ಕೆಟ್ಟ ಕೆಲಸ - ಒಳ್ಳೆಯ ಕೆಲಸ. ಇದು ನಮ್ಮ ದಿನನಿತ್ಯದ ಮಾತುಗಳಲ್ಲಿ ಅತಿ ಸಹಜವಾಗಿ ಬಂದುಬಿಡುವ ಶಬ್ದಗಳು. ‘ಇದನ್ನು ಮಾಡಿದ್ರೆ ಒಳ್ಳೇದು, ಇದನ್ನು ಮಾಡಿದ್ರೆ ಕೆಟ್ಟದ್ದು’ ಎಂದು ನಮ್ಮೊಳಗೆ ನಾವೇ ನಿರ್ಧರಿಸಿಕೊಂಡು ಏನೇನೋ ಸರ್ಕಸ್ ಮಾಡುತ್ತಿರುತ್ತೇವೆ. ಇವತ್ತು ಒಳ್ಳೆಯದು ಅನ್ನಿಸಿದ್ದು ನಾಳೆ ಕೆಟ್ಟದ್ದಾಗಿಬಿಡುತ್ತದೆ. ಅವರಿಗೆ ಒಳ್ಳೆಯದು ಅನ್ನಿಸಿದ್ದು, ಇವರಿಗೆ ಸಲ್ಲದ ಕೆಲಸವಾಗಿರುತ್ತದೆ. ಇದರ ಸುತ್ತಲೇ ಬದುಕಿನಲ್ಲಿ ಎಷ್ಟೋ ತಳಮಳಗಳು, ಕಹಿ ಘಟನೆಗಳು ಹಾಗೂ ಮಾನಸಿಕ ನೋವು! ಹಾಗಿದ್ದರೆ ಈ ಒಳ್ಳೇದು ಅಥವಾ ಕೆಟ್ಟದ್ದು ಅನ್ನೋದನ್ನ ನಿರ್ಧರಿಸುವುದು ಹೇಗೆ? ಯಾವುದು ಸರಿ ಯಾವುದು ತಪ್ಪು? ಈ ಪೀಕಲಾಟಗಳಿಂದ ಹೊರಬಂದು ಅರ್ಥಪೂರ್ಣ ಜೀವನ ನಡೆಸುವುದು ಹೇಗೆ? ಕೇಳಿ, ಸದ್ಗುರುಗಳ ಉತ್ತರವನ್ನು.