ಪಾಲ್ಗೊಳ್ಳಿ

ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯನ್ನು ಅನೇಕ ವರ್ಷಗಳಿಂದ ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ಕಣ್ಮನ ಸೆಳೆಯುವ ಸಂಗೀತ ನೃತ್ಯ ಪ್ರದರ್ಶನಗಳು ಮತ್ತು ಸದ್ಗುರುಗಳು ನಡೆಸಿಕೊಡುವ ಶಕ್ತಿಯುತ ಧ್ಯಾನ ಪ್ರಕ್ರಿಯೆಗಳನ್ನೊಳಗೊಂಡಿರುವ ಈ ಸಾಂಸ್ಕೃತಿಕ ಉತ್ಸವವು, ಪ್ರತಿವರ್ಷವೂ ನಿಯತವಾಗಿ ಲಕ್ಷಾಂತರ ಜನರನ್ನು ಸಳೆಯುತ್ತದೆ. ಇನ್ನೂ ಹೆಚ್ಚಿನ ಸಂಖ್ಯೆಯ ಜನರು, ನಮ್ಮ ವೆಬ್ ನೇರ ಪ್ರಸಾರ ಮತ್ತು ನಮ್ಮ ಮಾಧ್ಯಮ ಸಹಭಾಗಿದಾರರ ಟಿ.ವಿ. ಪ್ರಸಾರದ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ, ಮತ್ತದರಲ್ಲಿ ಪಾಲ್ಗೊಳ್ಳುತ್ತಾರೆ.

ಮಹಾಶಿವರಾತ್ರಿ

ಮಾರ್ಚಿ 4, 2019: ಸಂಜೆ 6 ರಿಂದ ರಾತ್ರಿಯಿಡಿ

detail-seperator-icon

ಮಹಾಶಿವರಾತ್ರಿಯ ಆಚರಣೆಯಲ್ಲಿ ಭಾಗವಹಿಸಲು ನೋಂದಣೆ


ಎಲ್ಲರಿಗೂ ಆದರದ ಸ್ವಾಗತ!

ಸಾಮಾನ್ಯ ವಿಚಾರಣೆಗಳಿಗಾಗಿ
ದೂರವಾಣಿ: 83000 83111
ಇಮೇಲ್: info@mahashivarathri.org

detail-seperator-icon

ಆನ್ಲೈನ್ ವೆಬ್-ಸ್ಟ್ರೀಮ್

ವೆಬ್ ನೇರ ಪ್ರಸಾರಕ್ಕಾಗಿ ನೋಂದಣಿಯು ಶೀಘ್ರದಲ್ಲಿ ಆರಂಭವಾಗುತ್ತದೆ

detail-seperator-icon

ಭಾರತಾದ್ಯಂತ ನೇರ ಪ್ರಸಾರ

ಶೀಘ್ರದಲ್ಲಿ ಘೋಷಿಸಲಾಗುತ್ತದೆ

detail-seperator-icon

ಸತ್ಸಂಗ

ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯನ್ನು ವೈಭವೋಪೇತವಾಗಿ ಭಾರೀ ಉತ್ಸಾಹದಿಂದ ಆಚರಿಸಲಾಗುತ್ತದೆ. ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತದ ಲಕ್ಷೋಪಲಕ್ಷ ಜನರು ಸದ್ಗುರುಗಳೊಂದಿಗೆ ಈ ವಿಶಿಷ್ಟವಾದ ರಾತ್ರಿಯಿಡಿ ನಡೆಯುವ ಆಚರಣೆ ಮತ್ತು ಸತ್ಸಂಗದಲ್ಲಿ ಭಾಗವಹಿಸುತ್ತಾರೆ.

ಧ್ಯಾನ

ಉತ್ಸಾಹಭರಿತ ಮತ್ತು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವಿನಲ್ಲಿ ಸದ್ಗುರುಗಳು ರಾತ್ರಿಯುದ್ದಕ್ಕೂ ಶಕ್ತಿಯುತ ಧ್ಯಾನ ಪ್ರಕ್ರಿಯೆಗಳನ್ನು ನಡೆಸಿಕೊಡುತ್ತಾರೆ.

detail-seperator-icon

ಮಧ್ಯರಾತ್ರಿಯ ಧ್ಯಾನ

ಮಧ್ಯರಾತ್ರಿಯ ಹೊತ್ತಿಗೆ ಸರಿಯಾಗಿ ಸದ್ಗುರುಗಳು ನೆರೆದಿರುವ ಜನಸಮೂಹವನ್ನು ಶಕ್ತಿಯುತ ಧ್ಯಾನಸ್ಥಿತಿಗೆ ಕರೆದೊಯ್ಯುತ್ತಾರೆ. ಇದು ಮಹಾಶಿವರಾತ್ರಿಯ ಅತ್ಯಂತ ಕಾತರದಿಂದ ಎದುರುನೋಡಲಾಗುವ ಕಾರ್ಯಕ್ರಮ.

ಶಕ್ತಿಯುತ ಮಂತ್ರ ಪಠಣೆ

ಸಾಕ್ಷಾತ್ಕಾರ ಪಡೆದ ಗುರುವಿನ ಸಮ್ಮುಖದಲ್ಲಿ ಒಂದು ಸರಳ ಮಂತ್ರ, ರೂಪಾಂತರದ ಪ್ರಬಲ ಪ್ರಕ್ರಿಯೆಯಾಗುತ್ತದೆ. ಈ ಮಹಾಶಿವರಾತ್ರಿಯಂದು ಸದ್ಗುರುಗಳು ನಡೆಸಿಕೊಡುವ ಧ್ಯಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೇರ ಪ್ರಸಾರವನ್ನು ವೀಕ್ಷಿಸಿ. ಮತ್ತಷ್ಟು ತಿಳಿಯಿರಿ

detail-seperator-icon

Prepare for Mahashivratri – Mahashivratri Sadhana

ಮಹಾಶಿವರಾತ್ರಿ ಸಾಧನೆ – ಮಹಾಶಿವರಾತ್ರಿಯ ಸಾಧನೆಯು ಅದ್ಭುತ ಸಾಧ್ಯತೆಗಳ ರಾತ್ರಿಯಾದ ಮಹಾಶಿವರಾತ್ರಿಗೆ ಸಿದ್ಧತೆಯ ಪ್ರಕ್ರಿಯೆಯಾಗಿದೆ. ಏಳು ವರ್ಷದ ಮೇಲ್ಪಟ್ಟ ಯಾರಾದರೂ ಈ ಸಾಧನೆಯಲ್ಲಿ ಭಾಗವಹಿಸಬಹುದು. ಮತ್ತಷ್ಟು ತಿಳಿಯಿರಿ

detail-seperator-icon

ಮನೆಯಲ್ಲಿ ಮಹಾಶಿವರಾತ್ರಿ

ಅಗತ್ಯವಿರುವ ಸಿದ್ಧತೆಯನ್ನು ಮಾಡಿಕೊಳ್ಳದವರಿಗೆ ಸಾಮಾನ್ಯವಾಗಿ ಸೂಕ್ತವಲ್ಲದ ಕೆಲ ನಿರ್ದಿಷ್ಟ ರೀತಿಯ ಪ್ರಬಲ ಸಾಧನೆಯನ್ನು ಮಾಡಲು ಮಹಾಶಿವರಾತ್ರಿಯಂದು ಉಂಟಾಗುವ ಮಾನವ ಶರೀರದೊಳಗಿನ ಶಕ್ತಿಯ ನೈಸರ್ಗಿಕ ಮೇಲ್-ಸ್ಫುರಣವು ಅನುವು ಮಾಡಿಕೊಡುತ್ತದೆ.

ಹೆಚ್ಚಿನವರಿಗೆ ತಿಳಿದಿರುವ ಹಾಗೆ, “ॐ ನಮಃ ಶಿವಾಯ” ಮಹಾಮಂತ್ರವನ್ನು ಸಾಮಾನ್ಯ ಸಂದರ್ಭಗಳಲ್ಲಿ ಪಠಿಸದಿರಲು ನಾವು ಸೂಚನೆಯನ್ನು ನೀಡುತ್ತೇವೆ. ಆದರೆ, ಮಹಾಶಿವರಾತ್ರಿಯಂದು ಈ ಸಾಧನೆಯನ್ನು ಮಾಡಿ, ಅದರ ಫಲವನ್ನು ಪಡೆದುಕೊಳ್ಳಬಹುದು.

ಮಹಾಶಿವರಾತ್ರಿಯಂದು ಈಶ ಯೋಗ ಕೇಂದ್ರದಲ್ಲಿ ಹಾಜರಿರಲು ಸಾಧ್ಯವಾಗದವರು, ಈ ರಾತ್ರಿಯ ಪ್ರಯೋಜನವನ್ನು ಕೆಳಕಂಡ ವಿಧಾನದಲ್ಲಿ ಪಡೆದುಕೊಳ್ಳಬಹುದು:

  • ರಾತ್ರಿಯಿಡಿ ಮಲಗದೆ ಬೆನ್ನುಹುರಿಯನ್ನು ನೇರವಾಗಿರಿಸಿ, ಎಚ್ಚರ ಹಾಗೂ ಜಾಗೃತವಾಗಿರುವುದು ಬಹಳ ಪ್ರಯೋಜನಕಾರಿ.
  • ದೀಪ ಅಥವಾ ಲಿಂಗ ಜ್ಯೋತಿಯನ್ನು ಬೆಳಗಿಸುವ ಮೂಲಕ, ಅಥವಾ ಧ್ಯಾನಲಿಂಗ ಯಂತ್ರ ಅಥವಾ ಸದ್ಗುರುಗಳ ಚಿತ್ರದ ಮುಂದೆ ಹೂವು, ಊದಿನ ಬತ್ತಿ ಹಚ್ಚಿ ನಿಮ್ಮ ಕೋಣೆಯನ್ನು ಸಿದ್ಧಪಡಿಸಿಕೊಳ್ಳಿ.
  • ನೀವು ಭಕ್ತಿಗೀತೆಗಳು ಅಥವಾ ಮಂತ್ರ ಪಠಣೆಯನ್ನು ಜಪಸಿಬಹುದು, ಹಾಡಬಹುದು ಅಥವಾ ಕೇಳಬಹುದು.
  • ನೀವು ಒಂಟಿಯಾಗಿದ್ದರೆ, ಪ್ರಕೃತಿಯೊಂದಿಗಿರಿ ಅಥವಾ ನಡೆದಾಡಿ. ನೀವು ಗುಂಪಿನಲ್ಲಿದ್ದರೆ, ಆದಷ್ಟು ಮೌನವಾಗಿರುವುದು ಉತ್ತಮ.
  • ಮಧ್ಯರಾತ್ರಿ ಸಾಧನೆಯನ್ನು ಕೆಳಕಂಡ ರೀತಿಯಲ್ಲಿ ಮಾಡಬೇಕು: ರಾತ್ರಿ 11:10 – 11:30 – ಸುಖ ಕ್ರಿಯಾ; ರಾತ್ರಿ 11:30 – 11:50 ॐ ಪಠಣೆ; ರಾತ್ರಿ 11:50 – 12:10 – “ॐ ನಮಃ ಶಿವಾಯ” ಮಹಾಮಂತ್ರದ ಪಠಣೆ.
  • • ನೀವು ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದರೆ, ಅಲ್ಲಿ ನೀಡಲಾಗುವ ಧ್ಯಾನದ ಸೂಚನೆಗಳನ್ನು ನೀವು ಅನುಸರಿಸಬಹುದು.
detail-seperator-icon

ಉತ್ತರ ಅಮೇರಿಕದಲ್ಲಿ ಆಚರಿಸಿ

ಈಶ ಇನ್ಸ್ಟಿಟ್ಯೂಟ್ ಆಫ್ ಇನ್ನರ್ ಸೈನ್ಸಸ್ – ಟೆನೆಸ್ಸಿಯಲ್ಲಿ (ಯು ಎಸ್ ಎ)

ಈಶ ಇನ್ಸ್ಟಿಟ್ಯೂಟ್-ನ ಆದಿಯೋಗಿ ಆಲಯದಲ್ಲಿ ರಾತ್ರಿಯಿಡಿ ನಡೆಯುವ ಆಚರಣೆಯಲ್ಲಿ ಪಾಲ್ಗೊಳ್ಳಿ.

  • ಮಧ್ಯರಾತ್ರಿಯ ಧ್ಯಾನ
  • ಆದಿಯೋಗಿ ಆಲಯದಲ್ಲಿ ವಿಶೇಷ ಆರತಿ ಮತ್ತು ಮಂತ್ರ ಪಠಣೆ
  • ಸಾಂಸ್ಕೃತಿಕ ಪ್ರಸ್ತುತಿಗಳು
  • ಭಾರತದಲ್ಲಿ ಸದ್ಗುರುಗಳು ನಡೆಸಿಕೊಡುವ ಆಚರಣೆಯ ನೇರ ಪ್ರಸಾರ

ಪ್ರವೇಶ ಉಚಿತ ಮತ್ತು ಎಲ್ಲರಿಗೂ ಆದರದ ಸ್ವಾಗತ

ಮಹಾ ಅನ್ನದಾನ

ಇತಿಹಾಸ ದಾಖಲಿಸಲ್ಪಡಲು ಆರಂಭವಾದ ಎಷ್ಟೋ ಮುಂಚೆಯೇ, ಪ್ರಪಂಚದಾದ್ಯಂತ ಜನರು ಆಹಾರ ಮತ್ತು ಜೀವದ ನಡುವಿನ ನಿಕಟ ಸಂಬಂಧವನ್ನು ಗುರುತಿಸಿದ್ದರು. ಸಂಸ್ಕೃತ ಪದವಾದ ‘ಅನ್ನದಾನಮ್’ ನ ಅಕ್ಷರಶಃ ಅರ್ಥ – ಆಹಾರವನ್ನು ಅರ್ಪಿಸುವುದು ಅಥವಾ ಹಂಚುವುದು ಎಂದು. ಭಾರತೀಯ ಸಂಸ್ಕೃತಿಯಲ್ಲಿ, ಆಹಾರವನ್ನು ಹಂಚಿಕೊಳ್ಳವುದು ಪವಿತ್ರ ಕರ್ತವ್ಯವೆಂದು ಸರ್ವದಾ ಪರಿಗಣಿಸಲಾಗಿತ್ತು. ಭಾರತೀಯ ಉಪಖಂಡದ ಪ್ರತಿಯೊಂದು ಸಮುದಾಯದಲ್ಲಿ, ಯಾವುದೇ ಉತ್ಸವ ಅಥವಾ ಸಮಾರಂಭವು ಅನ್ನದಾನ ಅಥವಾ ಪ್ರಸಾದದ ವಿನಿಯೋಗವಿಲ್ಲದೆ ಪೂರ್ಣವಾಗುವುದಿಲ್ಲ. ನಾವು ನಮ್ಮ

ಪಿತೃಗಳಿಗೆ, ದೇವದೇವತೆಯರಿಗೆ, ಸಾಧುಸಂತರಿಗೆ, ಹಿರಿಯರಿಗೆ, ಯಾತ್ರಿಕರಿಗೆ ಆಹಾರವನ್ನು ಸಮರ್ಪಿಸುವುದಲ್ಲದೇ ನಮ್ಮ ಬಂಧುಬಳಗದವರಿಗೆ, ಸ್ನೇಹಿತರಿಗೆ, ಮನೆ ಬಾಗಿಲಿಗೆ ಬಂದವರಿಗೆ, ಹಸಿದವರಿಗೆ ಮತ್ತು ಪ್ರಾಣಿಪಕ್ಷಿಗಳಿಗೂ ಸಹ ಅನ್ನವನ್ನು ನೀಡುತ್ತೇವೆ. ಈ ಸಂಪ್ರದಾಯವು ಎಲ್ಲಡೆ ಇದ್ದ ಕಾರಣ, ಶತಶತಮಾನಗಳ ಕಾಲ ಯೋಗಿಗಳು, ಸಂತರು ಮತ್ತು ಋಷಿಗಳು ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಿ ಉಪಖಂಡದ ಉದ್ದಗಲಕ್ಕೂ ಆಧ್ಯಾತ್ಮಿಕ ವಿಜ್ಞಾನಗಳನ್ನು ಹರಡಲು ಸಾಧ್ಯವಾಯಿತು.

ಇಡೀ ರಾತ್ರಿ ನಡೆಯುವ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ಬರುವ ಲಕ್ಷಾಂತರ ಭಕ್ತರಿಗೆ ಈಶ ಯೋಗ ಕೇಂದ್ರದಲ್ಲಿ ಅನ್ನದಾನವನ್ನು ಮಾಡಲಾಗುತ್ತದೆ. ಈ ಮಂಗಳಕರ ಸುಸಂದರ್ಭದಲ್ಲಿ ನೆರವೇರಿಸಲಾಗುವ ಅನ್ನದಾನಕ್ಕೆ ಕಾಣಿಕೆ ಸಲ್ಲಿಸಲು ಈಶ ಫೌಂಡೇಶನ್ ನಿಮಗೊಂದು ಸದವಕಾಶವನ್ನು ನೀಡುತ್ತಿದೆ.

ಪ್ರತಿಯೊಂದು ಕಾಣಿಕೆಯೂ ಮಹತ್ವದ್ದೂ! ಕಾಣಿಕೆ ನೀಡಿ!

ಸಂಪರ್ಕಿಸಿ:

ದೂರವಾಣಿ: 83000 83111
ಇಮೇಲ್: info@mahashivarathri.org

detail-seperator-icon

ಸ್ವಯಂ-ಸೇವಕರಾಗಿ

ಈಶ ಯೋಗ ಕೇಂದ್ರದಲ್ಲಿ ನಡೆಯುವ ಮಹಾಶಿವರಾತ್ರಿಯನ್ನು ಆದಿಯೋಗಿಗೆ ಸಮರ್ಪಣೆಯಾಗಿ ವೈಭಯಯುತವಾಗಿ ಆಚರಿಸಬೇಕೆಂದು ಸದ್ಗುರುಗಳು ಹೇಳಿದ್ದಾರೆ.

ಪ್ರಪಂಚದಾದ್ಯಂತದ ಲಕ್ಷಂತರ ಜನರು ಈ ಕಾರ್ಯಕ್ರಮಕ್ಕಾಗಿ ಬರುತ್ತಾರೆಂದು ನಿರೀಕ್ಷಿಸಲಾಗಿದೆ. ಇಂತಹ ದೊಡ್ಡ ಕಾರ್ಯಕ್ರಮವನ್ನು ಬಹು ಸುಂದರವಾಗಿ ನಡೆಸಿಕೊಡಲು ಆಶ್ರಮದಲ್ಲಿ ಅಗಾಧವಾದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ.

ಇದು ಬಹು ದೊಡ್ಡ ಕಾರ್ಯಕ್ರಮವಾದ್ದರಿಂದ, ಮಹಾಶಿವರಾತ್ರಿಯ ಸಿದ್ಧತೆಗಾಗಿ ಸಹಾಯ ಮಾಡಲು ಸಾವಿರಾರು ಸ್ವಯಂ-ಸೇವಕರು ಅನೇಕ ದಿನಗಳ ಮುಂಚೆಯೇ ಬರಬೇಕಾಗುತ್ತದೆ.

ಸ್ವಯಂ-ಸೇವಕರಾಗಿ ನೀವು ಈಶ ಯೋಗ ಕೇಂದ್ರಕ್ಕೆ ಸಾಧ್ಯವಾದಷ್ಟು ಮುಂಚೆಯೇ ಅಥವಾ ಮಹಾಶಿವರಾತ್ರಿಯ ಕನಿಷ್ಠ ಒಂದು ವಾರದ ಮುಂಚೆ ಬರಬಹುದು..