Bharatadalli raja irbekaddu bhanuvara alla

ಲಿಪ್ಯಂತರ:

ಪ್ರಶ್ನೆ: ಧನ್ಯವಾದಗಳು ಸದ್ಗುರುಜಿ. ನನಗೆ ನೀವು ಗುರು ಪೌರ್ಣಮಿಯ ಆಚರಣೆಯಲ್ಲಿ ಭಾಗವಹಿಸೋದಿಕ್ಕೆ ಅವಕಾಶ ಮಾಡ್ಕೊಟ್ಟಿದ್ದಕ್ಕೆ. ಆದ್ರೆ ನನ್ ಮನಸ್ನಲ್ಲಿ ಒಂದ್ ಪ್ರಶ್ನೆ ಮೂಡುತ್ತೆ. ನಾವು ಭಾರತದಲ್ಲಿ, ದೇವರು ಮತ್ತು ಹೆತ್ತವ್ರ ನಂತರ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವನ್ನ ಕೊಡ್ತೀವಿ. ಆದ್ರೆ ನಾವು ಗುರು ಪೌರ್ಣಮಿಯನ್ನ ನಾವು ಗುರುಗಳನ್ನು ಆದರಿಸುವಷ್ಟೆ ಸಂಭ್ರಮದಿಂದ ಆಚರಿಸೋದಿಲ್ಲ. ಯಾಕೆ ಹೀಗೆ?


ಸದ್ಗುರು: ಯಾಕೆ ಗುರು ಪೌರ್ಣಮಿ ಮತ್ತು ಅನೇಕ ಇನ್ನಿತರ ಸಂಗತಿಗಳು—ಈ ದೇಶದಲ್ಲಿ ಅಧ್ಯಾತ್ಮಿಕ ಮಹತ್ವವನ್ನ ಹೊಂದಿದ್ದ ಸಂಗತಿಗಳು—ಯಾಕೆ ಹಿನ್ನೆಲೆಗೆ, ನಮ್ಮ ಬದುಕಿನಲ್ಲಿ ಹಿನ್ನೆಲೆಗೆ ಸರಿದುಬಿಟ್ಟಿವೆ ಅಂದ್ರೆ, ನಾವು ಸ್ವಲ್ಪ ಸಮಯ ಬೇರೆಯವರ ಆಕ್ರಮಣ, ಆಳ್ವಿಕೆಗೆ ಒಳಗಾಗಿದ್ವಿ. ಮತ್ತು ನಮ್ಮನ್ನು ಆಳಿದ ಆ ಜನ್ರು ನಮಗಾಗಿ ಏನು ಚೌಕಟ್ಟಗಳನ್ನ ನಿರ್ಮಿಸಿದ್ರೋ, ನಾವು ಸ್ವಾತಂತ್ರ್ಯವನ್ನ ಪಡ್ದಾಗ, ನಮ್ಮ ದೇಶಕ್ಕೆ ಯಾವ ತರದ ರೀತಿರಿವಾಜುಗಳು ಬೇಕೂಂತ ನಾವೇ ತೀರ್ಮಾನಿಸ್ಬೇಕಿತ್ತು. ನಾವದನ್ನ ಮಾಡ್ಲಿಲ್ಲ. ನಾವದೇ ಚೌಕಟ್ಟುಗಳು ಮುಂದುವರಿಯೋದಿಕ್ಕೆ ಬಿಟ್ವಿ. ಉದಾಹರಣೆಗೆ, ಈ ದೇಶದಲ್ಲಿ, ಪ್ರಾಚೀನ ಕಾಲದಿಂದಲೂ, ಭೂಮಿಯನ್ನು ಉಳೋ ರೈತನೂ ಕೂಡ, ಇಂದೂ ಕೂಡ ಹಲವು ರೈತರು ಸೋಮವಾರ ಬೆಳಿಗ್ಗೆ ಭೂಮಿಯನ್ನ ಉಳೋದಿಲ್ಲ. ಅಲ್ವಾ? ತಮಿಳುನಾಡಿನಲ್ಲಿ ಇನ್ನೂ ಹಂಗಿದೆ. ಉತ್ತರದಲ್ಲಿ ಅದನ್ನ ಬಿಟ್ ಬಿಟ್ಟಿದಾರೆ, ಯಾಕಂದ್ರೆ, ಯಾವುದೇ ಪ್ರಾಣಿಗಳನ್ನ್ ಉಪಯೋಗಿಸೋದಿಲ್ಲ, ಎಲ್ಲ ಟ್ರಾಕ್ಟರ್ ಗಳು. ನೀವು ಬ್ಯಾಂಕ್ ನಲ್ಲಿ ಸಾಲ ಮಾಡಿದೀರಿ. ಬಡ್ಡಿ ಬೆಳೀತಾ ಇದೆ. ಹಾಗಾಗಿ ವಾರದ ಏಳೂ ದಿನ ಓಡಿಸ್ತೀರ ಟ್ರಾಕ್ಟರ್ ನ (ನಗು). ಹೀಗೆ ಏನೇನೋ ಕಾರಣಗಳಿಂದ.
ಬ್ರಿಟಿಷರು ಬಂದಾಗ ಅವರು ಈ ಸಂಗತಿಗಳನ್ನ ಬದಲಾಯಿಸಿದ್ರು. ಯಾಕಂದ್ರೆ, ಅವ್ರಿಗೆ ಗೊತ್ತಾಯ್ತು - ಈ ದೇಶದ ಮೂಲ ಶಕ್ತಿ ಇರೋದು ಅದರ ಸಂಸ್ಕೃತಿಯಲ್ಲಿ. ಹಾಗಾಗಿ ಅವರಿಗೆ ಈ ಸಂಸ್ಕೃತಿಯನ್ನ ಒಡೀಬೇಕಾಗಿತ್ತು. ಬಹಳ ವ್ಯವಸ್ಥಿತವಾಗಿ ಅವರು ಯೋಜನೆಗಳನ್ನ ಮಾಡಿದ್ರು, ಈ ಸಂಸ್ಕೃತಿಯನ್ನ ಒಡಿಯೋದಿಕ್ಕೆ. Sunday holiday ಅಂದ್ರು. ಏನ್ ಮಾಡ್ತೀರ ನೀವ್ ಭಾನುವಾರ? TV ನೋಡ್ತಾ ಚಿಪ್ಸ್ ತಿಂತೀರಾ? (ನಗು) ಏನ್ ಮಾಡ್ತೀರ ನೀವ್ ಭಾನುವಾರ? ಅವರಿಗೆ ಭಾನುವಾರ ಬೆಳಿಗ್ಗೆ ಏನೋ ಒಂದ್ ಇದೆ ಮಾಡೋದಿಕ್ಕೆ. ಆದ್ರೆ ಈ ದೇಶದ ಬಹುಪಾಲು ಜನ್ರು ಭಾನುವಾರ ಬೆಳಿಗ್ಗೆ ಏನ್ ಮಾಡ್ಬೇಕು? ನಮ್ಗೇನೂ ಇಲ್ಲ ಭಾನುವಾರ ಬೆಳಿಗ್ಗೆ ಮಾಡೋದಿಕ್ಕೆ. ಸೋಮವಾರ ಬೆಳಿಗ್ಗೆ  ಪ್ರಕೃತಿಯಲ್ಲಿ ಹಲವು ಸಂಗ್ತಿಗಳು ಆಗ್ತಿರುತ್ವೆ. ಆದ್ರೆ, ಅವತ್ತು ನಿಮ್ಗೆ ಆಫಿಸ್ ಹೋಗ್ಬೇಕು. ಈ ದೇಶದಲ್ಲಿ ಬಹಳ ಕಾಲದಿಂದಲೂ ಮಾಸಿಕ ರಜೆಗಳು ಈ ರೀತಿಯಾಗಿದ್ವು. ಹುಣ್ಣಿಮೆ ಅಂದ್ರೆ, ಪ್ರತಿ ಹುಣ್ಣಿಮೆಗೆ ಮೂರು ದಿನ ರಜಾ ಇರ್ತಿತ್ತು. ಒಂದ್ ದಿನ ಮೊದಲು, ಹುಣ್ಣಿಮೆ ದಿನ, ಮತ್ತು ಮುಂದಿನ್ ದಿನ. ಅಮಾವಾಸ್ಯೆ ಅಂದ್ರೆ ಎರಡ್ ದಿನ ರಜಾ (ಚಪ್ಪಾಳೆ These...). ಈ ಎರಡು ದಿನಗಳು... ಹುಣ್ಣಿಮೆಯ ದಿನ ಮತ್ತು ಅಮಾವಾಸ್ಯೆಯ ದಿನ, ನಮ್ಮ ಜೀವವ್ಯವಸ್ಥೆಗೆ ಮಹತ್ವವಾದವು. ಭೂಮಿಗೆ ಮಹತ್ವವಾದವು. ನಾವು ಹುಟ್ಟಿದ ರೀತಿಯೊಂದಿಗೇ ಅವು ಸಂಬಂಧ ಹೊಂದಿವೆ. ನಾವು ಭೌತಿಕರೂಪದಲ್ಲಿ ಇಂದು ಇಲ್ಲಿರೋದಕ್ಕೆ ಮೂಲ ಕಾರಣವೇನಂದರೆ, ನಮ್ಮ ತಾಯಂದಿರ ಶರೀರ ಚಂದ್ರನ ಆವರ್ತನಗಳೊಂದಿಗೆ ಹೊಂದಿಕೊಂಡಿದ್ವು. ಇಲ್ಲಾಂದ್ರೆ ನಾವಿಲ್ಲಿರ್ತಾ ಇರ್ಲಿಲ್ಲ. ಆದ್ರಿಂದ, ನಿಮ್ಮ ಜೀವವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ವೆ ಆ ದಿನಗಳಂದು. ನಿಮಗ್ಗೊತ್ತಿರೋ ಹಾಗೆ, ಸಮುದ್ರಗಳೇ ಮೇಲೇರುತ್ವೆ ಆ ದಿನಗಳಲ್ಲಿ. ಅಷ್ಟೊಂದು ಅಗಾಧವಾದ ಜಲರಾಶಿ ಮೇಲೇರ್ತಿದೆ ಅಂದ್ರೆ, ಈ ದೇಹ, ಇಲ್ಲೂ ಶೇಕಡ 70 ರಷ್ಟು ನೀರಿದೆ, ಇಲ್ಲಿ ಏನೂ ಮೇಲೇರ್ತಿಲ್ಲ ಅಂದ್ಕೊಂಡಿದೀರ? ಆ ದಿನಗಳನ್ನ ಅಧ್ಯಾತ್ಮಿಕವಾಗಿ ಮಹತ್ವದ ದಿನಗಳೂಂತ ಗುರುತಿಸಿದ್ರು. ಅವು ಕೆಲಸ ಮಾಡೋ ದಿನಗಳಲ್ಲ. ಅವು ನಿಮ್ಮ ಮೇಲೇನೆ ಗಮನ ಹರಿಸ್ಕೊಳ್ಳೋ ದಿನಗಳು.
ಹಾಗೇನೇ, ಗುರು ಪೌರ್ಣಮಿ ಕೂಡ ಬಹಳ ದೊಡ್ಡ ಹಬ್ಬವಾಗಿರ್ತಿತ್ತು, ಈ ಇಡೀ ಭೂಭಾಗದಲ್ಲಿ. ಆದ್ರೆ ಈಗ ಅದು ಹೋಗಿದೆ, ಯಾಕಂದ್ರೆ ಜನ್ರಿಗೆ ಕೆಲ್ಸಕ್ಕೆ ಹೋಗ್ಬೇಕು ಆವತ್ತು.
ಸರ್, ನಾನು ನಿಮ್ಮನ್ನ ವಿನಂತಿಸಿಕೊಳ್ತಿದೀನೆ, ನೀವು ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿರೋದ್ರಿಂದ, ನೀವಿದನ್ನ ಮಾಡ್ಬೇಕು ಪ್ರತಿ ಪೌರ್ಣಮಿಯನ್ನ ರಜಾದಿನವನ್ನಾಗಿಸೋದು practical ಅಲ್ಲ ಅಂತ ನನಗ್ಗೊತ್ತು. ಆದ್ರೆ ಕನಿಷ್ಟ ಪಕ್ಷ ಗುರು ಪೌರ್ಣಮಿ ಕೇಂದ್ರ ಸರ್ಕಾರದಿಂದ ನೀವು ಗುರು ಪೌರ್ಣಮಿಯನ್ನ ರಜಾ ಅಂತ ಘೋಷಿಸಿದ್ರೆ, ನಾನು ಗ್ಯಾರಂಟಿ ಕೊಡ್ತೀನಿ, ಇಡೀ ದೇಶದಲ್ಲಿ ಗುರುಪೌರ್ಣಮಿ ಆಚರಿಸಲ್ಪಡುತ್ತೆ ಅಂತ, ಬಹಳ ವಿಜೃಂಭಣೆಯಿಂದ. ಯಾಕಂದ್ರೆ ಅದರ ಚೇತನ ಇನ್ನೂ ಜೀವಂತವಾಗಿದೆ. ಅಭಿವ್ಯಕ್ತಿಗೆ ಅವಕಾಶ ಸಿಕ್ತಿಲ್ಲ ಅಷ್ಟೆ. ಅಭಿವ್ಯಕ್ತಿಗೆ ಸಮಯ ಸ್ಥಳ ದೊರಕ್ತಿಲ್ಲ ಅಷ್ಟೆ. ದಯವಿಟ್ಟು. ನೀವು ಇದು ಒಂದನ್ನ ಮಾಡಿದ್ರೆ... ಮತ್ತು ನಾವು ಗುರು ಪೌರ್ಣಮಿಯನ್ನ ಈ ದೇಶದಲ್ಲಿ ಒಂದ್ ದೊಡ್ಡ tourism attraction ವನ್ನಾಗಿಸ್ಬಹುದು (ಚಪ್ಪಾಳೆ). ನಾನು ನಿಮಗೆ ಈ ಮುಂಚೇನೇ ಹೇಳಿದಂತೆ, ಭಾರತವನ್ನ ಒಂದು ಅಧ್ಯಾತ್ಮಿಕ ಸೆಲೆಯಾಗಿಸೋದ್ರ ಬಗ್ಗೆ, ಗುರು ಪೌರ್ಣಮಿಯ ದಿನವನ್ನ ಅಧ್ಯಾತ್ಮಿಕ ಪ್ರವಾಸಿಗರನ್ನ ಜಗತ್ತಿನ ಎಲ್ಲೆಡೆಯಿಂದ ನಮ್ ದೇಶಕ್ಕೆ ಬರಮಾಡ್ಕೊಳೋ ದಿನವಾಗಿಸ್ಬಹುದು. ಹಾಗಾಗಿ, ನಿಮ್ಮ tourism ministry ಕೆಲಸದ ಅಂಗವಾಗಿ ಕೂಡ, ಇದು ಒಳ್ಳೆ ವಿಷಯ (ಚಪ್ಪಾಳೆ).