FILTERS:
SORT BY:
ಜೀವನದಲ್ಲಿ ನೀವು ‘ಏನು’ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು ‘ಹೇಗೆ’ ಮಾಡುತ್ತೀರಿ ಎಂಬುದೇ ಅತ್ಯಂತ ಮುಖ್ಯ.
ಶಿಕ್ಷಣದಲ್ಲಿ ಸ್ಫೂರ್ತಿ ಅಗತ್ಯ, ಬರೀ ಮಾಹಿತಿಯಲ್ಲ. ಸ್ಫೂರ್ತಿಯುತ ಮನುಷ್ಯರು ಮಾತ್ರವೇ ತಮ್ಮ ಬದುಕನ್ನೂ ತಮ್ಮ ಸುತ್ತಲಿನವರ ಬದುಕನ್ನೂ ರೂಪಾಂತರಿಸಬಲ್ಲರು.
ಸಮೃದ್ಧತೆಯು ನಿಮ್ಮ ಬಟ್ಟೆಬರೆ, ಮನೆ, ಅಥವಾ ಕಾರ್ಗೆ ಸಂಬಂಧಿಸಿದುದಲ್ಲ. ನೀವು ಸಂತೋಷ, ಪ್ರೀತಿ ಮತ್ತು ಭಾವಪರವಶತೆಯಿಂದ ತುಂಬಿರುವುದೇ ನಿಜವಾದ ಸಮೃದ್ಧತೆ.
ಉಸಿರು ಮತ್ತು ಹೃದಯದ ಬಡಿತಗಳು ದೇಹಕ್ಕೆ ಅತ್ಯಗತ್ಯವಾದವು. ಧ್ಯಾನಸ್ಥರಾಗಿರುವುದು ಮಾನವ ಚೇತನಕ್ಕೆ ಅತ್ಯಗತ್ಯವಾದುದು.
ಸದೃಢವಾದ ರಾಷ್ಟ್ರವನ್ನು ಕಟ್ಟಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ, ಬಾಧ್ಯತೆ, ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಅದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ.
ಜೀವನವು ಅದರ ಗುರಿಯಲ್ಲಿಲ್ಲ. ಜೀವನ ಇರುವುದು ಅದರ ಪ್ರಕ್ರಿಯೆಯಲ್ಲಿ – ನೀವದನ್ನು ನಿಮ್ಮೊಳಗೆ ಈ ಕ್ಷಣ ಹೇಗೆ ಅನುಭವಿಸುತ್ತಿದ್ದೀರಿ ಎಂಬುದರಲ್ಲಿ.
May your dreams not come true, may your hopes not be fulfilled, because they are based on what you know. Explore Possibilities that have never been touched before.
ಇವತ್ತಿನಿಂದ ಕಾಲೆಳೆದುಕೊಂಡು ನಡೆದಾಡಬೇಡಿ. ನೀವೇನೇ ಮಾಡುತ್ತಿದ್ದರೂ, ನಿಮ್ಮೊಂದಿಗೆ ಅದೇನೇ ಆಗುತ್ತಿದ್ದರೂ, ಜೀವನದಲ್ಲಿ ನಲಿದಾಡುತ್ತಾ ಸಾಗಿ.
ನೀವು ಅರಿವಿನಿಂದ ಕೂಡಿದ್ದರೆ, ನಾನು ಯಾವಾಗಲೂ ಉಪಸ್ಥಿತನಿದ್ದೇನೆ – ನಿಮ್ಮಿಡೀ ಜೀವನ ಮತ್ತು ಅದನ್ನೂ ಮೀರಿ. ದೇಹತ್ಯಾಗ ಮಾಡಿದ ನಂತರವೂ ನಾನು ಉಪಸ್ಥಿತನಿರುತ್ತೇನೆ.
ಹೊಸ ಸನ್ನಿವೇಶಗಳು ಎದುರಾದಾಗ, ಅವು ನಿಮಗೆ ಇಷ್ಟವಿಲ್ಲದಿದ್ದರೂ, ಅವುಗಳ ಬಗ್ಗೆ ಸ್ವೀಕೃತಿಯಿರಲಿ. ನಿಮ್ಮಲ್ಲಿ ಪ್ರತಿರೋಧ ಕಡಿಮೆಯಾದಷ್ಟೂ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತೀರಿ.
ಆನಂದದಲ್ಲಿದ್ದಾಗ, ನೀವು ಯಾರೊಂದಿಗೂ ಘರ್ಷಣೆಯಲ್ಲಿರುವುದಿಲ್ಲ, ಮತ್ತು ಆಗ ನೀವು ಅತ್ಯದ್ಭುತವಾದ ಸಂಗತಿಗಳನ್ನು ಮಾಡುತ್ತೀರಿ.
ಪ್ರೀತಿಯು ನಿಮಗೆ ವಿವೇಚನೆಯನ್ನು ನೀಡುವುದಿಲ್ಲ. ಅದು ನಿಮಗೆ ಸರಿಯಾದ ಉದ್ದೇಶವನ್ನು ನೀಡುತ್ತದೆ ಅಷ್ಟೆ.