USA
FILTERS:
SORT BY:
ಬೇರೆಯವರು ಮಾಡುತ್ತಿರುವುದನ್ನು ನೀವು ಮಾಡಬೇಕಿಲ್ಲ. ನೀವು ನಿಮಗೆ ನಿಜವಾಗಿಯೂ ಮುಖ್ಯವೆನಿಸುವುದನ್ನು ಮಾಡಬೇಕು.
ನೀವು ಯಾವುದನ್ನು ಅತ್ಯುನ್ನತವಾದುದೆಂದು ಪರಿಗಣಿಸುತ್ತೀರೋ ಅದಕ್ಕಾಗಿ ಹಂಬಲಿಸಿ. ಈ ಹಂಬಲದಲ್ಲಿ ಜೀವಿಸುವುದೇ ಮುಕ್ತಿ, ಆನಂದಗಳನ್ನು ನೀಡುತ್ತದೆ.
ಅಧ್ಯಾತ್ಮ ಸಾಧನೆಯ ಮೊಟ್ಟಮೊದಲ ಮೂಲಭೂತ ಹೆಜ್ಜೆಯೆಂದರೆ ನೀವು ಎಲ್ಲ ಊಹಾಪೋಹಗಳನ್ನು ತೊರೆದುಬಿಡಬೇಕು.
ಅಧ್ಯಾತ್ಮಕ್ಕೂ ನೀವು ವಾಸಿಸುವ ಪರಿಸರಕ್ಕೂ ಯಾವ ಸಂಬಂಧವೂ ಇಲ್ಲ. ಅಧ್ಯಾತ್ಮವು ನೀವು ನಿಮ್ಮೊಳಗೆ ಸೃಷ್ಟಿಸಿಕೊಳ್ಳುವ ಪರಿಸರದ ಕುರಿತಾದದ್ದು.
ನಿಮ್ಮ ಸಂಬಂಧಗಳು ಇನ್ನೊಬ್ಬರಿಂದ ಸಂತೋಷವನ್ನು ಹಿಂಡುವ ಬದಲು ನಿಮ್ಮ ಸಂತೋಷವನ್ನು ಹಂಚುವ ಬಗ್ಗೆಯಾದಾಗ, ಯಾರೊಂದಿಗೇ ಆದರೂ ನೀವು ಅದ್ಭುತ ಸಂಬಂಧವನ್ನು ಹೊಂದುತ್ತೀರಿ.
ಮುಕ್ತತೆ ಎಂದರೆ ಯಾವುದೇ ಸಿದ್ಧಾಂತಗಳಿಲ್ಲದೇ ಇರುವುದು – ಎಲ್ಲವನ್ನೂ ಅದು ಇದ್ದಂತೆಯೇ ನೋಡುವುದು.
ಶಾಂತಿ ಎಂಬುದು ನಾವು ನಮ್ಮೊಳಗೆ ಹೇಗಿದ್ದೇವೆ ಎಂಬುದರ ಒಂದು ಪರಿಣಾಮವಷ್ಟೆ.
ಬುದ್ಧಿಮತ್ತೆಯು ಸತ್ಯವನ್ನು ಆಳಲು ಬಯಸುತ್ತದೆ. ಭಕ್ತಿಯು ಸತ್ಯವನ್ನು ಅಪ್ಪಿಕೊಳ್ಳುತ್ತದೆ.
ಅಂತರ್ಮುಖರಾಗುವುದು ಒಂದು ಪಯಣವಲ್ಲ. ಕ್ರಮಿಸಲು ಅಲ್ಲಿ ಯಾವುದೇ ಅಂತರವಿಲ್ಲ.
ಜ್ಞಾನೋದಯದ ಬೀಜವು ಪ್ರತಿಯೊಂದು ಜೀವಿಯಲ್ಲಿಯೂ ಇದೆ. ಜ್ಞಾನೋದಯವು ಒಂದು ಸಾಕ್ಷಾತ್ಕಾರ.
ನೀವು ಅರಿವಿಲ್ಲದೆಯೇ ಮಾಡುವುದೆಲ್ಲವನ್ನೂ ಪ್ರಜ್ಞಾಪೂರ್ವಕವಾಗಿಯೂ ಮಾಡಬಹುದು. ಮತ್ತದು ಅಗಾಧವಾದ ವ್ಯತ್ಯಾಸವನ್ನು ಉಂಟುಮಾಡುತ್ತದೆ.
ಸೃಷ್ಟಿಯ ಪರಿಪೂರ್ಣತೆಯನ್ನು ಆಲಿಸುವವರಿಗೆ ಎಲ್ಲವೂ ಸಂಗೀತವೇ.