’ಕಾಮ’ - ಮನುಷ್ಯನ ಈ ಗುಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅದು ಒಳ್ಳೆಯದೇ? ಕೆಟ್ಟದ್ದೇ? ಎಷ್ಟಿದ್ದರೆ ಚೆನ್ನ? ಮುಂತಾದವುಗಳ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ಆದರಿಲ್ಲಿ ನಾವು ಒಂದು ಅತ್ಯಂತ ವಿಶಿಷ್ಟ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಶಿವ ’ಕಾಮ’ನನ್ನು ಸುಟ್ಟ ಕಥೆ! ಇನ್ನೇನು ಮಹಾಶಿವರಾತ್ರಿ ಸನಿಹ ಬಂತು. ಫೆಬ್ರುವರಿ 21, 2019 ಮಹಾಶಿವರಾತ್ರಿಯ ದಿನ. ಈಶಾ ಯೋಗ ಕೇಂದ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಇದರ ಆಚರಣೆಯ ಅಂಗವಾಗಿ ಬೃಹತ್ ಕಾರ್ಯಕ್ರಮ ನಡೆಯುತ್ತದೆ. ನೀವೂ ಬಂದು ಈ ಅಮೋಘ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬಹುದು, ಅಥವಾ ವಿವಿಧ ಟಿವಿ ವಾಹಿನಿಗಳಲ್ಲಿ, ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೇರಪ್ರಸಾವನ್ನು ವೀಕ್ಷಿಸಬಹುದು. ಈ ಹಿನ್ನಲೆಯಲ್ಲಿ ಶಿವನ ಕುರಿತಾದ ‘ಶಿವನೆಂಬ ಜೀವಂತ ಸಾವು’ ಹೆಸರಿನ ಅತ್ಯಂತ ರೋಚಕ ವೆಬ್ ಸರಣಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ! ಇದು ಆ ಸರಣಿಯ ಮೊದಲ ಕಂತು. ಅದ್ಭುತ ಕಥೆಗಳನ್ನು ಕೇಳಲು ನಿರೀಕ್ಷೆಯಲ್ಲಿರಿ!