ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಒಂದು ಅತ್ಯಂತ ಪ್ರಮುಖ ಅಂಗ. ವಿಶೇಷ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ನಾವು ತಪ್ಪದೇ ದೇವಸ್ಥಾನಗಳಿಗೆ ಹೋಗುತ್ತೇವೆ. ಹುಟ್ಟುಹಬ್ಬದಂದೂ ಹೋಗುತ್ತೇವೆ, ಹೊಸ ಕಾರು/ಬೈಕು ಕೊಂಡರೂ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ಕೆಲವೊಮ್ಮೆ ಸುಮ್ಮನೆ ಹೋಗಿಬರುತ್ತೇವೆ. ಆದರೆ ದೇವಸ್ಥಾನಗಳನ್ನು ನಿರ್ಮಿಸಿದ ಮೂಲ ಉದ್ದೇಶ ಏನು? ಅವುಗಳನ್ನು ಯಾವ ಮಟ್ಟದ ಶ್ರದ್ಧೆಯಲ್ಲಿ ನಿರ್ಮಿಸಲಾಗುತ್ತಿತ್ತು? ದೇವಸ್ಥಾನಗಳ ಹಿಂದಿನ ವಿಜ್ಞಾನವೇನು? ನಾವು ಯಾವ ರೀತಿಯಲ್ಲಿ ಇಂಥಹ ವಿಶೇಷ ಸ್ಥಳಗಳನ್ನು ನಮ್ಮ ಆಂತರಿಕ ಬೆಳವಣಿಗೆಗೆ ಉಪಯೋಗಿಸಿಕೊಳ್ಳಬಹುದು? ಕೇಳಿ, ಸದ್ಗುರುಗಳ ಮಾತುಗಳಲ್ಲಿ.