ಭೈರವಿ ಸಾಧನ

ಜೀವನವನ್ನು ಮೀರಿದ ಆಯಾಮವನ್ನು ಅನ್ವೇಷಿಸಿ
ದೀಕ್ಷೆ ಮತ್ತು ಸಮಾಪಣೆ ಆನ್‌ಲೈನ್ ನಲ್ಲಿ ನಡೆಯಲಿದೆ

ದೀಕ್ಷೆ - 28 ಡಿಸೆಂಬರ್ 2021

Registration Closed
 

ಭೈರವಿ ಸಾಧನ

ಜೀವನವನ್ನು ಮೀರಿದ ಆಯಾಮವನ್ನು ಅನ್ವೇಷಿಸಿ
ದೀಕ್ಷೆ ಮತ್ತು ಸಮಾಪಣೆ ಆನ್‌ಲೈನ್ ನಲ್ಲಿ ನಡೆಯಲಿದೆ

ದೀಕ್ಷೆ - 28 ಡಿಸೆಂಬರ್ 2021

Registration Closed
seperator
 

“ಒಮ್ಮೆ ನೀವು ನಿಮ್ಮನ್ನು ಖಾಲಿಯಾಗಿಸಿಕೊಂಡರೆ, ದೇವಿಗೆ ನಿಮ್ಮೊಂದಿಗಿರುವುದಲ್ಲದೇ ಬೇರೆ ಯಾವುದೇ ಆಯ್ಕೆಯಿಲ್ಲ. ಮತ್ತು ದೇವಿಯು ನಿಮ್ಮೊಂದಿಗಿದ್ದರೆ, ನನಗೂ ಬೇರೆ ಯಾವುದೇ ಆಯ್ಕೆಯಿಲ್ಲ.” - ಸದ್ಗುರು

ಅಂತರಂಗದ ಭಕ್ತಿಯನ್ನು ಹೊರಹೊಮ್ಮಿಸಲು ಭೈರವಿ ಸಾಧನ ಒಂದು ಅವಕಾಶವಾಗಿದೆ.

ಸಾಧನೆಯು ಸೂರ್ಯನ ಚಲನೆ ಉತ್ತರಾರ್ಥಗೋಳವನ್ನು ಪ್ರವೇಶಿಸುವ ಉತ್ತರಾಯಣದ ಪೂರ್ವಭಾಗದಲ್ಲಿ ಪ್ರಾರಂಭವಾಗಲಿದ್ದು, ಇದು ಆಧ್ಯಾತ್ಮಿಕ ಸಾಧನೆಗೆ ಬಹಳ ಸೂಕ್ತವಾದ ಕಾಲವಾಗಿದೆ.

ದೀಕ್ಷೆಯು ಮಹಿಳೆ ಮತ್ತು ಪುರುಷರಿಗೆ ಒಂದೇ ದಿನದಂದು ನಡೆಯಲಿದೆ. ಆದರೆ ಮಹಿಳೆಯರಿಗೆ, ಸಾಧನೆಯು ತೈಪೂಸಂ (ಪುಷ್ಯ ಮಾಸದ ಹುಣ್ಣಿಮೆಯ ದಿನ) ದಿನದಂದು ಸಮಾಪಣೆಗೊಳ್ಳಲಿದೆ ಮತ್ತು ಪುರುಷರಿಗೆ ಪುಷ್ಯ ಮಾಸದ ಅಮಾವಾಸ್ಯೆಯಂದು ಸಮಾಪಣೆಗೊಳ್ಳುತ್ತದೆ.

ಮಹಿಳೆಯರಿಗೆ ಸಮಾಪಣೆ: 18 ಜನವರಿ 2022

ಪುರುಷರಿಗೆ ಸಮಾಪಣೆ: 31 ಜನವರಿ 2022

 
ಭೈರವಿ ಸಾಧನ ಏಕೆ?
seperator
 

ಆರೋಗ್ಯ, ಸಂಪತ್ತು, ಜ್ಞಾನ ಅಥವಾ ಆಧ್ಯಾತ್ಮಿಕತೆ ಸೇರಿದಂತೆ ನಿಮ್ಮ ಯಾವುದೇ ಆಶೋತ್ತರಗಳಿರಲಿ ದೇವಿಯು ಅದೆಲ್ಲವನ್ನೂ ಮತ್ತು ಇನ್ನೂ ಹೆಚ್ಚಿನದನ್ನು ಅನುಗ್ರಹಿಸುವವಳು.

 • ಒಬ್ಬರ ಗ್ರಹಣ ಶಕ್ತಿಯನ್ನು ಹೆಚ್ಚಿಸುವ ತೀವ್ರವಾದ ಕ್ರಿಯಾ
 • ವಿಶೇಷ ಅಭ್ಯಾಸಗಳು, ಶಿಸ್ತು ಮತ್ತು ಅರ್ಪಣೆಗಳಿಂದ ದೇವಿಯ ಅನುಗ್ರಹವನ್ನು ಪಡೆಯಿರಿ
 • ನಿಮ್ಮ ಮನೆಯಿಂದಲೇ ಆನ್‌ಲೈನ್ ದೀಕ್ಷೆ ಮತ್ತು ಸಮಾಪಣೆಯ ಸೌಕರ್ಯ
 
ಭಾಗವಹಿಸಲು:
seperator
 

ಹಂತ 1 : ಸಾಧನೆಗೆ ನೋಂದಣಿ ಮಾಡಿಕೊಳ್ಳಿ.

ಹಂತ 2 : ದೀಕ್ಷೆಯ ದಿನಕ್ಕೆ ಮುಂಚಿತವಾಗಿ ದೀಕ್ಷೆಯ ಪರಿಚಯಾತ್ಮಕ ವಿಡಿಯೋವನ್ನು ಮೊದಲು ನೋಡಿ.(ನೀವು ನೋಂದಣಿ ಮಾಡಿಕೊಂಡ ನಂತರ ಅದನ್ನು ನಿಮಗೆ ಈ-ಮೇಲ್ ಮುಖಾಂತರ ಕಳುಹಿಸಿಕೊಡಲಾಗುವುದು)

ಹಂತ 3 : 28 ಡಿಸೆಂಬರ್ 2021 ರಂದು ಆನ್‌ಲೈನ್ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. (ಸಮಯ ಮತ್ತು ವೆಬ್ ಲಿಂಕನ್ನು ಈ-ಮೇಲ್ ಮುಖಾಂತರ ಕಳುಹಿಸಿಕೊಡಲಾಗುವುದು)

ಹಂತ 4 : ನಿಗದಿತ ಸಮಯದವರೆಗೆ ಮಾರ್ಗಸೂಚಿಯಂತೆ ಸಾಧನೆಯನ್ನು ಮಾಡಿ.

ಹಂತ 5 : ಸಮಾಪಣೆಯ ದಿನಕ್ಕೆ ಮುಂಚಿತವಾಗಿ ಸಮಾಪಣೆಯ ವಿವರಣಾತ್ಮಕ ವಿಡಿಯೋವನ್ನು ನೋಡಿ. (ನೀವು ನೋಂದಣಿ ಮಾಡಿಕೊಂಡ ನಂತರ ಅದನ್ನು ನಿಮಗೆ ಈ-ಮೇಲ್ ಮುಖಾಂತರ ಕಳುಹಿಸಲಾಗುವುದು)

ಹಂತ 6 : ಆನ್‍ಲೈನ್ ಸಮಾಪಣೆ ಸೆಷನ್ ನಲ್ಲಿ ಭಾಗವಹಿಸಿ 18 ಜನವರಿ (ಮಹಿಳೆಯರು), 31 ಜನವರಿ (ಪುರುಷರು).

 
ಸಾಧನೆಗೆ ಬೇಕಾದ ಸಾಮಗ್ರಿಗಳು :
seperator
 

ಭೈರವಿ ಸಾಧನ ಕಿಟ್ (ಈಶಾ ಲೈಫ್ ನಲ್ಲಿ ಕೊಳ್ಳಿರಿ) ನಲ್ಲಿ ಈ ಕೆಳಕಂಡ ಸಾಮಗ್ರಿಗಳು ಇರುತ್ತವೆ :

 • ದೇವಿಯ ಭಾವಚಿತ್ರ
 • ಅಭಯಸೂತ್ರ
 • ಕುಂಕುಮ
 • ದೇವಿ ಸ್ತುತಿ

ನೀವು ದೇವಿ ಪೆಂಡೆಂಟ್ (ಈಗ ಇರುವ ಅಥವಾ ಹೊಸತು) ಅನ್ನು ಧರಿಸಬೇಕು. ನಿಮಗೆ ಬೇಕಾದರೆ, ಈಶಾ ಲೈಫ್ ನಲ್ಲಿ ಅದನ್ನು ಕೊಂಡುಕೊಳ್ಳಬಹುದು.

ದೀಪ (ಎಳ್ಳೆಣ್ಣೆ, ತುಪ್ಪ, ಹರಳೆಣ್ಣೆ ಅತ್ಯುತ್ತಮ, ಇಲ್ಲವಾದರೆ ಲಭ್ಯವಿರುವ ಇತರ ಯಾವುದೇ ಎಣ್ಣೆ ಉಪಯೋಗಿಸಬಹುದು) ಅಥವಾ ಮೇಣದಬತ್ತಿ (ಜೇನು ಮೇಣ (ಬೀ ವ್ಯಾಕ್ಸ್) ಉತ್ತಮ)

ಪ್ರತಿದಿನ ನೈವೇದ್ಯಕ್ಕೆ ಹೆಸರುಕಾಳು ಅಥವಾ ಕಪ್ಪು ಎಳ್ಳು

ನಿಮಗೆ ಬೇಕಾದರೆ, ದೇವಿಯ ಭಾವಚಿತ್ರದ ಕೆಳಗೆ ಕೆಂಪು ಬಟ್ಟೆ ಇರಬಹುದು, ಹತ್ತಿಯದ್ದಾದರೆ ಉತ್ತಮ.

ಸಾಧನೆಗೆ ಬೇಕಾದ ಹೆಚ್ಚುವರಿ ಸಾಮಗ್ರಿಗಳು:

 • ಜೇನುತುಪ್ಪ
 • ಕರಿ ಮೆಣಸಿನಕಾಳು
 • ದೊಡ್ಡಪತ್ರೆ. ಅದು ಸಿಗದಿದ್ದರೆ, ಬೇವಿನ ಎಲೆಗಳನ್ನು ಉಪಯೋಗಿಸಬಹುದು(ಅಥವಾ ಬೇವಿನ ಎಲೆಯ ಪುಡಿ)
 • ಬಿಳಿ ಅಥವಾ ತಿಳಿ ಬಣ್ಣದ ಉಡುಪು
 • ಮೊಳಕೆ ಬರಿಸಿದ ಹೆಸರುಕಾಳು
 • ಗಿಡಮೂಲಿಕೆ ಸ್ನಾನದಪುಡಿ ಅಥವಾ ಹೆಸರುಕಾಳಿನ ಪುಡಿ. (ಪ್ರಶ್ನೋತ್ತರ ವಿಭಾಗದಲ್ಲಿ ಅದನ್ನು ತಯಾರಿಸುವುದು ಹೇಗೆ ಎನ್ನುವುದರ ವಿವರವನ್ನು ನೀವು ತಿಳಿಯಬಹುದು)

ದೀಕ್ಷೆಯ ದಿನಕ್ಕೂ ಮುಂಚಿತವಾಗಿ ಈ ಎಲ್ಲ ಸಾಮಗ್ರಿಗಳು ನಿಮ್ಮ ಬಳಿ ಇರುವುದು ಅತ್ಯವಶ್ಯಕ. ಅವುಗಳನ್ನು ಉಪಯೋಗಿಸುವುದು ಹೇಗೆ ಎನ್ನುವ ವಿವರಗಳನ್ನು ದೀಕ್ಷೆಯ ದಿನದಂದು ಹಂಚಿಕೊಳ್ಳಲಾಗುವುದು.

 
ಸಾಧನೆಯ ಅವಧಿಯಲ್ಲಿ ಅನುಸರಿಸಬೇಕಾದ ಸೂಚನೆಗಳು:
seperator
 

ದೀಕ್ಷೆಯ ಅವಧಿಯಲ್ಲಿ ಸೂಚನೆಗಳನ್ನು ನೀಡಲಾಗುವುದು. ಆದರೂ, ಸಾಧನೆಯ ಸಮಯದಲ್ಲಿ ನೆನಪಿಡಬೇಕಾದ ಅಂಶಗಳು :

 • ಗಿಡಮೂಲಿಕೆ ಸ್ನಾನದ ಪುಡಿಯನ್ನು ಬಳಸಿ ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. (ರಾಸಾಯನಿಕಗಳನ್ನು ಬಳಸಿ ಮಾಡಿದ ಉತ್ಪನ್ನಗಳನ್ನು ಬಳಸಬಾರದು)
 • ಧೂಮಪಾನ ಮಾಡಬಾರದು
 • ಮದ್ಯಪಾನ ಮಾಡಬಾರದು
 • ಮಾಂಸಾಹಾರ ತಿನ್ನಬಾರದು
 • ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡಬೇಕು. ಮೊದಲನೇ ಭೋಜನ ಮಧ್ಯಾಹ್ನ 12 ಘಂಟೆಯ ನಂತರ ಮಾಡಬೇಕು.
 • ಬಿಳಿ ಅಥವಾ ತಿಳಿಬಣ್ಣದ ಉಡುಪನ್ನು ಧರಿಸುವುದು ಉತ್ತಮ
 
ಮಾಹಿತಿಗಾಗಿ
seperator
 
 
ಸಂಪರ್ಕ ವಿವರಗಳು
seperator
 

ಹೆಚ್ಚಿನ ವಿವರಗಳಿಗೆ ಅಥವ ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ:

Email: bhairavi.sadhana@lingabhairavi.org

Phone: +91-83000 83111

ಪುನರಾವರ್ತಿತ ಪ್ರಶ್ನೆಗಳು

seperator

ನಮ್ಮೊಳಗಿನ ಭಕ್ತಿಯನ್ನು ಹೊರತರುವುದಕ್ಕಾದ ಅವಕಾಶವೇ ಈ ಭೈರವಿ ಸಾಧನ. ವಿಶೇಷ ಅಭ್ಯಾಸಗಳು, ಶಿಸ್ತು ಮತ್ತು ಅರ್ಪಣೆಗಳ ಮೂಲಕ ಒಬ್ಬರು ದೇವಿಯ ಅನುಗ್ರಹಕ್ಕೆ ಬೇಕಾದ ಗ್ರಹಣ ಶಕ್ತಿಯನ್ನು ತಮ್ಮಲ್ಲಿ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ ಇದಾಗಿದೆ.

ಹೌದು. ಪುರುಷರು ಈ ಸಾಧನ ದಲ್ಲಿ ಪಾಲ್ಗೊಳ್ಳಬಹುದು.

ಹೌದು. ಸಾಧಕರು ( ಆಧ್ಯಾತ್ಮ ಅಭ್ಯಾಸಕಾರರು ) ಪ್ರಬಲ ದೇವಿ ಸ್ತುತಿ ಮತ್ತು ದೇವಿ ದಂಡ ಮಾಡುವ ಸಲುವಾಗಿ ದೀಕ್ಷೆ ಪಡೆಯುತ್ತಾರೆ.

ಕನಿಷ್ಠ 7 ವಯಸ್ಸಿನವರಾಗಿರಬೇಕು.

ಉತ್ತರಾಯಣದ ಆರಂಭದಲ್ಲಿ, ಸೂರ್ಯ ಉತ್ತರಾರ್ಧದ ಕಡೆಗೆ ಸಾಗುವ ಸಮಯ ಆಧ್ಯಾತ್ಮಿಕ ಗ್ರಹಿಕೆಗೆ ಪೂರಕವಾಗಿರುತ್ತದೆ. ಈ ಸಮಯದಲ್ಲಿ ಸಾಧನ ಪ್ರಾರಂಭವಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ದೀಕ್ಷೆಯ ದಿನಾಂಕ 28 ಡಿಸೆಂಬರ್ 2021 ಆಗಿರುತ್ತದೆ.

ಹೌದು, ಇತರ ಸಾಧನಗಳ ಜೊತೆಗೆ ನೀವು ಭೈರವಿ ಸಾಧನವನ್ನೂ ತೆಗೆದುಕೊಳ್ಳಬಹುದು.

ಭೈರವಿ ಸಾಧನದ ನೋಂದಣಿ ಶುಲ್ಕ ರೂ.110 ಆಗಿರುತ್ತದೆ.

ನೀವು ಕಡ್ಡಾಯವಾಗಿ ಭೈರವಿ ಸಾಧನ ಕಿಟ್ ಅನ್ನು ಖರೀದಿಸಬೇಕಾಗುತ್ತದೆ. ಇದರ ಜೊತೆಗೆ, ಈಗಾಗಲೇ ನಿಮ್ಮ ಬಳಿ ಇಲ್ಲದಿದ್ದಲ್ಲಿ, ದೇವಿ ಪೆಂಡೆಂಟ್ ಒಂದನ್ನು ಖರೀದಿಸಬೇಕಾಗುತ್ತದೆ. ಇವೆಲ್ಲವನ್ನು ನೀವು ದೀಕ್ಷೆಯ ದಿನಾಂಕಕ್ಕೆ ಮುಂಚಿತವಾಗಿ ಈಶಾ ಲೈಫ್ ಇಂದ ಖರೀದಿಸಬಹುದು.

ಇದು ಒಂದು-ಹಂತದ ನೋಂದಣಿ ಪ್ರಕ್ರಿಯೆಯಾಗಿರುವುದರಿಂದ, ಮೊದಲ ಪ್ರಯತ್ನದಲ್ಲಿ ಪಾವತಿಯನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ನೋಂದಣಿ ಫಾರ್ಮ್ ಅನ್ನು ಮತ್ತೊಮ್ಮೆ ಭರ್ತಿ ಮಾಡಬೇಕಾಗುತ್ತದೆ. ನೋಂದಣಿ ಮತ್ತು ಪಾವತಿ ಪ್ರಕ್ರಿಯೆಗಳನ್ನು ಕಂಪ್ಯೂಟರ್ ಅಥವಾ ಲ್ಯಾಪ್‍ಟಾಪ್ ಮೂಲಕ ಮಾಡುವುದು ಉತ್ತಮ.

ಹಲವು ಪ್ರಯತ್ನಗಳ ಹೊರತಾಗಿಯೂ ನಿಮಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ, ನೀವು ಪರ್ಯಾಯ ಬ್ರೌಸರ್ ಅಥವಾ ಈ-ಮೇಲ್ ಐಡಿ ಬಳಸಿ. ಜೊತೆಗೆ ಪೇಜಿನ ಹಿಸ್ಟರಿ/ಕ್ಯಾಚೆ ಅನ್ನು ತೆರವುಗೊಳಿಸಿ.

ಬೇರಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ, +91 83000-83111 ಗೆ ಕರೆ ನೀಡಿ.

ಭೈರವಿ ಸಾಧನ ಕಿಟ್ ಕಡ್ಡಾಯ. ಈ ಕಿಟ್ ಪ್ರತಿಷ್ಠೀಕರಿಸಿದ ವಸ್ತುಗಳನ್ನು ಒಳಗೊಂಡಿದ್ದು, ಸಾಧನೆಯ ಸಮಯದಲ್ಲಿ ಪೂರಕವಾಗಿರುತ್ತದೆ.

ಭೈರವಿ ಸಾಧನ ಸಮಾಪಾಣೆಯನ್ನು ಆನ್‌ಲೈನ್‌ ಮೂಲಕ ನೆರವೇರಿಸಲಾಗುವುದು.

 • ಮಹಿಳೆಯರಿಗೆ ಸಮಾಪಾಣೆ ದಿನಾಂಕ - 18 ಜನವರಿ 2022
 • ಪುರುಷರಿಗೆ ಸಮಾಪಾಣೆ ದಿನಾಂಕ - 31 ಜನವರಿ 2022

ಹೌದು. ಆದರೆ ಐದು ತಿಂಗಳು ತುಂಬಿದ ಗರ್ಭಿಣಿಯಾಗಿದ್ದರೆ ದೇವಿ ದಂಡ ಮಾಡುವುದು ಅಸಾಧ್ಯ. ಈ ಪರಿಸ್ಥಿತಿಯಲ್ಲಿ, ಅವರು ಮಾನಸಿಕವಾಗಿ ದೇವಿ ದಂಡ ಮಾಡಬಹುದು (ಅಂದರೆ ಕಣ್ಣುಗಳನ್ನು ಮುಚ್ಚಿಕೊಂಡು ದೇವಿ ದಂಡವನ್ನು ಮಾಡುವಂತೆ ಸ್ಮರಿಸಿಕೊಳ್ಳುವುದು). ಇದರ ಜೊತೆಗೆ, ಗರ್ಭಾವಸ್ಥೆಯಲ್ಲಿ ಇರುವವರು ಉಪವಾಸವಿರಲು ಅಸಾಧ್ಯ ಎನಿಸಿದರೆ, ಅವರು ಹಣ್ಣು ಮತ್ತು ನಿಂಬೆ ಹಣ್ಣಿನ ರಸ ಮತ್ತು ಜೇನತುಪ್ಪವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದು. ಗರ್ಭಿಣಿಯರು ಬೇವನ್ನು ಸೇವಿಸಬಾರದು.

ಹೌದು. ಯಾವುದೇ ನಿರ್ಬಂಧನೆಗಳು ಇರುವುದಿಲ್ಲ.

ಹೌದು. ಸಾಧನೆಗಾಗಿ ನೀವು ನೋಂದಾಯಿಸಿಕೊಳ್ಳಬಹುದು.

ದಯವಿಟ್ಟು ಕೆಳಗೆ ಸೂಚಿಸಿದ ಪಾಕವಿಧಾನವನ್ನು ನೋಡಿ:

ಮನೆಯಲ್ಲಿ ತಯಾರಿಸಿದ ಗಿಡಮೂಲಿಕೆಗಳ ಪುಡಿಗಳು

ದೇಹಕ್ಕೆ ಪುಡಿ - ವಿಧಾನ 1

1 ಬಟ್ಟಲು ಒಣಗಿದ ಹೆಸರುಕಾಳನ್ನು ತಟ್ಟೆಯ ಮೇಲೆ ಹರಡಿ (ಅಥವ ಸಿಪ್ಪೆ ಸಹಿತ ಹೆಸರು ಬೇಳೆ) ಮತ್ತು ಸೂರ್ಯನ ಬಿಸಿಲಿನಲ್ಲಿ ಒಂದು ದಿನ ಒಣಗಿಸಿ ಅಥವ 30 ರಿಂದ 40 ನಿಮಿಷಗಳವರೆಗೆ ಕಡಿಮೆ ತಾಪಮಾನದ (200 ಡಿಗ್ರಿ) ಓವನ್ ನಲ್ಲಿ ಇಡಿ. ಹೆಸರುಕಾಳು ತಣ್ಣಗಾಗಲು ಬಿಡಿ ನಂತರ 1/4 ಲೋಟ ಬಿಳಿ ಅಕ್ಕಿಯನ್ನು ಸೇರಿಸಿ. ಆಹಾರ ಸಂಸ್ಕಾರಕ (ಫುಡ್ ಪ್ರೊಸೆಸರ್) ನಲ್ಲಿ ಹೆಸರುಕಾಳು ಮತ್ತು ಅಕ್ಕಿಯನ್ನು ಪುಡಿಮಾಡಿ. (ಜರಡಿಯಿಂದ ಸಾಣಿಸಿಕೊಳ್ಳಿ). 2 ಚಮಚ ಅರಿಶಿನದ ಪುಡಿಯನ್ನು ಸೇರಿಸಿ ಮತ್ತು ಮುಚ್ಚಳವಿರುವ ಪಾತ್ರೆಯಲ್ಲಿ ಸಂಗ್ರಹಿಸಿಡಿ. ಈ ಪುಡಿಯನ್ನು ತಂಪಾದ ಒಣ ಸ್ಥಳದಲ್ಲಿ ಸಂಗ್ರಹಿಸಿದರೆ ತಿಂಗಳುಗಟ್ಟಲೆ ಇಡಬಹುದು.

ಗಿಡಮೂಲಿಕೆ ಪುಡಿಯಿಂದ ಸ್ನಾನ ಮಾಡಲು: 1-2 ಚಮಚ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಸೇರಿಸಿ ತೆಳು ಲೀಪವನ್ನು ಮಾಡಿ. ನಿಮ್ಮ ಚರ್ಮಕ್ಕೆ ಈ ಲೇಪವನ್ನು ಉಜ್ಜಿಕೊಳ್ಳಿ ಮತ್ತು ತೊಳೆಯುವ ಮುಂಚೆ ಸ್ವಲ್ಪ ನಿಮಿಷಗಳ ಕಾಲ ಗಾಳಿಯಲ್ಲಿ ಒಣಗಲು ಬಿಡಿ.

ದೇಹಕ್ಕೆ ಪುಡಿ - ವಿಧಾನ 2

ಮೊದಲಿಗೆ, ಪುಡಿ ಮಿಷ್ರಣದ ಒಂದು ಬೇಸ್ ಮಾಡಿಕೊಳ್ಳಿ:

ಹೆಸರುಕಾಳು (ಇಡಿ ಹೆಸರುಬೇಳೆ / ಒಡೆದ ಹೆಸರುಕಾಳು) ಪುಡಿ ಮತ್ತು ಕಡ್ಲೆಹಿಟ್ಟು ಬಹಳ ಒಳ್ಳೆಯ ಸ್ನಾನದ ಪುಡಿಗಳು. ಎರಡು ಪುಡಿಗಳನ್ನು ಬೆರೆಸಿ, ಪುಡಿ ಮಿಷ್ರಣದ ಒಂದು ಬೇಸ್ ಸಿದ್ದವಾಗಿಟ್ಟುಕೊಳ್ಳಿ. ಈ ಪದಾರ್ಥಗಳಲ್ಲಿ ಯಾವುದೇ ಒಂದು ಇದ್ದರೂ ಸಾಕು.

ಲಭ್ಯತೆ ಮತ್ತು ಆದ್ಯತೆಗಳ ಆಧಾರದ ಮೇಲೆ ನೀವು ಯಾವುದಾದರೊಂದು ಅಥವ ಎಲ್ಲಾ ಪದಾರ್ಥಗಳನ್ನು ಪುಡಿ ಮಿಶ್ರಣದ ಬೇಸ್ ಗೆ ಸೇರಿಸಬಹುದು.

1 ಬಟ್ಟಲು ಹೆಸರುಕಾಳು+ಕಡ್ಲೆಹಿಟ್ಟು ಮಿಶ್ರಣದ ಬೇಸ್ ಗೆ ನಿಮ್ಮ ಆಯ್ಕೆಯಂತೆ ಸೇರಿಸಬಹುದು:

 • 1 ಚಮಚ ಅರಿಶಿನ ಪುಡಿ
 • 1 ಚಮಚ ಅಕ್ಕಿ ಹಿಟ್ಟು
 • 1 ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ
 • 1 ಚಮಚ ತುಳಸಿ ಪುಡಿ
 • 1 ಚಮಚ ಬೇವಿನ ಪುಡಿ
 • 1 ಚಮಚ ಒಣ ನಿಂಬೆ ಅಥವ ಕಿತ್ತಳೆ ಸಿಪ್ಪೆಯ ಪುಡಿ

ಈ ಪದಾರ್ಥಗಳನ್ನು ಸೇರಿಸುವುದು ಕಡ್ಡಾಯವಲ್ಲ ಆದರೆ ಸೇರಿಸಿದರೆ ಒಳ್ಳೆಯದು.

ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಮತ್ತು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

ಸ್ನಾನದ ಮುಂಚೆ ಎರಡು ಚಮಚ ಮಿಶ್ರಣವನ್ನು ತೆಗೆದುಕೊಳ್ಳಿ ಮತ್ತು ನೀರಿನೊಂದಿಗೆ ಬೆರೆಸಿ. ಯಾವುದೇ ಗಂಟುಗಳಿಲ್ಲದಂತೆ ಖಚಿತಪಡಿಸಿಕೊಳ್ಳಿ.

ಮಿಶ್ರಣವನ್ನು ಬಹಳ ಸಮಯದವರೆಗೆ ನೆನಸಬೇಕಿಲ್ಲ ಕೂಡಲೇ ಸ್ನಾನ ಮಾಡಬಹುದು.

ಕೂದಲಿಗೆ ಪುಡಿ - ವಿಧಾನ 1

ರಿತ, ಬೆಟ್ಟದ ನೆಲ್ಲಿಕಾಯಿ ಮತ್ತು ಶೀಗೆಕಾಯಿ ಮಿಶ್ರಣವು ಕೂದಲಿನ ಶುದ್ಧೀಕರಣ ಮತ್ತು ಪೋಷಣೆಗೆ ಅತ್ಯತ್ತಮವಾಗಿದೆ ಮತ್ತು ನಮ್ಮ ಪೂರ್ವಜರಿಂದ ಬಹಳ ಹಿಂದಿನಿಂದಲೂ ಆಚರಣೆಯಲ್ಲಿದೆ.

ಸಾಂಪ್ರದಾಯಿಕವಾಗಿ ಕಬ್ಬಿಣದ ಪಾತ್ರೆಯಲ್ಲಿ ಬೇಯಿಸಲಾಗುತ್ತದೆ ಮತ್ತು ಮರುದಿನದ ಬಳಕೆಗೆ ರಾತ್ರಿಯಿಡೀ ಇಡಲಾಗುತ್ತದೆ.

ಬೇಯಿಸಿದ ಮಿಶ್ರಣವು ಹೆಚ್ಚು ಸಮಯ ಉಳಿಯುವುದಿಲ್ಲ ಮತ್ತು ಪ್ರತಿ ದಿನದ ಬಳಕೆಯಲ್ಲಿ ತಯಾರಿಕೆಯ ವಿಧಾನ ಪ್ರಾಯೋಗಿಕವಲ್ಲದ ಕಾರಣ ಅವುಗಳನ್ನು ಪುಡಿ ರೂಪದಲ್ಲಿ ಕೊಂಡು ಬಳಸುವ ಮೊದಲು ನೀರಿನಲ್ಲಿ ನೆನಸುತ್ತೇವೆ.

ಉತ್ತಮ ಫಲಿತಾಂಶಕ್ಕಾಗಿ ಬೇಕಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಒಂದು ಗಂಟೆ ಅಥವ ರಾತ್ರಿಯಿಡೀ ನೆನಸಿ. ಲೇಪ ಸಾಕಷ್ಟು ದಪ್ಪವಾಗಿದೆ ಎಂದು ಖಚಿತಪಡಿಸಿಕೊಳ್ಳಿ ಇದರಿಂದ ಅದು ಸುಲಭವಾಗಿ ಹರಿಯುವುದಿಲ್ಲ.

ನಿಮ್ಮ ಕೂದಲನ್ನು ಒದ್ದೆಮಾಡಿಕೊಳ್ಳಿ, ಈ ಮಿಶ್ರಣವನ್ನು ಮೃದುವಾಗಿ ಹಚ್ಚಿಕೊಳ್ಳಿ ಮತ್ತು ಚೆನ್ನಾಗಿ ತೊಳೆಯಿರಿ. ಮಿಶ್ರಣವನ್ನು ಹಚ್ಚಿಕೊಂಡು ಹೆಚ್ಚಿನ ಸಮಯದವರೆಗೆ ಇರಬೇಕೆಂದಿಲ್ಲ.

 

Testimonials