Nimma "Haavina" medulina maatu kelabedi - Guru Pournimeya sandesha

 

ಲಿಪ್ಯಂತರ:

 

ಸದ್ಗುರು: ಕೆಲವು ದಿನಗಳ ಹಿಂದೆಯಷ್ಟೆ ದಕ್ಷಿಣಾಯನ ಪ್ರಾರಂಭವಾಯ್ತು. ಅಂದ್ರೆ ಸೂರ್ಯನ ಪಥ ದಕ್ಷಿಣದತ್ತ ತಿರುಗಿದೆ. ಅಥ್ವಾ ಭೂಮಿ ಮತ್ತು ಸೂರ್ಯನ ಸಂಬಂಧ ದಕ್ಷಿಣಾಭಿಮುಖವಾಗಿದೆ. ಯೋಗ ಸಂಸ್ಕೃತಿಯಲ್ಲಿ ಇದನ್ನ ಸಾಧನ ಪಾದ ಅಂತ ಪರಿಗಣಿಸಲಾಗತ್ತೆ. ಅಂದ್ರೆ, ನಿಮ್ ಮೇಲೆ ಕೆಲ್ಸ ಮಾಡ್ಕೊಳ್ಳೋದಕ್ಕೆ ಶ್ರೇಷ್ಠವಾದ ಸಮಯ ಅಂತ. ಆಮೇಲೆ, ಆ ತಿಂಗಳ ಕೊನೆಯಲ್ಲಿ ಗುರು ಪೌರ್ಣಮಿ ಬರುತ್ತೆ.  ಈಗ್ ಬಿಡಿ, ಇರೋ ಬರೋರ್ಗೆಲ್ಲ ಒಂದೊಂದು ದಿನ ಇದೆ (ನಗು). ಇಷ್ಟವಾದ್ ತಿಂಡಿ ತಿನ್ನೋ ದಿನ, bubble bath ದಿನ, (ನಗು) Diabetes Day ಕೂಡ ಇದೆ. (ನಗು) Of course, ನಿಜವಾದ ಮಹತ್ವ ಇರೋಂತ ಹಲವು ದಿನಗಳೂ ಇವೆ. ಇವಾಗ, ಯೋಗ ದಿನ ಕೂಡ ಇದೆ. ಆದರೆ, ಇದೆಲ್ಲಾ ಆಗೋಕ್ಕಿಂತ ಮುಂಚೆ, ಗುರುವಿಗಾಗಿ ಒಂದ್ ದಿನ ಇತ್ತು, ಅದೇ ಗುರು ಪೌರ್ಣಮಿ. (ನಗು)

ಅದು ಈ ತಿಂಗಳ ಕೊನೆಯಲ್ಲಿ ಬರುತ್ತೆ. ಇದು ಬಹಳ ಶಕ್ತಿಯುತವಾದ ಪೌರ್ಣಮಿ, ಯಾಕಂದ್ರೆ ದಕ್ಷಿಣಾಯನ ಆರಂಭವಾದ ನಂತರ ಬರೋ ಮೊದಲ ಮೂರು ಪೌರ್ಣಮಿಗಳು ಒಂದು ನಿರ್ದಿಷ್ಟ ಮಹತ್ವವನ್ನ ಹೊಂದಿವೆ. ಯಾರಿಗೆ ಅಂದ್ರೆ, ಆಂತರಿಕ ಸಾಧನೆಯಲ್ಲಿ ತೊಡಗಿರೋವ್ರಿಗೆ.

ಆದ್ದರಿಂದ, ಈ ಗುರುಪೌರ್ಣಮಿಯು ಏನನ್ನ ನೆನಪಿಸ್ತದೆ ಅಂದ್ರೆ, ಮೊದಲ ಬಾರಿಗೆ, ಅಪಾರವಾದ ಸಾಧ್ಯತೆ ಮತ್ತು ಸಾಮರ್ಥ್ಯಗಳಿರುವ ಒ೦ದು ಮಹಾನ್ ಚೇತನವು, ಜ್ಞಾನವನ್ನು ಹಂಚಿಕೊಳ್ಳಲು ಮುಂದಡಿಯಿಟ್ಟಿತು. ತನ್ನ ಸ್ವ-ಇಚ್ಛೆಯಿಂದ ಅಲ್ಲ, ಅವನನ್ನ ಒಂದ್ ತರ ಮೋಸ ಮಾಡಲಾಯ್ತು. tch. ಈಗ ನಾನ್ ಆ ಪೂರ್ತಿ ಕತೆ ಹೇಳ್ಲಿಕ್ಕೆ ಹೋಗಲ್ಲ. ಆದ್ರೆ, ಅವನಿಗೆ ಒಂದ್ ತರ ಕಣ್ಣುಕಟ್ಟು ಮಾಡಲಾಯ್ತು. (ನಗು) ನಾನ್ ಅದಕ್ಕೆ ಹೇಳಿದ್ದು ಬಹಳ ದಿಟ್ಟತನ ಅದು ಅಂತ, ಆದ್ರೆ ಸ್ವಲ್ಪ, tch.

ಈ ಭಾರತ ದೇಶವನ್ನ, ಪ್ರಪಂಚದ್ ಈ ಭಾಗವನ್ನ ಯಾವಾಗಲೂ ಕರ್ಮ ಭೂಮಿ ಅಂತ ಕರೀಲಾಗಿದೆ - ಅಂದರೆ ನಿಮಗೋಸ್ಕರ ಕೆಲಸ ಮಾಡ್ಕೊಳೋ ಸ್ಥಳ ಇದು. ನಿಮ್ಮ ವಿಧಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಬಹುದಾದಂತ ಸ್ಥಳ. ಪ್ರಪಂಚದ ಬೇರೆ ಭಾಗಗಳಲ್ಲಿ ನೀವು ಅದನ್ನ ಮಾಡಕ್ ಸಾಧ್ಯವಿಲ್ಲ ಅಂತ ಅಲ್ಲ, ಮಾಡ್ಬಹುದು. ಆದ್ರೆ ಇಲ್ಲಿ, ಕೆಲವು ನೈಸರ್ಗಿಕ ಪ್ರಭಾವಗಳ ಕಾರಣದಿಂದ, ಒಂದು ಹೆಚ್ಚುವರಿ ಬೆಂಬಲ, ಅನುಕೂಲವಿದೆ. ಮನುಷ್ಯರು ಸಹಸ್ರಾರು ವರ್ಷಗಳಿಂದ ಇದರ ಲಾಭವನ್ನ ಪಡ್ಕೊಂಡಿದಾರೆ. ವಿಶೇಷ ಕಟ್ಟಡ, ಉಪಕರಣಗಳನ್ನ ನಿರ್ಮಿಸುವುದರ ಮೂಲಕ ಅದನ್ನು ವರ್ಧಿಸಿದ್ದಾರೆ ಕೂಡ. ಮತ್ತು ಅದೇ... ಮತ್ತು ಅದೇ ಉದ್ದೇಶದಿಂದ, ಜನರ ವಿಕಾಸಕ್ಕೆ ಒಂದು ಅದ್ಭುತ ಸಾಧನವನ್ನು ಸೃಷ್ಟಿಸಲು, ಅಥವಾ ವಿಕಸನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಯಾರೋ ಧ್ಯಾನಲಿಂಗದ ಕನಸು ಕಂಡ್ರು. ಆದ್ರೆ ಅವರು ಜಾಣ್ರು, ಅದನ್ನ ಮಾಡ್ಲಿಕ್ ಹೋಗ್ಲಿಲ್ಲ. (ನಗು) ಇಂತಹದಕ್ಕೆ ಕೈ ಹಾಕೋದಿಕ್ಕೆ ತಯಾರಿರೋ ಒಬ್ಬ ಮೂರ್ಖನನ್ನ ಹುಡುಕ್ತ ಇದ್ರು ಅಂತ ಅನ್ಸತ್ತೆ. (ನಗು) ಕೊನೆಗೊಬ್ಬ ಸಿಕ್ಕಿದ – ಮುಂದಿನದ್ದೆಲ್ಲ ನಡೀತು.

ವಿಮೋಚನೆ ಅನ್ನೋದು ಭಯ ಹುಟ್ಸುತ್ತೆ, ಯಾಕಂದರೆ ನೀವ್ ಒಡೆಯೋದಿಕ್ಕೆ ಯತ್ನಿಸ್ತಿರೋ ಜೈಲಿನ ಗೋಡೆಗಳಿಗೆ ನೀವ್ ಬಹಳ ಒಗ್ಗಿ ಹೋಗಿದೀರ! “ಒಗ್ಗಿ ಹೋಗಿದೀರ” ಅಂತ ಹೇಳ್ದಾಗ, ಅದು ಒಂದ್ ಜನ್ಮದ್ ಪ್ರಶ್ನೆ ಅಲ್ಲ. ಇದರಲ್ಲಿ ಸಂಪೂರ್ಣ ವಿಕಸನ ಪ್ರಕ್ರಿಯೆಯ ನೆನಪು store ಆಗಿದೆ (ತಮ್ಮನ್ನೇ ಉಲ್ಲೇಖಿಸುತ್ತಾ). ನಿಮ್ಮ ಮೆದುಳಿನೊಳಗೆ, reptlian - ಸರೀಸೃಪ ಮಿದುಳು ಅನ್ನೋ ಒಂದು ಭಾಗ ಇದೆ. ಮೆದುಳಿನ ಆ ಭಾಗ, ಯಾವಾಗ್ಲೂ ನಿಮ್ಗೊಂದು ಮಿತಿಯನ್ನ ಗೊತ್ತುಪಡಿಸೋ ಬಗ್ಗೆ, ಸುರಕ್ಷತೆ ಬಗ್ಗೆ ಯೋಚಿಸ್ತಿರುತ್ತೆ. ಮೆದುಳಿನ ಇನ್ನೊಂದ್ ಭಾಗ ನಿಮ್ಮನ್ನ ಮನುಷ್ಯರನ್ನಾಗಿಸುತ್ತೆ, ಅದನ್ನ Cerebral cortex ಅಂತಾರೆ. ಅದು ಯಾವಾಗ್ಲೂ "ಹೇಗೆ ಮಿತಿಗಳನ್ನ ಮೀರೋದು, ಹೇಗೆ ವೃದ್ಧಿಸೋದು, ಹೇಗೆ ಸಶಕ್ತನಾಗೋದು" ಅಂತ ನೋಡ್ತಿರತ್ತೆ. ಆದರೆ reptlian ಮಿದುಳು ಯಾವಾಗಲೂ ತನ್ ಸುರಕ್ಷತೆ ಮತ್ತು ಭದ್ರತೆಗಾಗಿ ಸುತ್ತಲೂ ಗೋಡೆಯನ್ನ ನಿರ್ಮಿಸೋದು ಹೇಗೆ ಅಂತ ಯೋಚಿಸ್ತಿರತ್ತೆ.

ಹೀಗೆ ಭದ್ರತೆಯ ಹುಡುಕಾಟದಲ್ಲಿ, ನಿಮ್ ವಿಕಸನ ಪ್ರಕ್ರಿಯೆಯನ್ನ ನೀವೇ ತಗ್ಗಿಸಿಕೊಳ್ತ ಇದ್ದೀರ. ನೀವ್ ಅರ್ಥ ಮಾಡ್ಕೊಬೇಕು, ಏನಂದ್ರೆ  ಸ್ವಯಂ-ಸಂರಕ್ಷಣೆಯ ಗೋಡೆಗಳು, ಸ್ವಯಂ-ಬಂಧನದ ಗೋಡೆಗಳು ಕೂಡ. ಗುರು ಪೌರ್ಣಮಿಯ ಅರ್ಥ ಏನಂದರೆ, ಮೊದಲ ಬಾರಿಗೆ, ಮೊಟ್ಟ ಮೊದಲ ಬಾರಿಗೆ, ಮಾನವ ಜೀವನದಲ್ಲಿ ಈ ಆಯಾಮವನ್ನ ಒಬ್ರು ತಂದರು - ಏನೂಂದ್ರೆ, ನೀವ್ ಪ್ರಯತ್ನ ಪಟ್ರೆ, ಎಲ್ಲ ಮಿತಿಗಳನ್ನು ನೀವು ದಾಟಬಹುದು, ಪ್ರಕೃತಿ ನಿಗದಿಪಡಿಸಿದ್ದನ್ನೂ ಕೂಡ. ಮಾನಸಿಕ, ಭಾವನಾತ್ಮಕ ಮಿತಿಗಳು ಮಾತ್ರ ಅಲ್ಲ. ಪ್ರಕೃತಿ ನಿಗದಿಮಾಡಿರೋ ಮೂಲಭೂತ ಮಿತಿಗಳನ್ನು ಕೂಡ. ಎಲ್ಲವನ್ನೂ ನೀವು ಮೀರಿ ಹೋಗ್ಬಹುದು. ಆದ್ದರಿಂದ, ಗುರು ಪೌರ್ಣಮಿ ಅಥವಾ ಗುರುವಿನ ದಿವಸವನ್ನು ವಿಮೋಚನೆಯ ದಿನ ಅಂತ್ಲೂ ಪರಿಗಣಿಸಬಹುದು. ಯಾಕಂದರೆ ಆವತ್ತು ವಿಮೋಚನೆಯ ಸಾಧ್ಯತೆಯನ್ನ ಮಾನವ ಜನಾಂಗಕ್ಕೆ ಮೊದಲ ಬಾರಿಗೆ ತೆರೆಯಲಾಯಿತು.