Login | Sign Up
logo
search
Login|Sign Up
Country
  • Sadhguru Exclusive
Also in:
English
हिंदी

ಭೈರವಿ ಸಾಧನ - ಅರ್ಪಣೆ

ಭಕ್ತಿಯ ಮಾಧುರ್ಯತೆಯನ್ನು ಅನುಭವಿಸಿ

Registrations closed.
“ಒಮ್ಮೆ ನೀವು ನಿಮ್ಮನ್ನು ಖಾಲಿಯಾಗಿಸಿಕೊಂಡರೆ, ದೇವಿಗೆ ನಿಮ್ಮೊಂದಿಗಿರುವುದಲ್ಲದೇ ಬೇರೆ ಯಾವುದೇ ಆಯ್ಕೆಯಿಲ್ಲ. ಮತ್ತು ದೇವಿಯು ನಿಮ್ಮೊಂದಿಗಿದ್ದರೆ, ನನಗೂ ಬೇರೆ ಯಾವುದೇ ಆಯ್ಕೆಯಿಲ್ಲ.” - ಸದ್ಗುರು

ಭೈರವಿ ಸಾಧನ ಎಂದರೇನು?

ಲಿಂಗ ಭೈರವಿಯ ಅನುಗ್ರಹ ಪಡೆಯಲು ಮತ್ತು ಆಂತರಿಕವಾಗಿ ಭಕ್ತಿಯ ಆಯಾಮವನ್ನು ಹೊರತರುವ ಸರಳ ಆದರೆ ಶಕ್ತಿಯುತವಾದ ಪ್ರಕ್ರಿಯೆ.

ಸಾಧನೆಯು ಸೂರ್ಯನ ಚಲನೆ ಉತ್ತರಾರ್ಥಗೋಳವನ್ನು ಪ್ರವೇಶಿಸುವ ಉತ್ತರಾಯಣದ ಪೂರ್ವಭಾಗದಲ್ಲಿ ಪ್ರಾರಂಭವಾಗಲಿದ್ದು, ಇದು ಆಧ್ಯಾತ್ಮಿಕ ಸಾಧನೆಗೆ ಬಹಳ ಸೂಕ್ತವಾದ ಕಾಲವಾಗಿದೆ.

ಮಹಿಳೆಯರಿಗೆ ಸಮಾಪಣೆ: 25 Jan 2024 (Thaipusam)

ಪುರುಷರಿಗೆ ಸಮಾಪಣೆ: 9 Feb 2024 (Thai Amavasya)

*ತೈಪೂಸಂ ತೈ(ಪುಷ್ಯ) ಮಾಸದ ಹುಣ್ಣಿಮೆಯ ದಿನವಾಗಿದೆ.

*ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಭೈರವಿ ಸಾಧನ ಕಿಟ್ ಕಡ್ಡಾಯವಾಗಿದೆ. (ಈಶ ಲೈಫ್‌ನಲ್ಲಿ ಲಭ್ಯವಿದೆ)

ಭೈರವಿ ಸಾಧನ ಏಕೆ?

ಆರೋಗ್ಯ, ಸಂಪತ್ತು, ಜ್ಞಾನ ಅಥವಾ ಆಧ್ಯಾತ್ಮಿಕತೆ ಸೇರಿದಂತೆ ನಿಮ್ಮ ಯಾವುದೇ ಆಶೋತ್ತರಗಳಿರಲಿ ದೇವಿಯು ಅದೆಲ್ಲವನ್ನೂ ಮತ್ತು ಇನ್ನೂ ಹೆಚ್ಚಿನದನ್ನು ಅನುಗ್ರಹಿಸುವವಳು.

  • ದೇವಿಯ ಅನುಗ್ರಹಕ್ಕೆ ನಿಮ್ಮ ಗ್ರಹಿಕೆಯನ್ನು ಹೆಚ್ಚಿಸಿಕೊಳ್ಳಿ.

  • ದೇವಿಯೊಂದಿಗೆ ನಿಮ್ಮ ಬಾಂಧವ್ಯವನ್ನು ಗಾಢವಾಗಿಸಲು ವಿಶೇಷ ಅಭ್ಯಾಸಗಳು ಮತ್ತು ಶಿಸ್ತಿನಲ್ಲಿ ತೊಡಗಿಸಿಕೊಳ್ಳಿ.

  • ಭಕ್ತಾದಿಗಳಿಗೆ ಪವಿತ್ರವಾದ ಅರ್ಪಣೆಗಳನ್ನು ಸಲ್ಲಿಸಲು ಮಾರ್ಗದರ್ಶನ ನೀಡಲಾಗುವುದು, ಇದು ಭಕ್ತಿಯಿಂದ ತಮ್ಮನ್ನು ಅರ್ಪಿಸಿಕೊಳ್ಳುವುದರ ಸಂಕೇತವಾಗಿದೆ.

ಭಾಗವಹಿಸಲು :

ಹಂತ 1 : ಸಾಧನೆಗೆ ನೋಂದಣಿ ಮಾಡಿಕೊಳ್ಳಿ.

ಹಂತ 2 : ದೀಕ್ಷೆಯ ದಿನಕ್ಕೆ ಮುಂಚಿತವಾಗಿ ದೀಕ್ಷೆಯ ಪರಿಚಯಾತ್ಮಕ ವಿಡಿಯೋವನ್ನು ಮೊದಲು ನೋಡಿ.(ನೀವು ನೋಂದಣಿ ಮಾಡಿಕೊಂಡ ನಂತರ ಅದನ್ನು ನಿಮಗೆ ಈ-ಮೇಲ್ ಮುಖಾಂತರ ಕಳುಹಿಸಿಕೊಡಲಾಗುವುದು)

ಹಂತ 3 : ಜನವರಿ 4, 11, 14, 18, 22 2024 ರಂದು ಆನ್‌ಲೈನ್ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. (ಸೆಷನ್ ಸಮಯ ಮತ್ತು ವೆಬ್ ಲಿಂಕನ್ನು ಈ-ಮೇಲ್ ಮುಖಾಂತರ ಕಳುಹಿಸಿಕೊಡಲಾಗುವುದು)

ಹಂತ 4 : ನಿಗದಿತ ಸಮಯದವರೆಗೆ ಮಾರ್ಗಸೂಚಿಯಂತೆ ಸಾಧನೆಯನ್ನು ಮಾಡಿ.

ಹಂತ 5 : ಸಮಾಪಣೆಯ ದಿನಕ್ಕೆ ಮುಂಚಿತವಾಗಿ ಸಮಾಪಣೆಯ ವಿವರಣಾತ್ಮಕ ವಿಡಿಯೋವನ್ನು ನೋಡಿ. (ನೀವು ನೋಂದಣಿ ಮಾಡಿಕೊಂಡ ನಂತರ ಅದನ್ನು ನಿಮಗೆ ಈ-ಮೇಲ್ ಮುಖಾಂತರ ಕಳುಹಿಸಲಾಗುವುದು)

ಹಂತ 6 : ಸಮಾಪಣೆ ಸೆಷನ್‌ಗೆ ಆನ್‌ಲೈನ್‌ನಲ್ಲಿ ಅಥವಾ ಖುದ್ದಾಗಿ ಈಶ ಯೋಗ ಕೇಂದ್ರದಲ್ಲಿ ಭಾಗವಹಿಸಿ - 25 ಜನವರಿ (ಮಹಿಳೆಯರು), 9 ಫೆಬ್ರವರಿ (ಪುರುಷರು).

(ಸೆಷನ್ ಸಮಯ ಮತ್ತು ಇತರ ವಿವರಗಳನ್ನು ಈ-ಮೇಲ್ ಮೂಲಕ ಕಳುಹಿಸಲಾಗುತ್ತದೆ.)

ಸಾಧನೆಗೆ ಬೇಕಾದ ಸಾಮಗ್ರಿಗಳು :

ಭೈರವಿ ಸಾಧನ ಕಿಟ್ ನಲ್ಲಿ ಈ ಕೆಳಕಂಡ ಸಾಮಗ್ರಿಗಳು ಇರುತ್ತವೆ :

  • ದೇವಿಯ ಭಾವಚಿತ್ರ

  • ಅಭಯಸೂತ್ರ

  • ಕುಂಕುಮ

  • ದೇವಿ ಸ್ತುತಿ

ನೀವು ದೇವಿ ಪೆಂಡೆಂಟ್ (ಈಗ ಇರುವ ಅಥವಾ ಹೊಸತು) ಅನ್ನು ಧರಿಸಬೇಕು. ನಿಮಗೆ ಬೇಕಾದರೆ, ಈಶಾ ಲೈಫ್ ನಲ್ಲಿ ಅದನ್ನು ಕೊಂಡುಕೊಳ್ಳಬಹುದು.

ದೀಕ್ಷೆಯ ದಿನಕ್ಕೂ ಮುಂಚಿತವಾಗಿ ಈ ಎಲ್ಲ ಸಾಮಗ್ರಿಗಳು ನಿಮ್ಮ ಬಳಿ ಇರುವುದು ಅತ್ಯವಶ್ಯಕ. ಅವುಗಳನ್ನು ಉಪಯೋಗಿಸುವುದು ಹೇಗೆ ಎನ್ನುವ ವಿವರಗಳನ್ನು ದೀಕ್ಷೆಯ ದಿನದಂದು ಹಂಚಿಕೊಳ್ಳಲಾಗುವುದು.

ಸಾಧನೆಯ ಅವಧಿಯಲ್ಲಿ ಅನುಸರಿಸಬೇಕಾದ ಸೂಚನೆಗಳು:

ದೀಕ್ಷೆಯ ಅವಧಿಯಲ್ಲಿ ವಿವರವಾದ ಸೂಚನೆಗಳನ್ನು ನೀಡಲಾಗುವುದು. ಆದರೂ, ಸಾಧನೆಯ ಸಮಯದಲ್ಲಿ ನೆನಪಿಡಬೇಕಾದ ಅಂಶಗಳು :

  • ಗಿಡಮೂಲಿಕೆ ಸ್ನಾನದ ಪುಡಿಯನ್ನು ಬಳಸಿ ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. (ರಾಸಾಯನಿಕಗಳನ್ನು ಬಳಸಿ ಮಾಡಿದ ಉತ್ಪನ್ನಗಳನ್ನು ಬಳಸಬಾರದು)

  • ಸಾಧನೆಯ ಅವಧಿಯಲ್ಲಿ ಧೂಮಪಾನ, ಮದ್ಯಪಾನ ಮತ್ತು ಮಾಂಸಾಹಾರ ಸೇವನೆಯಿಂದ ದೂರವಿರಬೇಕು.

  • ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡಬೇಕು. ಮೊದಲನೇ ಭೋಜನ ಮಧ್ಯಾಹ್ನ 12 ಘಂಟೆಯ ನಂತರ ಮಾಡಬೇಕು.

  • ಬಿಳಿ ಅಥವಾ ತಿಳಿಬಣ್ಣದ ಉಡುಪನ್ನು ಧರಿಸುವುದು ಉತ್ತಮ

ಸಂಪರ್ಕ ವಿವರಗಳು

ಹೆಚ್ಚಿನ ವಿವರಗಳಿಗೆ ಅಥವ ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ:

Email: bhairavi.sadhana@lingabhairavi.org

Phone: +91-83000 83111

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

Testimonials

ನನ್ನ ಸಾಧನ ಸಮಯದಲ್ಲಿ,ಒಂದು ದಿನವೂ ದೇವಿಯ ಹೆಸರನ್ನು ಹೇಳದೆ ಇರಲಿಲ್ಲ. ಅವಳ ಕರುಣೆಯು ನಾನು ಊಹಿಸದ ರೀತಿಯಲ್ಲಿ ನನ್ನನ್ನು ವಿನೀತಳನ್ನಾಗಿಸಿತು. ನನ್ನ ಜೀವನದಲ್ಲಿ ಅವಳು ಸಹಾಯ ಮಾಡಿರುವ ರೀತಿಯು ಪವಾಡಕ್ಕಿಂತ ಕಡಿಮೆಯಿಲ್ಲ. ಅವಳ ಪ್ರಕಾಶವು ಅನೇಕ ಜೀವನಗಳನ್ನು ಬೆಳಗಿಸಲಿ ಎಂದು ಆಶಿಸುತ್ತೇನೆ.

- -- ಆಕ್ಷಾ, ದೆಹಲಿ
 
Close