ಸ್ಥಳ – ಈಶ ಯೋಗ ಕೇಂದ್ರ

ಕೊಯಮತ್ತೂರಿನ ಹೊರವಲಯದ ವೆಳ್ಳಿಯಂಗಿರಿ ಬೆಟ್ಟದ ತಪ್ಪಲಲ್ಲಿ ನಲೆಗೊಂಡಿರುವ ಈಶ ಯೋಗ ಕೇಂದ್ರ, ಈಶ ಫೌಂಡೇಶನ್‌ನ ಪ್ರಧಾನ ಕಛೇರಿ. ಈಶ ಯೋಗ ಕೇಂದ್ರವು ಸ್ವಯಂ-ಪರಿವರ್ತನೆಗಾಗಿರುವ ಪವಿತ್ರ ಸ್ಥಾನವಾಗಿದ್ದು, ನೀವಿಲ್ಲಿ ಬಂದು ನಿಮ್ಮ ಅಂತರ್‌ವಿಕಾಸಕ್ಕಾಗಿ ನಿಮ್ಮ ಸಮಯವನ್ನು ವಿನಿಯೋಗಿಸಬಹುದು. ಕ್ರಿಯಾ, ಜ್ಞಾನ, ಕರ್ಮ, ಮತ್ತು ಭಕ್ತಿ – ಯೋಗದ ಈ ಎಲ್ಲಾ ವಿವಿಧ ಸಾಧನಕ್ರಮಗಳನ್ನು ಇಲ್ಲಿ ಒದಗಿಸಲಾಗುತ್ತಿದ್ದು, ಇದು ಪ್ರಪಂಚದೆಲ್ಲೆಡೆಯಿಂದ ಜನರನ್ನು ಆಕರ್ಷಿಸುತ್ತದೆ.

ಈಶ ಯೋಗ ಕೇಂದ್ರದ ಮುಖ್ಯ ಆಕರ್ಷಣೆಯಾದ ಧ್ಯಾನಲಿಂಗವು ಒಂದು ಪ್ರಬಲ ಹಾಗೂ ವಿಶೇಷ ಪ್ರಾಣಶಕ್ತಿಯ ಮೂರ್ತರೂಪ. ಇದು ಪ್ರತಿಯೊಬ್ಬರಿಗೂ ಜೀವನವನ್ನು ಅದರ ಸಂಪೂರ್ಣತೆಯಲ್ಲಿ ಅನುಭವಿಸುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಈಶ ಯೋಗ ಕೇಂದ್ರದ ಸನಿಹದಲ್ಲಿ ಲಿಂಗಭೈರವೀ ಪ್ರತಿಷ್ಠಿತಳಾಗಿದ್ದಾಳೆ. ಒಮ್ಮೆಗೇ ಉಗ್ರಳೂ ದಯಾಮಯಳೂ ಆಗಿರುವ ಲಿಂಗಭೈರವಿಯು ದೈವೀಶಕ್ತಿಯ ಸ್ತ್ರೀತ್ವದ ಒಂದು ತೀಕ್ಷ್ಣ ಅಭಿವ್ಯಕ್ತಿ.

ಕೇಂದ್ರವು ಒದಗಿಸುವ ವಸತಿ ಸೌಕರ್ಯಗಳು ಮತ್ತು ವಿವಿಧ ಅವಧಿಯ ಯೋಗ ಕಾರ್ಯಕ್ರಮಗಳ ಲಾಭವನ್ನು ನೀವು ಪಡೆಯಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮತ್ತು ಅತಿಥಿಗಳೆಲ್ಲರಿಗೂ, ಅವರ ವಾಸ್ತವ್ಯದ ಭಾಗವಾಗಿ ಆರೋಗ್ಯಕರ ಸಾತ್ವಿಕ ಆಹಾರವನ್ನು ನೀಡಲಾಗುತ್ತದೆ. ಆರೋಗ್ಯಕರ ಜೀವನಶೈಲಿಗಾಗಿ, ಆತ್ಮತೃಪ್ತಿಯ ಉನ್ನತಸ್ತರವನ್ನು ಹೊಂದುವುದಕ್ಕಾಗಿ, ಮತ್ತು ತಮ್ಮ ಸಾಮರ್ಥ್ಯದ ಉಚ್ಛತಮ ಗರಿಮೆಯನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕಾಗಿ ಈಶ ಯೋಗ ಕೇಂದ್ರವು ಒಂದು ಅನುಕೂಲಕರ ವಾತಾವರಣವನ್ನು ಜನರಿಗೆ ಒದಗಿಸಿಕೊಡುತ್ತದೆ.

detail-seperator-icon

ಮಹಾಶಿವರಾತ್ರಿಯ ಆಚರಣೆಯಲ್ಲಿ ಭಾಗವಹಿಸಲು ನೋಂದಣೆ

To attend in-person

Register Now
ಎಲ್ಲರಿಗೂ ಆದರದ ಸ್ವಾಗತ!

ಬಸ್ ಪಾಸ್-ಗಳಿಗಾಗಿ ನೋಂದಾಯಿಸಿಕೊಳ್ಳಿ

ಚೆನ್ನೈ, ಬೆಂಗಳೂರು ಮತ್ತು ತಮಿಳುನಾಡಿನ ಹಲವಾರು ನಗರ ಮತ್ತು ಪಟ್ಟಣಗಳಿಂದ ಬಸ್ ಸೇವೆಯ ವ್ಯವಸ್ಥೆಯನ್ನು ಸ್ವಯಂ ಸೇವಕರು ಮಾಡುತ್ತಿದ್ದಾರೆ.

ಯಕ್ಷ ಮತ್ತು ಮಹಾಶಿವರಾತ್ರಿಯ ಬಗ್ಗೆ ತಿಳಿದುಕೊಳ್ಳಬೇಕಿದ್ದಲ್ಲಿ:

ಇಮೇಲ್ : info@mahashivarathri.org

Offline:

ಮಹಾಶಿವರಾತ್ರಿಗೆ ನೋಂದಣಿಯ ಬಗ್ಗೆ ಹಾಗೂ ಇನ್ನಿತರ ವಿಚಾರಣೆಗಾಗಿ:
ದೂರವಾಣಿ: 83000 83111

detail-seperator-icon

ಯೋಗ ಕೇಂದ್ರವನ್ನು ತಲುಪುವುದು ಹೇಗೆ?

ವೆಳ್ಳಿಯಂಗಿರಿ ಬೆಟ್ಟದ ತಪ್ಪಲಿನಲ್ಲಿರುವ ಈಶ ಯೋಗ ಕೇಂದ್ರವು, ತಮಿಳುನಾಡಿನ ಕೊಯಮತ್ತೂರಿಗೆ ಮೂವತ್ತು ಕಿ.ಮೀ. ಪಶ್ಚಿಮದಲ್ಲಿದೆ. ದಕ್ಷಿಣಭಾರತದ ಒಂದು ಪ್ರಮುಖ ಕೈಗಾರಿಕಾ ನಗರವಾದ ಕೊಯಮತ್ತೂರು ವಿಮಾನ, ರೈಲು ಮತ್ತು ರಸ್ತೆಗಳ ಮೂಲಕ ಸುಸಲಿತವಾದ ಸಂಚಾರ ಸಂಪರ್ಕವನ್ನು ಹೊಂದಿದೆ. ಎಲ್ಲಾ ಪ್ರಮುಖ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಚೆನ್ನೈ, ದೆಹಲಿ, ಮುಂಬೈ ಮತ್ತು ಬೆಂಗಳೂರುಗಳಿಂದ ಕೊಯಮತ್ತೂರಿಗೆ ನಿಯತವಾಗಿ ತಮ್ಮ ವಿಮಾನಗಳನ್ನು ಚಲಾಯಿಸುತ್ತವೆ. ರೈಲುಸಂಪರ್ಕವಂತೂ ದೇಶದ ಎಲ್ಲ ಪ್ರಮುಖ ನಗರಗಳಿಂದ ಲಭ್ಯವಿದೆ. ಕೊಯಮತ್ತೂರು ನಗರದಿಂದ ಈಶ ಯೋಗ ಕೇಂದ್ರಕ್ಕೆ ಬರಲು ದಿನಪೂರ್ತಿ ಸಿಟಿಬಸ್‌ಗಳೂ, ಟ್ಯಾಕ್ಸೀಗಳೂ ದೊರೆಯುತ್ತವೆ.

ಕೇಂದ್ರಕ್ಕೆ ಬರುವ ದಾರಿ

ತಮಿಳುನಾಡಿನ ಕೊಯಮತ್ತೂರಿಗೆ ಮೂವತ್ತು ಕಿ.ಮೀ. ಪಶ್ಚಿಮದಲ್ಲಿದಲ್ಲಿರುವ ವೆಳ್ಳಿಯಂಗಿರಿ ಬೆಟ್ಟದ ತಪ್ಪಲಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ಧ್ಯಾನಲಿಂಗ ಪ್ರತಿಷ್ಠಾಪಿತವಾಗಿದೆ. ದಕ್ಷಿಣಭಾರತದ ಒಂದು ಪ್ರಮುಖ ಕೈಗಾರಿಕಾ ನಗರವಾದ ಕೊಯಮತ್ತೂರು ವಿಮಾನ, ರೈಲು ಮತ್ತು ರಸ್ತೆಗಳ ಮೂಲಕ ಸುಸಲಿತವಾದ ಸಂಚಾರ ಸಂಪರ್ಕವನ್ನು ಹೊಂದಿದೆ.

ವಿಮಾನ ಸಂಪರ್ಕ:

ಕೊಯಮತ್ತೂರು ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿದ್ದು, ಪ್ರಮುಖ ನಗರಗಳಾದ ದೆಹಲಿ, ಚೆನ್ನೈ, ಮುಂಬೈ ಮತ್ತು ಹೈದರಾಬಾದಿಗೆ ನಿಯತವಾದ ವಿಮಾನ ಸಂಚಾರ ಹೊಂದಿದೆ.

ರೈಲು ಸಂಪರ್ಕ:

ಈಶ ಕೇಂದ್ರಕ್ಕೆ ಅತಿ ಹತ್ತಿರದ ರೈಲು ನಿಲ್ದಾಣವೆಂದರೆ ಕೇಂದ್ರದಿಂದ ಮೂವತ್ತು ಕಿ.ಮೀ. ದೂರದಲ್ಲಿರುವ ಕೊಯಮತ್ತೂರು ರೈಲು ನಿಲ್ದಾಣ.

ರಸ್ತೆ ಸಂಪರ್ಕ:

ಪೂಂಡಿ, ಸೆಮ್ಮೇಡು ಅಥವಾ ಸಿರುವಾನಿಗೆ ಹೋಗುವ ಪ್ರಮುಖ ರಸ್ತೆಗಳು ಈಶ ಯೋಗ ಕೇಂದ್ರದ ಮೂಲಕವೇ ಹಾದು ಹೋಗುತ್ತವೆ. ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣದ ಹೊರಗೆ ಟ್ಯಾಕ್ಸಿ ಸೇವೆ ಲಭ್ಯವಿದೆ.

ನೇರ ಬಸ್ ಸಂಪರ್ಕ:

ಕೊಯಮತ್ತೂರು ನಗರದಿಂದ ಈಶ ಯೋಗ ಕೇಂದ್ರಕ್ಕೆ ಬರಲು ದಿನಪೂರ್ತಿ ಸಿಟಿಬಸ್‌ಗಳ ಲಭ್ಯತೆಯಿದೆ.
ಬಸ್ ವೇಳಾಪಟ್ಟಿಯನ್ನು ನೋಡಿ

View Bus Time Table

ಮಾರ್ಗ ನಿರ್ದೇಶನಗಳು:

ಕೊಯಮತ್ತೂರಿನಿಂದ ಉಕ್ಕಡಮ್ ಮೂಲಕ ಪೆರೂರ್ / ಸಿರುವಾನಿ ರಸ್ತೆಯಲ್ಲಿ ಬನ್ನಿ. ಅಲಂದುರೈಯಿಂದ ಮುಂದೆ ಬಂದು ಇರುಟುಪಲ್ಲಮ್ ಜಂಕ್ಷನ್-ನಲ್ಲಿ ಬಲಕ್ಕೆ ತಿರುಗಿ. ಈ ರಸ್ತೆಯಲ್ಲಿ, ಇರುಟುಪಲ್ಲಮ್ ಜಂಕ್ಷನ್-ನಿಂದ ಈಶ ಯೋಗ ಕೇಂದ್ರವು 8 ಕಿ.ಮೀ. ದೂರದಲ್ಲಿದೆ ಮತ್ತು ಪೂಂಡಿ ದೇವಸ್ಥಾನಕ್ಕಿಂತ 2 ಕಿ.ಮೀ. ಮುಂಚೆಯೇ ಇದೆ. ಧ್ಯಾನಲಿಂಗವನ್ನು ತಲುಪಲು ತೂಗುಫಲಕಗಳು ರಸ್ತೆಯುದ್ದಕ್ಕೂ ಕಾಣಸಿಗುತ್ತವೆ.

detail-seperator-icon

ಸಂಪರ್ಕ ವಿವರಗಳು:

ಈಶ ಯೋಗ ಕೇಂದ್ರ,
ವೆಳ್ಳಿಯಂಗಿರಿ ಫುಟ್ ಹಿಲ್ಸ್,
ಈಶಾನ ವಿಹಾರ ಪೋಸ್ಟ್,
ಕೊಯಮತ್ತೂರು 641 114, ಭಾರತ
ದೂರವಾಣಿ: 83000 83111
ಇಮೇಲ್: info@ishafoundation.org