ಮಗುವಿಗೆ ಬೇಕಾಗಿರುವುದು ಒಬ್ಬ ಸ್ನೇಹಿತ, ಬಾಸ್ ಅಲ್ಲ ಎಂಬ ವಿಷಯವನ್ನು ಇಲ್ಲಿ ಸದ್ಗುರುಗಳು ವಿವರಿಸುತ್ತಾರೆ. ನಿಮ್ಮ ಉಪದೇಶಗಳನ್ನು ಅವರ ಮೇಲೆ ಬಲವಂತವಾಗಿ ಹೇರಿದರೆ, ಅವರು ಸ್ವಾತಂತ್ರ್ಯದ ಭಾವನೆಯನ್ನು ಕಳೆದುಕೊಳ್ಳುತ್ತಾರೆ, ಮತ್ತು ಇದರಿಂದ ಅವರು ಮುಂದೆ ನಿಮ್ಮ ಮೇಲೆ ತಿರುಗಿ ಬೀಳಬಹುದಾದ ಸಂಭವನೀಯತೆ ಉಂಟಾಗುತ್ತದೆ. ನೀವು ಹಾಗೆ ಮಾಡದಿದ್ದರೆ ಮಕ್ಕಳೇ ನಿಮ್ಮ ಬಳಿ ಪ್ರಶ್ನೆಗಳೊಂದಿಗೆ ಅಥವಾ ಸಹಾಯ ಕೇಳುತ್ತಾ ಬರುತ್ತಾರೆ. ಆಗ ನಿಮಗೆ ಗೊತ್ತಿದ್ದಷ್ಟು, ನಿಮ್ಮಿಂದಾದಷ್ಟು ಉತ್ತರಗಳನ್ನು, ಸಹಾಯವನ್ನು ನೀಡಿ, "ನನಗಿಷ್ಟೇ ಗೊತ್ತು" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು ಎಂದೆನ್ನುತ್ತಾರೆ. ಹೆತ್ತವರು ಮಕ್ಕಳ ಮುಂದೆ ೧೦೦% ಪ್ರಾಮಾಣಿಕರಾಗಿರುವುದು ಬಹಳ ಮುಖ್ಯ. ಹಾಗೆಯೇ ಅವರನ್ನು ಕೆಟ್ಟ ಪ್ರಭಾವಗಳಿಂದ ರಕ್ಷಿಸಬೇಕು ಅಷ್ಟೆ, ಉಳಿದಂತೆ ಅವರನ್ನು ಸ್ವತಂತ್ರರಾಗಿ ಬಿಡಬೇಕೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ಅವರು ನಿಮ್ಮ ಪ್ರಭಾವದಿಂದಲೂ ಸ್ವತಂತ್ರರಾಗಿರಬೇಕು ಎಂದು ಸೂಚಿಸುತ್ತಾರೆ. ಅವರೊಂದು ಸ್ವತಂತ್ರ ಜೀವ, ನಿಮ್ಮ ಆಸ್ತಿಯಲ್ಲ!

Makkalenu nimma svanta aastiyalla!

ಲಿಪ್ಯಂತರ:

ಪ್ರಶ್ನೆ: ನಮಸ್ಕಾರ ಸದ್ಗುರು. ನಮಗ್ ನೀಡಲ್ಪಟ್ಟಿರೋ ಮತ್ತು ನಾವ್ ಮಾಡೋದಿಕ್ಕೆ ಯತ್ನಿಸ್ತಿರೋ ಸಂಗತಿಗಳಲ್ಲಿ ಒಂದ್ ಏನಂದ್ರೆ ಮಕ್ಕಳನ್ ನೋಡ್ಕೊಳೋದು... ಮಕ್ಕಳ ಪಾಲನೆ ಪೋಷಣೆ ಮಾಡೋದು. ಆದ್ರೆ ಏನಾದ್ರು decision ತಗೋಬೇಕಾದಾಗ ನಮ್ಗೆ ಗೊಂದಲ ಉಂಟಾಗುತ್ತೆ, ಏನನ್ consider ಮಾಡ್ಬೇಕು ಏನನ್ consider ಮಾಡ್ಬಾರ್ದು ಅಂತ. ಮಕ್ಕಳ್ ಬಗ್ಗೆ decision ತಗೋಬೇಕಾದಾಗ ನಾವ್ ಏನನ್ consider ಮಾಡ್ಬೇಕು ಅನ್ನೋದ್ರ್ ಬಗ್ಗೆ ಸ್ವಲ್ಪ ಮಾರ್ಗದರ್ಶನ ಕೊಡ್ತೀರಾ?

ಸದ್ಗುರು: ಯಾಕೆ ಅವ್ರ ಎಲ್ಲಾ decisions ಗಳನ್ನ ನೀವ್ ತಗೋತಿದೀರಾ?

ಪ್ರಶ್ನೆ: ಅದೇ ಗೊಂದಲ. ನನಗ್ಗೊತ್ತು ನಾನು decision ತಗೊಳೋದಿಕ್ಕೆ ಸರಿಯಾದ ವ್ಯಕ್ತಿ ಅಲ್ಲ ಅಂತ. ನಾನ್ decision ತಗೋಬೇಕಾ ಬೇಡ್ವಾ? ಏನಾದ್ರು ಮಾಡ್ಬೇಕಾದಾಗ ಏನ್ ಮಾಡೋದು?

ಸದ್ಗುರು: ಮೊದಲ್ನೇದಾಗಿ ಏನ್ ತಿಳ್ಕೋಬೇಕು ಅಂದ್ರೆ, ಮಕ್ಕಳು ನಿಮ್ "ಮೂಲಕ" ಬರ್ತಾರೆ ಅಷ್ಟೆ. ಅವ್ರು "ನಿಮ್ಮಿಂದ" ಬರಲ್ಲ. ಅವರ್ ನಿಮ್ property ಅಲ್ಲ, ನಿಮಗ್ ಸರಿ ಅನ್ಸಿದ್ ತರ ನಡ್ಸ್ ಕೊಳೋದಿಕ್ಕೆ. ಅವ್ರ್ property ಅಲ್ಲ. ನೀವ್ ಅವ್ರನ್ನ ನಿಮ್ property ತರ ಅಥ್ವಾ ನಿಮ್ ಭವಿಷ್ಯಕ್ಕೆ investment ತರ ನೋಡಿದ್ರೆ, ನೀವ್ ಅವ್ರನ್ನ ಹಾಗೆ ನಡ್ಸ್ ಕೊಂಡ್ರೆ, ನೀವು ಸೃಷ್ಟಿ ಮತ್ತು ಸೃಷ್ಟಿಕರ್ತನಿಗೆ ಒಂದ್ ರೀತಿ ದ್ರೋಹ ಬಗೀತಾ ಇದೀರ. ಅದಿಕ್ಕೆ ಬೆಲೆ ತೆರ್ ಬೇಕಾಗುತ್ತೆ. ಹಾಗೆನೇ ಜೀವ್ನದ್ ರೂಪದಲ್ಲೇ ಬರ್ಬಹುದು, ಅಥ್ವಾ ನಿಮ್ ಮಕ್ಕಳ ರೂಪದಲ್ಲೇ ಬರ್ಬಹುದು, ಆ ಬೆಲೆ. ಹೌದು. ಅದು ತುಂಬ ದುರದೃಷ್ಟಕರವಾಗಿರುತ್ತೆ ಅನುಭವಿಸೋದಿಕ್ಕೆ. ಇದು ಯಾವ್ದೇ ಹೆತ್ತವ್ರಿಗೆ ಹೇಳೋದಿಕ್ಕೆ ತುಂಬ ಕ್ರೂರವಾದ ಮಾತುಗಳು. ಆದ್ರೆ ನಾನ್ ಇದನ್ನ ಯಾಕ್ ಹೇಳ್ತಾ ಇದೀನಿ ಅಂದ್ರೆ ಒಂದ್ ಮಗುವನ್ನ parenting ಮಾಡೋದೇ ಕ್ರೂರವಾದ್ದು. ಮಗುವಿಗೆ ಅದು ಬೇಕಾಗಿಲ್ಲ. ಆದ್ರೆ ದಯವಿಟ್ ನೋಡಿ, ಎಷ್ಟೊಂದ್ ರೀತಿಗಳಲ್ಲಿ ನೀವು ಸಾಧ್ಯವಿರೋದನ್ನೆಲ್ಲಾ ಮಾಡ್ತಾ ಇದೀರ, ಅವ್ನು ನಿಮ್ ಮೇಲೆ ಯಾವ್ದೋ ಒಂದ್ ರೀತಿಯಲ್ಲಿ dependant ಆಗಿ ಉಳಿಯೋದಿಕ್ಕೆ. ನೀವು ಅವ್ನನ್ನ ಮುಕ್ತಗೊಳಿಸೋ ಬಗ್ಗೆ ಯೋಚಿಸ್ತಿಲ್ಲ.

ನಿಮ್ ಮಕ್ಳಿಗೆ ನಿಮ್ ಮೇಲೆ attachment ಇರ್ಬೇಕು ಅನ್ನೋದು ನಿಮ್ಮಾಸೆ. ಅಲ್ವಾ? ಸ್ವತಃ ನೀವೇ ಭಗವದ್ಗೀತೆ ತೆರ್ದು ಓದಿ ಹೇಳ್ತೀರ "attachment ಇರ್ಬಾರ್ದು attachment ಇರ್ಬಾರ್ದು". ಹೆಂಡ್ತಿಗ್ ಹೇಳ್ತೀರ "ನೋಡು, ನನ್ ಮೇಲೆ attachment ಇಟ್ಕೋಬೇಡ". ಆದ್ರೆ ನಿಮ್ ಮಕ್ಳಿಗೆ ನಿಮ್ ಮೇಲೆ attachment ಇರ್ಬೇಕು ನಿಮ್ಗೆ.

ಮಕ್ಕಳಾಗೋ ಆಯ್ಕೆಯನ್ನ ಮಾಡ್ಕೊಳೋ ಮೊದ್ಲೇ ಈ ವಿಷಯಗಳ ಬಗ್ಗೆ ಯೋಚಿಸ್ಬೇಕು. ಆಗ್ಲೇ ಆಗ್ಬಿಟ್ಟಿದೇಂದ್ರೆ, ಕನಿಷ್ಟ ಪಕ್ಷ ಈವಾಗ್ಲಾದ್ರೂ ಅದ್ರ್ ಬಗ್ಗೆ ಸರಿಯಾಗಿ ಸೀರಿಯಸ್ಸಾಗಿ ಯೋಚ್ನೆ ಮಾಡ್ಬೇಕು. ಒಂದ್ ವಿಷ್ಯ ಏನಂದ್ರೆ, ನೀವು ನಿಮ್ಗಿಂತ ಸ್ವಲ್ಪ ಚೆನ್ನಾಗಿರೋದನ್ನ ಪ್ರಪಂಚಕ್ಕೆ ನೀಡ್ಬೇಕು. ಮ್? ಅದ್ ಮುಖ್ಯ ತಾನೆ? ನೀವು ಒಂದ್ ಮಗುವನ್ನ ಹೆತ್ತರೆ, ಅದು ನಿಮಗಿಂತ ಒಂದು ಕನಿಷ್ಟ ಪಕ್ಷ ಒಂದ್ ಹೆಜ್ಜೆ ಮುಂದಿರ್ಬೇಕು. ಅಲ್ವಾ? ಅದೇ ಅಸಂಬದ್ಧ ಮತ್ತೆ ಆಗುತ್ತೇಂದ್ರೆ, ಏನ್ ಪ್ರಯೋಜ್ನ?

ಹಾಗಾಗಿ, ನಿಮ್ಗಿಂತ ಚೆನ್ನಾಗಿರೋದ್ ಆಗ್ಬೇಕು ಅಂದ್ರೆ, ಮೊದಲ್ನೇ ಮತ್ತು ಅತ್ಯಂತ ಮೂಲಭೂತ ವಿಷ್ಯ ಏನಂದ್ರೆ, ನೀವು hundred percent ಪ್ರಾಮಾಣಿಕರಾಗಿರ್ಬೇಕು. ಮುಜುಗರ ಉಂಟ್ ಮಾಡೋವಂತಿದ್ರೂ ಕೂಡ, hundred percent  ಪ್ರಾಮಾಣಿಕರಾಗಿರೋದು ಮುಖ್ಯ. ಇದು ಹೆಚ್ಚಿನ ಹೆತ್ತವ್ರಿಗೆ ಬಹಳ ಕಷ್ಟ, ಯಾಕಂದ್ರೆ ಅವ್ರು boss ಆಗಿರೋದಿಕ್ಕೆ ಸಾಧ್ಯವಿರೋದು ಇಲ್ಲಿ ಮಾತ್ರ. ಮಕ್ಳು ಅಂದ್ರೆ ಅವ್ರಿಗೆ ಅವ್ರ್ ಹೇಳ್ದಂತೆ ಕೇಳೋರು. ಬೇರೆ ಎಲ್ ಮಾತಾಡಿದ್ರೂ ಯಾರೂ ಅವರ್ ಮಾತ್ ಕೇಳಲ್ಲ. ಮಕ್ಳು ಅವ್ರಿಗೆ ಹನ್ನೆರಡು ವರ್ಷ ಆಗೋವರೆಗೆthirteen ಅಂದ್ರೆ danger ಹನ್ನೆರಡು ವರ್ಷ ಆಗೋವರೆಗೆ ಹೇಳ್ದಂತೆ ಕೇಳೋಂತಾವ್ರು. ಈಗ ಅದನ್ನೂ ಕಳ್ಕೋತಾ ಇದೀರಾ, ಹೆಚ್ಚಿನವ್ರು, ಅದಕ್ಕಿಂತ ತುಂಬ ಮುಂಚೇನೇ, ಅಲ್ವಾ (ನಗು)? ತುಂಬ ಮುಂಚೇನೇ ಕಳ್ಕೋತಾ ಇದೀರಾ.

ಹಾಗಾಗಿ... ಎಷ್ಟು ವಯಸ್ಸು ಅವ್ರಿಗೆ?

ಪ್ರಶ್ನೆ ಕೇಳಿದವರು: ನಾಲ್ಕು

ಸದ್ಗುರು: ತಪ್ ಸರಿ ಮಾಡ್ಕೊಳೋಕೆ ಸಾಕಷ್ಟು ಸಮಯ ಇದೆ (ನಗು) ನೀವಿದನ್ನ ಮಾಡ್ಬೇಕು ಅವ್ರನ್ನ parenting ಮಾಡೋದು ನಿಲ್ಸ್ ಬಿಡಿ. ಅವ್ರಿಗ್ ಬೇಕಾಗಿರೋದು ಒಳ್ಳೆ ಸಂಗಾತಿ. ಮನೇನಲ್ಲಿ Strict ಆಗಿ ನಡ್ಕೊಳೋ ಕೆಟ್ boss ಅಲ್ಲ, ಹೌದಾ ಅಲ್ವಾ? ನೀವ್ ಮಕ್ಳಾಗಿದ್ದಾಗ, ನಿಮ್ಗದು ಇಷ್ಟ ಆಗಿತ್ತಾ? ಗಡುಸು ಮಾತುಗಳು? ಇಷ್ಟ ಆಗಿತ್ತ? ಇಲ್ಲ. ಹಾಗಾಗಿ ಅವ್ರಿಗೆ ಬೇಕಾಗಿರೋದು ಒಬ್ಬ ಸ್ನೇಹಿತ. ಅವ್ರಿಗೆ ಅಪ್ಪ ಅಮ್ಮ ಬೇಕಾಗಿಲ್ಲ. ಆ ಕೆಲ್ಸ ಆವಾಗ್ಲೇ ಆಗ್ ಹೋಗಿದೆ. ಒಬ್ರಿಗೆ ಅಪ್ಪನಾಗೋದು, ಅಮ್ಮನಾಗೋದು ಅಂದ್ರೆ, ಅವ್ರನ್ನು ಹೆರೋದು. ಅದಾಗ್ ಹೋಗಿದೆ. ಈಗವ್ರು ಒಂದ್ ಸ್ವತಂತ್ರವಾದ ಜೀವವಾಗೋದಿಕ್ಕೆ ಯತ್ನಿಸ್ತಿದಾರೆ. ಅವ್ರಿಗೆ ಬೇಕಾಗಿರೋದು ಒಬ್ಬ ಸ್ನೇಹಿತ. ನಿಮ್ಗೆ ಅವ್ರಿಗಿಂತ ಹೆಚ್ಚಿರೋ ಒಂದೇ ಅರ್ಹತೆ ಅಂದ್ರೆ, ನೀವಿಲ್ಲಿಗೆ ಅವ್ರಿಗಿಂತ ಕೆಲವು ವರ್ಷ ಮುಂಚೆ ಬಂದಿದೀರ, ಅಷ್ಟೆ. ಬೇರೇನ್ ಅರ್ಹತೆ ಇದೆ ನಿಮ್ ಬಳಿ? ನಿಮ್ ಮಗುವಿಗಿಂತ ನೀವು ಜಾಸ್ತಿ ಜಾಣ್ರು ಅಂತ ನಿಮ್ಗೇನಾದ್ರೂ ಖಂಡಿತವಾಗಿ ಗೊತ್ತಾ? ಗೊತ್ತಾ? ಮ್? ಏನು?

ಪ್ರಶ್ನೆ ಕೇಳಿದವರು: ಜಾಣ್ರಲ್ಲ ಅಂತ ಖಂಡಿತವಾಗಿ ಗೊತ್ತು.

ಸದ್ಗುರು: ಹೌದು. ಹಾಗಾಗಿ, ನೀವ್ ತಿಳ್ಕೊಳ್ಬೇಕಾಗಿರೋ ಮುಖ್ಯವಾದ್ ವಿಷ್ಯ ಏನಂದ್ರೆ, ನೀವು ಇಲ್ಲಿಗೆ ಅವ್ರಿಗಿಂತ ಕೆಲವ್ ವರ್ಷ ಮುಂಚೆ ಬಂದ್ರಿ ಅಷ್ಟೆ. ಅದೊಂದೇ ನೀವ್ ಮಾಡಿರೋದು. ಅದ್ರ್ ಮೇಲೆ ನಿಮ್ಗೆ ಅವ್ರಿಗಿಂತ ಹೆಚ್ಚಿನ ಅರ್ಹತೆ ಏನೂ ಇಲ್ಲ, ಏನ್ ಮಾಡ್ಬೇಕು ಮಾಡ್ಬಾರ್ದು ಅಂತ ಹೇಳೋದಿಕ್ಕೆ. ಹೌದಾ ಅಲ್ವಾ? ಆದ್ರೆ, ಇನ್ನೊಂದ್ ಕಡೆಯಲ್ಲಿ, ನೀವು ಅವ್ರಿಗೆ ಹೇಳ್ದೇ ಇದ್ರೆ, ರಸ್ತೆಬದಿಯ ಯಾವ್ ಯಾವ್ದೋ ಅಯೋಗ್ಯವಾದ ಉಪದೇಶಗಳು ಅವ್ರಿಗೆ ಆಗುತ್ತೆ. ನೀವವ್ರನ್ನ ಅದ್ರಿಂದ ರಕ್ಷಿಸ್ಬೇಕು ಅಷ್ಟೆ. ನೀವವ್ರನ್ನ ಅದ್ರಿಂದ ರಕ್ಷಿಸ್ಬೇಕು ಅಂದ್ರೆ, ಅವ್ರು ನಿಮ್ಮಿಂದ್ಲೂ ಉಪದೇಶವನ್ನ ಸ್ವೀಕರಿಸ್ಬಾರ್ದು ಈ ರೀತಿ ಅವ್ರನ್ನ ಬೆಳೆಸೋವಷ್ಟು ಧೈರ್ಯ ನಿಮ್ಗಿರ್ಬೇಕು. ನೀವ್ ಹೇಳ್ತೀರಿ, "ನಾನ್ ಹೇಳೋದನ್ನ ನೀನ್ ಕೇಳ್ಬೇಕು, ಆದ್ರೆ ನಿನ್ ಸ್ನೇಹಿತನ್ ಮಾತು ಕೇಳ್ಬೇಡ. ಅವ್ನ್ ನಿಂಗೆ ಸಿಗರೆಟ್ ಸೇದೋದಿಕ್ಕೆ ಹೇಳ್ತಿದಾನೆ, ಅವನ್ ಮಾತ್ ಕೇಳ್ಬೇಡ" ಆದ್ರೆ ನೀವ್ ಕೊಡ್ತಿರೋ ಬೋರಾದ ಉಪದೇಶಕ್ಕಿಂತ ಆ friend ಹೇಳ್ತಿರೋದು ಜಾಸ್ತಿ ಮಜಾ ಅನ್ಸುತ್ತೆ ಅವ್ರಿಗೆ. ಸತ್ಯಸಂಗತಿ ಇದೇ. ಅಲ್ವಾ? ಹಾಗಾಗಿ ಈ ವಿಧಾನ ಕೆಲ್ಸ ಮಾಡಲ್ಲ.

ನೀವ್ ನಿಮ್ ಮಗುವನ್ನ ಅವನ್ದೇ ಬುದ್ಧಿವಂತಿಕೆ, ಅವನ್ದೇ ತೀರ್ಮಾನಗಳಿಗೆ ತೀವ್ರವಾಗಿ ಒತ್ತು ಕೊಟ್ಟು ಬೆಳೆಸಿದ್ರೆ, ನೀವ್ ನೋಡ್ತೀರ, ಅವ್ನೇ ಬಂದ್ ಸಹಾಯ ಕೇಳ್ತಾನೆ. ಯಾಕಂದ್ರೆ ಅವ್ನಿಗೆ ಬಹಳ ಸುಲಭವಾಗಿ ಗೊತ್ತಾಗುತ್ತೆ, ಅವನ್ ಬುದ್ಧಿ ಮತ್ತು ತಿಳುವಳಿಕೆ ಎಲ್ಲ ವಿಷ್ಯಗಳಲ್ಲಿ ಸಾಕಷ್ಟಿಲ್ಲ ಅಂತ. ಆದ್ರೆ ನೀವವ್ನನ್ನ ನಿಮ್ ಉಪದೇಶ ಕೇಳ್ಕೊಂಡು ಬೆಳಿಯೋ ತರ ಮಾಡಿದ್ರೆ, ಅವ್ನು ನಿಮ್ ಮೇಲೆ ತಿರುಗಿ ಬೀಳ್ತಾನೆ. ಒಳ್ಳೆ ವಿಷ್ಯಗಳನ್ನ ಹೇಳ್ದಾಗ ಕೂಡ ಅವ್ನದನ್ನ ಮಾಡಲ್ಲ, ಅದಿಕ್ಕೆ ವಿರುದ್ಧವಾದ್ದನ್ನೇ ಮಾಡ್ತಾನೆ. ಇದು ಹೆಚ್ಚಿನ ಹೆತ್ತವ್ರು ಅನುಭವಿಸ್ತಿರೋ ವಿಷ್ಯ, ಅಲ್ವಾ? ಅವ್ನಿಗೆ ಅದ್ರ ವಿರುದ್ಧವಾದ್ದನ್ನೇ ಮಾಡ್ಬೇಕು. ತಾನು ಸ್ವತಂತ್ರ ಅನ್ಸೋದಕ್ಕೆ. ಯಾಕಂದ್ರೆ ಅವ್ನಿಗೊತ್ತಿಲ್ಲ, ಸ್ವತಂತ್ರವಾಗಿರೋದು ಅಂದ್ರೆ ಹೇಗಿರುತ್ತೆ ಅಂತ.

ಹಾಗಾಗಿ, ನಾಲ್ಕು ಅಂದ್ರೆ ಪರ್ವಾಗಿಲ್ಲ. ನೀವೀಗ ಅವ್ರನ್ನ ಇನ್ನೊಂದ್ ವ್ಯಕ್ತಿ ತರ ನೋಡೋದಿಕ್ಕೆ ಶುರು ಮಾಡ್ಬೇಕು. ನನ್ ಮಗು ನನ್ ಮಗು ಅಂತಲ್ಲ. ಅದು ನಿಮ್ದಲ್ಲ, ನಾನ್ ಹೇಳೋದ್ ಕೇಳಿ. ಹೆಚ್ಚು ಅಂದ್ರೆ, ನೀವ್ ಸ್ವಲ್ಪ genes ನ ಕೊಟ್ಟಿದೀರ, ಒಂದ್ ಶರೀರವನ್ನ ಸೃಷ್ಟಿಸೋದಿಕ್ಕೆ. ನಿಮಗೆ ಜೀವವನ್ನ ಸೃಷ್ಟಿಸೋದಿಕ್ಕಾಗಲ್ಲ. ಆ ತರ ಏನೇನೋ ದೊಡ್ ಕಲ್ಪನೆಗಳನ್ನ ಇಟ್ಕೊಳ್ಬೇಡಿ ನಿಮ್ ಬಗ್ಗೆ! ನಿಮಗೆ ಜೀವವನ್ನ ಸೃಷ್ಟಿಸೋದಿಕ್ಕಾಗಲ್ಲ. ನೀವು ಬರೀ ಭೌತಿಕ ವಸ್ತುವನ್ನ ಕೊಟ್ರಿ, ಸ್ವಲ್ಪ genes ಕೊಟ್ರಿ, ಶರೀರವನ್ನ ಸೃಷ್ಟಿಸೋದಿಕ್ಕೆ. ಹೌದ್ ತಾನೆ? ಅದೂ ಅಲ್ದೆ, ನೀವು ಇದ್ರ್ ಬಗ್ಗೆ ಇಷ್ಟೆಲ್ಲಾ ಯೋಚಿಸಿರ್ಲಿಲ್ಲ. ನಿಮ್ಮದೇ ಪ್ರಚೋದನೆಗಳಿಗೊಳಗಾಗಿ ಏನೋ ಮಾಡಿದ್ರಿ, ಅವ್ರು ಹುಟ್ಟಿದ್ರು. ಅಲ್ವಾ?

ಹಾಗಾಗಿ, ಒಂದ್ ಮಗು ನಿಮ್ಮ ಸೃಷ್ಟಿಯೇನೂ ಅಲ್ಲ ಅಂತ ತಿಳ್ಕೊಳ್ಳಿ. ಅದು ನಿಮ್ ಸೌಭಾಗ್ಯ, ಅವ್ರು ನಿಮ್ ಮೂಲಕ ಬರ್ತಾರೆ. ಆ ಸೌಭಾಗ್ಯವನ್ನ ಆನಂದಿಸಿ. ಆ ಸೌಭಾಗ್ಯವನ್ನ ಒಲವಿನಿಂದ ನೋಡಿ. ಆ ಸೌಭಾಗ್ಯವನ್ನ ಗೌರವಿಸಿ. ನಿಮಗ್ ಕೊಟ್ಟಿರೋ ಈ ಸೌಭಾಗ್ಯವನ್ನ ದುರುಪಯೋಗ ಪಡಿಸ್ಕೊಳ್ಬೇಡಿ. ಇದು ತುಂಬ ಮುಖ್ಯ. ನೀವ್ಯಾಕೆ ಇದು ಅದು ಆಗಿ ಬೆಳಸಲ್ಪಟ್ಟಿದೀರ? ನೀವು ಒಬ್ಬ ಮನುಷ್ಯನಾಗಿ ಬೆಳೀಬೇಕು, ಅಲ್ವಾ? ಆದ್ರೆ ವಿಷ್ಯ ಏನೂಂದ್ರೆ, ಹೆಚ್ಚಿನ ಜನ ಮಕ್ಳು ಬೆಳೆಯೋದಿಕ್ಕೆ ತಕ್ಕ ವಾತಾವರಣವನ್ನ ಉಂಟುಮಾಡೋದಿಲ್ಲ. ನೀವವ್ರನ್ನ ಬೆಳ್ಸಿರೋದು ನಿಮಗ್ ಅವ್ರು ಹೇಗಿರ್ಬೇಕೋ ಆ ರೀತಿಯಲ್ಲಿ, ಒಂದ್ ಜೀವವಾಗಿ ಅವ್ರು ಹೇಗಿರ್ಬೇಕೋ ಹಾಗಲ್ಲ. ನೀವು ಅವ್ರ್ ತಲೆಯಲ್ಲಿ ನಿಮ್ಮ ಅಸಂಬದ್ಧ ವಿಚಾರಗಳನ್ನ ತುರುಕ್ದೇ ಇದ್ರೆ, ಅವ್ರಿಗೆ ಗಮನ ಕೊಡೋವಂತ ಅದ್ಭುತವಾದ ಶಕ್ತಿಯಿದೆ. ಮತ್ತು ಗಮನ ಕೊಡೋದು ಸಹಜವಾಗಿಯೇ ಸಾವಿರ ಪ್ರಶ್ನೆಗಳನ್ನ ಹುಟ್ಟುಹಾಕುತ್ತೆ. ನಿಮಗ್ಗೊತ್ತಿರೋವಷ್ಟು ನಿಮಗ್ಗೊತ್ತಿರೋ ರೀತಿಯಲ್ಲಿ ನೀವು ಉತ್ತರ ನೀಡಿ. ನಿಮಗ್ಗೊತ್ತಿಲ್ದೇ ಇರೋದನ್ನ, ನನಗ್ಗೊತ್ತಿಲ್ಲ ಅಂತ ಹೇಳಿ ಅಷ್ಟೆ. "ನನ್ ಒಂದೇ ಸಮಸ್ಯೆ ಏನಂದ್ರೆ ನಾನ್ ನಿನ್ ಗಿಂತ ಕೆಲವು ವರ್ಷ ಮುಂಚೆ ಬಂದೆ. ಹಾಗಂತ ನನಗ್ ಎಲ್ಲಾ ಗೊತ್ತಿದೆ ಅಂತಲ್ಲ" ಒಪ್ಕೊಳಿ ನಿಮ್ ಮಕ್ಳ್ ಮುಂದೆ, ಸಮಸ್ಯೆ ಏನು? ಹೌದ್ ತಾನೇ? ನಿಮ್ಗೇನನ್ಸುತ್ತೆ, ನೀವು ಹೇಳ್ತಿರೋ ವಿಷ್ಯಗಳಲ್ಲಿ ನೀವು ಪ್ರಾಮಾಣಿಕರಾಗಿಲ್ಲ ಅಂತ ಅವ್ರಿಗೆ ಗೊತ್ತಾಗಲ್ಲ ಅಂತಾನ? ಅವ್ರಿಗ್ ಅದು ಕಾಣ್ಸಲ್ಲ ಅಂದ್ಕೊಂಡಿದೀರಾ? ಅವ್ರಿಗ್ ಅದು ಕಾಣ್ಸಲ್ಲ ಅಂತ ನೀವ್ ಅಂದ್ಕೊಂಡಿದ್ರೆ, ಇಷ್ಟ್ ತಿಳ್ಕೊಳಿ, ಅವ್ರಿಗೆ ಹತ್ತು, ಹನ್ನೆರಡು, ಹದಿಮೂರು ವರ್ಷ ಆದಾಗ, ಅವ್ರಿಗೆ ಏನಾದ್ರು ಸಮಸ್ಯೆ ಇದ್ರೆ, ಅವ್ರು ನಿಮ್ಮತ್ರ ಬರಲ್ಲ. ಅವರ್ friends ಹತ್ರ ಹೋಗ್ತಾರೆ. ಯಾಕೆ? ಯಾಕಂದ್ರೆ ಅವ್ರು ನಿಮ್ಗಿಂತ ಹೆಚ್ಚು ಪ್ರಾಮಾಣಿಕರು ಅಂತ ಅವ್ರಿಗ್ ಅನ್ಸುತ್ತೆ. ಬೇರೆ ಏನೂ ಕಾರಣ ಇಲ್ಲ. ಹೌದಾ ಅಲ್ವಾ? ನೀವು ಸ್ವರ್ಗದಿಂದ ಇಳ್ದಿರೋವ್ರ್ ತರ ಆಡ್ತೀರ. ನಿಮ್ nonsense ಯಾರ್ ಕೇಳ್ತಾರೆ? ಅವ್ರಿಗೆ ಹತ್ತು ಹನ್ನೆರಡು ಆಗೋಷ್ಟ್ರಲ್ಲಿ ಪೂರ್ತಿ brainwash ಆಗೋಗಿದ್ರೆ ಕೇಳ್ತಾರಷ್ಟೆ. ಇಲ್ಲಾಂದ್ರೆ ಅವ್ರ್ ಕೇಳಲ್ಲ. ಯಾವ್ದೇ ಬುದ್ಧಿವಂತ ಮನುಷ್ಯ ಅಸಂಬದ್ಧ ವಿಷ್ಯವನ್ನ ಕೇಳಲ್ಲ. ಹೌದ್ ತಾನೇ? ಬರೀ ಅದ್ರಲ್ಲೇ ಬೆಳ್ದಿದ್ರೆ ಕೇಳ್ತೀರೇನೋ.

ಹಾಗಾಗಿ, ಈ ಸೌಭಾಗ್ಯವನ್ನ ಸ್ವಲ್ಪ ವಿವೇಕದೊಂದಿಗೆ, ಗೌರವದಿಂದ ನಿಭಾಯಿಸಿ. ಅದನ್ನ ದುರುಪಯೋಗ ಪಡಿಸ್ಕೋಬೇಡಿ. ಅವ್ರನ್ನ ನೀವು ಕೆಟ್ಟ ಪ್ರಭಾವಗಳಿಂದ ರಕ್ಷಿಸ್ಬೇಕು ಅಷ್ಟೆ. ಉಳ್ದಂತೆ, ಅವ್ರನ್ನ ಸ್ವತಂತ್ರವಾಗಿ ಬಿಟ್ಬಿಡಿ. ಅವ್ರು ತಪ್ಪುದಾರಿ ಹಿಡ್ದೇ ಹಿಡೀತಾರೆ ಅಂತ ನೀವಂದ್ಕೊಂಡ್ರೆ, ಅದು ನಿಮ್ದೇ ಸ್ವಂತ ಕಲ್ಪನೆಯಾಗಿರ್ಬೇಕು. (ನಗು) ನಿಮ್ಗೆ ನಿಮ್ ಬಗ್ಗೆ ಅಷ್ಟು guarantee ಇದ್ರೆ "ನನ್ ಮಕ್ಳು ದಾರಿ ತಪ್ಪೇ ತಪ್ತಾರೆ" (ನಗು) ಅವ್ರಿಗೆ ಸ್ವಲ್ಪ ರಕ್ಷಣೆ ಕೊಡಿ ಅಷ್ಟೆ ಕೆಟ್ಟ ಪ್ರಭಾವಗಳು ಆಗ್ದೇ ಇರೋ ತರ. ಆದ್ರೆ ಅದೇ ಸಮಯದಲ್ಲಿ, ಅವ್ರು ನಿಮ್ ಪ್ರಭಾವದಿಂದ್ಲೂ ಸ್ವತಂತ್ರರಾಗಿರ್ಬೇಕು, ಅದೂ ಕೆಟ್ಟ ಪ್ರಭಾವಾನೇ!

ನಾನ್ ಹೇಳ್ತಿರೋದೇನಂದ್ರೆ, ನೀವು ಮಾಡ್ತಾ ಇರೋದು ನಿಜ್ವಾಗ್ಲೂ ತುಂಬ ಮೌಲ್ಯವುಳ್ಳದ್ದು ಅಂತ ನೀವು ತೋರ್ಸಿದ್ರೆ, ನಿಮ್ ಜೀವ್ನವನ್ನ ಅದಕ್ಕೆ ಮುಡಿಪಾಗಿಡೋದಿಕ್ಕೆ ನೀವ್ ತಯಾರಾಗಿದ್ರೆ, ನಿಮ್ ಮಕ್ಳು ಕೂಡ ತಮ್ ಜೀವನವನ್ನ ಅದಿಕ್ಕೆ ಯಾಕೆ ಮುಡಿಪಾಗಿಡಲ್ಲ? ನೀವು ಆ commitment ತೋರಿಸ್ದೇ ಇದ್ರೆ, ಜೀವನ್ದಲ್ಲಿ ಆ ತೊಡಗಿಕೊಳ್ಳುವಿಕೆಯನ್ನ ನೀವು ತೋರಿಸ್ದೇ ಇದ್ರೆ, ಅವ್ರು ಅದ್ಭುತವಾದ ಏನೋ ಒಂದು ಆಗ್ಬೇಕು ಅಂತ ನೀವು ನಿರೀಕ್ಷಿಸಿದ್ರೆ - ಇಲ್ಲ, ಹಾಗಾಗಲ್ಲ. ಅವ್ರು ನೀವು ಮಾತಾಡೋ ಅಸಂಬದ್ಧವನ್ನ ಕೇಳಲ್ಲ. ಅವ್ರು ನೀವು ಏನ್ ಮಾಡ್ತಾ ಇದೀರಿ, ಮತ್ತು ನೀವು ಹೇಗಿದೀರಿ ಅನ್ನೋದನ್ನ ಗಮನಿಸ್ತಾರೆ. ಅಲ್ವಾ? ಹಾಗಾಗಿ, ನಿಮಗೆ ಮಕ್ಳನ್ನ ಬೆಳೆಸ್ಬಾಕಾದ್ರೆ, ನಿಮ್ಮನ್ನ ಬೆಳೆಸ್ಕೊಳ್ಳಿ. ಮಕ್ಳ ಬಗ್ಗೆ ಚಿಂತೆ ಮಾಡ್ಬೇಡಿ. ನಿಮ್ಮನ್ ನೀವು ಸುಂದರವಾದ ಮನುಷ್ಯನಾಗಿ ಬೆಳೆಸ್ಕೊಳ್ಳಿ. ನೀವು ಹಾಗಾದ್ರೆ, ಅದು ಅವ್ರಲ್ಲಿ ಪ್ರತಿಬಿಂಬಿಸುತ್ತೆ. ಅದು ತಪ್ಪಲ್ಲ. ಆದ್ರೆ guarantee ಇಲ್ಲ (ನಗು) ಜೀವನ್ದಲ್ಲಿ ಯಾವ್ದ್ರಲ್ಲೂ ಕೂಡ guarantee ಇಲ್ಲ. ಯಾಕಂದ್ರೆ, ರಸ್ತೆ ಬದಿಯಲ್ಲಿ ಹೆಚ್ಚು ಶಕ್ತಿಯುತವಾದ ಏನೋ ಒಂದ್ ಪ್ರಭಾವ ಅವರ್ ಮೇಲೆ ಇರ್ಬಹುದು. ಅಲ್ವಾ? (ನಗು)