ಮನೆಯಲ್ಲಿದ್ದಾಗ ಆಶ್ರಮದಲ್ಲಿದ್ದರೆ ಚಂದ ಅನ್ನಿಸುತ್ತೆ. ಆಶ್ರಮದಲ್ಲಿದ್ದಾಗ ಮನೆಯಲ್ಲಿದ್ದರೆ ಚಂದ ಅನ್ನಿಸುತ್ತೆ. ಮನಸ್ಸು ಇವತ್ತು ಒಂದು ಹೇಳುತ್ತೆ, ನಾಳೆ ಇನ್ನೊಂದು ಹೇಳುತ್ತೆ. ಬದಲಾಗುವ ಸನ್ನಿವೇಶಗಳಿಗೆ ಮತ್ತು ಭಾವನೆಗಳ ಹೊಯ್ದಾಟಕ್ಕೆ ತಕ್ಕಂತೆ ಮನಸ್ಸು ಹೊಸ ಸಮರ್ಥನೆಗಳನ್ನು, ತರ್ಕಗಳನ್ನು ಹುಟ್ಟು ಹಾಕುತ್ತದೆ. ಹಾಗಾದರೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ಏನು ಮಾಡಬೇಕು ಅಂತ ನಿರ್ಧರಿಸುವುದು ಹೇಗೆ? ಸದ್ಗುರು ಉತ್ತರಿಸುತ್ತಾರೆ.