About
Wisdom
FILTERS:
SORT BY:
ನೀವು ಸತ್ಯದೊಂದಿಗೆ ಸಮಾಗಮದಲ್ಲಿದ್ದರೆ, ನಿಮ್ಮ ಸಂಬಂಧಗಳು ಕೇವಲ ಸಂಬಂಧಗಳಾಗಿ ಇರುತ್ತವೆಯೇ ಹೊರತು ವ್ಯಾಮೋಹವಾಗುವುದಿಲ್ಲ. ನೀವು ತನ್ಮಯತೆಯನ್ನು ಹೊಂದುವಿರಿ, ಆದರೆ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಪ್ರತಿಯೊಂದು ಹಾತೊರೆತವೂ ನಿಜವಾಗಿ ಅನಂತದ ಹಾತೊರೆತವೇ. ಆದರೆ ಅದು ಕಂತುಗಳಲ್ಲಿ ಅಭಿವ್ಯಕ್ತಿ ಪಡೆಯುತ್ತಿದೆ ಅಷ್ಟೆ.
ಇಂದ್ರಿಯಸುಖವು ಒಂದು ಮಟ್ಟದ ಸವಿಯಾದರೆ, ಸಂತೋಷವು ಇನ್ನೊಂದು ಮಟ್ಟದ್ದು. ಇಂದ್ರಿಯಸುಖವು ಸುಂದರವಾದುದೇ, ಆದರೆ ಅದು ನಿಮ್ಮನ್ನು ಅದರ ಗುಲಾಮನಾಗಿಸುತ್ತದೆ. ಸಂತೋಷವು ಅದ್ಭುತವಾದುದು; ಎಲ್ಲಕ್ಕಿಂತ ಮಿಗಿಲಾಗಿ ಅದು ನಿಮ್ಮನ್ನು ಮುಕ್ತಗೊಳಿಸುತ್ತದೆ.
ಎಲ್ಲವೂ ಶೂನ್ಯದಿಂದ ಬಂದು ಶೂನ್ಯಕ್ಕೆ ಹಿಂತಿರುಗುತ್ತದೆ. ಶೂನ್ಯವೇ ಅಸ್ತಿತ್ವದ ಮೂಲಾಧಾರ.
ವರ್ತಮಾನವನ್ನು ನೀವು ಹೇಗೆ ಅನುಭವಿಸುತ್ತೀರಿ ಎಂಬುದನ್ನು ನಿಮ್ಮ ಗತಕಾಲವು ನಿರ್ಧರಿಸಲು ನೀವು ಅನುಮತಿಸಿದಿರಿ ಎಂದಾದರೆ, ನಿಮ್ಮ ಭವಿಷ್ಯವನ್ನು ನೀವು ಹಾಳುಗೆಡವಿದಿರಿ.
ನೀವು ನಿಮ್ಮೊಳಗೆ ವಿಕಾಸವನ್ನು ಹೊಂದಿದರೆ, ಅಭಿಮಾನವೂ ಇರುವುದಿಲ್ಲ, ಪೂರ್ವಗ್ರಹವೂ ಇರುವುದಿಲ್ಲ. ಆಗ ನೀವು ಶುದ್ಧ, ನಿಚ್ಚಳ ವಿವೇಕದಿಂದ ಕಾರ್ಯಗೈಯುವಿರಿ.
ನಿಮ್ಮ ಪ್ರಜ್ಞೆಯ ಗುಣಮಟ್ಟವು ನಿಮ್ಮ ದೇಹದ ಪ್ರತಿ ಕೋಶದಲ್ಲೂ, ನಿಮ್ಮ ಜೀವನದ ಪ್ರತಿ ಕ್ಷಣವೂ ಅಭಿವ್ಯಕ್ತಿ ಪಡೆಯುತ್ತದೆ.
ಈ ಮಾನವ ಜೀವವ್ಯವಸ್ಥೆಯು ಭೂಮಿಯ ಮೇಲಿರುವ ಅತ್ಯಂತ ಪರಿಷ್ಕೃತವಾದ ಉಪಕರಣವಾಗಿದೆ. ನೀವು ಬಳಕೆದಾರರ ಕೈಪಿಡಿಯನ್ನು (ಯೂಸರ್ಸ್ ಮಾನ್ಯುವಲ್) ಓದಿರುವಿರೇನು.
ದೇಹ ಮತ್ತು ಮನಸ್ಸು ಅಸ್ತಿತ್ವದ ಮೇಲ್ಪದರಗಳಷ್ಟೆ. ನಿಮಗೆ ಅವುಗಳ ಅನಿತ್ಯತೆಯ ಅರಿವಾದರೆ, ನೀವು ಅಸ್ತಿತ್ವದ ಮೂಲದೆಡೆಗೆ ಮುಖ ಮಾಡುವಿರಿ.
ನಿಮ್ಮ ಯೋಚನೆ-ಭಾವನೆಗಳು ಅದೇನೇ ಇರಲಿ, ಅದು ಸ್ಥಳೀಯ ಕಾಡುಹರಟೆಯಷ್ಟೆ, ನಿಮ್ಮೊಳಗಷ್ಟೆ ನಡೆಯುತ್ತಿರುವ ಹರಟೆ. ಅದು ಚೆನ್ನಾಗಿದ್ದರೆ ಅದನ್ನು ಆನಂದಿಸಿ, ಆದರೆ ಅದನ್ನು ನಂಬಬೇಡಿ.
ನಿಮ್ಮ ಹೆತ್ತವರು ನಿಮಗೆ ಮಾನವ ಶರೀರವನ್ನು ನೀಡಿದರು. ಆದರೆ ನೀವು ಬರೀ ಅವರು ನಿಗದಿಸಿದಂತೆ ರೂಪುಗೊಳ್ಳುತ್ತೀರಾ ಅಥವಾ ಒಂದು ಪರಿಪೂರ್ಣ ಜೀವವಾಗಿ ಅರಳುತ್ತೀರಾ ಎಂಬುದು ನಿಮ್ಮದೇ ಆಯ್ಕೆ.
ಒಮ್ಮೆ ನಿಮ್ಮ ಮತ್ತು ದೇಹದ ನಡುವೆ, ನಿಮ್ಮ ಮತ್ತು ಮನಸ್ಸಿನ ನಡುವೆ ಒಂದು ಅಂತರ ಉಂಟಾಯಿತೆಂದರೆ, ಆಗ ಭೌತಿಕವನ್ನು ಮೀರಿದುದನ್ನು ಅನುಭವಿಸುವ ಸಾಧ್ಯತೆಯು ತೆರೆದುಕೊಳ್ಳುವುದು.