ಇನ್ನರ್ ಇಂಜಿನಿಯರಿಂಗ್

 

ಇನ್ನರ್ ಇಂಜಿನಿಯರಿಂಗ್

ಪಕ್ಷಿನೋಟ
 
ಇನ್ನರ್ ಇಂಜಿನಿಯರಿಂಗ್
seperator
 
ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ಒಂದು 7-ಸೆಷನ್ಗಳನ್ನೊಳಗೊಂಡ ಅಂತರ್ಜಾಲ ಕೋರ್ಸ್ ಆಗಿದ್ದು, ನಿಮ್ಮ ಜೀವನವನ್ನು ನಿಮಗೆ ಬೇಕಾದಂತೆ ರೂಪಿಸಿಕೊಳ್ಳಲು ನಿಮ್ಮನ್ನು ಸಶಕ್ತಗೊಳಿಸುವ ಉಪಕರಣಗಳು ಮತ್ತು ಪರಿಹಾರಗಳನ್ನು ನೀಡುತ್ತದೆ. ಈ ಕೋರ್ಸ್ ಯೋಗವಿಜ್ಞಾನದ ಸಾರಭೂತ ಜ್ಞಾನದ ವಿಧಾನಗಳನ್ನು ಬಳಸಿಕೊಂಡು ಜೀವನದ ಮೂಲಭೂತ ತತ್ವಗಳನ್ನು ಬೌದ್ಧಿಕವಾಗಿ ಶೋಧಿಸುವ ಅವಕಾಶವನ್ನು ನೀಡುತ್ತದೆ. ಅದು ನಿಮ್ಮ ಶರೀರ, ಮನಸ್ಸು, ಭಾವನೆಗಳು ಮತ್ತು ಒಳಗಿನ ಮೂಲಭೂತ ಪ್ರಾಣಶಕ್ತಿಯನ್ನು ನಿರ್ವಹಿಸುವ ಪ್ರಾಯೋಗಿಕ ತಿಳುವಳಿಕೆಯನ್ನು ನೀಡುತ್ತದೆ.
ಪ್ರತಿಯೊಂದು ಸೆಷನ್ ಸುಮಾರು 90 ನಿಮಿಷಗಳ ಅವಧಿಯದ್ದಾಗಿದ್ದು, ಸದ್ಗುರುಗಳ ಪ್ರವಚನಗಳು ಮತ್ತು ಮಾರ್ಗದರ್ಶಿತ ಧ್ಯಾನಗಳ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಒಳಗೊಂಡಿರುತ್ತದೆ.

ಈ ಕೋರ್ಸ್ನ ಗರಿಷ್ಠ ಲಾಭವನ್ನು ಪಡೆಯಲು ಶಿಬಿರಾರ್ಥಿಯು ನೇರ ತರಗತಿಗಳಲ್ಲಿರುವಂತೆ, ಜಾಗೃತನಾಗಿದ್ದು, ಏಕಾಗ್ರಚಿತ್ತವನ್ನು ಹೊಂದಿರುವುದು ಅಗತ್ಯ. ನೀವು ತರಗತಿಯ ವಿಡಿಯೋವನ್ನು ಬೇಕಾದಾಗ ಪ್ಲೇ ಮಾಡಬಹುದು ಮತ್ತು ನಿಲ್ಲಿಸಬಹುದು, ಅಥವಾ 30 ಸೆಕೆಂಡ್ಗಳವರೆಗಷ್ಟೆ ರಿವೈಂಡ್ ಮಾಡಿ ನೋಡಬಹುದು. ಅದು ಬಿಟ್ಟರೆ ಕೋರ್ಸ್ನ ತರಗತಿಗಳನ್ನು ರಿವೈಂಡ್ ಅಥವಾ ಫಾರ್ವರ್ಡ್ ಮಾಡುವ ಆಯ್ಕೆಗಳಿರುವುದಿಲ್ಲ.

  • 90 ನಿಮಿಷಗಳ ಅವಧಿಯ ಅತ್ಯುನ್ನತ ಗುಣಮಟ್ಟದ ಏಳು ವಿಡಿಯೋಗಳು
  • ಹೆಚ್ಚುವರಿ ಸಲಹೆಗಳು ಮತ್ತು ಸಾಧನಕ್ರಮಗಳನ್ನು ಹೊಂದಿದ ಉಚಿತ ಅಂತರ್ಜಾಲ ವಾರ್ತಾಪತ್ರ
  • ಶಿಬಿರದ ನಂತರ ಸಾಧನೆಗೆ ಉಚಿತ ಬೆಂಬಲ
  • ಸದ್ಗುರುಗಳ ಪ್ರವಚನಗಳ "ಜ್ಞಾನನಿಕ್ಷೇಪ" ವಿಡಿಯೋಗುಚ್ಛದ ಬೋನಸ್
  • ಕೋರ್ಸ್ ಶುಲ್ಕ : ರೂ.3500
ಪಠ್ಯರಚನೆ
 
ಪಠ್ಯರಚನೆ
seperator
 
ಸಂಶೋಧನಾ ವರದಿಗಳು
 
ಸಂಶೋಧನಾ ವರದಿಗಳು
seperator
 
ಇನ್ನರ್ ಇಂಜಿನಿಯರಿಂಗ್ ಶಿಬಿರಾರ್ಥಿಗಳ ಸಂಶೋಧನಾ ಫಲಿತಾಂಶಗಳು
%%
92%
ಸುಧಾರಿತ ಭಾವನಾತ್ಮಕ ಸಂತುಲನೆ
%%
94%
ಆಳವಾದ ಆಂತರಿಕ ಶಾಂತಿಯ ಅನುಭವ
%%
98%
ಮಾನಸಿಕ ಸ್ಪಷ್ಟತೆಯ ಸುಧಾರಣೆ
ಸಂಪರ್ಕ ವಿಳಾಸ
 
ಸಂಪರ್ಕ ವಿಳಾಸ
seperator
 

Y&M IEO Contact Us Top kn

ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ನೋಂದಣಿ ಹಾಗೂ ಇನ್ನರ್ ಇಂಜಿನಿಯರಿಂಗ್ ಕಂಪ್ಲೀಶನ್ ಕಾರ್ಯಕ್ರಮ (ಶಾಂಭವಿ ಮಹಾಮುದ್ರ) ದ ಕುರಿತಾಗಿ ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ.

ಗ್ರಾಹಕ ಸೇವೆ ದೂರವಾಣಿ

ಭಾರತ : +91-890-381-5678

 

ಸಾಮಾನ್ಯ ಪ್ರಶ್ನೆಗಳು:

indiasupport@innerengineering.com

ಶಿಕ್ಷಕರಿಂದ ನಡೆಸಿಕೊಡಲ್ಪಡುವ 4 ದಿನಗಳ ಸಂಪೂರ್ಣ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮಕ್ಕೆ ನಿಮ್ಮ ಹತ್ತಿರದ ನಗರವನ್ನು ಸಂಪರ್ಕಿಸಿ.

ಸಂದೇಶವನ್ನು ಬಿಡಿ

ಪ್ರಶ್ನೋತ್ತರಗಳು
 
ಪ್ರಶ್ನೋತ್ತರಗಳು
seperator
 

ಕಾರ್ಯಕ್ರಮವನ್ನು ಪ್ರಸಾರ ಮಾಡುವ ಸಲುವಾಗಿ, ರೀವೈಂಡಿಂಗ್, ಫಾಸ್ಟ್ ಫಾರ್ವರ್ಡಿಂಗ್ ಅಥವಾ ಮತ್ತೆ ಮತ್ತೆ ನೋಡುವ ಸೌಲಭ್ಯವನ್ನು ನೀಡಲಾಗಿಲ್ಲ. ತರಗತಿಯಲ್ಲಿ 30 ಸೆಕೆಂಡ್ ರೀವೈಂಡಿಂಗ್ ಸೌಲಭ್ಯವಿರುತ್ತದೆ, ಅದರಲ್ಲಿ ನೀವು ಗಮನಿಸದೇ ಬಿಟ್ಟ ಅಥವಾ ಕೇಳದೇ ಬಿಟ್ಟ ಸಂಗತಿಗಳನ್ನು ಮತ್ತೆ ನೋಡಬಹುದು. ಒಂದು ತರಗತಿಯನ್ನು ಮುಗಿಸಿದ ನಂತರ, ನಿಮ್ಮನ್ನು ವ್ಯವಸ್ಥಿತವಾಗಿ ಮುಂದಿನ ತರಗತಿಗೆ ಕರೆದೊಯ್ಯಲಾಗುವುದು. ಆದ್ದರಿಂದ, ನೀವು ಪ್ರತಿಯೊಂದು ತರಗತಿಯ ಅವಧಿಗೆ ಅಗತ್ಯವಿರುವ ಸಮಯವನ್ನು ಯಾವುದೇ ಅಡೆತಡೆಗಳಿಲ್ಲದೇ ಮೀಸಲಿಡುವುದು ಅತ್ಯಂತ ಅವಶ್ಯಕ.

ಎಲ್ಲಾ ಏಳು ತರಗತಿಗಳನ್ನು ಒಂದೇ ಅವಧಿಯಲ್ಲಿ ಮುಗಿಸಬೇಕಾಗಿಲ್ಲ, ಆದರೂ ತರಗತಿಗಳ ನಡುವೆ ಹೆಚ್ಚಿನ ಕಾಲಾವಕಾಶವನ್ನು ತೆಗೆದುಕೊಳ್ಳುವುದೂ ಒಳ್ಳೆಯದಲ್ಲ. ನೀವು ನಿಮ್ಮ ಸಮಯವನ್ನು ದಿನನಿತ್ಯದ ಚಟುವಟಿಕೆಗಳ ಆಧಾರದ ಮೇಲೆ ನಿರ್ವಹಿಸಬಹುದು, ಆದರೆ ನೋಂದಣಿ ಮಾಡಿಕೊಂಡ ಒಂದು ತಿಂಗಳ ಒಳಗಾಗಿ ನೀವು ಕಾರ್ಯಕ್ರಮವನ್ನು ಮುಗಿಸಬೇಕು.

ಒಮ್ಮೆ ನೀವು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದೀರಿ ಎಂದರೆ, ನಾವದನ್ನು ಪೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬದ್ಧತೆ ಎಂದು ಭಾವಿಸುತ್ತೇವೆ. ಈ ಕಾರ್ಯಕ್ರಮವು ಕೇವಲ ವಿಡಿಯೋಗಳ ಸರಣಿಯಷ್ಟೇ ಅಲ್ಲದೇ ಇನ್ನೂ ಹೆಚ್ಚಿನದಾಗಿರುತ್ತದೆ, ಅದು ಒಂದು ಸಂಪೂರ್ಣ ಪ್ರಕ್ರಿಯೆಯಾಗಿದೆ. ನೀವು ಈ ಪ್ರಕ್ರಿಯೆಯ ಮೂಲಕ ಪೂರ್ತಿಯಾಗಿ ಸಾಗಿದಾಗ ಮಾತ್ರ ಅದು ನಿಮಗೆ ಏನು ಮಾಡಬಲ್ಲದೆಂಬುದರ ಅರಿವು ನಿಮಗಾಗುತ್ತದೆ. ನಿಮ್ಮ ಜೀವನದಲ್ಲಿ ಅದರ ಪರಿವರ್ತನಾತ್ಮಕ ಸಾಧ್ಯತೆಗಳನ್ನು ಅನುಭವಿಸಲು ನೀವು ಇಡೀ ಕಾರ್ಯಕ್ರಮವನ್ನು ಪೂರ್ಣಗೊಳಿಸುವಂತೆ ನಾವು ಪ್ರೋತ್ಸಾಹಿಸುತ್ತೇವೆ. ಕಾರ್ಯಕ್ರಮವನ್ನು ನಿಲ್ಲಿಸಿದರೆ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.

ಯೂಟ್ಯೂಬ್ ವಿಡಿಯೋಗಳು ವಿವಿಧ ವಿಷಯಗಳ ಕುರಿತಾದ ದೃಷ್ಟಿಕೋನಗಳಾಗಿವೆ ಮತ್ತು ಅವು ಯಾವುದೇ ರೀತಿಯ ಕಾರ್ಯಕ್ರಮವಲ್ಲ ಅಥವಾ ವಿಧಾನವಲ್ಲ. ಸದ್ಗುರುಗಳು ವಿನ್ಯಾಸಗೊಳಿಸಿರುವ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವು ನಿಮ್ಮ ಜೀವನವನ್ನು ನೀವು ರೂಪಿಸಿಕೊಳ್ಳಲು ನಿಮಗೆ ಸಹಾಯಮಾಡುವ ಸಾಧನಗಳನ್ನು ನೀಡುತ್ತದೆ. ಈ ಕಾರ್ಯಕ್ರಮವು ಯೋಗವಿಜ್ಞಾನದ ಆಳವಾದ ಜ್ಞಾನದಿಂದ ರೂಪಿಸಿದ ವಿಧಾನಗಳನ್ನು ಬಳಸಿಕೊಂಡು ಜೀವನದ ಮೂಲಭೂತ ಅಂಶಗಳನ್ನು ಪರಿಶೋಧಿಸುವ ಅವಕಾಶವನ್ನು ನೀಡುತ್ತದೆ. ಅದು ನಿಮಗೆ ನಿಮ್ಮ ಶರೀರ, ಮನಸ್ಸು, ಭಾವನೆಗಳು ಮತ್ತು ನಿಮ್ಮೊಳಗಿನ ಮೂಲಭೂತ ಪ್ರಾಣಶಕ್ತಿಯನ್ನು ನಿರ್ವಹಿಸಲು ಬೇಕಾದ ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ.

  • 512 ಕೆಬಿಪಿಎಸ್ ಡೌನ್ಲೋಡ್ ವೇಗ ಇರುವ ಒಂದು ಬ್ರಾಡ್ ಬ್ಯಾಂಡ್ ಸಂಪರ್ಕ (ಡಿಸ್ಎಲ್, ಕೇಬಲ್ ಅಥವಾ ಸ್ಯಾಟಲೈಟ್) ಇರಬೇಕು. ನೀವು ನಿಮ್ಮ ಇಂಟರ್ನೆಟ್ ಸಂಪರ್ಕದ ವೇಗವನ್ನು bandwidthplace.com ನಲ್ಲಿ ಪರೀಕ್ಷಿಸಬಹುದು.
  • ನೀವು ಅಡೋಬ್ ಫ್ಲಾಶ್ ಪ್ಲೇಯರ್ ಅನ್ನು http://www.adobe.com/go/getflashplayer ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
  • Supported Browser: Internet Explorer, Firefox, Google Chrome (recommended) or Safari
  • ಕೋರ್ಸ್ಗೆ ಅಗತ್ಯವಾದ ತಂತ್ರಾಂಶಗಳೆಲ್ಲವೂ ಬಿಲ್ಟ್ ಇನ್ ಆಗಿರುವುದರಿಂದ ಗೂಗಲ್ ಕ್ರೋಮ್ ಬ್ರೌಸರ್ ಅನ್ನು ನಾವು ಶಿಫಾರಸು ಮಾಡುತ್ತೇವೆ.

ಉತ್ತಮ ಅನುಭವಕ್ಕಾಗಿ, ಅಡೋಬ್ ಫ್ಲಾಶ್ ಪ್ಲೇಯರ್ನ ಇತ್ತೀಚಿನ ಅವತರಣಿಕೆಯನ್ನು http://www.adobe.com/go/getflashplayer ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

ಎಲ್ಲಾ ತರಗತಿಗಳನ್ನೂ ವೈರ್ ಅಥವಾ ವೈರ್ಲೆಸ್ ಸಂಪರ್ಕ ಎರಡರಲ್ಲೂ ನೋಡಬಹುದು. ಉತ್ತಮ ವಿಡಿಯೋ ಗುಣಮಟ್ಟಕ್ಕಾಗಿ, ತರಗತಿಗಳನ್ನು ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ ನೋಡುವುದು ಉತ್ತಮ.

Testimonials