Main Centers
International Centers
India
USA
FILTERS:
SORT BY:
ನೀವು ಅರಿವಿಲ್ಲದೆಯೇ ಮಾಡುವುದೆಲ್ಲವನ್ನೂ ಪ್ರಜ್ಞಾಪೂರ್ವಕವಾಗಿಯೂ ಮಾಡಬಹುದು. ಮತ್ತದು ಅಗಾಧವಾದ ವ್ಯತ್ಯಾಸವನ್ನು ಉಂಟುಮಾಡುತ್ತದೆ.
ಸೃಷ್ಟಿಯ ಪರಿಪೂರ್ಣತೆಯನ್ನು ಆಲಿಸುವವರಿಗೆ ಎಲ್ಲವೂ ಸಂಗೀತವೇ.
ನಿಮ್ಮ ವ್ಯಕ್ತಿತ್ವವು ನೀವು ನಿಮ್ಮ ಸಾಮಾಜಿಕ ವ್ಯವಹಾರಗಳಿಗಾಗಿ ಸೃಷ್ಟಿಸಿಕೊಂಡ ಒಂದು ಮುಖವಾಡ. ಸಮಸ್ಯೆಯೇನೆಂದರೆ, ಈಗ ಆ ಮುಖವಾಡವು ನಿಮಗೆ ಅಂಟಿಕೊಂಡುಬಿಟ್ಟಿದೆ.
ಬದುಕಿನಲ್ಲಿ ನೀವು ಮಾಡಬಹುದಾದ ‘ಅತ್ಯುತ್ತಮ’ ಸಂಗತಿ ಎಂಬುದಿಲ್ಲ. ನೀವು ಏನು ಮಾಡುತ್ತಿದ್ದೀರೋ ಅದಕ್ಕೆ ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದೇ ಮಹತ್ವಪೂರ್ಣವಾದುದು.
ಅಧ್ಯಾತ್ಮಕ್ಕೂ ನೀವು ವಾಸಿಸುವ ಪರಿಸರಕ್ಕೂ ಯಾವ ಸಂಬಂಧವೂ ಇಲ್ಲ. ಅಧ್ಯಾತ್ಮವು ನೀವು ನಿಮ್ಮೊಳಗೆ ಸೃಷ್ಟಿಸಿಕೊಳ್ಳುವ ಪರಿಸರದ ಕುರಿತಾದದ್ದು.
ಜೀವನವು ಬಹಳ ಚುಟುಕಾದ ಆಟ, ಮತ್ತು ಎಲ್ಲವನ್ನೂ ಮೀರಿಸಿದ ಆಟ. ಅದನ್ನು ಸಂತೋಷದಿಂದ ಆಡಿ, ನ್ಯಾಯಯುತವಾಗಿ ಆಡಿ, ಮತ್ತು ತೀವ್ರವಾಗಿ ಆಡಿ.
ಯಶಸ್ಸು ಎಂದರೆ ಯಾವುದನ್ನೇ ಆದರೂ, ಅದು ಸರಿಯಾಗಿ ಕೆಲಸ ಮಾಡುವ ರೀತಿಯಲ್ಲಿ ಮಾಡುವುದು.
ಈ ಜಗತ್ತಿಗೆ ಏನಾದರೂ ಉಪಯುಕ್ತವಾದುದನ್ನು ಮಾಡುವ ಅವಕಾಶ ಎಲ್ಲರಿಗೂ ಇದೆ. ಇನ್ನೊಬ್ಬರು ಏನು ಮಾಡುತ್ತಿದ್ದಾರೆ ಎಂದು ನೋಡುವ ಬದಲು, ನಿಮ್ಮ ಕೈಯಲ್ಲೇನು ಸಾಧ್ಯ ಎಂದು ನೋಡಿ.
ಬುದ್ಧಿಮತ್ತೆಯು ಸತ್ಯವನ್ನು ಆಳಲು ಬಯಸುತ್ತದೆ. ಭಕ್ತಿಯು ಸತ್ಯವನ್ನು ಅಪ್ಪಿಕೊಳ್ಳುತ್ತದೆ.
ನಿಮ್ಮ ಮಾನಸಿಕ ನಾಟಕ ನಿಮಗೆ ಬೇಕಾದಂತೆ ನಡೆಯಬೇಕು. ಅದರ ನಿರ್ದೇಶಕರು ನೀವೇ.
ಮನುಷ್ಯರಾಗಿರುವುದು ಎಂದರೆ ಪ್ರತಿಯೊಂದು ಜೀವಿಯನ್ನೂ ಕೋಮಲವಾದ ದೃಷ್ಟಿಯಿಂದ ನೋಡುವ ಸಾಮರ್ಥ್ಯವನ್ನು ಹೊಂದಿರುವುದು.