ಕಾರ್ಯಕ್ರಮದ ವೇಳಾಪಟ್ಟಿ
ಮಹಾಶಿವರಾತ್ರಿಯು, ಸದ್ಗುರುಗಳು ನಡೆಸಿಕೊಡುವ ತೀವ್ರ ಸ್ಥಿತಿಯ ಧ್ಯಾನಗಳೂ ಮತ್ತು ಖ್ಯಾತ ಕಲಾವಿದರ ಅದ್ಭುತ ಸಂಗೀತ ಪ್ರದರ್ಶನಗಳೊಂದಿಗೆ ನಡೆಯುವ ರಾತ್ರಿಯ ಉತ್ಸವವಾಗಿದೆ. ಈ ವರ್ಷದ ಆಚರಣೆಗಳಲ್ಲಿ ಆನ್ಲೈನ್ ಮೂಲಕ ಪಾಲ್ಗೊಳ್ಳಿ.
ಈ ಅದ್ಭುತ ರಾತ್ರಿಯ ಪ್ರಯೋಜನವನ್ನು ಪಡೆದುಕೊಳ್ಳಲು, ಬೆನ್ನನ್ನು ಲಂಬವಾಗಿರಿಸಿಕೊಂಡು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ (ನಿಮ್ಮ ಕಾಲಮಾನದ ಪ್ರಕಾರ) ಜಾಗೃತರಾಗಿರುವುದು ಉತ್ತಮ.
ಕಾರ್ಯಕ್ರಮದ ವೇಳಾಪಟ್ಟಿ
ಸಂಜೆ 6:10 ಗಂಟೆಗೆ
ಪಂಚಭೂತ ಆರಾಧನಾ
ಮಾನವ ವ್ಯವಸ್ಥೆಯಲ್ಲಿನ ಪಂಚಭೂತ ಅಂಶಗಳ ಶುದ್ಧೀಕರಣಕ್ಕಾದ ಒಂದು ಶಕ್ತಿಯುತ ಪ್ರಕ್ರಿಯೆ
ಸಂಜೆ 6:40 ಗಂಟೆಗೆ
ಲಿಂಗ ಭೈರವಿ ಮಹಾ ಆರತಿ
ಲಿಂಗ ಭೈರವಿ ದೇವಿ ಉತ್ಸವ ಮೂರ್ತಿಯ ಭಾವೋತ್ಕರ್ಷ ಮತ್ತು ಚೈತನ್ಯಪೂರ್ಣ ಮೆರವಣಿಗೆ. ದೇವಿಯ ಕರುಣೆಯಲ್ಲಿ ಮುಳುಗಲು ಒಂದು ಸದಾವಕಾಶ.
ರಾತ್ರಿ 10:50 ಗಂಟೆಗೆ
ಸದ್ಗುರುಗಳೊಂದಿಗೆ ಸತ್ಸಂಗ ಮತ್ತು ಮಧ್ಯರಾತ್ರಿ ಧ್ಯಾನ
ಸದ್ಗುರುಗಳೊಂದಿಗೆ ಸತ್ಸಂಗ, ನಂತರ ಮಧ್ಯರಾತ್ರಿ ಧ್ಯಾನ. ಕಾರ್ಯಕ್ರಮದ ಬಹು ಮುಖ್ಯ ಭಾಗವಾದ ಈ ಧ್ಯಾನದ ಮೂಲಕ ಸದ್ಗುರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಶಕ್ತಿಶಾಲಿ ಧ್ಯಾನಕ್ಕೆ ದೀಕ್ಷೆ ನೀಡುತ್ತಾರೆ.
ರಾತ್ರಿ 12.15 ಗಂಟೆಗೆ
ಆದಿಯೋಗಿ ದಿವ್ಯದರ್ಶನ
ಯೋಗದ ಮೂಲವನ್ನು ನಿರೂಪಿಸುವ ಅದ್ಭುತವಾದ ಬೆಳಕು ಮತ್ತು ಧ್ವನಿ ಪ್ರದರ್ಶನ
ರಾತ್ರಿ 12:30 ಗಂಟೆಯಿಂದ 2:15 ಗಂಟೆಯವರೆಗೆ
ಸದ್ಗುರುಗಳಿಂದ ಸತ್ಸಂಗ, ಪ್ರಶ್ನೋತ್ತರ ಸೆಷನ್ ಹಾಗೂ ಶಂಭೋ ಧ್ಯಾನ
ಶಂಭೋ ಎನ್ನುವುದು ಶಿವನ ಸೌಮ್ಯ ರೂಪದ ಹೆಸರು. ಶಂಭೋ ಧ್ಯಾನ oMdu ಹೊಸ ಆಯಾಮವನ್ನು ತೆರೆದಿಡುವಲ್ಲಿ ಸದವಕಾಶ ನೀಡುತ್ತದೆ.
ಮುಂಜಾನೆ 3:35 ಗಂಟೆಗೆ
ಬ್ರಹ್ಮ ಮುಹೂರ್ತದಲ್ಲಿ ಸ್ತುತಿ
ಬ್ರಹ್ಮ ಮುಹೂರ್ತ ರಾತ್ರಿ ವೇಳೆಯ ಕೊನೆಯ ಯಾಮದಲ್ಲಿ ಬರುತ್ತದೆ. ಭೌತಿಕತೆಯನ್ನು ಮೀರಿ ಆಧ್ಯಾತ್ಮಿಕ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳಲು ಇದು ಉತ್ತಮ ಸಮಯ.
ರಾತ್ರಿಯಿಡೀ ಪ್ರದರ್ಶನಗಳು
ಖ್ಯಾತ ಕಲಾವಿದರಿಂದ ಸಾಲು ಸಾಲಾಗಿ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಿಮ್ಮನ್ನು ಮಹಾಶಿವರಾತ್ರಿಯ ರಾತ್ರಿಪರ್ಯಂತ ಎಚ್ಚರದಿಂದ ಹಾಗು ಚೈತನ್ಯಪೂರ್ವಕವಾಗಿ ಇರಿಸುತ್ತದೆ. ಇದರ ಮೂಲಕ. ಈ ಪವಿತ್ರ ರಾತ್ರಿಯ ಸಾಧ್ಯತೆಗಳ ಪ್ರಯೋಜನವನ್ನು ನೀವು ಹೊಂದಲು ಅನುವುಮಾಡಿಕೊಡುತ್ತದೆ