Main Centers
International Centers
India
USA
Wisdom
FILTERS:
SORT BY:
ನಿಮ್ಮ ದೇಹ-ಮನಸ್ಸುಗಳು ಆಹಾರ ಮತ್ತು ಯೋಚನೆಗಳ ಶೇಖರಣೆಗಳಷ್ಟೆ. ಅವುಗಳೊಂದಿಗೆ ಗುರುತಿಸಿಕೊಳ್ಳುವುದನ್ನು ನೀವು ನಿಲ್ಲಿಸಿದರೆ, ಅಂತರಂಗದಲ್ಲಿ ನಿಮಗೆ ನಿಶ್ಚಲತೆಯ ಅರಿವಾಗುವುದು. ಧ್ಯಾನಸ್ಥರಾಗಲು ಬೇಕಿರುವುದು ಅದಷ್ಟೆ.
There is nothing else to do here except Live – the only choice you have is to Live either superficially or profoundly.
ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು.
ಸಮಸ್ಯೆ ಇರುವುದು ಜೀವನದಲ್ಲಲ್ಲ. ಸಮಸ್ಯೆಯೇನೆಂದರೆ ನೀವು ನಿಮ್ಮ ಮನಸ್ಸನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಂಡಿಲ್ಲ.
ಮಾನವ ಶರೀರಕ್ಕಿಂತ ಒಳ್ಳೆಯ ರಾಸಾಯನಿಕ ಕಾರ್ಖಾನೆ ಈ ಭೂಮಿಯ ಮೇಲೆ ಮತ್ತೊಂದಿಲ್ಲ. ನೀವು ಉತ್ತಮ ಮ್ಯಾನೇಜರ್ ಆಗಿದ್ದರೆ, ನೀವದರಲ್ಲಿ ಪರಮಾನಂದದ ರಸಾಯನವನ್ನು ಉತ್ಪಾದಿಸಬಹುದು.
ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ಇದು ನಿಮ್ಮ ವಿಜಯದ ದಿನವಾಗಲಿ.
ಪ್ರೀತಿಯು ಇನ್ನೊಬ್ಬರ ಕುರಿತಾದುದಲ್ಲ. ಪ್ರೀತಿಯು ಒಂದು ಕ್ರಿಯೆಯಲ್ಲ. ಪ್ರೀತಿಯು ನೀವು ಇರುವ ರೀತಿಯೇ ಆಗಿದೆ.
ನೀವು ಸಮಯವನ್ನು ನೋಡಿಕೊಂಡಾಗೆಲ್ಲ, ಬದುಕು ಸರಿದು ಹೋಗುತ್ತಿದೆ ಎಂಬುದನ್ನು ನೆನಪಿಸಿಕೊಳ್ಳಿ. ಯಾವುದು ನಿಜವಾಗಿಯೂ ಮುಖ್ಯವೋ ಅದರತ್ತ ಗಮನ ಹರಿಸುವ ಸಮಯ ಬಂದಿದೆ.
ನಮ್ಮ ಬದುಕು ಚುಟುಕಾದದ್ದು. ಪರಸ್ಪರ ಕಿತ್ತಾಡುತ್ತಾ ಅದನ್ನು ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ.
ನಿಮ್ಮ ದೇಹ ಮನಸ್ಸುಗಳನ್ನೂ ಒಳಗೊಂಡಂತೆ ನಿಮ್ಮೆಲ್ಲ ಸಾಧನಗಳನ್ನು ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು.
ದೇವಿಯ ಅನುಗ್ರಹಕ್ಕೆ ಪಾತ್ರರಾದವರು ಸೌಭಾಗ್ಯವಂತರು. ಆಗ ನೀವು ನಿಮ್ಮ ಕಲ್ಪನೆ, ಸಾಮರ್ಥ್ಯಗಳನ್ನು ಎಷ್ಟೋ ಮೀರಿದಂತಹ ಬಾಳನ್ನು ಬಾಳುವಿರಿ.