Main Centers
International Centers
India
USA
Wisdom
FILTERS:
SORT BY:
ಗಣೇಶನು ಮೇಧಾಶಕ್ತಿಯ ಸಾಕಾರರೂಪ. ಇಂದು ನಿಮ್ಮ ಮೆದುಳನ್ನು ವೃದ್ಧಿಗೊಳಿಸುವ ದಿನ, ನಿಮ್ಮ ಹೊಟ್ಟೆಯನ್ನಲ್ಲ.
ನಮ್ಮಲ್ಲಿ ಸಾಕಷ್ಟು ಮರಗಳಿದ್ದರೆ, ಸಾಕಷ್ಟು ಮಳೆಯಾಗುತ್ತದೆ, ಮತ್ತು ನಮ್ಮ ನದಿಗಳು ನಿರಂತರ ಹರಿಯುತ್ತವೆ.
ಪ್ರತ್ಯೇಕತಾಭಾವವು ಮರಣ. ಒಳಗೂಡಿಸಿಕೊಳ್ಳುವಿಕೆಯೇ ಜೀವನ.
ನಿಮ್ಮ ಜೀವವನ್ನು ಪೋಷಿಸಲು ಅದೆಷ್ಟು ಜೀವಿಗಳು ತಮ್ಮ ಪ್ರಾಣ ತೆರುತ್ತಿವೆ ಎಂಬುದರ ಅರಿವಿನಲ್ಲಿದ್ದರೆ, ನೀವು ಆಹಾರವನ್ನು ಅಗಾಧವಾದ ಕೃತಜ್ಞತಾಭಾವದೊಂದಿಗೆ ಸೇವಿಸುತ್ತೀರಿ.
ನಿಮಗೆ ಏನೇ ನೀಡಲ್ಪಟ್ಟರೂ ನೀವು ಅದರಿಂದ ಏನೋ ಸುಂದರವಾದದ್ದನ್ನು ಮಾಡಿಕೊಳ್ಳಬಲ್ಲಿರಾದರೆ, ಅದುವೇ ಪ್ರಜ್ಞಾಶಕ್ತಿ.
ನಿಮಗೆ ನಿಜವಾಗಿಯೂ ನನ್ನ ಮತ್ತು ನಿಮ್ಮ ಹುಟ್ಟುಹಬ್ಬವನ್ನು ಆಚರಿಸಬೇಕೆಂದಿದ್ದರೆ, ಯೋಗವನ್ನು ನಿಮ್ಮ ಮತ್ತು ಇತರರ ಬದುಕಿನಲ್ಲಿ ಒಂದು ಜೀವಂತ ಸತ್ಯವಾಗಿಸಿ.
ಮಗುವೊಂದು ನಿಮ್ಮ ಬದುಕನ್ನು ಪ್ರವೇಶಿಸಿದಾಗ, ಅದು ಕಲಿಯುವ ಸಮಯ, ಕಲಿಸುವ ಸಮಯವಲ್ಲ.
ಸೃಷ್ಟಿಯ ಮೂಲವು ಎಲ್ಲೆಲ್ಲೂ ಇದೆ – ನಿಮ್ಮೊಳಗೂ ಹೊರಗೂ.
ನಿಮ್ಮ ದೇಹ-ಮನಸ್ಸುಗಳು ನೀವು ಸಂಗ್ರಹಿಸಿದ ಶೇಖರಣೆಗಳಷ್ಟೆ. ನೀವು ಶೇಖರಿಸಿದ್ದು ‘ನಿಮ್ಮ’ದಾಗಬಹುದು, ಆದರೆ ಅದುವೇ ನೀವಾಗಲು ಸಾಧ್ಯವಿಲ್ಲ.
ನಿಮ್ಮ ಒಳಿತಿಗಿಂತ ಇತರರ ಒಳಿತು ನಿಮಗೆ ಹೆಚ್ಚು ಮುಖ್ಯವಾಗುವುದೇ ಭಕ್ತಿ.
ನಿಮ್ಮ ಗಮನವು ಏಕಾಗ್ರವಾದಾಗ ಜೀವನವು ನಿಮಗೆ ಏನನ್ನೂ ನಿರಾಕರಿಸಲಾಗದು.
ಸಾವು ಎನ್ನುವುದು ಅಜ್ಞಾನಿಗಳ ಕಲ್ಪನೆ. ಇರುವುದು ಜೀವನ, ಜೀವನ, ಮತ್ತು ಜೀವನವಷ್ಟೆ – ಒಂದು ಆಯಾಮದಿಂದ ಇನ್ನೊಂದಕ್ಕೆ ಸಾಗುತ್ತಿರುವ ಜೀವನ.