ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್
 
ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್
ಸ್ವಯಂ ಸದ್ಗುರುಗಳಿಂದಲೇ ಕಲಿಯುವ ಒಂದು ಸದವಕಾಶ. ನಿಮ್ಮ ಜೀವನದಲ್ಲಿ ಸ್ಪಷ್ಟತೆ, ಆರೋಗ್ಯ ಮತ್ತು ಸಂತೋಷಗಳನ್ನು ತರುವ 21- ನಿಮಿಷದ ಅತ್ಯಂತ ಶಕ್ತಿಯುತ ಸಾಧನ !
ಇನ್ನರ್ ಇಂಜಿನಿಯರಿಂಗ್ ಕಂಪ್ಲೀಷನ್ ಕಾರ್ಯಕ್ರಮ ಎಂದರೇನು?
Border Image

ಇದೇ ಡಿಸೆಂಬರ್ ತಿಂಗಳಲ್ಲಿ ಸದ್ಗುರು ಅವರು ಬೆಂಗಳೂರಿನಲ್ಲಿ ಇನ್ನರ್ ಇಂಜಿನಿಯರಿಂಗ್ ಕಂಪ್ಲೀಷನ್ (ಮುಕ್ತಾಯ) ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ನಮ್ಮ ಜೀವನವನ್ನು ಮಾರ್ಪಡಿಸುವಂತಹ ಶಾಂಭವಿ ಮಹಾಮುದ್ರ ಕ್ರಿಯೆಯನ್ನು ಸದ್ಗುರುಗಳಿಂದಲೇ ಕಲಿಯಲು ವಿಶಿಷ್ಟವಾದ ಸದವಕಾಶ. 15 ವರ್ಷ ಹಾಗು ಹೆಚ್ಚಿನ ವಯೋಮಾನದ ಯಾರಾದರೂ ಭಾಗವಹಿಸಬಹುದು.

 

ಸದ್ಗುರುಗಳೊಂದಿಗೆ ಇನ್ನರ್ ಇಂಜಿನಿಯರಿಂಗ್ ಮುಕ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಲು "ಇನ್ನರ್ ಇಂಜಿನಿಯರಿಂಗ್ ಆನ್ ಲೈನ್" ಸರಣಿಯನ್ನು ಕಡ್ಡಾಯವಾಗಿ ಮುಗಿಸಿರಬೇಕು (ಪ್ಯಾಕೇಜ್ ನ ಒಂದು ಭಾಗವಾಗಿದೆ),  ಇದು ಏಳು ಆನ್ ಲೈನ್ ಸೆಷನ್ (ತರಗತಿ)ಗಳ ಸರಣಿಯಾಗಿದೆ.

 

 

ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್ ಎಂದರೇನು?

 

ನಿಮಗೆ ಹೇಗೆ ಬೇಕೋ ಹಾಗೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು,  ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್ ಸಾಧನಗಳನ್ನು ಮತ್ತು ಪರಿಹಾರಗಳನ್ನು ಒದಗಿಸುತ್ತದೆ. ಜೀವನದ ಮೂಲವನ್ನು ಬೌದ್ದಿಕವಾಗಿ ಯೋಗವಿಜ್ಞಾನದ ವಿಧಾನಗಳಿಂದ ಅನ್ವೇಷಿಸಲು ನಿಮಗೆ ಈ ಕೋರ್ಸ್ ಅವಕಾಶ ಮಾಡಿಕೊಡುತ್ತದೆ. ನಿಮ್ಮ ದೇಹ, ಮನಸ್ಸು, ಹಾಗು ನಿಮ್ಮ ಆಂತರ್ಯದ ಮೂಲಭೂತ ಪ್ರಾಣಶಕ್ತಿಯನ್ನು ಪ್ರಾಯೋಗಿಕ ಜ್ಞಾನದಿಂದ ನಿಭಾಯಿಸಲು ಈ ಕೋರ್ಸ್ ಸಹಾಯ ಮಾಡುತ್ತದೆ. ನಿಮಗೆ ಬೇಕಾದ ವೇಗದಲ್ಲಿ ನಿಮಗೆ ಅನುಕೂಲಕರ ಸ್ಥಳದಲ್ಲಿ 7 ಭಾಗಗಳ ಈ ಕೋರ್ಸನ್ನು ಪೂರ್ಣಗೊಳಿಸಬಹುದು.

ಶಾಂಭವಿ ಮಹಾಮುದ್ರ ಕ್ರಿಯಾ
ಸರಳವಾದ ಆಸನದಲ್ಲಿ ಕೂತು ಮಾಡಬಹುದಾದಂತಹ ಶಾಂಭವಿ ಮಹಾಮುದ್ರಾ ಕ್ರಿಯಾ ನಿಮ್ಮ ಜೀವನದ ತೀವ್ರತರ ಪ್ರಾಣಶಕ್ತಿಯನ್ನು ಬಳಸಿ ಜೀವಂತಗೊಳಿಸಲು ನಿಮಗೆ ಅವಕಾಶ ಕೊಡುತ್ತದೆ. ಇದರಿಂದ ನೀವು ಆಳವಾದ ಧ್ಯಾನದ ಸ್ಥಿತಿಯನ್ನು ತಲುಪಲು ಸಾಧ್ಯವಾಗುತ್ತದೆ. ಈ 21 ನಿಮಿಷದ ಅಭ್ಯಾಸಕ್ಕೆ ಯಾವುದೇ ದೈಹಿಕ ಅರ್ಹತೆ ಅಥವಾ ಯೋಗ ಮತ್ತು ಧ್ಯಾನದ ಬಗ್ಗೆ ಪರಿಚಯ ಇರಬೇಕೆಂದಿಲ್ಲ. ಯಾವುದೇ ಜೀವನ ಶೈಲಿಯಲ್ಲಿ ಈ ಅಭ್ಯಾಸವನ್ನು ಅಳವಡಿಸಿಕೊಳ್ಳಬಹುದು. ಸರಳ ಪ್ರಾರಂಭಿಕ ಯೋಗಾಸನಗಳ ಜೊತೆ ಹೇಳಿಕೊಡಲಾಗುವ ಈ ಸರಳ ಆದರೆ ಪ್ರಬಲ ಸಾಧನ ನಿಮ್ಮ ಅಂತರಂಗ ಹಾಗು ಬಹಿರಂಗವನ್ನು ಆರೋಗ್ಯಕರವಾಗಿ ಮಾರ್ಪಡಿಸುತ್ತದೆ.
ಪ್ರಯೋಜನಗಳು
Border Image
 

ಸದ್ಗುರು ಅವರಿಂದ ರೂಪಿತವಾಗಿರುವ ಇನ್ನರ್ ಇಂಜಿನಿಯರಿಂಗ್ ನಾನಾ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಕಾರ್ಯಕ್ರಮ ಮತ್ತು ಅಭ್ಯಾಸಗಳು:

icon
 

ದಿನಪೂರ್ತಿ ಚುರುಕುತನ ಮತ್ತು ಚೈತನ್ಯವನ್ನು ತಂದುಕೊಡುವುದು

icon
ಪರಸ್ಪರ ಸಂವಹನ ಮತ್ತು ಸಂಬಂಧಗಳನ್ನು ಸುಧಾರಿಸುವುದು
icon
 

ಮಾನಸಿಕ ಸ್ಪಷ್ಟತೆ , ಭಾವನಾತ್ಮಕ ಸಂತುಲನ  ಮತ್ತು ಉತ್ಪಾದಕತೆ ಹೆಚ್ಚುವುದು.

icon
ಒತ್ತಡ, ಭಯ, ಮತ್ತು ಆತಂಕವನ್ನು ನಿವಾರಿಸುವುದು
icon
ಅಲರ್ಜಿಗಳು, ನಿದ್ದೆ ಬಾರದಿರುವುದು, ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಬೊಜ್ಜು, ಬೆನ್ನು ನೋವು, ಇತ್ಯಾದಿಗಳಿಂದ ಬಿಡುಗಡೆ ಸಿಗುವುದು
icon
 

ಸಂತೋಷ, ನೆಮ್ಮದಿ, ಹಾಗು ಸಂತೃಪ್ತಿಯನ್ನು ಹೊಂದಬಹುದು

ಪೂರ್ವಾಗತ್ಯಗಳು
Border Image
 • ಕಾರ್ಯಕ್ರಮದ ಪೂರ್ವಾಗತ್ಯವಾಗಿ ಏಳು ಸೆಷನ್ ಗಳ ಸರಣಿಯನ್ನು ಮುಗಿಸಿರಬೇಕು (ಪ್ಯಾಕೇಜ್ ನಲ್ಲಿ ಲಭ್ಯವಿದೆ)
 • ಭಾಗವಹಿಸುವವರು ಕನಿಷ್ಟ 15 ವರ್ಷದವರಾಗಿರಬೇಕು.

ಕಾರ್ಯಕ್ರಮದ ವೇಳಾಪಟ್ಟಿ

 • ಶನಿವಾರ, ಡಿಸೆಂಬರ್ 15 ಮಧ್ಯಾಹ್ನ 1ರಿಂದ ಸಂಜೆ 7 ರವರೆಗೆ
 • ಭಾನುವಾರ ಡಿಸೆಂಬರ್, 16, ಬೆಳಗ್ಗೆ 7 ರಿಂದ - ರಾತ್ರಿ 8 ರ ವರೆಗೆ
   

  ಎರಡೂ ದಿನ ಹಾಜರಿ ಕಡ್ಡಾಯ

  15 ವರ್ಷ ಹಾಗೂ ಮೇಲ್ಪಟ್ಟ ಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಸಂಪರ್ಕಿಸಿ :

 

ಫೋನ್-080-3394 8024

ಇ-ಮೇಲ್:

sadhguru-in-bengaluru@ishayoga.org

ಕಾರ್ಯಕ್ರಮದ ಸ್ಥಳ

ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್, ೧೦ ನೇ ಮೈಲಿ, ತುಮಕೂರು ರಸ್ತೆ, ಬೆಂಗಳೂರು

 

 

ಕಾರ್ಯಕ್ರಮದ ಆಸನ ವ್ಯವಸ್ಥೆ

Border Image
ಇನ್ನರ್ ಇಂಜಿನಿಯರಿಂಗ್ ಕಾಂಬೋ

(IE ಆನ್ ಲೈನ್ + IE ಮುಕ್ತಾಯ ಕಾರ್ಯಕ್ರಮ)

ಇನ್ನರ್ ಇಂಜಿನಿಯರಿಂಗ್ ಮುಕ್ತಾಯ

(ನೋಂದಾಯಿಸಿರುವ /ಈಗಾಗಲೇ IE ಆನ್ ಲೈನ್ ಮುಗಿಸಿರುವವರಿಗೆ)

 

ವೇದಿಕೆ
ಆಸನ ವಲಯಗಳು
ದರಗಳು
ಕೈಲಾಶ್
Rs. 30,000
ಮಾನಸ ಸರೋವರ
Rs. 17,000
ಯಮುನ
Rs. 10,000
ನರ್ಮದ
Rs. 5,500
ವಿದ್ಯಾರ್ಥಿಗಳ ಅವಕಾಶ
(15 ರಿಂದ - 24 ವ‍ರ್ಷದವರೆಗೆ)
Rs. 2,500

** ಸಾಂಸ್ಥಿಕ (ಕಾರ್ಪೊರೇಟ್) ರಿಯಾಯಿತಿ ಲಭ್ಯವಿದೆ- ಸಂಪರ್ಕಿಸಿ- 8095893111

ಇ-ಮೇಲ್:wellnessatwork@ishafoundation.org

 

ಸೂಚನೆ:
ಕಾರ್ಯಕ್ರಮಕ್ಕೆ ಬರುವ ಮುನ್ನ , ನೀವು ಏಳು ಸೆಷನ್ ಗಳ ಸರಣಿಯಾದ ಇನ್ನರ್ ಇಂಜಿನಿಯರಿಂಗ್ ಆನ್-ಲೈನ್ ತರಗತಿಗಳನ್ನು ಮುಗಿಸಿರಲೇಬೆಕು. ಇದು ಪೂರ್ವಾಗತ್ಯವಾಗಿದೆ.
 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

seperator
 

ಇನ್ನರ್ ಇಂಜಿನಿಯರಿಂಗ್ ಆನ್-ಲೈನ್ 7 ತರಗತಿಗಳ ಒಂದು ಸರಣಿ. ಪ್ರತಿಯೊಂದು ಸೆಷನ್ ಅಥವಾ ತರಗತಿಯು 60-90 ನಿಮಿಷದ

ಸ್ಟ್ರೀಮ್ ಮಾಡಿದ ವೀಡಿಯೊ ಆಗಿರುತ್ತದೆ. ಪ್ರತಿ ತರಗತಿಯ ಅಂತ್ಯದಲ್ಲಿ, ಒಂದು ಮಾರ್ಗದರ್ಶಿತ ಧ್ಯಾನವನ್ನು ನೀಡಲಾಗಿದೆ ಮತ್ತು 10-15 ನಿಮಿ‍ಷಗಳನ್ನು, ನಿಗದಿತ ಅರಿವಿನ ಅಭ್ಯಾಸಗಳನ್ನು ಪೂರ್ತಿಮಾಡಲು ಮೀಸಲಿಡಲಾಗಿದೆ. ಈ ಕೋರ್ಸ್-ಅನ್ನು  ಹಂತದಿಂದ ಹಂತಕ್ಕೆ ಮುನ್ನಡೆಯುವ ಪ್ರಕ್ರಿಯೆಯಾಗಿ ರೂಪಿಸಲಾಗಿರುವುದರಿಂದ ಪ್ರತಿಯೊಂದು ಸೆಷನ್ ಅನ್ನು ನೀವು ಸಂಪೂರ್ಣವಾಗಿ ವೀಕ್ಷಿಸಬೇಕು.

ಪ್ರತ್ಯಕ್ಷ ತರಗತಿಯನ್ನು ಅನುಕರಿಸುವ ಸಲುವಾಗಿ, ರೀವೈಂಡ್, ಫಾಸ್ಟ್ ಫಾರ್ವರ್ಡ್, ಅಥವಾ ತರಗತಿಗಳನ್ನು ಮತ್ತೊಮ್ಮೆ ನೋಡುವ ಆಯ್ಕೆಗಳನ್ನು ನೀಡಲಾಗಿಲ್ಲ. ಒಂದು ತರಗತಿಯಲ್ಲಿ ನೀವು ಏನನ್ನಾದರೂ ಕೇಳುವುದನ್ನೋ ಅಥವಾ ನೋಡುವುದನ್ನೋ ಅಕಸ್ಮಾತ್ತಾಗಿ ತಪ್ಪಿಸಿದಲ್ಲಿ, ಆ ಒಂದು ಸೆಷನ್-ನಲ್ಲಷ್ಟೇ ನಿಮಗೆ 10 ಮತ್ತು 30 ಸೆಕೆಂಡ್-ಗಳ ರೀವೈಂಡ್ (rewind)  ಸಾಧ್ಯತೆ ಇರುತ್ತದೆ. ಒಮ್ಮೆ ನೀವು ಒಂದು ತರಗತಿಯನ್ನು ಪೂರ್ಣಗೊಳಿಸಿದರೆ ನಿಮ್ಮನ್ನು ವ್ಯವಸ್ಥಿತವಾಗಿ ಮುಂದಿನ ತರಗತಿಗೆ ಕರೆದೊಯ್ಯಲಾಗುತ್ತದೆ.  ಆದ್ದರಿಂದ ನೀವು ಪ್ರತಿ ತರಗತಿಯನ್ನು ಯಾವುದೇ ಅಡೆತಡೆಗಳಿಲ್ಲದೆ ನೋಡಲು ಬೇಕಾಗುವ ಸಮಯವನ್ನು ಮೀಸಲಿಡುವುದು ಅತ್ಯಗತ್ಯ.

 

ನೀವು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ ದಿನದಿಂದ ಈ ಕಾರ್ಯಕ್ರಮವನ್ನು ಪೂರ್ತಿಮಾಡಲು 30 ದಿನದರ್ಶಿಕೆ ದಿನಗಳ (calendar days) ಸಮಯವಿರುತ್ತದೆ.

ಎಲ್ಲಾ 7 ತರಗತಿಗಳನ್ನೂ ಒಂದೇ ಬಾರಿಗೆ ಕೂತು ಮುಗಿಸುವ ಅಗತ್ಯವಿಲ್ಲ, ಹಾಗೆಂದು ತರಗತಿಗಳ ನಡುವೆ ಬಹಳ ದಿನಗಳ ಅಂತರವನ್ನು ನೀಡುವುದೂ ಸಹ ಒಳ್ಳೆಯದಲ್ಲ.  ನಿಮ್ಮ ದಿನನಿತ್ಯದ ಕೆಲಸ-ಕಾರ್ಯಗಳಿಗೆ ತಕ್ಕಂತೆ ನೀವು ನಿಮ್ಮ ಸಮಯವನ್ನು ನಿಭಾಯಿಸಿಕೊಳ್ಳಬಹುದು. ಆದರೆ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ ಒಂದು ತಿಂಗಳೊಳಗಾಗಿ ಅದನ್ನು ಪೂರ್ಣಗೊಳಿಸುವಂತೆ ಎಚ್ಚರ ವಹಿಸಿ.

ಕಾರ್ಯಕ್ರಮಕ್ಕೆ ಸಂಬಂಧಿಸಿದ ನಿರ್ದಿಷ್ಟ ಪ್ರಶ್ನೆಗಳಿಗೆ ಪ್ರತಿ ತರಗತಿಯ ಕೊನೆಯಲ್ಲಿ ಜ್ಞಾನ ನಿಕ್ಷೇಪ ಸೆಕ್ಷನ್-ನ ಅಡಿ ಉತ್ತರಿಸಲಾಗುತ್ತದೆ. ಆದರೆ ಇದು ನೀವು ತರಗತಿ ಪೂರ್ಣಗೊಳಿಸಿದ ನಂತರವಷ್ಟೇ ಲಭ್ಯವಾಗುತ್ತದೆ. ಈ ಜ್ಞಾನ ನಿಕ್ಷೇಪದಲ್ಲಿ ತರಗತಿಯಲ್ಲಿ ಪದೇ ಪದೇ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೂ ಸದ್ಗುರುಗಳು ಉತ್ತರಿಸಿದ್ದಾರೆ. ನಿಮಗೆ ಇನ್ನೂ ಹೆಚ್ಚಿನ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಅವುಗಳನ್ನು ಈ ಇಮೇಲ್ ವಿಳಾಸಕ್ಕೆ ನಮಗೆ ಬರೆಯಿರಿ support@ieo.sadhguru.org

ನಿಮ್ಮಲ್ಲಿ ಅಂತರ್ಜಾಲ(internet)ಸೌಲಭ್ಯವಿದ್ದರೆ, ನೀವು ಇನ್ನರ್ ಇಂಜಿನಿಯರಿಂಗ್ ಆನ್-ಲೈನ್ ಕಾರ್ಯಕ್ರಮವನ್ನು ಎಲ್ಲಿಂದ ಬೇಕಾದರೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳಬಹುದು. ಈ ಕಾರ್ಯಕ್ರಮವು 7 ತರಗತಿಗಳನ್ನು ಹೊಂದಿದ್ದು, 60-90 ನಿಮಿಷಗಳ, ಸದ್ಗುರುಗಳ ಹೈ ಡೆಫನಿಷನ್ ವೀಡಿಯೊಗಳನ್ನು ಹೊಂದಿರುತ್ತದೆ. ಆನ್-ಲೈನ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ನೀವು ಶಾಂಭವಿ ಮಹಾಮುದ್ರ ಕ್ರಿಯೆಯನ್ನು ಕಲಿಯಲು ಬಯಸಿದರೆ, ಭಾರತದ ಕೆಲವು ನಗರಗಳಲ್ಲಿ ಕೊಡಮಾಡುವ, ಇನ್ನರ್ ಇಂಜಿನಿಯರಿಂಗ್ ಮುಕ್ತಾಯದ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. 7 ದಿನಗಳ (ಅಥವಾ 4 ದಿನಗಳ) ಇನ್ನರ್ ಇಂಜಿನಿಯರಿಂಗ್ ಪ್ರತ್ಯಕ್ಷ ತರಗತಿಯು ಈಶ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯುತ್ತದೆ ಮತ್ತು ಇದು ಇನ್ನರ್ ಇಂಜಿನಿಯರಿಂಗ್ ಆನ್-ಲೈನ್ ತರಗತಿಗಳ ಎಲ್ಲಾ ಅಂಶಗಳನ್ನೂ ಹಾಗೂ ಶಾಂಭವಿ ಮಹಾಮುದ್ರ ಕ್ರಿಯೆಯನ್ನೂ ಸಹ ಒಳಗೊಂಡಿರುತ್ತದೆ. ಈ ಕಾರ್ಯಕ್ರಮಗಳು ಭಾರತದಾದ್ಯಂತ ನಿಗದಿತ ತಾರೀಖು ಹಾಗೂ ನಿಗದಿತ ಸ್ಥಳಗಳಲ್ಲಿ ಲಭ್ಯವಿರುತ್ತವೆ.

ದಯವಿಟ್ಟು ನಮ್ಮ ರದ್ದತಿ ಹಾಗೂ ಮರುಪಾವತಿಯ ನೀತಿಯನ್ನು ಗಮನಿಸಿ.

ಯೂ-ಟ್ಯೂಬ್ ವೀಡಿಯೋಗಳು ಹಲವಾರು ವಿಷಯಗಳಿಗೆ ಒಳನೋಟಗಳನ್ನು ನೀಡುತ್ತವೆ, ಮತ್ತು ಅವುಗಳು ಯಾವುದೇ ಕಾರ್ಯಕ್ರಮ ಅಥವಾ ಅನುಸರಿಸಬೇಕಾದ ವಿಧಾನಗಳಲ್ಲ. ಸದ್ಗುರುಗಳಿಂದ ರೂಪಿತವಾದ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವು, ನಿಮ್ಮ ಜೀವನವನ್ನು ನಿಮ್ಮಿಷ್ಟಕ್ಕೆ ತಕ್ಕಂತೆ ರೂಪಿಸಿಕೊಳ್ಳಲು ಬೇಕಾದ ಸಾಧನಗಳು ಮತ್ತು ಕಾರ್ಯವಿಧಾನಗಳನ್ನು ಒದಗಿಸುತ್ತದೆ. ಈ ಕಾರ್ಯಕ್ರಮವು ಯೋಗ ವಿಜ್ಞಾನದ ವಿಶಿಷ್ಟ ವಿಧಾನಗಳನ್ನು ಬಳಸಿ ಜೀವನದ ಮೂಲಭೂತ ಸಾರವನ್ನು ಕಂಡುಕೊಳ್ಳುವ ಅವಕಾಶವನ್ನು ನಿಮಗೆ ನೀಡುತ್ತದೆ. ನಿಮ್ಮ ಶರೀರ, ಮನಸ್ಸು, ಭಾವನೆಗಳು ಮತ್ತು ನಿಮ್ಮೊಳಗಿನ ಮೂಲಭೂತ ಜೀವಚೈತನ್ಯವನ್ನು ನಿರ್ವಹಿಸುವ ಪ್ರಾಯೋಗಿಕ ಜ್ಞಾನವನ್ನೂ ಸಹ ಇದು ನಿಮಗೆ ಹೇಳಿಕೊಡುತ್ತದೆ.

 • ಡೆಸ್ಕ್ ಟಾಪ್ ಕಂಪ್ಯೂಟರ್

 • ಆಂಡ್ರಾಯಿಡ್ ಟ್ಯಾಬ್ಲೆಟ್ ಮತ್ತು ಫೋನ್ (ಆಂಡ್ರಾಯಿಡ್ 4.2 ಮತ್ತು ನಂತರದ ಆವೃತ್ತಿಗಳು)

 • IOS (ಐಪ್ಯಾಡ್, ಐಫೋನ್ 10.0 ಮತ್ತು ನಂತರದ ಆವೃತ್ತಿಗಳು)

 • ಅಂತರ್ಜಾಲ ವ್ಯವಸ್ಥೆ.

 • ಬ್ರಾಡ್ ಬ್ಯಾಂಡ್ ಸಂಪರ್ಕ (DSL, CABLE OR SATELLITE)- ಕನಿಷ್ಟ 512kbps ಡೌನ್ ಲೋಡ್ ವೇಗವಿರುವಂತದ್ದು.  ನಿಮ್ಮ ಅಂತರ್ಜಾಲದ ವೇಗವನ್ನು bandwidthplace.comನಲ್ಲಿ ಖಾತರಿ ಪಡಿಸಿಕೊಳ್ಳಬಹುದು.

 • ಅತ್ಯುತ್ತಮ ವೀಕ್ಷಣೆಗಾಗಿ, ಹಾರ್ಡ್-ವೈಯರ್ಡ್ ನೆಟ್-ವರ್ಕ್ ಕನೆಕ್ಷನ್-ಅನ್ನು ಹೊಂದಿರುವುದು ಉತ್ತಮ

 • ಬೆಂಬಲಿಸುವ ಆಪರೇಟಿಂಗ್ ಸಿಸ್ಟಮ್-ಗಳು(OS)- Windows 7, 8 or Mac OS X version 10.1.5 ಅಥವಾ ಅದಕ್ಕೂ ಹೆಚ್ಚಿನದ್ದು.

 • ಬೆಂಬಲಿಸುವ ಬ್ರೌಸರ್-ಗಳು - ಇಂಟರ್‍ನೆಟ್ ಎಕ್ಸ್-ಪ್ಲೋರರ್‍, ಫೈರ್ ಫಾಕ್ಸ್, ಗೂಗಲ್ ಕ್ರೋಮ್ (ಶಿಫಾರಿತ) ಅಥವಾ ಸಫಾರಿ.

ಎಲ್ಲಾ ತರಗತಿಗಳನ್ನೂ wired ಅಥವಾ wireless ಅಂತರ್ಜಾಲಗಳು ಬೆಂಬಲಿಸುವ ಬ್ರೌಸರ್-ಗಳನ್ನು ಬಳಸಿ ನೋಡಬಹುದು. ಉತ್ತಮ ವೀಡಿಯೋ ಗುಣಮಟ್ಟಕ್ಕಾಗಿ ತರಗತಿಗಳನ್ನು ಬ್ರಾಡ್-ಬ್ಯಾಂಡ್ ಸಂಪರ್ಕದಲ್ಲಿ ನೋಡಿ ಎನ್ನುವುದು ನಮ್ಮ ಸಲಹೆ.

ಈ ಕಾರ್ಯಕ್ರಮದಲ್ಲಿ 15+ ವರ್ಷ ವಯಸ್ಸಾಗಿರು ಯಾರಾದರೂ ಭಾಗವಹಿಸಬಹುದು. ಯಾವುದೇ ಪೂರ್ವಾನುಭವ ಅಥವಾ ವಿಶೇಷ ದೈಹಿಕ ಅವಶ್ಯಕತೆಯಿಲ್ಲ.

ಹೌದು, ಸರಣಿಯ ಎಲ್ಲಾ 7 ತರಗತಿಗಳನ್ನು ಮುಗಿಸಿರಬೇಕು.

 

ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಮುಕ್ತಾಯಗೊಳಿಸಿ, ಅದರ ಸಂಪೂರ್ಣ ಉಪಯೋಗ ಪಡೆಯಬೇಕೆಂದರೆ, ಎಲ್ಲಾ ಸೆಷನ್ ಗಳಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ನೀವು ಯಾವುದೇ ಕಾರಣದಿಂದ ಸೆಷನ್ ಗಳನ್ನು ಪೂರ್ಣಗೊಳಿಸದಿದ್ದಲ್ಲಿ, ನೀವು ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವುದೂ ಸಾಧ್ಯವಿಲ್ಲ. ದಯವಿಟ್ಟು ನೋಂದಣಿ ಹಾಗೂ ರದ್ದತಿ ನಿಯಮಗಳನ್ನು ಪರಿಶಿಲಿಸಿ.

ಭಾಗವಹಿಸುವವರು ಸಡಿಲವಾದ ಬಟ್ಟೆಗಳನ್ನು ಧರಿಸುವುದು ಉತ್ತಮ, ಆಗ ಆರಾಮವಾಗಿ ನೆಲದ ಮೇಲೆ ಕುಳಿತುಕೊಳ್ಳಬಹುದು. ನಿಮಗೆ ಬೇಕೆನಿಸಿದರೆ, ಯೋಗ ಮ್ಯಾಟ್ ಅಥವಾ ಕುಳಿತುಕೊಳ್ಳಲು ಚಿಕ್ಕದಾದ ದಿಂಬನ್ನು ತರಬಹುದು.

ಬಾಗವಹಿಸುವವರು ತಮ್ಮ ದಿನನಿತ್ಯದ ಔಷಧಿ ಹಾಗೂ ತುರ್ತಾಗಿ ಬೇಕಾಗುವ ಔಷಧಗಳನ್ನು ತರಬಹುದು.

ಭಾಗವಹಿಸುವವರಿಗೆ ಶನಿವಾರ ಸಾಯಂಕಾಲದ ಲಘು ತಿನಿಸುಗಳನ್ನು ನೀಡುತ್ತಾರೆ, ಹಾಗು ಭಾನುವಾರ ಸಸ್ಯಾಹಾರಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸಲಾಗುತ್ತದೆ.

ಈಶ ಫೌಂಡೇಶನ್ ಎಲ್ಲಾ ಆಯಾಮಗಳಲ್ಲೂ ಜನರ ಯೋಗಕ್ಷೇಮಕ್ಕಾಗಿ ಯಾವುದೇ ಲಾಭೋದ್ದೇಶವಿಲ್ಲದೆ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆ. ಅಂತಃ ಪರಿವರ್ತನೆಗಾಗಿ ಇರುವ ಶಕ್ತಿಯುತವಾದ ಯೊಗ ಕಾರ್ಯಕ್ರಮಗಳಿಂದ ಹಿಡಿದು, ಸ್ಫೂರ್ತಿದಾಯಕವಾದ ಸಾಮಾಜಿಕ ಹಾಗೂ ಪರಿಸರದ ಕಾರ್ಯಕ್ರಮಗಳವರೆಗೂ ಈಶದ ಎಲ್ಲಾ ಚಟುವಟಿಕೆಗಳೂ ವಿಶ್ವ ಶಾಂತಿ ಹಾಗೂ ಬೆಳವಣಿಗೆಗಾಗಿ ಸಹಾಯವಾಗುವ ಅಂತರ್ಗತ ಸಂಸ್ಕ್ರತಿ (ಎಲ್ಲವೂ ಒಂದೇ) ಯನ್ನು ರೂಪಿಸಿದೆ. ಅರ್ಲಿ ಬಡ್F ರಿಯಾಯಿತಿಯಲ್ಲದೆ, ನಾವು ವಿದ್ಯಾರ್ಥಿಗಳು ಹಾಗೂ ಸಂಸ್ಥೆ(ಕಾರ್ಪೊರೇಟ್)ಗಳಿಗಾಗಿ ವಿಶೇಷ ಶುಲ್ಕ ನಿಗದಿಪಡಿಸಿದೆ.

ಈ ಸಂಪೂರ್ಣ ಕಾರ್ಯಕ್ರಮವು 27.5 ಘಂಟೆಗಳದ್ದಾಗಿದ್ದು, ಭಾನುವಾರ ಎರಡು ಊಟಗಳ ವ್ಯವಸ್ಥೆಯನ್ನೂ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಮಾನಾಂತರ ಕಾರ್ಯಕ್ರಮಗಳಿಗೆ ಹೋಲಿಸಿದರೆ , ಇದರ ಶುಲ್ಕ ಸಮ್ಮತಾರ್ಹವಾಗಿಯೇ ಇದೆ. ಸಮಾಜದ ಒಳಿತಿಗಾಗಿ ಈಶ ಸ್ವಯಂ ಸೇವಕರು ತಮ್ಮ ಸಮಯ , ಶ್ರಮ ಹಾಗು ಸಂಪೂರ್ಣ ಬೆಂಬಲ ನೀಡುವುದರಿಂದ ಇಂತಹ ಶುಲ್ಕ ನಿಗದಿ ಸಾಧ್ಯವಾಗಿದೆ.

ಸದ್ಗುರುಗಳೊಂದಿಗೆ ಪ್ರತ್ಯಕ್ಷ ಮುಕ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರೆ ಪ್ರತ್ಯೇಕವಾಗಿಯೇ ನೋಂದಾಯಿಸಿಕೊಳ್ಳಬೇಕು.

14 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ಕಾರ್ಯಕ್ರಮದ ಸ್ಥಳಕ್ಕೆ ಬಿಡುವುದಲ್ಲ. ಕಾರ್ಯಕ್ರಮದ ಸ್ಥಳದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾವುದೇ ವಿಶೇಷ ಸೌಲಭ್ಯ ಕೊಡಲಾಗುವುದಿಲ್ಲ. ಆದ್ದರಿಂದ ಮಕ್ಕಳನ್ನು ಕರೆತರದಿರುವುದೇ ಒಳ್ಳೆಯದು.

ಸಂಚಾರ ದಟ್ಟಣೆಯ ಅಡಚಣೆ, ಪಾರ್ಕಿಂಗ್ ಮಾಡಲು ಬೇಕಾಗುವ ಸಮಯ ಹಾಗೂ ನೋಂದಣಿ ಪ್ರಕ್ರಿಯೆಗೆ ಸಮಯ ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಕಾರ್ಯಕ್ರಮದ ಆರಂಭದ ಕನಿಷ್ಟ ಒಂದು ಘಂಟೆ ಕಾರ್ಯಕ್ರಮದ ಸ್ಥಳಕ್ಕೆ ಬನ್ನಿ. ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿಯನ್ನು ದಯವಿಟ್ಟು ಕಡ್ಡಾಯವಾಗಿ ತರಬೇಕು.

ಸದ್ಯಕ್ಕೆ ಅಧಿಕೃತ ವಿದ್ಯಾಸಂಸ್ಥೆಗಳಲ್ಲಿ ಪೂರ್ಣಕಾಲಿಕ ವಿದ್ಯಾರ್ಥಿಗಳಾಗಿ ನೋಂದಾಯಿಸಿ ಕೊಂಡಿರುವವರಿಗೆ ರಿಯಾಯತಿ ಲಭ್ಯವಿದೆ, ಮತ್ತು ಇವರ ವಯೋಮಿತಿ 15ರಿಂದ 24ರ ಒಳಗಿರಬೇಕು.

ಇದಕ್ಕೆ ಅನುಮತಿಯಿಲ್ಲ..

ನವೆಂಬರ್ 15ರ ಮಧ್ಯರಾತ್ರಿಯ ತನಕ ಮಾತ್ರ ಹಣವನ್ನು ಹಿಂದಕ್ಕೆ ಪಡೆಯಬಹುದು.

ದಯವಿಟ್ಟು ಮರುಪಾವತಿ ಮತ್ತು ರದ್ದತಿಯ ನಿಯಮಗಳನ್ನು ಗಮನಿಸಿ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಉಳಿದುಕೊಳ್ಳುವ ವ್ಯವಸ್ಥೆಯನ್ನು ದಯವಿಟ್ಟು ನೀವುಗಳೇ ಮಾಡಿಕೊಳ್ಳಬೇಕು. ನೋಂದಣಿ ಶುಲ್ಕದಲ್ಲಿ ಇದನ್ನು ಸೇರಿಸಿಲ್ಲ.

ಕಾರ್ಯಕ್ರಮವು ನಡೆಯುವ ಸ್ಥಳ , ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಭಿಷನ್ ಸೆಂಟರ್, ೧೦ ನೇ ಮೈಲಿ, ತುಮಕೂರು ರಸ್ತೆ, ಬೆಂಗಳೂರು,

ಈ ಸ್ಥಳಕ್ಕೆ ಎಲ್ಲರೂ ಸುಲಭವಾಗಿ ತಲುಪಬಹುದಾಗಿದೆ.ಮಾರ್ಗ ಸೂಚಿಗಾಗಿ ಇಲ್ಲಿ ಒತ್ತಿರಿ.

ಹೌದು ಸ್ಥಳದಲ್ಲಿ ಹೇರಳವಾಗಿ ಪಾರ್ಕಿಂಗ್ ಜಾಗವಿದೆ. ಪ್ರತಿ ದಿನಕ್ಕೆ ಸ್ವಲ್ಪ ಪಾರ್ಕಿಂಗ್ ದರ ನೀಡಬೇಕಾಗಬಹುದು.

ನಿಮ್ಮ ಆಸನ ವ್ಯವಸ್ಥೆಯ ವಿವರಗಳು ಡಿಸೆಂಬರ್ 10, 2018 ರ ವೇಳೆಗೆ ನಿಮಗೆ ತಲುಪುತ್ತದೆ.

ನಿಮ್ಮ ಶುಲ್ಕ ಪಾವತಿಯ ಸಮಸ್ಯೆಗಳ ಪರಿಹಾರಕ್ಕೆ ಸಂಪರ್ಕಿಸಿ: 080-39591221 ಅಥವಾ sadhguru-in-bengaluru@ishayoga.org

ಕಾರ್ಯಕ್ರಮ, ನೋಂದಣಿ, ಶುಲ್ಕ ಪಾವತಿಯ ಹೆಚ್ಚಿನ ಮಾಹಿತಿಗಾಗಿ ಸಪೋರ್ಟ್ ಟೀಮ್ ಅನ್ನು ಸಂಪರ್ಕಿಸಿ:

sadhguru-in-bengaluru@ishayoga.org

ದೂರವಾಣಿ 080-39591221

ನಿಮಗೆ ಒಂದು ಸ್ವಾಗತ ಮಾಹಿತಿ (ವೆಲ್ ಕಮ್ ಕಿಟ್) ದೊರೆಯುತ್ತದೆ. ಆನ್ ಲೈನ್ ಸೆಷನ್ ಗಳನ್ನು ವೀಕ್ಷಿಸಲು ಇದರಲ್ಲಿ ನಿಮ್ಮ ಲಾಗ್-ಇನ್ ಹಾಗು ಪಾಸ್ ವರ್ಡ ಲಭ್ಯವಿರುತ್ತದೆ. ಮುಕ್ತಾಯ ಕಾರ್ಯಕ್ರಮಕ್ಕೆ ಬರಲು, 7 ಆನ್ ಲೈನ್ ತರಗತಿಗಳ ಸರಣಿ ಪೂರೈಸುವುದು ಅತ್ಯವಶ್ಯಕ. ನಿಮ್ಮ ಆಸನ ವ್ಯವಸ್ಥೆಯ ವಿವರಗಳನ್ನು ಖಾತರಿ ಪಡಿಸುವ ಇ.ಮೇಲ್ ನಿಮಗೆ ಡಿಸೆಂಬರ್ ೧೦ ರ ವೇಳೆಗೆ ತಲುಪಬೇಕು.

ಕೆಲವು ಸಾಧಕರ ಅನುಭವಗಳು
ಭಾಗವಹಿಸಲು ಸಾಧ್ಯವಾಗುತ್ತಿಲ್ಲವೇ ?
Border Image
ತರಬೇತಿ ಪಡೆದಿರುವ ಈಶ ಶಿಕ್ಷಕರ ನೇತೃತ್ವದಲ್ಲಿ ನಿಮ್ಮ ಹತ್ತಿರದ ನಗರದಲ್ಲಿ ನಡೆಯುವ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವನ್ನು ಹುಡುಕಿ!