Cigarrete chatadinda bidisikollodu hege?

ಲಿಪ್ಯಂತರ:

ಪ್ರಶ್ನೆ: ಸದ್ಗುರು, ಸಿಗರೇಟ್ ಸೇದೋದು ಮತ್ತು ಕುಡಿತದಂತಹ ಚಟಗಳಿಂದ ಹೊರಬರೋದು ಹೇಗೆ? ಅದು ಕೆಟ್ಟದ್ದು ಅಂತ ನಮಗ್ ಗೊತ್ತು, ಮತ್ತು ಅದರಿಂದ ಹೊರಬರೋದಿಕ್ಕೆ ಬಹಳ ಸಲ ಪ್ರಯತ್ನಿಸ್ತೀವಿ, ಆದ್ರೆ ತುಂಬ ಕಷ್ಟ.

ಸದ್ಗುರು: ನಾನ್ ಅದು ಒಳ್ಳೇದು ಅಥವಾ ಕೆಟ್ಟದ್ದು ಅಂತ ಭಾವ್ಸಲ್ಲ. ಸ್ಮೋಕ್ ಮಾಡೋದು ಬಹಳ ದಡ್ಡತನದ್ ವಿಷ್ಯ ಅಷ್ಟೆ. ಒಳ್ಳೇದು ಅಥವಾ ಕೆಟ್ಟದ್ದು ಅಂತ ಅಲ್ಲ, ಅದು ದಡ್ಡತನ ಅಷ್ಟೆ. ಯಾಕಂದ್ರೆ ಈ machine ಧೂಮಪಾನಕ್ಕಾಗಿ ಮಾಡಲ್ಪಟ್ಟಿಲ್ಲ. ಇದೊಂದು ಪರಿಸರ ಸ್ನೇಹಿ machine. (ನಗು) ಆದ್ರೆ ನೀವೀಗ ಇದನ್ನ smoking machine ಆಗಿಸ್ ಬಿಡ್ತಾ ಇದೀರ (ನಗು), ಅಂದ್ರೆ ಇದು ಮೂರ್ಖತನ, ಹೌದಲ್ವಾ? ಒಂದ್ ಬಹಳ ಪರಿಣಾಮಕಾರಿಯಾದ machine-ನ, ನೀವು ಪ್ರಯೋಜನಕ್ ಬಾರ್ದೇ ಇರೋ ತರ ಮಾಡಿದ್ರೆ, ಅದು ದಡ್ಡತನ ಅಲ್ವಾ? ಅದು ಒಳ್ಳೇದೋ ಕೆಟ್ಟದ್ದೋ? ಅಂತದ್ದೇನೂ ಇಲ್ಲ.

ಪ್ರೇಕ್ಷಕ: ಹೌದು, ಅದು ಕೆಟ್ಟದ್ದು ಅಂತ ನಮಗ್ ಗೊತ್ತು ಆದ್ರೆ....

ಸದ್ಗುರು: ನೋಡಿ, ಅದೇ ಬಂದಿರೋದು. ಯಾವ ಕ್ಷಣ ಅದನ್ನ ಕೆಟ್ಟದ್ದು ಅಂತ ಕರೀತೀರೋ, ಆಮೇಲೆ ನಿಮ್ಗೆ ಅದನ್ನ ಬಿಡ್ಲಿಕ್ಕಾಗಲ್ಲ.

ಪ್ರೇಕ್ಷಕ: (ಕೇಳಿಸದ ಮಾತು)

ಸದ್ಗುರು: (ನಗು) ನೋಡಿ, ವೇಲುಗೆ ಗೊತ್ತು ಯಾವುದು ಕೆಟ್ಟದ್ದು ಅಂತ. (ಎಲ್ಲರ ನಗು) ಯಾಕೆ ಅದಕ್ಕೆ ಅದು ಅಲ್ದೇ ಇರೋವಂತ ಹೆಸ್ರನ್ನೆಲ್ಲ ಇಡ್ತಾ ಇದೀರ? ಅದು ಬರಿ ದಡ್ಡತನ, ಅಷ್ಟೆ. ನೀವು ಯಾವುದನ್ನಾದರೂ ದಡ್ಡತನ ಅಂತ ಗುರುತಿಸಿದ್ರೆ ನಿಮ್ಗೆ ಅದನ್ನ ಪ್ರತಿದಿನ ಮಾಡ್ಲಿಕ್ಕಾಗಲ್ಲ. ಎಲ್ಲೋ ನಿಮಗೆ... (smoking action) ನಾನು ಬೇರೆಯವರ್ಗಿಂತ ಜಾಣ ಅಂತ ಅನ್ಸುತ್ತೆ, ಅಲ್ವಾ?

ಪ್ರೇಕ್ಷಕ: ಇಲ್ಲ, ಯಾಕಂದ್ರೆ ಅದ್ರ್ ರುಚಿ...

ಸದ್ಗುರು: ನೋಡಿ, ಈಗ, ನಿಧಾನವಾಗಿ ಪ್ರಪಂಚದಲ್ಲಿ ಜನ್ರು ನಿಮ್ ವಿರುದ್ಧ ಆಗ್ಬಿಟ್ಟಿದಾರೆ. ಬರೀ ೧೦ ವರ್ಷದ್ ಹಿಂದೆ, (ಧೂಮಪಾನದ ಸನ್ನೆ ಮಾಡ್ತ) ಯಾರ್ದಾದ್ರು ಮುಖದ್ ಮೇಲೆ ಸಿಗರೇಟ್ ಹೊಗೆ ಬಿಟ್ರೆ ನಿಮಗೆ ದೊಡ್ಡಸ್ತಿಕೆ ಅಂತನ್ನಿಸ್ತಿತ್ತು, ಅವ್ರಿಗೆ ಒಂದ್ ತರ ಕೀಳರಿಮೆ. ಈಗ, ಕಳೆದ್ ೧೦ ವರ್ಷದಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ, ಅಲ್ವಾ? ಹಾಗಾಗಿಲ್ವಾ? ಹಾಗಾಗಿ, ಎಲ್ಲೋ ಒಂದ್ ಕಡೆ ನೀವು ಅದನ್ನ smart ಅಂತ ಅಂದ್ಕೊಂಡಿದ್ರಿ. ನೀವ್ ೧೦ ವರ್ಷದ್ ಹುಡುಗ ಆಗಿದ್ದಾಗ, ಸಿಗರೇಟ್ನ ಸೇದಿ ಯಾರ್ದೋ ಮುಖದ್ ಮೇಲೆ ಹೊಗೆ ಬಿಡ್ಬೇಕು ಅಂತ ಅನಿಸ್ತಿತ್ತು, ಅದು ನಿಮ್ಗೆ smart ಅಂತ ಅನ್ಸಿತ್ತು. ನೀವ್ ಹೇಳಿ, ಧೂಮಪಾನ - ಹೊಗೆ ಕುಡೀದೆ ಇರೋ machineಗೆ, ಹೊಗೆ ಕುಡಿಯೊ ಹಂಗ್ ಮಾಡೋದು. ಈವಾಗ, ಕಾರ್ ಗಳು ಹೊಗೆ ಉಗುಳೋದನ್ನ ಕಮ್ಮಿ ಮಾಡ್ಲಿಕ್ಕೆ ನಾವ್ ಎಷ್ಟ ಶ್ರಮ ಪಡ್ತ ಇದೀವಿ, ಅಲ್ವಾ? ಅಪಾರ ಪ್ರಮಾಣದ ಸಂಶೋಧನೆ ನಡೀತ ಇದೆ, engineಗಳು ಮತ್ತು ಎಲ್ಲದರ ಮೇಲೆ, ಕಾರ್ ಗಳು ಕಮ್ಮಿ ಹೊಗೆ ಉಗುಳ್ಲಿ ಅಂತ, ಅಲ್ವಾ? ಒಂದ್ ಹೊಗೇನೇ ಉಗುಳ್ದೇ ಇರೋ machine, ಅದಕ್ ನೀವ್ ಹೊಗೆ ಉಗುಳ್ಸಿದ್ರೆ, ಅದು ಮೂರ್ಖತನಾನ ಜಾಣ್ತನಾನ?

ಪ್ರೇಕ್ಷಕ: ಮೂರ್ಖತನ.

ಸದ್ಗುರು: ಜೋರಾಗ್ ಹೇಳಿ.

ಪ್ರೇಕ್ಷಕ: ಮೂರ್ಖತನ. (ಎಲ್ಲರ ನಗು)

ಸದ್ಗುರು: ಅಷ್ಟೆ. ನೀವ್ ಅದನ್ನ ತಿಳ್ಕೊಂಡ್ರೆ, ನಿಧಾನವಾಗಿ ಅದು ಬಿಟ್ಟೋಗತ್ತೆ (ನಗು).

ಈಗ, ಇದರಲ್ಲಿ ಒಂದು ರಾಸಾಯನಿಕ ವಿಚಾರಾನೂ ಇದೆ. ನಿಮ್ ಶರೀರದ ರಾಸಾಯನಿಕ ವ್ಯವಸ್ಥೆ ಅವಲಂಬಿತವಾಗ್ಬಿಟ್ಟಿದೆ, nicotine, caffeine ಅಥವಾ ಇನ್ಯಾವ್ದ್ರ ಮೇಲೋ. ಅದನ್ನ ನಾವ್ ಬದಲಾಯಿಸ್ತೀವಿ. ನೋಡ್ತ ಇರಿ, ನೀವು ಶಾಂಭವಿ ಮಹಾ ಮುದ್ರೆ ಮಾಡಿ, ಕೂಡ್ಲೆ ನಿಮ್ ಪೂರ್ತಿ ವ್ಯವಸ್ಥೆ ಎಷ್ಟು ಚೈತನ್ಯಪೂರ್ಣವಾಗುತ್ತೆ ಅಂದ್ರೆ, cigarrete ಸೇದೋ ಅಗತ್ಯ, coffee, tea ಕುಡಿಯೋ ಅಗತ್ಯ, ಎಲ್ಲಾ ಹಂಗೆ ಮಾಯವಾಗಿ ಬಿಡತ್ತೆ. ಆಮೇಲೆ, ನೀವು ಅದನ್ನೇನಾದರೂ ಮಾಡ್ದ್ರೆ, ಅದು ಅದ್ರಿಂದ ಸಿಗೋ ಸುಖಕ್ಕಷ್ಟೆ. ಯಾವ್ದೋ ಒಂದ್ ದಿನ, ಕಾಫಿ ಕುಡಿಬೇಕು ಅಂತ ಅನ್ಸತ್ತೆ, ಕುಡೀತೀರಿ. ಒಂದ್ ದಿನ cigarrete ಸೇದ್ಬೇಕು ಅಂತ ಅನ್ಸತ್ತೆ, ಸೇದ್ತೀರಿ. ಅದ್ ನಿಮಗ್ ಬಿಟ್ಟಿದ್ದು. ಆದ್ರೆ, ಪ್ರಚೋದನೆಯ ಒತ್ತಡ ಹೊರಟ್ ಹೋಗುತ್ತೆ. ಶಾರೀರಿಕ ಅವಲಂಬನೆ ತೆಗದ್ ಹಾಕಲ್ಪಡುತ್ತೆ. ಅಭ್ಯಾಸದಿಂದ ಅದನ್ನ ಮಾಡ್ಬಹುದು. ಆದ್ರೆ ಮೊದಲು, ಅದನ್ನ ಮಾಡೋದು ಮೂರ್ಖತನ ಅಂತ ಒಪ್ಕೊಳಿ. (ಎಲ್ಲರ ನಗು)