ಜಗತ್ತಿನಲ್ಲಿ ಅನೇಕ ಥರಹದ ಹಿಂಸೆ ಮತ್ತು ಜಗಳಗಳಿವೆ. ಸಂಘರ್ಷಗಳಿವೆ. ಗಲಾಟೆ, ಗೊಂದಲಗಳಿವೆ. ಯಾಕೆ ಹೀಗೆ? ಸಂಘರ್ಷಗಳಿಲ್ಲದ, ಗಲಾಟೆ ಗೊಂದಲಗಳಿಲ್ಲದ, ಶಾಂತ ಜಗತ್ತು ಸಾಧ್ಯವಿಲ್ಲವೇ? ಹಾಗಿದ್ದರೆ ಈ ಹಿಂಸೆ, ಸಂಘರ್ಷಗಳಿಗೆಲ್ಲ ಮೂಲ ಕಾರಣ ಏನು? ಯಾಕೆ ಮನುಷ್ಯರು ಇವುಗಳನ್ನು ಉಂಟುಮಾಡುತ್ತಾರೆ? ಇವುಗಳಿಂದ ಹೊರಬಂದು ಶಾಂತ ಬದುಕನ್ನು ನಡೆಸಲು ದಾರಿಯೇನು? ಕೇಳಿ ಸದ್ಗುರುಗಳ ಮಾತುಗಳಲ್ಲಿ.