ಸಭಿಕರೊಬ್ಬರಿಂದ ಕೇಳಲ್ಪಟ್ಟ ಈ ಪ್ರಶ್ನೆಗೆ ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ. ನಿಜವಾದ ಪ್ರಶ್ನೆ ವ್ಯತ್ಯಾಸದ್ದಲ್ಲ, ಬದಲಾಗಿ ಶಿವನ ವಿಧಾನಗಳ ಯಾವ ಅಂಶವನ್ನು ಬುದ್ಧ ಹೊರತಂದು ಜನಪ್ರಿಯಗೊಳಿಸಿದ ಎನ್ನುವುದರದ್ದು ಎಂದು ಅವರು ಹೇಳುತ್ತಾರೆ. ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಯ ಬೆನ್ನೆಲುಬು, ಅದು ಪ್ರಪಂಚದ ಯಾವುದೇ ಭಾಗದಲ್ಲಿರಲಿ, ಆ ಎಲ್ಲಾ ಜ್ಞಾನ ಮೂಲವಾಗಿ ಬಂದಿರುವುದು ಶಿವನಿಂದಲೇ. ಆ ಮೂಲ ಜ್ಞಾನವನ್ನು ಅಗಸ್ತ್ಯ ಮುನಿ, ಗೌತಮ ಬುದ್ಧ ಇನ್ನಿತ್ಯಾದಿ ಮಹಾಪುರುಷರು ಒಂದೊಂದು ರೀತಿಯಲ್ಲಿ ಜನರಲ್ಲಿ ಪ್ರಚುರಪಡಿಸಿದರು ಎಂದವರು ವಿವರಿಸುತ್ತಾರೆ.

Shiva mattu Buddhara Maargagala Naduve Enu Vyatyaasa

ಲಿಪ್ಯಂತರ:

ಪ್ರಶ್ನೆ: ನಮಸ್ಕಾರ ಸದ್ಗುರು. ಶಿವನ ವಿಧಾನಕ್ಕೂ ಬುದ್ಧನ ವಿಧಾನಕ್ಕೂ ಇರೋ ಮೂಲ ವ್ಯತ್ಯಾಸವನ್ನ ತಿಳ್ಕೊಳ್ಳೋದಿಕ್ಕೆ ಬಯಸ್ತೀನಿ.

ಸದ್ಗುರು: ಬುದ್ಧನ್ ವಿಧಾನದ ಬಗ್ಗೆ ಮಾತಾಡೋದು ತುಂಬ ಸುಲಭ, ಯಾಕಂದ್ರೆ, ಅದು ತುಂಬ ಲಾಜಿಕಲ್, ತಾರ್ಕಿಕವಾದ್ದು. ಅದು ತುಂಬ ಸರಳವಾದದ್ದು. ಮತ್ತು ತುಂಬ ದೀರ್ಘವಾದಂತಹ ಒಂದು ವಿಧಾನ. ಸಾಮಾನ್ಯವಾಗಿ ಗೌತಮನು ಜನ್ರಿಗೆ ಕೊಟ್ಟಂತಹ ವಿಧಾನಗಳು, ಯಾವಾಗ್ಲೂ ಕೆಲಜನ್ಮಗಳನ್ನು ಒಳಗೊಳ್ಳುವಂತವುಗಳಾಗಿದ್ವು. ನೀವಿವತ್ತು ಇದನ್ನು ಸ್ಪಷ್ಟವಾಗ್ ನೋಡ್ಬಹುದು, ಬೌದ್ಧರು ಇದರ ಬಗ್ಗೆ ಯಾವಾಗ್ಲೂ ಮಾತಾಡ್ತಾ ಇರ್ತಾರೆ. ವಿಶೇಷವಾಗಿ ಟಿಬೆಟ್ಟಿನ ಬೌದ್ಧರು ಇವ್ರು ಜಗತ್ತಿನಲ್ಲಿಂದು ಜನ್ರಿಗೆ ತುಂಬ ಪರಿಚಿತವಾಗಿರೋ ಬೌದ್ಧರು (ನಗು) ರಾಜಕೀಯ ಕಾರಣಗಳಿಂದಾಗಿ ಅವ್ರು ಯಾವಾಗ್ಲೂ ಕೆಲವು ಜನ್ಮಗಳ ಸಾಧನೆಯ ಬಗ್ಗೆ ಮಾತಾಡ್ತಾ ಇರ್ತಾರೆ. ಹಾಗಾಗಿ ನಿಮ್ಗೆ ಆ ತರಹದ ತಾಳ್ಮೆ ಇದ್ರೆ, ಕೆಲವು ಜನ್ಮಗಳಷ್ಟು ಕಾಲ ಸಾಧನೆ ಮಾಡೋದಕ್ಕೆ ನೀವ್ ತಯಾರಾಗಿದ್ರೆ, ಗೌತಮನ ವಿಧಾನ ಬಹಳ ಸಮರ್ಥ, ಬಹಳ ತಾರ್ಕಿಕ, ವೈಜ್ಞಾನಿಕ, ಹಂತ ಹಂತವಾಗಿ ನೀವು ಮುಂದುವರೀಬಹುದಾದಂತಹ ಒಂದು ಮಾರ್ಗ. ಯಾಕಂದ್ರೆ ಇದು ಅರಿವಿನ ಮಾರ್ಗ.

ಅರಿವಿನ ಮಾರ್ಗದಲ್ಲಿ ನಡೆಯೋ ಮಹತ್ವ ಏನಂದ್ರೆ ಇಲ್ಲಿ ಹಾದಿಯಲ್ಲಿ ಮೈಲಿಗಲ್ಲುಗಳು ಇರುತ್ವೆ. ಅವು ನಿಮ್ಗೆ ತಿಳ್ಸುತ್ತೆ ನೀವು ಒಂದು ಮೈಲಿ, ಎರಡು ಮೈಲಿ, ಹತ್ತು ಮೈಲಿ ಬಂದಿದ್ದೀರಾ ಅಂತ. ನೀವು ಎಲ್ಲಿದ್ದೀರಾ ಅಂತ ಅದು ಹೇಳುತ್ತೆ, ಇದು ತುಂಬ ಪ್ರಮುಖವಾದ ಅಂಶ. ಜಾಸ್ತಿ ನಂಬಿಕೆ ಅಥವಾ ಭಕ್ತಿ ಏನೂ ಇಲ್ದೇನೂ ನೀವು ಬೆಳೀಬಹುದು. ಯಾಕಂದ್ರೆ ನಿಮ್ಗೆ ಗಟ್ಟಿಯಾಗ್ ಹಿಡ್ಕೊಳ್ಳೋದಕ್ಕೆ ಒಂದು ಕ್ರಿಯಾವಿಧಾನವಿದೆ. ಅದನ್ನೇ ಮಾಡ್ತಾ ಮಾಡ್ತಾ ಮಾಡ್ತಾ ಹೋಗ್ಬೇಕು ಅಷ್ಟೆ. ಅದು ನಿಮ್ಗೆ ಸ್ಪಷ್ಟವಾಗಿ ತೋರ್ಸುತ್ತೆ ನೀವು ಮುಂದ್ವರೀತಾ ಇದೀರಾ ಅಂತ. ಆದ್ರೆ ಶಿವನ್ ವಿಷ್ಯಕ್ ಬಂದಾಗ ಆ ತರದ್ ಗ್ಯಾರಂಟಿ ಏನೂ ಇಲ್ಲ. ಅವ್ನು ಮೈಲಿಗಲ್ಲುಗಳನ್ನ ನಿಗದಿ ಪಡ್ಸೋದಿಲ್ಲ. ನೀವು ಮುಂದ್ ಹೋಗ್ತಾ ಇದೀರಾ ಅಥ್ವಾ ಹಿಂದ್ ಹೋಗ್ತಾ ಇದೀರಾ ಅನ್ನೋದೂ ನಿಮಗ್ ಗೊತ್ತಿರಲ್ಲ, ಆದ್ರೆ ಎಲ್ಲೋ ಹೋಗ್ತಾ ಇರ್ತೀರಾ. ಅಷ್ಟೇ ನಿಮಗ್ ಗೊತ್ತಿರೋದು (ನಗು) ಅದು ತಳವೇ ಇಲ್ದೇ ಇರೋ ಹಳ್ಳದಲ್ಲಿ ಬಿದ್ದ ಹಾಗೆ. ಅದು ಕೇಳ್ದಾಗ ಗಾಬರಿ ಆಗತ್ತೆ. ಆದ್ರೆ ಸರಿಯಾಗಿ ಗಮನಿಸಿ ತಳವೇ ಇಲ್ದೇ ಇರೋ ಹಳ್ಳ ಬೀಳೋದಿಕ್ಕೆ ಅತ್ಯಂತ ಸುರಕ್ಷಿತವಾದ್ ಸ್ಥಳ! (ನಗು, ಚಪ್ಪಾಳೆ)

ತಳ ಇರೋವಂತ ಹಳ್ಳ ಡೇಂಜರ್. (ನಗು) ತಳವೇ ಇಲ್ದೇ ಇರೋ ಹಳ್ಳ ಭಾರೀ ಸೇಫ್. ಒಮ್ಮೆ ಅದ್ರಲ್ಲಿ ಜಿಗಿದ್ ಬಿಟ್ರೆ ಆಯ್ತು, ಆಮೇಲೆ ಏನೂ ಚಿಂತೆ ಇಲ್ಲ. ಸುಮ್ನೆ ಬೀಳ್ತಾ ಇರೋದು ಅಷ್ಟೆ. ನೀವು ಯಾವತ್ತಾದ್ರೂ... ಇಲ್ಲಿ ಯಾರಾದ್ರೂ ಸ್ಕೈ ಡೈವಿಂಗ್ ಮಾಡಿದೀರಾ? ಮ್? ನೀವ್ ಮಾಡಿದೀರಾ? ಅಲ್ಲಿ ನೀವು ಆಕಾಶದೆತ್ತರದಿಂದ ಫ್ರೀಯಾಗಿ ಬೀಳೋವಾಗ ಕೆಲವು ಸಾವಿರ ಫೀಟ್ ವರ್ಗೆ ಪಾರಾಶೂಟ್ ಓಪನ್ ಮಾಡಲ್ಲ. ಆ ಸಮಯದಲ್ಲಿ ನೀವು ಕೆಳಗ್ ಹೋಗ್ತಾ ಇದೀರಾ ಮೇಲ್ ಹೋಗ್ತಾ ಇದೀರಾ ಅನ್ನೋದೇ ಗೊತ್ತಾಗಲ್ಲ. ಸುಮ್ನೆ ಹಾಗೇ ತೇಲಾಡ್ತಾ ಇರೋ ತರ ಬಹಳ ಮಜಾ ಅನ್ಸುತ್ತೆ. ಕೆಳಗ್ ನೋಡ್ದಾಗ ಮಾತ್ರ ಈ ಭೂಮಿ ನಿಮ್ ಕಡೆ ಸಿಕ್ಕಾಪಟ್ಟೆ ವೇಗವಾಗಿ ಬರ್ತಾ ಇರೋದು ಕಾಣ್ಸುತ್ತೆ. (ನಗು) ಭೂಮಿ ಇಲ್ಲಾಂದ್ರೆ ಅದು ಒಂದು ಸಕ್ಕತ್ ಅನುಭವ. ಕೆಳಗ್ ನೋಡಿದ್ರೆ ಮಾತ್ರ ಅದು ನಿಮ್ ಕಡೆ ಸಿಕ್ಕಾಪಟ್ಟೆ ವೇಗವಾಗಿ ಬರ್ತಾ ಇದೆ, ಅದೊಂದೇ ತೊಂದ್ರೆ. ಬೀಳೋದು ಅಂದ್ರೆ... ನೋಡಿ ಬೀಳೋದನ್ನ ನೆಗೆಟಿವ್ ಆಗಿ ತಗೊಳ್ಬೇಡಿ. ಬೀಳೋದು, ಫಾಲಿಂಗ್ ತುಂಬ ಒಳ್ಳೆ ವಿಷ್ಯ. ಯಾವತ್ತಾದ್ರೂ ಪ್ರೀತಿಯಲ್ಲಿ ಬಿದ್ದಿದೀರಾ? ನೀವು ತಳಕ್ಕೆ ಹೊಡ್ದಾಗ ಮಾತ್ರ ಎಲ್ಲಾ ಕೆಟ್ ಹೋಗತ್ತೆ. ಆದ್ರೆ ನೀವು ತಳವೇ ಇಲ್ದೇ ಇರೋ ಹಳ್ಳಕ್ ಬಿದ್ರೆ ಏನೂ ತೊಂದ್ರೆ ಇಲ್ಲ.

ಶಿವ ತಳವೇ ಇಲ್ದೇ ಇರೋ ಒಂದ್ ಹಳ್ಳ. ಅವನ್ ವಿಧಾನಗಳು ತುಂಬಾನೇ ಡಿಫ್ರೆಂಟ್. ಆದ್ರೆ ನೀವು ಅವನನ್ನ ಆ ರೀತಿ ಸೀಮಿತಗೊಳಿಸೋದಿಕ್ಕೆ ಆಗಲ್ಲ, ಯಾಕಂದ್ರೆ ಅವ್ನು ತನ್ನ ಏಳು ಶಿಷ್ಯರಿಗೆ... ಸಪ್ತರ್ಷಿಗಳು, ನಮ್ಮ ಸಂಸ್ಕೃತಿಯು ಕೊಂಡಾಡೋವಂತ ಪುರಾತನ ಋಷಿಗಳು... ಅವ್ರಿಗೆ ಅವ್ನು ಏಳು ಬೇರೆ ಬೇರೆ ಮೂಲ ವಿಧಾನಗಳನ್ನ ಕಲಿಸ್ದ ಮನುಷ್ಯ ತನ್ನ ಪ್ರಜ್ಞೆಯನ್ನು ಸಂಶೋಧಿಸೋದಿಕ್ಕಾಗಿ. ಈ ಏಳು ಹಲವು ಪಟ್ಟು ಹೆಚ್ಚಾದವು, ಹಾಗೂ 112 ಬೇರೆ ಬೇರೆ ವಿಧಾನಗಳನ್ನ ಅವ್ನು ಕಂಡ್ ಹಿಡ್ದ, ಮತ್ತು ಕೊನೆಗ್ ಅಂದ "ಇವಿಷ್ಟೇ ವಿಧಾನಗಳಿರೋದು" ಇದ್ರ್ ಬಗ್ಗೆ ಒಂದ್ ಸುಂದರ್‌ವಾದ್ ಕತೆಯಿದೆ. ಕತೆಗಳಿಗೆ ಈಗ ಸಮಯ ಇಲ್ಲ. (ನಗು) ಹೀಗೆ ಮನುಷ್ಯ ತನ್ನ ಪ್ರಜ್ಞೆಯ ಶಿಖರವನ್ನು ತಲುಪಬಹುದಾದಂತ 112 ವಿವಿಧ ವಿಧಾನಗಳನ್ನ ಅವ್ನು ನಮ್ಗೆ ತಿಳಿಸ್ ಕೊಟ್ಟ. ಈ 112 ನಮ್ಮ ಶರೀರದಲ್ಲಿರೋ 112 ಚಕ್ರಗಳು. ಒಟ್ಟಿನಲ್ಲಿ 114 ಇವೆ, ಆದ್ರೆ ಅವುಗಳಲ್ಲಿ ಎರಡು ಭೌತಿಕ ಶರೀರದ ಹೊರಗಿವೆ. ಅವೆರಡನ್ನು ಅವ್ನು ಬಿಟ್ಬಿಟ್ಟು 112 ವಿಧಾನಗಳಿವೆ ಅಂದ, ನೀವು ಭೌತಿಕ ಶರೀರದಲ್ಲಿ ಇರೋವಾಗ. ಅಂದ್ರೆ, ಪ್ರತಿಯೊಂದು ಚಕ್ರಕ್ಕೂ, ಪ್ರಾಣವ್ಯವಸ್ಥೆಯಲ್ಲಿ ಪ್ರಾಣಶಕ್ತಿ ಸಂಧಿಸೋವಂತ ಪ್ರತಿಯೊಂದು ಸ್ಥಳಕ್ಕೂ, ಒಂದೊಂದು ಮುಕ್ತಿಯ ವಿಧಾನ.

ಹಾಗಾಗಿ ಅವ್ನು ಏನನ್ನೂ ಬಿಡ್ಲಿಲ್ಲ. ಹಾಗಾಗಿ ಬುದ್ಧನ್ ವಿಧಾನ ಅವ್ನ ವಿಧಾನಗಳ ಒಂದ್ ಸಣ್ಣ ಅಂಶ ಅಷ್ಟೆ. ನೋಡಿ, ಗೌತಮ ಸ್ವತಃ ಸುಮ್ನೆ ನೇರವಾಗಿ ಹೋಗಿ ಕಾಡ್ನಲ್ಲಿ ಕೂರ್ಲಿಲ್ಲ. ತನ್ನ ಎಂಟು ವರ್ಷಗಳ ಸಾಧನೆಯಲ್ಲಿ ಅವ್ನು ದೇಶದ ಹಲವಾರು ಆಚಾರ್ಯರುಗಳತ್ರ ಸಮಯ ಕಳ್ದಿದ್ದ. ಈ ಇಡೀ ಆಧ್ಯಾತ್ಮಿಕ ಪ್ರಕ್ರಿಯೆಯ ಬೆನ್ನೆಲುಬು, ಈ ಎಲ್ಲಾ ಜ್ಞಾನ ಮೂಲವಾಗಿ ಬಂದಿರೋದು ಶಿವನಿಂದ್ಲೇ. ಅದು ಎಲ್ಲೇ ಇರ್ಲಿ, ಪ್ರಪಂಚದ ಯಾವುದೇ ಭಾಗದಲ್ಲಿರ್ಲಿ, ಮೂಲ ಅಧ್ಯಾತ್ಮಿಕ ಪ್ರಕ್ರಿಯೆ ಈ ಬೆನ್ನೆಲುಬಿನಿಂದ್ಲೇ ಬಂದಿದೆ. ಅದನ್ನೇ ಜಗತ್ತಿನ ವಿವಿಧ ಭಾಗಗಳಿಗೆ, ಹಲವಾಽರು ರೂಪಗಳಲ್ಲಿ ಕೊಂಡೊಯ್ಯಲಾಗಿದೆ. ಅವು ಎಷ್ಟೊಂದು ಭಿನ್ನವಾಗಿರೋ ತರ ಕಾಣ್ಸುತ್ವೆ ಯಾಕಂದ್ರೆ, ಈ 112 ವಿಧಾನಗಳು ನೋಡೋದಿಕ್ಕೆ ಒಂದಕ್ಕಿಂತ ಒಂದು ಬಹಳ ಭಿನ್ನವಾಗಿವೆ.

ಹಾಗಾಗಿ ಶಿವ ಮತ್ತು ಬುದ್ಧರ ನಡುವೆ ವ್ಯತ್ಯಾಸ ಏನು ಅನ್ನೋದು ಸರಿಯಾದ ಪ್ರಶ್ನೆ ಅಲ್ಲ. ಶಿವನ ವಿಧಾನಗಳ ಯಾವ ಅಂಶವನ್ನ ಬುದ್ಧ ಪರಿಶೋಧಿಸಿದ ಅಂತ ಕೇಳ್ಬೇಕು. ಅವ್ನು ಅರಿವಿನ ಮಾರ್ಗವನ್ನ ಪರಿಶೋಧಿಸ್ದ, ಅದು ಒಂದು ಅಂಶ. ಅದು ತುಂಬ ಏಕತಾನತೆಯದ್ದು, ಆದ್ರೆ ಗೌತಮ ಬುದ್ಧನ ಮಹತ್ವ ಏನಂದ್ರೆ ಅವ್ನು ಬಹಳ ವೈಜ್ಞಾನಿಕ, ವ್ಯವಸ್ಥಿತ. ಅವ್ನು ವಿಚಾರಾತ್ಮಕ ಮನಸ್ಸಿಗೆ ಇಷ್ಟವಾಗ್ತಾನೆ. ಆದ್ರೆ ಇವ್ನು (ಕೈಸನ್ನೆಗಳು, ನಗು) ಇವ್ನೂ ಈ ತರ ಕೂರ್ತಿದ್ದ. ಬಹಳ ಸಮಯ ಇವ್ನೂ ತಪಸ್ವಿಯಾಗಿದ್ದ, ನಿಶ್ಚಲವಾಗಿ ಕೂರ್ತಿದ್ದ. ಆದ್ರೆ ಬಹಳ ಸಲ ನಶೆಯಲ್ಲಿ ಕುಣಿಯೋ ಉನ್ಮತ್ತನೂ ಆಗಿದ್ದ. ಅವ್ನು ಎಲ್ಲಾ ತರದ ಅವಸ್ಥೆಗಳಲ್ಲಿ ಇರ್ತಿದ್ದ, ಯಾಕಂದ್ರೆ ಅವ್ನು ಅವನನ್ನ ಯಾವುದೇ ಒಂದು ಆಯಾಮಕ್ಕೆ ಸೀಮಿತಗೊಳಿಸ್ಲಿಲ್ಲ. ಅವನು ಜೀವನದ ಎಲ್ಲಾ ಅಂಗಗಳನ್ನೂ ಸಂಶೋಧಿಸಿದ. ಹಾಗಾಗಿ ನೀವು ಬುದ್ಧನ ವಿಧಾನ ಅಂತ ಕರೆಯೋದು ಒಂದು ಅಂಶ ಅಷ್ಟೇ ಈ 112 ವಿಧಾನಗಳಲ್ಲಿ. ಹಾಗೆಯೇ ಬೇರೆ ಅನೇಕರು ಇನ್ನಿತರ ಅಂಶಗಳನ್ನು ಹೊರತಂದಿದ್ದಾರೆ, ಆದ್ರೆ ಎಲ್ಲವೂ ಒಂದೊಂದು ಅಂಶಗಳು ಅಷ್ಟೆ.

ಈ ಏಳು ಶಿಷ್ಯಂದ್ರಲ್ಲಿ, ಈ ಸಪ್ತರ್ಷಿಗಳಲ್ಲಿ, ದಕ್ಷಿಣಕ್ಕೆ ಬಂದಂತವರು... ದಕ್ಷಿಣ ಅಂದ್ರೆ ಹಿಮಾಲಯಕ್ ದಕ್ಷಿಣದಲ್ಲಿರೋದು. ಮುಂಬೈಯವ್ರಿಗೆ ಹೇಳ್ತಾ ಇದ್ದೀನಿ (ನಗು). ಹಿಮಾಲಯಕ್ಕೆ ದಕ್ಷಿಣದಲ್ಲಿರೋದೆಲ್ಲ ದಕ್ಷಿಣಾನೇ. ಅಗಸ್ತ್ಯರು ದಕ್ಷಿಣದ ಕಡೆಗ್ ಬಂದ್ರು, ಅವ್ರು ವಿಶೇಷವಾಗಿ ತುಂಬಾ ಸಕ್ರಿಯರಾಗಿದ್ದು ವಿಂಧ್ಯ ಪರ್ವತದ್ ಈ ಕಡೆ. ಈ ಕತೆ ನಿಮಗ್ ಗೊತ್ತು ತಾನೇ ವಿಂಧ್ಯ ಪರ್ವತ ಅಗಸ್ತ್ಯರಿಗೆ ತಲೆಬಾಗಿದ್ದು, ಅವ್ರು ಹಿಂತಿರುಗಿ ಹೋಗ್ದೇ ಇದ್ದಿದ್ದು? ಈ ಕತೆ ನಿಮಗ್ ಗೊತ್ತು ತಾನೇ? ಇಲ್ಲ! ಭಾರತದ ಬಗ್ಗೆ ನೀವು ಸ್ವಲ್ಪ ಕಲ್ತ್ ಕೊಳ್ಬೇಕು! (ನಗು) ವಿಶೇಷವಾಗಿ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಅವ್ರು ಹೇಗ್ ಕೆಲ್ಸ ಮಾಡಿದ್ರು ಅಂದ್ರೆ, ಅಲ್ಲಿನ ಪ್ರತಿಯೊಂದು ಜನವಸತಿಯನ್ನ ಅವ್ರು ತಲುಪಿದ್ರು. ಅದಕ್ಕೆ ನೀವ್ ಎಲ್ ನೋಡಿದ್ರೂ ಅಗಸ್ತ್ಯಮುನಿಗಳ ಬಗ್ಗೆ ಏನಾದ್ರೂ ಕೇಳ್ಪಡ್ತೀರಿ. ಮೊದಲ್ನೇ ಗ್ರಾಮೀಣ ಪುನರುಜ್ಜೀವನ ಆಂದೋಲನ ಶುರು ಮಾಡಿದ್ದು ಅವ್ರೇ. ಒಂದೇ ಒಂದು ಜನವಸತಿಯನ್ನೂ ಅವ್ರು ಬಿಡ್ಲಿಲ್ಲ. ಎಲ್ಲರ ಜೀವನ್ ದೊಳಗೂ ಆಧ್ಯಾತ್ಮಿಕ ಪ್ರಕ್ರಿಯೆಯನ್ನ ಅವ್ರು ತಂದ್ರು, ಪೂರ್ತಿ ಜನಸಮೂಹದಲ್ಲಿ.

ಅವ್ರು 4000 ವರ್ಷಕ್ಕಿಂತ್ಲೂ ಹೆಚ್ಚು ಜೀವ್ಸಿದ್ರು ಅಂತ ಹೇಳ್ತಾರೆ. ಅವ್ರು ಎಷ್ಟು ವರ್ಷ ಜೀವ್ಸಿದ್ರು ಅಂತ ನಮ್ಗೆ ಸರಿಯಾಗಿ ಗೊತ್ತಿಲ್ಲ, ಆದ್ರೆ ಖಂಡಿತವಾಗ್ಲೂ ಅವ್ರ ಜೀವನದ್ ಕಾಲಾವಧಿ ಸಾಮಾನ್ಯವಾಗಿರ್ಲಿಲ್ಲ. ಅದು ತುಂಬಾ ದೀರ್ಘವಾಗಿತ್ತು. ಅವ್ರು ಕ್ರಮಿಸ್ದಂತಹ ದೂರಾನಾ ನೀವು ಲೆಕ್ಕ ಹಾಕಿದ್ರೆ, ಅವರ್ ಮೇಲೆ ಒಂದು ಮೀಟರ್ ಹಾಕಿ ಅವ್ರು ಎಷ್ಟು ಮೈಲಿ ಕ್ರಮಿಸಿದ್ರು ಅಂತ ನೋಡಿದ್ದಿದ್ರೆ, ಅದು ಅಸಾಧಾರಣವಾದ ಕಾಲಾವಧಿ ಅಂತ ಗೊತ್ತಾಗುತ್ತೆ. ಅದು 400 ವರ್ಷಾನೋ ಅಥ್ವಾ 4000 ವರ್ಷಾನೋ ನಮಗ್ ಗೊತ್ತಿಲ್ಲ. ಜನ್ರು 4000 ಅಂತಾರೆ. ಆದ್ರೆ ಖಂಡಿತವಾಗ್ಲೂ ಅವ್ರು ಬಹಳ ದೀರ್ಘಕಾಲ ಜೀವಿಸಿದ್ರು, ಮತ್ತು ಪ್ರತಿಯೊಂದು ಜನವಸತಿಯನ್ನೂ ತಲುಪಿ ಎಲ್ರಿಗೂ ಆಧ್ಯಾತ್ಮಿಕ ಪ್ರಕ್ರಿಯೆ ಒಂದು ಜೀವಂತ ಸತ್ಯ ಆಗೋದನ್ನ ಅವ್ರು ಖಚಿತಪಡಿಸಿದ್ರು.

ಅವ್ರು ಸಾಧಿಸಿದ್ದ ಕಾರ್ಯವನ್ನ ನಾವೀಗ್ಲೂ ಸವೀತಾ ಇದೀವಿ, ದಯವಿಟ್ ತಿಳ್ಕೊಳಿ. ದಕ್ಷಿಣ ಭಾರತ ಇನ್ನೂ ಅವ್ರ್ ಮಾಡಿದ್ ಕೆಲ್ಸದ್ ಲಾಭಾನ ಪಡೀತಿದೆ. ನಮಗ್ ಗೊತ್ತಿಲ್ದಂಗೇನೇ ನಮ್ ಜೀವನ್ದಲ್ಲಿ ನೆಲೆಗೊಂಡಿರೋವಂತಹ ಹಲವಾರು ವಿಷ್ಯಗಳನ್ನ ನೀವು ನೋಡ್ಬಹುದು. ಅವೆಲ್ಲಾ ಅವ್ರ ಕೆಲ್ಸ. ಇದ್ ಹೇಗಾಯ್ತೂಂದ್ರೆ ಅವ್ರು ಯೋಗವನ್ನ ಜನ್ರ ಜೀವನ್ದಲ್ಲಿ ಯಾವ್ದೇ ಹಣೆಪಟ್ಟಿಯಿಲ್ದೇನೇ, ಯಾವ್ದೇ ನಿಗದಿತ ವಿನ್ಯಾಸವಿಲ್ದೇನೇ, ಹಾಗೇ ಸುಮ್ನೆ ಒಂದು ಬದುಕಿನ್ ಪ್ರಕ್ರಿಯೆ ತರ ತಂದ್ರು. ನೀವು ಬೆಳಗ್ಗೆ ಎದ್ದೇಳೋದು, ಹಲ್ಲುಜ್ಜೋದು, ಅಡ್ಗೆ ಮಾಡೋದು, ಊಟ ಮಾಡೋದು ಈ ಎಲ್ಲವನ್ನೂ ಅವ್ರು ಒಂದು ಆಧ್ಯಾತ್ಮಿಕ ಪ್ರಕ್ರಿಯೆಯನ್ನಾಗಿ ಬದಲಾಯಿಸ್ ಬಿಟ್ರು. ಅದ್ರ್ ಲಾಭಾನ ನಾವಿನ್ನೂ ಪಡೀತಾ ಇದೀವಿ. (ಚಪ್ಪಾಳೆ)

ನೀವು ಪ್ರಪಂಚದಲ್ಲಿ ಎಲ್ಲೇ ಆದ್ರೂ ಇರೋವಂತ ಆಧ್ಯಾತ್ಮಿಕ ಪ್ರಕ್ರಿಯೆಯನ್ನ ಗಮನಿಸಿದ್ರೆ, ಅವು ಶಿವನು ಸಂಶೋಧಿಸಿದಂತಹ ಈ 112 ವಿಧಾನಗಳಿಂದ ಹೊರತಾಗಿಲ್ಲ. ಆದ್ದರಿಂದ, ಗೌತಮ ಮತ್ತು ಶಿವನನ್ನ ಹೋಲಿಸೋದು ಸರಿಯಲ್ಲ. ನಂಗೆ ಗೌತಮನ್ ಮೇಲೆ ಅಪಾರವಾದ್ ಗೌರವ ಇದೆ. ಅವ್ನೊಬ್ಬ ಮಹಾಪುರುಷ. ಅದ್ರ್ ಬಗ್ಗೆ ಪ್ರಶ್ನೇನೇ ಇಲ್ಲ. ಅವನ್ ಕೆಲ್ಸ ಅದ್ಭುತವಾದದ್ದು. ಅವ್ನ್ ಎಷ್ಟೊಂದು ದೊಡ್ಡ ಆಧ್ಯಾತ್ಮಿಕ ಅಲೆಯನ್ನ ಹುಟ್ಟುಹಾಕ್ದ ಅಂದ್ರೆ, ಅದು ಇನ್ನೂ 2500 ವರ್ಷಗಳ ಮೇಲೂ ಜೀವಂತವಾಗಿದೆ. ಆದ್ರೆ ಅದನ್ನ ಶಿವಂಗೆ ಹೋಲ್ಸೋದಿಕ್ಕಾಗಲ್ಲ, ಯಾವ್ದೇ ರೀತಿಯಿಂದ್ಲೂ ಹೋಲ್ಸೋದಿಕ್ಕಾಗಲ್ಲ. ನಾವಿಷ್ಟು ಹೇಳ್ಬಹುದು - ಶಿವನ ವಿಧಾನಗಳು ಗೌತಮನ ವಿಧಾನವನ್ನ ಒಂದು ಸಣ್ಣ ಅಂಶವಾಗಿ ಒಳಗೊಂಡಿದೆ. ಅದು 1% ಗಿಂತ್ಲೂ ಕಮ್ಮಿ, ಯಾಕಂದ್ರೆ 112 ವಿಧಾನಗಳಲ್ಲಿ ಗೌತಮ ಒಂದನ್ನ ಪರಿಶೋಧಿಸ್ದ. ಆದ್ರೆ ಮುಖ್ಯವಾದ ಸಂಗತಿಯೇನಂದ್ರೆ ಅವ್ನು ಅದನ್ನ ಬಹಳ ಚೆನ್ನಾಗಿ ಪ್ರಚಾರ ಮಾಡ್ದ, ಮತ್ತು ಸಾವಿರಾರು ಜನ್ರನ್ನ ಆ ಮಾರ್ಗದಲ್ಲಿ ನಡೆಯೋದಕ್ಕೆ ಪ್ರೋತ್ಸಾಹಿಸ್ದ. ಅದು ಅವನ್ ಯಶಸ್ಸು. ಆದ್ರೆ ಶಿವ ಹೆಚ್ಚಾಗಿ ಉನ್ಮತ್ತನಾಗಿರೋದ್ರಿಂದ ಈ ಪ್ರಚಾರದ್ ಕೆಲ್ಸ ಎಲ್ಲಾ ಅವನಿಗ್ ಆಗಲ್ಲ. (ನಗು)

ಅವ್ನಿಗಾಗಿ ಪ್ರಚಾರ ನೀವು ಮಾಡ್ಬೇಕು. ಅವ್ನು... (ನಗು) ಅವ್ನು ಈ ಪ್ರಚಾರ ಎಲ್ಲಾ ಮಾಡಲ್ಲ. ಆದ್ರೆ ನಾನ್ ಮಾಡ್ಬೇಕಾಗಿದೆ. ಸಾಮಾನ್ಯವಾದ್ ನಂಬಿಕೆಯೇನಂದ್ರೆ ಶಿವ ಹೆಚ್ಚುಕಮ್ಮಿ 40 ರಿಂದ 60 ಸಾವ್ರ ವರ್ಷದ್ ಹಿಂದೆ ತನ್ನ ಆಧ್ಯಾತ್ಮಿಕ ಕೆಲ್ಸಾನಾ ಶುರು ಮಾಡಿದ್ದು ಅಂತ. ಆದ್ರೆ 60,000 ಅಥ್ವಾ 40,000 ವರ್ಷಗಳಾದ್ರೂ ಅದು ಇನ್ನೂ ಜೀವಂತವಾಗಿದೆ, ಕೊಲ್ಲೋದಿಕ್ಕಾಗಲ್ಲ. ಮ್? ಅದನ್ನಿನ್ನೂ ಕೊಲ್ಲೋದಿಕ್ಕಾಗಲ್ಲ ಅಲ್ವಾ? ನಾನು ನನ್ ಜೀವ್ನಾನಾ ಮುಗ್ಸೋ ಅಷ್ಟೊತ್ತಿಗೆ, ಅವ್ನನ್ನ ಈಗಿರೋದಿಕ್ಕಿಂತ್ಲೂ ಸ್ವಲ್ಪ ಹೆಚ್ಚು ಜನಪ್ರಿಯನನ್ನಾಗಿ ಮಾಡಿ ಹೋಗ್ತೀನಿ ಅನ್ನೋ ಖಾತ್ರಿಯಿದೆ ನಂಗೆ. (ಚಪ್ಪಾಳೆ)