ಸಮಸ್ತ ವಿಶ್ವವು ಪಂಚಭೂತಗಳ ಆಟವಷ್ಟೆ. ಆದ್ದರಿಂದ ಭೂತಶುದ್ಧಿ ಎಂಬುದು ಯೋಗವಿಜ್ಞಾನದ ಮೂಲ ತಳಹದಿ ಎಂಬುದನ್ನು ತಿಳಿಸಿಕೊಡುತ್ತಾ ಆ ನಿಟ್ಟಿನಲ್ಲಿ ಐದು ಸರಳ ಅಭ್ಯಾಸಗಳನ್ನು ಸದ್ಗುರುಗಳು ಇಲ್ಲಿ ಕಲಿಸುತ್ತಾರೆ. ಪಂಚಭೂತಗಳನ್ನು ಶುದ್ಧೀಕರಿಸುವ ಮೂಲಕ, ನೀವು ನಿಮ್ಮ ದೇಹ-ಮನಸ್ಸುಗಳಲ್ಲಿ ಆರೋಗ್ಯ ಮತ್ತು ಜೀವಂತಿಕೆಯ ಚಿಲುಮೆ ಉಕ್ಕುವಂತೆ ಮಾಡಬಹುದು, ಮತ್ತು ನಿಮ್ಮ ಸ್ವರೂಪವನ್ನು ಅರಿಯುವತ್ತ ಸಾಗಬಹುದು ಎಂದು ವಿವರಿಸುತ್ತಾರೆ.