Main Centers
International Centers
India
USA
Wisdom
FILTERS:
SORT BY:
ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಯನ್ನು ಪ್ರೀತಿಸುವುದೇ ಅತ್ಯಂತ ದೊಡ್ಡ ಸವಾಲು. ಇಲ್ಲಿಲ್ಲದೇ ಇರುವವರನ್ನು ಪ್ರೀತಿಸುವುದು ಯಾವಾಗಲೂ ಸುಲಭವೇ.
ದೈಹಿಕ ನೋವಿನ ಬಗ್ಗೆ ನಿಮಗೆ ಆಯ್ಕೆಯಿಲ್ಲ, ಆದರೆ ನರಳಾಡದೇ ಇರುವ ಆಯ್ಕೆಯನ್ನು ನೀವು ಯಾವಾಗಲೂ ಮಾಡಬಹುದು.
ಮನುಷ್ಯರು ತಮ್ಮ ಹುಚ್ಚನ್ನು ಮರೆಮಾಚಲು ಮನರಂಜನೆಯ ಮೊರೆ ಹೋಗುತ್ತಿದ್ದಾರೆ. ಅವರು ಸಂಪೂರ್ಣವಾಗಿ ಸ್ವಸ್ಥಚಿತ್ತರಾಗಿದ್ದರೆ, ಸುಮ್ಮನೆ ಕುಳಿತು ಹೂವು ಅರಳುವುದನ್ನು ನೋಡಬಲ್ಲವರಾಗಿರುತ್ತಿದ್ದರು.
ಏನನ್ನೋ ಅರಸಲು ನೋಡಬೇಡಿ. ಬದುಕಿನ ಅರ್ಥವನ್ನು ಅರಸಲು ನೋಡಬೇಡಿ. ದೇವರನ್ನು ಅರಸಲು ನೋಡಬೇಡಿ. ಸುಮ್ಮನೆ ‘ನೋಡಿ’ – ಅಷ್ಟೆ.
ಅಸ್ತಿತ್ವದಲ್ಲಿ ಆಧ್ಯಾತ್ಮಿಕವಲ್ಲದೇ ಇರುವ ಏನೊಂದೂ ಇಲ್ಲ. ಎಲ್ಲವೂ ಆಧ್ಯಾತ್ಮಿಕವಾದದ್ದೇ, ಆದರೆ ಸಾಕ್ಷಾತ್ಕರಿಸಲ್ಪಟ್ಟಿಲ್ಲ ಅಷ್ಟೆ.
ಏಕಕಾಲಕ್ಕೆ ನಿಚ್ಚಳ ತೀವ್ರತೆ ಮತ್ತು ವಿಶ್ರಾಂತಿಯಲ್ಲಿರುವುದು – ಇದುವೇ ಯೋಗದ ತಳಹದಿ.
ಎಲ್ಲ ಊಹಾಪೋಹಗಳನ್ನು ಬಿಟ್ಟುಬಿಡುವುದೇ ಅಧ್ಯಾತ್ಮದ ತಳಹದಿ: ‘ನನಗೆ ಗೊತ್ತಿರುವುದಷ್ಟೆ ನನಗೆ ಗೊತ್ತಿದೆ. ನನಗೆ ಗೊತ್ತಿಲ್ಲದ್ದು ನನಗೆ ಗೊತ್ತಿಲ್ಲ.’
ಜಗತ್ತಿನಲ್ಲಿ ಇಂದು ಸುಳ್ಳೇ ಪ್ರಧಾನವಾಗಿ ಹೋಗಿದೆ ಮತ್ತು ಸತ್ಯವು ಗೌಣವಾಗಿಬಿಟ್ಟಿದೆ. ಇದನ್ನು ಅದಲುಬದಲಾಗಿಸುವ ಸಮಯ ಬಂದಿದೆ.
ಎಲ್ಲದಕ್ಕೂ ಪರಿಹಾರ – ಅದು ಇಲ್ಲಿ ಚೆನ್ನಾಗಿ ಬಾಳುವ ಬಗ್ಗೆಯಾಗಲಿ ಅಥವಾ ಈ ಬಾಳನ್ನು ಮೀರಿದ ಮುಕ್ತಿಯನ್ನು ಹೊಂದುವುದಾಗಲಿ – ನಿಮ್ಮ ಒಳಗಿದೆ.
ನೀವು ಸಂಪಾದನೆಯಲ್ಲಿ ಎಷ್ಟು ಸಮಯ ಕಳೆಯುತ್ತಿದ್ದೀರಿ, ಮತ್ತು ಸೃಜನಾತ್ಮಕ ಅಂಶಗಳಲ್ಲಿ ಎಷ್ಟು ಸಮಯ ಕಳೆಯುತ್ತಿದ್ದೀರಿ ಎಂಬುದನ್ನು ಗಮನಿಸಿ. ಸಮಯವು ಹಣವಲ್ಲ. ಸಮಯವು ಜೀವನ.
ನೀವು ಪರ್ಫೆಕ್ಟ್ ಆಗಬೇಕಾಗಿಲ್ಲ. ಮುಖ್ಯವಾದ ವಿಷಯವೆಂದರೆ ನೀವು ನಿರಂತರವಾಗಿ ಬೆಳೆಯಲು ಪ್ರಯತ್ನಿಸುತ್ತಿರಬೇಕು.
ನಿಮ್ಮ ಸಿಹಿಯ ಲಾಲಸೆಯೊಂದಿಗೆ ಹೋರಾಡಬೇಡಿ. ನೀವೇ ಸ್ವತಃ ಸವಿಯಿಂದ ತುಂಬಿದರೆ, ಸಿಹಿತಿನಿಸುಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ.