Wisdom
FILTERS:
SORT BY:
ಯೌವನ ಎಂಬುದು ವರ್ಷಗಳ ಲೆಕ್ಕಕ್ಕೆ ಸಂಬಂಧಿಸಿದುದಲ್ಲ, ಬದಲಿಗೆ ಜೀವಂತಿಕೆ ಮತ್ತು ತೊಡಗುವಿಕೆಗೆ ಸಂಬಂಧಿಸಿದುದು.
ಭಾರತದ ಯುವಶಕ್ತಿಯನ್ನು ನಾವು ಪ್ರತಿಭೆ, ಸಾಮರ್ಥ್ಯ ಮತ್ತು ಒಳಗೂಡಿಸಿಕೊಳ್ಳುವಿಕೆಯ ಭವ್ಯ ಅಭಿವ್ಯಕ್ತಿಯಾಗಿ ರೂಪಾಂತರಿಸುವ ಸಮಯ ಬಂದಿದೆ. ಎಲ್ಲರನ್ನೂ ನಮ್ಮವರಂತೆ ನೋಡುವುದೇ ಭಾರತದ ಹೆಗ್ಗುರುತು. ನಾವೆಲ್ಲರೂ ಜೊತೆಯಾಗಿ ಪ್ರಜ್ಞಾವಂತ ಜಗತ್ತನ್ನು ನಿರ್ಮಿಸೋಣ.
ನಿಮ್ಮ ಹೃದಯವು ಸಂತೋಷದಿಂದ ತುಂಬಿದ್ದಾಗ, ಯಾರಿಗೂ ಕೇಡನ್ನು ಉಂಟುಮಾಡುವ ಯೋಚನೆ ನಿಮಗೆ ಬರುವುದಿಲ್ಲ, ಏಕೆಂದರೆ ನಿಮಗೆ ಯಾವುದರಿಂದಲೂ ಬೆದರಿಕೆಯ ಭಾವನೆ ಉಂಟಾಗುವುದಿಲ್ಲ.
ಜೀವನವು ಒಳ್ಳೆಯದು-ಕೆಟ್ಟದು ಎಂಬ ವಿಚಾರಗಳನ್ನು ಮೀರಿದ ವಿದ್ಯಮಾನ. ಇಂತಹ ಪರಿಕಲ್ಪನೆಗಳು ಉಂಟಾಗುವುದು ಮಾನಸಿಕ ಜಗತ್ತನ್ನೇ ವಾಸ್ತವವೆಂದು ಭ್ರಮಿಸುವುದರಿಂದ.
ನಿಮ್ಮ ಸದ್ಯದ ಗಡಿಗಳನ್ನು ನೀವು ಮೀರಬೇಕೆಂದಿದ್ದರೆ, ನಿಮ್ಮ ಹೃದಯದಲ್ಲಿ ಹುಚ್ಚಿರಬೇಕು ಆದರೆ ಮನಸ್ಸಿನಲ್ಲಿ ನಿಚ್ಚಳ ಸಂತುಲನೆಯಿರಬೇಕು.
ಈ ಸೃಷ್ಟಿಯಲ್ಲಿರುವ ಎಲ್ಲ ಜೀವಗಳೆಡೆಗೆ ನೀವು ಆಳವಾದ ಕೃತಜ್ಞತಾಭಾವವನ್ನು ಹೊಂದುವಂತಾಗಲಿ.
ಶಿಕ್ಷಣವು ಏನನ್ನೋ ಉತ್ಪಾದನೆ ಮಾಡುವ ಯಾಂತ್ರಿಕ ವ್ಯವಸ್ಥೆಯಂತಿರಬಾರದು. ಅದು ಸೃಜನಶೀಲತೆ, ಅಂತರ್ಗತ ಪ್ರತಿಭೆ ಮತ್ತು ಮಾನವೀಯತೆಯನ್ನು ನಾಶಮಾಡುತ್ತದೆ. ಪ್ರಜ್ಞಾವಂತ ಜಗತ್ತನ್ನು ನಿರ್ಮಿಸಲು ಮಾನವ ಹೃದಯವನ್ನು ಪಾಲಿಸಿ ಪೋಷಿಸುವ ಶಿಕ್ಷಣ ಅಗತ್ಯ.
ಒಬ್ಬ ಮನುಷ್ಯರಾಗಿ, ನಿಮಗೆ ನಿಮ್ಮ ಸನ್ನಿವೇಶಗಳನ್ನು ರೂಪಿಸಿಕೊಳ್ಳುವ ಶಕ್ತಿಯಿದೆ. ಇದನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿದಾಗ, ನೀವು ಜೀವನವನ್ನು ನಿಮಗೆ ಬೇಕಾದಂತೆ ನಿರ್ಮಿಸಿಕೊಳ್ಳಬಹುದು.