ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಲು ನಮಗೆ ಬೆಂಬಲ ನೀಡಿ!
ಹೌದು, ನಾನು ಕಾಣಿಕೆ ಕೊಡಲು ಇಚ್ಛಿಸುತ್ತೇನೆ!
*ನಿಮ್ಮೆಲ್ಲರ ಕಾಣಿಕೆಯೂ ಮಹತ್ವದ್ದು!
ಇತಿಹಾಸ ದಾಖಲಿಸಲ್ಪಡಲು ಆರಂಭವಾದ ಎಷ್ಟೋ ಮುಂಚೆಯೇ, ಪ್ರಪಂಚದಾದ್ಯಂತ ಜನರು ಆಹಾರ ಮತ್ತು ಜೀವದ ನಡುವಿನ ನಿಕಟ ಸಂಬಂಧವನ್ನು ಗುರುತಿಸಿದ್ದರು. ಸಂಸ್ಕೃತ ಪದವಾದ ‘ಅನ್ನದಾನಮ್’ ನ ಅಕ್ಷರಶಃ ಅರ್ಥ – ಆಹಾರವನ್ನು (ಅನ್ನಮ್) ಅರ್ಪಿಸುವುದು ಅಥವಾ ಹಂಚುವುದು (ದಾನಮ್) ಎಂದು.
ಭಾರತೀಯ ಸಂಸ್ಕೃತಿಯಲ್ಲಿ, ಆಹಾರವನ್ನು ಹಂಚಿಕೊಳ್ಳವುದು ಪವಿತ್ರ ಕರ್ತವ್ಯವೆಂದು ಸರ್ವದಾ ಪರಿಗಣಿಸಲಾಗಿತ್ತು. ಭಾರತೀಯ ಉಪಖಂಡದ ಪ್ರತಿಯೊಂದು ಸಮುದಾಯದಲ್ಲಿ, ಯಾವುದೇ ಉತ್ಸವ ಅಥವಾ ಸಮಾರಂಭವು ಅನ್ನದಾನ ಅಥವಾ ಪ್ರಸಾದದ ವಿನಿಯೋಗವಿಲ್ಲದೆ ಪೂರ್ಣವಾಗುವುದಿಲ್ಲ.
ನಾವು ನಮ್ಮ ಪಿತೃಗಳಿಗೆ, ದೇವದೇವತೆಯರಿಗೆ, ಸಾಧುಸಂತರಿಗೆ, ಹಿರಿಯರಿಗೆ, ಯಾತ್ರಿಕರಿಗೆ ಆಹಾರವನ್ನು ಸಮರ್ಪಿಸುವುದಲ್ಲದೇ ನಮ್ಮ ಬಂಧುಬಳಗದವರಿಗೆ, ಸ್ನೇಹಿತರಿಗೆ, ಮನೆ ಬಾಗಿಲಿಗೆ ಬಂದವರಿಗೆ, ಹಸಿದವರಿಗೆ ಮತ್ತು ಪ್ರಾಣಿಪಕ್ಷಿಗಳಿಗೂ ಸಹ ಅನ್ನವನ್ನು ನೀಡುತ್ತೇವೆ.
ಈ ಸಂಪ್ರದಾಯವು ಎಲ್ಲಡೆ ಇದ್ದ ಕಾರಣ, ಶತಶತಮಾನಗಳ ಕಾಲ ಯೋಗಿಗಳು, ಸಂತರು ಮತ್ತು ಋಷಿಗಳು ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಿ ಉಪಖಂಡದ ಉದ್ದಗಲಕ್ಕೂ ಆಧ್ಯಾತ್ಮಿಕ ವಿಜ್ಞಾನಗಳನ್ನು ಹರಡಲು ಸಾಧ್ಯವಾಯಿತು.
ಇಡೀ ರಾತ್ರಿ ನಡೆಯುವ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ಬರುವ ಲಕ್ಷಾಂತರ ಭಕ್ತರಿಗೆ ಈಶ ಯೋಗ ಕೇಂದ್ರದಲ್ಲಿ ಅನ್ನದಾನವನ್ನು ಮಾಡಲಾಗುತ್ತದೆ. ಅನ್ನದಾನಕ್ಕೆ ಕೊಡುಗೆ ನೀಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.