ಪರೀಕ್ಷೆ ಅಂದರೆ ಅನೇಕರ ಹೃದಯದಲ್ಲಿ ಒಂದು ಬಗೆಯ ತಳಮಳ. ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ, ಅವರ ಪೋಷಕರಿಗೂ ಒಂದು ದುಗುಡ. ಅದೂ ಹತ್ತನೆಯ ಅಥವಾ ಹನ್ನೆರಡನೆಯ ತರಗತಿಯ ‘ಬೋರ್ಡ್’ ಎಕ್ಸಾಮ್ ಇದ್ದರೆ ಇವರಷ್ಟೇ ಅಲ್ಲದೇ ಸಂಬಂಧಿಕರಿಗೂ ಕುತೂಹಲ. ಇದೆಲ್ಲದರಿಂದ ವಿದ್ಯಾರ್ಥಿಗಳಿಗೆ ಒಂದಷ್ಟು ’ಪರೀಕ್ಷೆಯ ಭಯ’ ಉದ್ಭವವಾಗಿರುತ್ತದೆ. ಹಾಗಿದ್ದರೆ ಈ ಭಯದಿಂದ ಏನಾದರೂ ಪ್ರಯೋಜನವಿದೆಯೇ? ಭಯವಿಲ್ಲದೇ ಪರೀಕ್ಷೆಯನ್ನು ಎದುರಿಸುವುದು ಹೇಗೆ?