೆ. ಧ್ಯಾನಲಿಂಗದ ಎದುರು (ಅಥವಾ ಮನೆಯಲ್ಲಿ) ಸಮಾಪ್ತಿ.

ಹೆಚ್ಚಿನ ಮಾಹಿತಿಗಾಗಿ ಸಾಧನೆ ಸೂಚನೆಗಳು ಮತ್ತು ಮಾರ್ಗಸೂಚಿಗಳ ಪುಟವನ್ನು ನೋಡಿ.


ಸ್ವಯಂ-ಸೇವೆಗೆ ಸಂಬಂಧಪಟ್ಟ ಪ್ರಶ್ನೆಗಳು

ಮಹಾಶಿವರಾತ್ರಿ 2019 ಕ್ಕೆ ಸ್ವಯಂಸೇವಕರಾಗಿ ಹೇಗೆ ನೋಂದಾಯಿಸಿಕೊಳ್ಳಬಹುದು?

ಈ ಫಾರ್ಮ್-ಅನ್ನು ಭರ್ತಿ ಮಾಡುವ ಮೂಲಕ ನೀವು ಮಹಾಶಿವರಾತ್ರಿಯ ಸ್ವಯಂ ಸೇವಕರಾಗಿ ನೋಂದಣಿ ಮಾಡಕೊಳ್ಳಬಹುದು:ಇಲ್ಲಿ ಕ್ಲಿಕ್ ಮಾಡಿ

ಶಾಂಭವಿ ಮಹಾಮುದ್ರೆಯ ದೀಕ್ಷೆ ಪಡೆದವರು ಮಾತ್ರ ಸ್ವಯಂ-ಸೇವಕರಾಗಬಹುದು. ಎಲ್ಲಾ ಸ್ವಯಂ-ಸೇವಕರು ಕನಿಷ್ಠ 7 ದಿನಗಳಿಗೆ ಮುಂಚಿತವಾಗಿ, ಅಂದರೆ ಫೆಬ್ರವರಿ 25 ಕ್ಕೆ ಬರಬೇಕೆಂದು ನಮ್ಮ ಸಲಹೆ.


ಫೋಟೋ ಐಡಿ ಕಾರ್ಡ್-ಅನ್ನು ತರಬೇಕೇ?

ಭಾರತೀಯರು, ತಮ್ಮ ಪಾಸ್ಪೋರ್ಟ್/ವೋಟರ್ ಐಡಿ ಕಾರ್ಡ್/ಡ್ರೈವರ್ಸ್ ಲೈಸೆನ್ಸ್ ಅಥವಾ ಆಧಾರ್ ಕಾರ್ಡ್ ತರಬೇಕು.

ಗಮನಿಸಿ: ಫಾರ್ಮ್ ಭರ್ತಿ ಮಾಡಲು ಉಪಯೋಗಿಸಿದ ಫೋಟೋ ಐಡಿ ಕಾರ್ಡನ್ನೇ ತನ್ನಿ.


ನನಗೆ 3 ದಿನಗಳು ಮುಂಚಿತವಾಗಿ ಬರಲು ಸಾಧ್ಯವಾಗದಿದ್ದರೆ ಸ್ವಯಂಸೇವಕರಾಗುವುದು ಸಾಧ್ಯವಿಲ್ಲವೇ?

ಮಹಾಶಿವರಾತ್ರಿಯ ಆಚರಣೆಗಳಿಗೆ ಬರುವ ಎಲ್ಲರಿಗೂ ಖಂಡಿತವಾಗಿ ಸ್ವಯಂ-ಸೇವಕರಾಗುವ ಅವಕಾಶಗಳಿವೆ. ಸ್ವಯಂ-ಸೇವಕರ ಸಮರ್ಪಣೆ ಭಾವ ಮತ್ತು ಬದ್ಧತೆಯಿಲ್ಲದೇ ಈ ರೀತಿಯ ಕಾರ್ಯಕ್ರಮವನ್ನು ನಡೆಸುವುದು ಸಾಧ್ಯವಿಲ್ಲ. ಆದರೆ ಈಶ ಯೋಗ ಕೇಂದ್ರದಲ್ಲಿ ಸೀಮಿತ ಮೂಲಸೌಕರ್ಯವಿರುವ ಕಾರಣ, ಮಾರ್ಚಿ 1 ರ ನಂತರ ಬರುವವರಿಗೆ ನಾವು ವಸತಿ ಸೌಕರ್ಯವನ್ನು ನೀಡಲು ಸಾಧ್ಯವಾಗುವುದಿಲ್ಲ.


ಸ್ವಯಂ-ಸೇವಕರ ವಾಸ್ತವ್ಯ ಎಲ್ಲಿರುತ್ತದೆ?

ಎಲ್ಲಾ ಸ್ವಯಂ-ಸೇವಕರು, ವಿಶೇಷವಾಗಿ ಮಹಾಶಿವರಾತ್ರಿಗಾಗಿ ಆಶ್ರಮ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ವಸತಿ ಸೌಲಭ್ಯಗಳಲ್ಲಿ ತಂಗುತ್ತಾರೆ. ಎಲ್ಲಾ ಸ್ವಯಂಸೇವಕರು ತಕ್ಕಂತೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ. ದಯವಿಟ್ಟು, ತರಬೇಕಾದ ವಸ್ತುಗಳ ವಿವರವಾದ ಪಟ್ಟಿಗಾಗಿ ಮುಂದಿನ ಪ್ರಶ್ನೆಯನ್ನು ನೋಡಿ. ಮಹಾಶಿವರಾತ್ರಿಯ ಕಾರ್ಯಕ್ರಮದ ಉದ್ದೇಶ, ರಾತ್ರಿಯ ಆಧ್ಯಾತ್ಮಿಕ ಸಾಧ್ಯತೆಯನ್ನು ಎಲ್ಲರಿಗೂ ಲಭ್ಯವಾಗುವ ಹಾಗೆ ಮಾಡುವುದು. ಹಾಗಾಗಿ, ವೈಯಕ್ತಿಕ ಆರಾಮ ಅಥವಾ ಅನುಕೂಲಗಳ ವಿಷಯದಲ್ಲಿ ದಯವಿಟ್ಟು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ನಾವು ನಿಮ್ಮಲ್ಲಿ ವಿನಂತಿಸುತ್ತೇವೆ.


ಮಲಗಲು ಹಾಸಿಗೆಯನ್ನು ಒದಗಿಸಲಾಗುತ್ತದೆಯೇ?

ಆಶ್ರಮವು ಯಾವುದೇ ಹಾಸಿಗೆಯನ್ನು ಒದಗಿಸುವುದಿಲ್ಲ. ಸ್ವಯಂ-ಸೇವಕರು ಮಲಗಲು ಬೇಕಾಗುವ ವಸ್ತುಗಳನ್ನು – ಯೋಗ ಮ್ಯಾಟ್, ಹೊದಿಕೆಗಳು ಮತ್ತು ದಿಂಬು ತರಬೇಕೆಂದು ಕೋರುತ್ತೇವೆ. ಡಿಸೆಂಬರ್-ನಿಂದ ಮಾರ್ಚಿಯವರೆಗೆ, ಹವಾಮಾನವು ರಾತ್ರಿಯ ಹೊತ್ತು ತಣ್ಣಗೆ ಮತ್ತು ದಿನದಲ್ಲಿ ಬೆಚ್ಚಗಿರುತ್ತದೆ. ಕನಿಷ್ಠ ಉಷ್ಣಾಂಶ 17°C (62.6°F) ಮತ್ತು ಗರಿಷ್ಠ ಉಷ್ಣಾಂಶ 35°C (95°F) ತಲುಪಬಹುದು. ರಾತ್ರಿ ಹೊತ್ತಿಗೆ ಬೆಚ್ಚನೆಯ ಉಡುಪನ್ನು ಮತ್ತು ಹೊದಿಕೆಯನ್ನು ತನ್ನಿ.


ಕೇಂದ್ರಕ್ಕೆ ಬರುವಾಗ ತರಬೇಕಾದ ಸಾಮಾಗ್ರಿಗಳು ಯಾವುವು?

ಗಮನಿಸಿ: ಗುಂಪಿನಂತೆ ಬರುವ ಕುಟುಂಬ ಸದಸ್ಯರು ತಮ್ಮ ವಸ್ತುಗಳನ್ನು ಮತ್ತು ಟಾಯ್ಲೆಟರೀಸ್-ಗಳನ್ನು ಪ್ರತ್ಯೇಕವಾಗಿ ಇಡಬೇಕು, ಏಕೆಂದರೆ ನಿಮಗೆ ಪ್ರತ್ಯೇಕ ವಸತಿ ಸೌಕರ್ಯಗಳು ನೀಡುವ ಸಾಧ್ಯತೆಯಿದೆ.

 • ಸ್ನಾನಕ್ಕಾಗಿ ಬಳಸುವ ಸೋಪು, ಪೇಸ್ಟ್ ಇತ್ಯಾದಿ
 • ಟಾರ್ಚ್
 • ಕೊಡೆ
 • ಸೊಳ್ಳೆ ನಿರೋಧಕ ಕ್ರೀಮ್
 • ಹಾಸಿಗೆ, ಹೊದಿಕೆ, ಇತ್ಯಾದಿ
 • ಸಾಕಷ್ಟು ಬಟ್ಟೆಗಳು
 • ಬೆಚ್ಚನೆಯ ಉಡುಪುಗಳು (ಶಾಲ್, ಸ್ವೆಟರ್, ಇತ್ಯಾದಿ)
 • ಔಷಧಿಗಳು (ತಲೆ ನೋವು, ಜ್ವರ, ನೋವು ನಿವಾರಕ ಜೆಲ್, ಹೊಟ್ಟೆಯ ಅಸ್ವಸ್ಥತೆಯ ಔಷಧಿಗಳು)
 • ಬೀಗ ಮತ್ತು ಬೀಗದಕೈ
 • ಪವರ್ ಬ್ಯಾಂಕ್
 • ಯೋಗ ಮ್ಯಾಟ್
 • ಸ್ಲೀಪಿಂಗ್ ಬ್ಯಾಗ್ (ಸಾಧ್ಯವಿದ್ದರೆ)
 • ನೀರಿನ ಬಾಟಲ್
 • ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹ್ಯಾಟ್ ಅಥವಾ ಕ್ಯಾಪ್

ಕೇಂದ್ರದಲ್ಲಿ ಭದ್ರತಾ ವ್ಯವಸ್ಥೆಯು ಹೇಗಿದೆ?

ಈಶ ಯೋಗ ಕೇಂದ್ರವು ಒಂದು ಸುರಕ್ಷಿತ ಸ್ಥಳವಾಗಿದ್ದು, ಭದ್ರತಾ ಸಿಬ್ಬಂದಿಯ 24/7 ಲಭ್ಯವಿರುತ್ತಾರೆ. ಆದರೂ, ಇದು ದೊಡ್ಡ ಕಾರ್ಯಕ್ರಮವಾದ ಕಾರಣ, ನಿಮ್ಮ ವಸ್ತುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ನೀವು ಇನ್ನಿತರ ಸ್ವಯಂ-ಸೇವಕರೊಂದಿಗೆ ವಸತಿ ಸೌಕರ್ಯವನ್ನು ಹಂಚಿಕೊಳ್ಳುತ್ತಿರುವದರಿಂದ, ದಯವಿಟ್ಟು ಯಾವುದೇ ಬೆಲೆಬಾಳುವ ವಸ್ತುಗಳು, ಆಭರಣ, ಲ್ಯಾಪ್ಟಾಪ್ ಅಥವಾ ದುಬಾರಿ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ತರಬೇಡಿ. ನಿಮ್ಮ ವಸ್ತುಗಳನ್ನು ರಕ್ಷಿಸಲು, ದಯವಿಟ್ಟು ಬೀಗವನ್ನು ತನ್ನಿ, ಮತ್ತು ಸುರಕ್ಷತೆಗಾಗಿ ನಿಮ್ಮ ಬ್ಯಾಗ್-ಗಳಿಗೆ ಬೀಗವನ್ನು ಹಾಕಿರಿ.


ಮೊಬೈಲ್ ಫೋನ್ ಚಾರ್ಜಿಂಗ್ ಸೌಲಭ್ಯವಿದೆಯೇ?

ವಸತಿ ಪ್ರದೇಶದಲ್ಲಿ ಸೀಮಿತ ಚಾರ್ಜಿಂಗ್ ಸೌಕರ್ಯಗಳು ಲಭ್ಯವಿರುವಂತೆ ಮಾಡಲಾಗುತ್ತದೆ. ಫೋನ್ ಚಾರ್ಜ್ ಆಗುತ್ತಿರುವ ಸಮಯದಲ್ಲಿ ಅದರ ಮೇಲೆ ಗಮನವಿರಲಿ. ನಿಮ್ಮದೇ ಪವರ್ ಬ್ಯಾಂಕ್-ಅನ್ನು ತರುವುದು ಉತ್ತಮ.


ನಾನು ಎಷ್ಟು ಮುಂಚಿತವಾಗಿ ಕೇಂದ್ರಕ್ಕೆ ಬರಬಹುದು ಮತ್ತು ಕಾರ್ಯಕ್ರಮದ ನಂತರ ಎಷ್ಟು ದಿನಗಳ ತನಕ ಉಳಿದುಕೊಳ್ಳಬಹುದು?

ಸ್ವಯಂ-ಸೇವಕರು ಫೆಬ್ರವರಿ 15 ರಿಂದ ಬರಬಹುದು ಮತ್ತು ಮಾರ್ಚಿ 6 ರವರೆಗೆ ಉಳಿಯಬಹುದು. ಅದಕ್ಕಿಂತ ಮುಂಚಿತವಾಗಿ ಬರಬೇಕೆಂದು ಅಥವಾ ಇದರ ನಂತರವೂ ಇರಬೇಕೆಂದು ಇಚ್ಛಿಸಿದಲ್ಲಿ, ವಸತಿ ಸೌಕರ್ಯಗಳು ಲಭ್ಯವಾಗುವಂತೆ ಮಾಡಲು ಸಹಾಯವಾಗಲು, 8300083111 ಕರೆ ಮಾಡಿ ಸ್ವಯಂ-ಸೇವಕರಾಗಲು ನೋಂದಾಯಿಸಿಕೊಳ್ಳಿ.


ಮಹಾಶಿವರಾತ್ರಿ ಸಮಯದಲ್ಲಿ, ಸ್ವಯಂ-ಸೇವಕರು ಎಲ್ಲಿ ಕುಳಿತುಕೊಳ್ಳುತ್ತಾರೆ? ನಾನು ಸೀಟ್ ಪಾಸ್-ಅನ್ನು ಬುಕ್ ಮಾಡಬೇಕೇ?

ಸ್ವಯಂ-ಸೇವಕರು ಮಹಾಶಿವರಾತ್ರಿ ಸಮಯದಲ್ಲಿ ಸ್ವಯಂ-ಸೇವಕರಿಗಾಗಿಯೇ ಪ್ರತ್ಯೇಕವಾಗಿ ಮೀಸಲಿರುವ ಪ್ರದೇಶದಲ್ಲಿ ಕುಳಿತಿರುತ್ತಾರೆ. ನಿಮಗಾಗಿ ಕುಳಿತುಕೊಳ್ಳುವ ಪಾಸ್-ಅನ್ನು ಬುಕ್ ಮಾಡುವ ಅಗತ್ಯವಿಲ್ಲ.


ನಾನು ಸ್ವಯಂ-ಸೇವೆಗಾಗಿ ನೋಂದಾಯಿಸಿಕೊಂಡು, ಸೀಟಿಂಗ್ ಪಾಸ್-ಅನ್ನು ಪಡೆಯಬಹುದೇ? ನಾನು ಆಯ್ಕೆ ಮಾಡಿದ ಸ್ಥಳದಲ್ಲಿ ಕುಳಿತುಕೊಳ್ಳಬಹುದೇ?

ಜನರು ಮಹಾಶಿವರಾತ್ರಿಯ ಕಾರ್ಯಕ್ರವದ ಅನುಭವವನ್ನು ಹೇಗೆ ಪಡೆಯುತ್ತಾರೆನ್ನುವುದರಲ್ಲಿ ನಾವು ಸ್ವಯಂ-ಸೇವಕರು ನಿರ್ಣಾಯಕ ಪಾತ್ರ ವಹಿಸುತ್ತೇವೆ. ಇಡೀ ರಾತ್ರಿಯ ಅವಧಿಯಲ್ಲಿ ನಾವು ಸ್ವಯಂಸೇವಕರಿಗೆ ವಿವಿಧ ಚಟುವಟಿಕೆಗಳನ್ನು ನೀಡುತ್ತಿರುತ್ತೇವೆ. ಈ ಮಹಾಶಿವರಾತ್ರಿಗಾಗಿ ಸ್ವಯಂಸೇವಕರಾಗಲು ನೀವು ಸಂಕಲ್ಪಿಸಿದಾಗ, ರಾತ್ರಿಯಡೀ ನೀವಿದರಲ್ಲಿ ಭಾಗವಹಿಸುವಂತೆ ನಾವು ಬಲವಾಗಿ ಶಿಫಾರಸು ಮಾಡುತ್ತೇವೆ. ನಿಮ್ಮನ್ನು ನೀವು ಸಮರ್ಪಿಸಿಕೊಳ್ಳುವುದರಿಂದ ಕಾರ್ಯಕ್ರಮದ ಅನುಭವವು ವರ್ಧಿಸುತ್ತದೆ. ಇದಾಗ್ಯೂ ನೀವು ಸೀಟಿಂಗ್ ಪಾಸ್-ಅನ್ನು ಪಡೆಯಬೇಕೆಂದಿದ್ದರೆ, ನಿಮ್ಮ ಏರಿಯಾ ಕೊ-ಆರ್ಡಿನಿಟರ್ ಜೊತೆ ಮಾತನಾಡಿ, ಅದನ್ನು ಪಡೆದುಕೊಳ್ಳಬಹುದು.


ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಸ್ತ್ರ ಸಂಹಿತೆ ಯಾವುದು?

ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಆಶ್ರಮದಲ್ಲಿರುವಾಗ ಸಭ್ಯ ವಸ್ತ್ರಶೈಲಿಯನ್ನು ಅನುಸರಿಸಿರಿ. ಹೆಂಗಸರು ಮತ್ತು ಗಂಡಸರಿಬ್ಬರೂ ಭುಜಗಳು, ಮೇಲ್-ತೋಳುಗಳು, ಮಣಿಗಂಟಿನ ತನಕ ಕಾಲುಗಳು ಮತ್ತು ಮೇಲ್-ಹೊಟ್ಟೆಯು ಮುಚ್ಚುವಂತೆ ಉಡುಗೆಯನ್ನು ಧರಿಸಿರಬೇಕು.ತಕ್ಕುದಾದ ಪಾಶ್ಚಾತ್ಯ ಉಡುಪುಗಳು: ಪುರುಷರು ಮತ್ತು ಮಹಿಳೆಯರಿಗೆ ಮಣಿಗಂಟಿನ ತನಕದ ಪ್ಯಾಂಟ್ಗಳು (ಕ್ಯಾಪ್ರಿಸ್ ಅಥವಾ ಶಾರ್ಟ್ಸ್-ಗಳು ನಿಷಿದ್ಧ) ಮತ್ತು ಮೇಲ್-ತೋಳುಗಳು ಕಾಣದಿರುವ ಉದ್ದನೆಯ ಶರ್ಟ್ಗಳು. ನಿಮ್ಮ ಆರಾಮಕ್ಕಾಗಿ ಮತ್ತು ಸ್ಥಳೀಯ ಸಂಸ್ಕೃತಿಯ ಬಗ್ಗೆ ಗೌರವದ ಸಂಕೇತವಾಗಿ ಬಿಗಿಯಾದ ಉಡುಪುಗಳನ್ನು ಧರಿಸಬೇಡಿ.
ಯಕ್ಷ ಮತ್ತು ಮಹಾಶಿವರಾತ್ರಿಯ ಸಮಯದಲ್ಲಿ, ಭಾರತೀಯ ಸಂಸ್ಕೃತಿಯ ಉಡುಗೆ ತೊಡುವುದನ್ನು ಪ್ರೋತ್ಸಾಹಿಸಲಾಗುತ್ತದೆ.


ಬಟ್ಟೆಗಳನ್ನು ತೊಳೆಯಲು ಅವಕಾಶವಿದೆಯೇ?

ಯೋಗ ಕೇಂದ್ರದಲ್ಲಿ ತೀವ್ರತರವಾದ ನೀರಿನ ಕೊರತೆಯ ಕಾರಣದಿಂದ, ಬಟ್ಟೆಗಳನ್ನು ತೊಳೆಯುವುದು ಸಾಧ್ಯವಾಗುವುದಿಲ್ಲ. ಲಾಂಡ್ರಿಯ ಸೌಲಭ್ಯ ಲಭ್ಯವಿರುವುದಿಲ್ಲ. ಕಾರ್ಯಕ್ರಮದ ಪೂರ್ತಿ ಅವಧಿಯವರೆಗೆ ಸಾಕಾಗುವಷ್ಟು ಬಟ್ಟೆಗಳನ್ನು ತನ್ನಿ.


ನನಗೆ ತಮಿಳು ಭಾಷೆ ತಿಳಿಯದು; ನಾನು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ?

ಹೌದು.


ಡಯಾಬಿಟೀಸ್, ಹೃದಯದ ಕಾಯಿಲೆ ಮತ್ತು ಹರ್ನಿಯ ಇರುವವರು ಸ್ವಯಂ-ಸೇವಕರಾಗಬಹುದೇ?

ಹೌದು, ದಯವಿಟ್ಟು ನಿಮ್ಮ ಔಷಧಿಯನ್ನು ಜೊತೆಗೆ ತನ್ನಿ.


ನನ್ನ ಕುಟುಂಬ ಸದಸ್ಯರು ಅಥವಾ ಅತಿಥಿಗಳನ್ನು ನನ್ನೊಂದಿಗೆ ತರಬಹುದೇ?

ಶಾಂಭವಿ ಮಹಾಮುದ್ರೆಯ ದೀಕ್ಷೆ ಪಡೆದವರಿಗೆ ಮಾತ್ರ ಸ್ವಯಂ-ಸೇವಕ ವಸತಿ ಸೌಕರ್ಯಗಳಲ್ಲಿ ಉಳಿಯಲು ಅವಕಾಶ ನೀಡಲಾಗುತ್ತದೆ. ಕುಟುಂಬದ ಇತರರು ಮತ್ತು ಅತಿಥಿಗಳು ಮಹಾಶಿವರಾತ್ರಿಗಾಗಿ ನೋಂದಾಯಿಸಿ ರಾತ್ರಿಯಿಡೀ ಜರಗುವ ಆಚರಣೆಯಲ್ಲಿ ಭಾಗವಹಿಸಬಹುದು.


ನನ್ನ ಮಕ್ಕಳನ್ನು ನನ್ನೊಂದಿಗೆ ಕರೆತರಬಹುದೇ? ಭಾಗವಹಿಸಲು ಕನಿಷ್ಠ ವಯಸ್ಸು ಯಾವುದು?

ಮಹಾಶಿವರಾತ್ರಿಯ ಸಂದರ್ಭದಲ್ಲಿ, ಮಕ್ಕಳ ಮತ್ತು / ಅಥವಾ ಸಣ್ಣ ವಯಸ್ಸಿನವರ ಆರೈಕೆ ಮಾಡಲು ಸೌಲಭ್ಯಗಳು ನಮ್ಮ ಬಳಿಯಿಲ್ಲ. ನೀವು ಈ ಕಾರ್ಯಕ್ರಮಕ್ಕೆ ಬಂದಾಗ, ಅವರನ್ನು ಮನೆಯಲ್ಲಿ ಯಾರಾದರೂ ನೋಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿಬೇಕೆಂದು ವಿನಂತಿಸುತ್ತೇವೆ.


ಕೇಂದ್ರಕ್ಕೆ ವಾಹನಗಳಲ್ಲಿ ಬರಬಹುದೇ? ಪಾರ್ಕಿಂಗ್ ಸೌಲಭ್ಯವಿದೆಯೇ?

ಸೀಮಿತ ಪಾರ್ಕಿಂಗ್ ಲಭ್ಯವಿರುತ್ತದೆ. ಸ್ಥಳದ ಸಿದ್ಧತೆಗಳನ್ನು ಬೆಂಬಲಿಸಲು ನಿಮ್ಮ ವಾಹನವನ್ನು ನೀವು ನೀಡಲು ಬಯಸಿದರೆ, ನೀವು ಅದನ್ನು ಕೂಡ ಮಾಡಬಹುದು.


ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆಯೇ?

ಪ್ರಥಮ ಚಿಕಿತ್ಸೆಯ ಸೌಲಭ್ಯ ಲಭ್ಯವಿರುತ್ತದೆ; ಬೇಕಿದ್ದರೆ, ಹತ್ತಿರದ ಆಸ್ಪತ್ರೆಗಳು ಸುಮಾರು 1 ಗಂಟೆಯ ದೂರದಲ್ಲಿವೆ (ಸಾಮಾನ್ಯವಾದ ಟ್ಯ್ರಾಫಿಕ್ ಪರಿಸ್ಥಿತಿಗಳಲ್ಲಿ).ಪ್ರಥಮ ಚಿಕಿತ್ಸೆಯ ಸೌಲಭ್ಯ ಲಭ್ಯವಿರುತ್ತದೆ; ಬೇಕಿದ್ದರೆ, ಹತ್ತಿರದ ಆಸ್ಪತ್ರೆಗಳು ಸುಮಾರು 1 ಗಂಟೆಯ ದೂರದಲ್ಲಿವೆ (ಸಾಮಾನ್ಯವಾದ ಟ್ಯ್ರಾಫಿಕ್ ಪರಿಸ್ಥಿತಿಗಳಲ್ಲಿ).


ಶಾಸ್ತ್ರೀಯ ಯೋಗ ಕಾರ್ಯಾಗಾರಕ್ಕಾಗಿ ನೋಂದಣಿ ಮಾಡಿಕೊಂಡು ಮಹಾಶಿವರಾತ್ರಿಗಾಗಿ ಸ್ವಯಂ-ಸೇವಕರಾಗಬಹುದೇ?

ಹೌದು, ನೀವು ಕಾರ್ಯಾಗಾರಕ್ಕಾಗಿ ನೋಂದಣಿ ಮಾಡಬಹುದು ಮತ್ತು ಮಹಾಶಿವರಾತ್ರಿಗಾಗಿ ಸ್ವಯಂ-ಸೇವಕರೂ ಆಗಬಹುದು.


ಹೆಚ್ಚುವರಿ ಪ್ರಶ್ನೆಗಳಿಗೆ, ದಯವಿಟ್ಟು ಸಹಾಯವಾಣಿ +91 83000 83111 ನಲ್ಲಿ ಕರೆ ಮಾಡಿ ಅಥವಾ ಇಮೇಲ್ info@mahashivarathri.org ಮಾಡಿ.