ಉತ್ತರಕ್ಕೆ ತಲೆ ಹಾಕಿ ಯಾಕೆ ಮಲಗಬಾರದು?

 

ನಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ತಲೆಯನ್ನು ಉತ್ತರ ದಿಕ್ಕಿಗೆ ತಿರುಗಿಸಿ ಮಲಗಬಾರದು ಎಂದು ಹೇಳಲಾಗುತ್ತದೆ. ಇದರ ವೈಜ್ಞಾನಿಕ ವಿವರಣೆಯನ್ನು ಈ ವೀಡಿಯೋನಲ್ಲಿ ಸದ್ಗುರುಗಳು ವಿವರಿಸುತ್ತಾ ಹೇಳುತ್ತಾರೆ, "ಭೂಮಿಯ ಮೇಲಿರುವುದೆಲ್ಲವೂ ಧ್ರುವಗಳ ಕಾಂತೀಯ ಎಳೆತದ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಆದ್ದರಿಂದ ಅದರ ಪ್ರಭಾವ ನಮ್ಮ ಶರೀರ ವ್ಯವಸ್ಥೆಯ ಮೇಲೂ ಖಂಡಿತವಾಗಿಯೂ ಇರುತ್ತದೆ." ಹಾಗೆಯೇ ಯಾವ ದಿಕ್ಕಿನಲ್ಲಿ ಮಲುಗುವುದು ಅತ್ಯುತ್ತಮ ಎಂಬ ಪ್ರಶ್ನೆಯೊಂದನ್ನೂ ಉತ್ತರಿಸುತ್ತಾರೆ.

Uttarakke tale haki yake malagabaradu?

ಲಿಪ್ಯಂತರ:

ಪ್ರಶ್ನೆ: ಇತ್ತೀಚಿನ್ ನೀವ್ ಮಾತಾಡಿದ್ ವಿಷಯಗಳಲ್ಲಿ ನಂಗೊಂದ್ ಪ್ರಶ್ನೆಯಿದೆ. ಅದೇನೆಂದ್ರೆ ನಾವ್ ಮಲ್ಕೊಳ್ಳೋವಾಗ ನಮ್ ತಲೆ ಉತ್ತರ ದಿಕ್ಕಿಗ್ ಯಾಕ್ ಇರ್ಬಾರ್ದು? ಈ ಪ್ರಶ್ನೆ ನನ್ನನ್ನ ಮಂಗನ್ ತರ ಬಹಳ ದಿನಗಳಿಂದ ಹಿಡ್ಕೊಂಡ್ ಬಿಟ್ಟಿದೆ.

ಸದ್ಗುರು: ಹಾಗಿದ್ರೆ ನೀವು ವಿಕಾಸದ್ ಪ್ರಕ್ರಿಯೇನಾ ಅದ್ ಇರುವಂತೆಯೇ ಒಪ್ಪಿಕೊಳ್ತೀರಿ ಅಂತಾಯ್ತು! ತಲೆಯನ್ನ ಉತ್ತರ ದಿಕ್ಕಿಗೆ ಯಾಕ್ ಇಡ್ ಬಾರ್ದು. ಈಗ... ಭೂಮಿಗೆ ಉತ್ತರ ಧ್ರುವ ದಕ್ಷಿಣ ಧ್ರುವಗಳಿವೆ ಅನ್ನೋದ್ ನಿಮಗ್ಗೊತ್ತು; ಅಂದ್ರೆ ಅವು ಅಯಸ್ಕಾಂತೀಯ ಕೇಂದ್ರಗಳು. ಹಾಗೆನೇ ನಿಮಗಿದೂ ಗೊತ್ತಿರ್ಬಹುದು - ಪ್ರಪಂಚದ ಭೂಭಾಗಗಳು, ಇಡೀ ಭೂಖಂಡಗಳು ನಿಧಾನವಾಗಿ ಉತ್ತರ ಧ್ರುವದ್ ಕಡೆಗ್ ಸೆಳೆಯಲ್ಪಡ್ತಾ ಇವೆ, ಅವು ಚಲಿಸ್ತಾ ಇವೆ - ನಿಮ್ಗಿದು ಗೊತ್ತಾ? ಕಡಿಮೆ ಪಕ್ಷ ಭೂಖಂಡಗಳು ಚಲಿಸ್ತಾ ಇವೆ ಅನ್ನೋದಂತೂ ಗೊತ್ತಿರ್ಬಹುದು. ಹಿಮಾಲಯ ಪರ್ವತಗಳಲ್ಲಿನಾವಿಂದು ನೋಡ್ತಿರೋಂತ ಹಿಮಾಯಲದ್ ಶ್ರೇಣಿಗಳುಮತ್ತು ಮಾನಸಸರೋವರದಲ್ಲಿ ನೀವು ಸಮುದ್ರದ್ ಚಿಪ್ಪುಗಳನ್ನು ಕಾಣ್ಬಹುದು! ಯಾಕಂದ್ರೆ ಒಂದ್ ಸಮಯದಲ್ಲಿ ಅದು ಸಮುದ್ರದ್ ಮಟ್ಟದಲ್ಲೇ ಇತ್ತು. ಈವತ್ತದು ಹದಿನೈದ್ ಸಾವಿರದ ಆರ್ನೂರು ಅಡಿ ಎತ್ರದಲ್ಲಿದೆ. ಈ ಸರೋವರದ್ ಭೂಮಿಯನ್ನ ಸಮುದ್ರ ಮಟ್ಟದಿಂದ ಇಷ್ಟ್ ಎತ್ರಕ್ಕೆ ಕೊಂಡ್ ಹೋಗಿದ್ದು ಏನಂದ್ರೆ, ಇಡೀ ಭಾರತದ್ ಉಪಖಂಡ ಮಧ್ಯ ಏಷ್ಯಾದ ಭೂಭಾಗಕ್ಕೆ ಡಿಕ್ಕಿ ಹೊಡೀತಾ ಇದೆ. ಇದ್ರಿಂದಲೇ ಹಿಮಾಲಯದ್ ಪರ್ವತಗಳು ಇನ್ನೂ ಬೆಳೀತಾನೇ ಇವೆ. ಅದು ಗುಡ್ಡೆಯಾಗ್ತಾ ಇದೆ, ಅದು ಬರೀ ಒಂದು ಡಿಕ್ಕಿ ಅಷ್ಟೆ! ಕಾರುಗಳು ಈ ರೀತಿ ಗುಡ್ಡೆಯಾಗೋದ್ ನೋಡಿದೀರಾ? ಹಾಗೆನೇ. ಭಾರತ ಡಿಕ್ಕಿ ಹೊಡೀತಾ ಇದೆ.

ಪ್ರತಿ ವರ್ಷ ಭಾರತ ಸುಮಾರು 1.23 ಸೆಂಟಿಮೀಟರ್ ನೆಲವನ್ನ ಕಳ್ಕೊಳ್ತಾ ಇದೆ. ನನಗ್ ಆ ಸಂಖ್ಯೆ ಸರಿಯಾಗ್ ಗೊತ್ತಿಲ್ಲ, ಅದ್ರ್ ಹತ್ರದಲ್ಲೆಲ್ಲೋ ಇದೆ. ಪ್ರತಿ ವರ್ಷ ಭಾರತ ಸುಮಾರು 1.23 ಸೆಂಟಿಮೀಟರ್ ನೆಲವನ್ನ ಕಳ್ಕೊಳ್ತಾ ಇದೆ, ಯಾಕಂದ್ರೆ ಅದು ಹಿಮಾಲಯದ್ ಶ್ರೇಣಿಗೆ ಡಿಕ್ಕಿ ಹೊಡೀತಾ ಇದೆ ಮತ್ತು ಗುಡ್ಡೆಯಾಗ್ತಾ ಇದೆ. ಯಾಕಂದ್ರೆ ಉತ್ತರ ಧ್ರುವದ್ ಅಯಸ್ಕಾಂತೀಯ ಸೆಳೆತ ಭೂಖಂಡಗಳನ್ನ ನಿಧಾನವಾಗಿ ಮೇಲ್ಗಡೆ ಎಳೀತಾ ಇದೆ. ಎಷ್ಟೊಂದ್ ಪ್ರಚಂಡವಾದಂತ ಅಯಸ್ಕಾಂತೀಯ ಸೆಳೆತ! ಭೂಖಂಡಗಳನ್ನೇ ಮೇಲಕ್ಕೆಳೀತಾ ಇದೆ! ಈ ತರದ್ ಅಯಸ್ಕಾಂತೀಯ ಸೆಳೆತ ನಿರಂತರವಾಗಿ ಸಕ್ರಿಯವಾಗಿದೆ ಭೂಮಿಯ ಎಲ್ಲಾ ಕಡೆ.

ಒಂದ್ವೇಳೆ ನಿಮಗ್ ಸ್ವಲ್ಪ ರಕ್ತಹೀನತೆ ಉಂಟಾದ್ರೆ, ನೀವು ಡಾಕ್ಟ್ರ ಹತ್ರ ಹೋದ್ರೆ, ಆಗ ಅವ್ರು ನಿಮ್ಗೆ ಏನ್ ತೊಗೋಬೇಕೂಂತ ಹೇಳ್ತಾರೆ?

ಎಲ್ಲರೂ: ಕಬ್ಬಿಣದ್ ಅಂಶ

ಸದ್ಗುರು: ಹಾಗಿದ್ರೆ, ಅದ್ ನಿಮ್ಮ ರಕ್ತದ ಒಂದ್ ಮುಖ್ಯವಾದ ಅಂಶ ಆಗಿರ್ಬೇಕು, ಹೌದ್ ತಾನೇ?

ಹಾಗಿದ್ರೆ ನಾನು ತುಂಬಾ ಶಕ್ತಿಯುತ್ ವಾದ ಮ್ಯಾಗ್ನೆಟ್ ಅನ್ನ ನಿಮ್ ತಲೆ ಮೇಲೆ ಇಟ್ರೆ ಅದು ರಕ್ತವನ್ನ ನಿಧಾನವಾಗಿ ಮೇಲ್ಗಡೆಗ್ ಎಳಿಯುತ್ತೆ, ಯಾಕಂದ್ರೆ ರಕ್ತದಲ್ಲಿ ಕಬ್ಬಿಣದ್ ಅಂಶ ಇದೆ. ನಿಮ್ ಶರೀರ ಯಾವ್ ತರ ವಿನ್ಯಾಸಗೊಳಿಸಲ್ಪಟ್ಟಿದೆ ಅಂದ್ರೆ, ನಿಮ್ ಹೃದಯ, ರಕ್ತಪರಿಚಲನಾ ವ್ಯವಸ್ಥೆಯ ಪಂಪಿಂಗ್ ಸ್ಟೇಶನ್, ಶರೀರದ್ ಮುಕ್ಕಾಲು ಭಾಗದಷ್ಟು ಮೇಲಿದೆ, ಮಧ್ಯದಲ್ಲಿಲ್ಲ. ಯಾಕಂದ್ರೆ, ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಪಂಪ್ ಮಾಡೋದು ಕಷ್ಟ, ಭೂಮಿ ಕಡೆಗೆ ಪಂಪ್ ಮಾಡೋದು ಸುಲಭ. ಹಾಗಾಗಿ ಅದು ಇಲ್ಲಿದೆ. ಸಾಮಾನ್ಯವಾಗಿ ಕೆಳ್ಗಡೆ ಹೋಗೋವಂತ ರಕ್ತನಾಳಗಳೆಲ್ಲಾ ದೊಡ್ಡವು. ಮೇಲ್ಗಡೆ ಹೋಗೋವಂತವು ಸಣ್ಣವು. ಇಲ್ಲಿಗ್ ಹೋದಂಗೆಲ್ಲಾ ಅವು ಕೂದ್ಲಿನಷ್ಟೆ ಸಣ್ಣ ಆಗ್ಬಿಡತ್ವೆ. ಎಷ್ಟೊಂದ್ ಸೂಕ್ಷ್ಮ ಅಂದ್ರೆ, ನಿಮ್ಮ ಮೆದುಳ್ನಲ್ಲಿರೋ ಪರಿಚಲನಾ ವ್ಯವಸ್ಥೆ ಹೇಗಿದೇಂದ್ರೆ, ಅಲ್ಲಿಗ್ ಒಂದ್ ತೊಟ್ಟು ಜಾಸ್ತಿ ಹೋದ್ರೆ, ಬ್ರೈನ್ ಹೇಮ್ ರೇಜ್ ಆಗ್ಬಿಡತ್ತೆ. ಜನ್ರಿಗ್ ಸ್ಟ್ರೋಕ್ ಆಗತ್ತೆ.

ಈಗ ನೀವು ಹೀಗಿದೀರ. ಮಲ್ಕೊಳೋವಾಗ ಹೀಗಾಗ್ತೀರಿ. ಅದ್ರಿಂದ್ಲೇ ಶರೀರದಲ್ಲಿ ಸ್ವಲ್ಪ ಏರುಪೇರಾಗುತ್ತೆ, ಯಾಕಂದ್ರೆ, ಹೃದಯ ಪಂಪ್ ಮಾಡ್ತಾ ಇತ್ತು ಗುರುತ್ವಾಕರ್ಷಣೆಯ ತಡೆತವನ್ನ ಲೆಕ್ಕಾಚಾರ ಮಾಡ್ಕೊಂಡು. ಈಗ ಒಮ್ಮೆಲೇ ಗುರುತ್ವಾಕರ್ಷಣೆಯ ತಡೆತ ಏನೂ ಇಲ್ಲ, ನೀವು ಹೀಗಾಗ್ಬಿಟ್ರಿ. ಅದೂ ಅಲ್ದೆ ನೀವು ಉತ್ತರಕ್ಕೆ ತಲೆ ಹಾಕಿದ್ರೆ, ನಿಧಾನವಾಗಿ ರಕ್ತ ನಿಮ್ ಮೆದುಳಿನ್ ಕಡೆ ಸೆಳೆಯಲ್ಪಡುತ್ತೆ. 

ಇದ್ರಿಂದ ನಿಮಗಾಗ್ಬಹುದಾದ ಒಂದ್ ವಿಷ್ಯ ಏನಂದ್ರೆ, ನಿದ್ರೆ ಚೆನ್ನಾಗಿರಲ್ಲ. ಎಲ್ಲಾ ತರದ್ ಕನ್ಸುಗಳ್ ಬರುತ್ತೆ. ನೀವು ತುಂಬಾ ವಯಸ್ಸಾದವರಾಗಿದ್ರೆ, ನಿಮಗ್ ಸ್ಟ್ರೋಕ್ ಆಗ್ಬಹುದು, ಅಥವಾ ನಿದ್ದೆಯಲ್ಲೇ ಮರಣ ಹೊಂದ್ ಬಹುದು. ಸಾಧ್ಯತೆ ಇದೆ. ನೀವ್ ಒಂದ್ ದಿನ ಹಂಗ್ ಮಲ್ಕೊಂಡ್ರೆ ಸತ್ ಹೋಗ್ತೀರಿ ಅಂತ ಅಲ್ಲ. ಪ್ರತಿದಿನ ಪ್ರತಿದಿನ ಪ್ರತಿದಿನ ನಿಮ್ಮ ಹಾಸ್ಗೇನಾ ಅದೇ ತರ ಹಾಕ್ಬಿಟ್ಟಿದ್ರೆ, ನೀವು ಪ್ರತಿದಿನ ಮಲ್ಕೊಳ್ಳೋವಾಗ ಉತ್ತರ ದಿಕ್ಕಿಗೇ ತಲೆ ಹಾಕ್ತಿದ್ರೆ, ನೀವು ತೊಂದ್ರೇನಾ ಆಹ್ವಾನಿಸ್ತಾ ಇದೀರಾ.

ಏನೋ ಒಂದ್ ತರದ್ ತೊಂದ್ರೆ, ನೀವ್ ಯಾವ್ ತರದ್ ತೊಂದ್ರೇಗ್ ಬೀಳ್ತೀರಾ ಅನ್ನೋದನ್ನ ಹೇಳಕ್ಕಾಗಲ್ಲ - ಅದು ನಿಮ್ ಶರೀರದ್ ಸಾಮರ್ಥ್ಯವನ್ನ ಅವಲಂಬಿಸಿದೆ. ಅದು ದುರ್ಬಲ ಅಂದ್ರೆ ತುಂಬ ದುರ್ಬಲವಾಗಿದ್ರೆ, ನೀವು ಮರಣ ಹೊಂದ್ ಬಹುದು. ಅಥವಾ ನಿಮಗ್ ಸ್ಟ್ರೋಕ್ ಆಗ್ಬಹುದು. ಅಥವಾ ಬರೀ ನಿದ್ದೆ ಚೆನ್ನಾಗಿಲ್ದೇ ಹೋಗ್ಬಹುದು. ಬರೀ ಕೆಟ್ ಕನ್ಸು ಬೀಳ್ಬಹುದು. ಅಥ್ವಾ ದಿನದ್ ಸಮಯ್ದಲ್ಲಿ ನೀವು ವಿಚಿತ್ರವಾಗ್ ಆಡ್ಬಹುದು. ಏನೇನೋ ಆಗ್ಬಹುದು, ಯಾಕಂದ್ರೆ ಮೆದುಳ್ನಲ್ಲಿ ಜಾಸ್ತಿ ರಕ್ತಸಂಚಾರ ಆಗ್ತಾ ಇದೆ - ಅದು ಆಗ್ ಬಾರದಂತ ಸಮಯ್ದಲ್ಲಿ. ಇದೆಲ್ಲ ಆಗ್ಬಹುದು ನೀವು ತಲೇನಾ ಉತ್ತರಕ್ ಹಾಕೋದ್ರಿಂದ.

ಒಂದ್ ವೇಳೆ ನೀವು ದಕ್ಷಿಣ ಅಮೆರಿಕಕ್ ಹೋದ್ರೆ, ಅಲ್ಲಿ ನೀವು ತಲೇನಾ ದಕ್ಷಿಣಕ್ ಹಾಕ್ಬಾರ್ದು. ಹಾಂ! ನೀವು ಆಸ್ಟೇಲಿಯಾಗ್ ಹೋದ್ರೆ, ಅಲ್ಲಿ ನೀವು ತಲೇನಾ ದಕ್ಷಿಣಕ್ ಹಾಕ್ಬಾರ್ದು. ನೀವ್ ತಲೇನಾ ಉತ್ತರಕ್ ಹಾಕ್ಬಹುದು, ಅಲ್ಲಿದ್ದಾಗ. ಭೂಮಿಯ ಉತ್ತರಾರ್ಧದಲ್ಲಿ ನೀವ್ ನಿಮ್ ತಲೇನಾ ಉತ್ತರಕ್ ಹಾಕ್ಬಾರ್ದು.

ಪ್ರಶ್ನೆ: ಭೂಮಿಯ ಸಮಭಾಜಕ ವೃತ್ತದಲ್ಲಿ ಏನ್ ಮಾಡೋದು?

ಸದ್ಗುರು: ದಿಕ್ಸೂಚಿ ಮುಳ್ಳಿನ್ ತರ ಸುತ್ತ ಸುತ್ತ ಸುತ್ತಿ!

ಪ್ರಶ್ನೆ: ಹಾಗಿದ್ರೆ ಯಾವ ದಿಕ್ಕು ಒಳ್ಳೇದು ತಲೆ ಹಾಕೋದಿಕ್ಕೆ?

ಸದ್ಗುರು: ಪೂರ್ವ ದಿಕ್ಕು ಅತ್ಯುತ್ತಮ. ಈಶಾನ್ಯ (northeast) ಒಳ್ಳೇದು. ಪಶ್ಚಿಮ ಪರ್ವಾಗಿಲ್ಲ. ದಕ್ಷಿಣ ಬೇರೆ ದಾರಿನೇ ಇಲ್ದಿದ್ರೆ. ಉತ್ತರ. ಬೇಡ.

 
 
  0 Comments
 
 
Login / to join the conversation1