ಉತ್ಸಾಹ ತು೦ಬಿದ ಯುವಕರು ಮತ್ತು ವಿಶಾಲವಾದ ಬುದ್ಧಿವ೦ತಿಕೆ

“ಯೂತ್ ಅ೦ಡ್ ಟ್ರುಥ್” ಆ೦ದೋಲನವು ಸದ್ಗುರುಗಳ ತವರೂರಾದ ಮೈಸೂರಿಗೆ ಆಗಮಿಸಲಿದ್ದು, ಸದ್ಗುರುಗಳು, ಅವರ ಇತ್ತೀಚಿನ ಕಾರ್ಯಕ್ರಮಗಳ ಕುರಿತಾಗಿ ಚುಟುಕಾದ ಮಾಹಿತಿಯನ್ನು ನೀಡುತ್ತಾರೆ. ಮತ್ತು ಮೈಸೂರಿನಲ್ಲಿನ ಅವರ ಕುಟು೦ಬ, ಮೋಟಾರ್ ಬೈಕ್-ಗಳು, ಅವರು ಓದಿದ ಶಾಲೆ ಹಾಗೂ ಅಲ್ಲಿನ ಯುವಜನತೆಯನ್ನೊಳಗೊ೦ಡ ಅಲ್ಲಿನ ಮು೦ಬರಲಿರುವ ಅವರ ಚಟುವಟಿಕೆಯ ಬಗ್ಗೆ ಹೇಳುತ್ತಿದ್ದಾರೆ. ಮತ್ತಿದೆಲ್ಲವೂ, ಭಾರತ ಹಾಗೂ ವಿಶ್ವದೆಲ್ಲೆಡೆ “ಗಣಗಳ ನಾಯಕ”ನಾದ ಗಣೇಶನನ್ನು ಆರಾಧಿಸುವ ಗಣೇಶ ಚತುರ್ಥಿ ಹಬ್ಬದ೦ದು! ಸದ್ಗುರುಗಳೇ ವಿವರಿಸುವ೦ತೆ, “ಗಣೇಶನು ಅಪ್ರತಿಮ ಬುದ್ಧಿಶಾಲಿಯಾಗಿದ್ದನು, ಮತ್ತು ಅವನ ಬುದ್ಧಿವಂತಿಕೆಯು ಎ೦ತಹುದಾಗಿತ್ತೆ೦ದರೆ, ಜೀವನವು ತ೦ದ್ದೊಡ್ಡುವ ಎಲ್ಲಾ ರೀತಿಯ ವಿಘ್ನಗಳನ್ನು ನಾಶಮಾಡಿ, ಅದರಿ೦ದ ಹೊರಬರುವ೦ತಹುದ್ದಾಗಿತ್ತು.”
 
Sadhguru with students of the Mount Carmel College, Bengaluru | Roaring Youth and a Big Brain
 
 
 

 

 

 ಲಿಪ್ಯ೦ತರ

 

ಸದ್ಗುರು: “ಯೂತ್ ಅ೦ಡ್ ಟ್ರುಥ್” ಆ೦ದೋಲನವು ಎಲ್ಲೆಡೆ ಅಬ್ಬರಿಸುತ್ತಿದೆ ಮತ್ತು ಈವರೆಗೆ ನಾಲ್ಕು ಕಾರ್ಯಕ್ರಮಗಳು ಮುಗಿದಿವೆ. ನಾವು ಈಗಷ್ಟೆ ಮೌ೦ಟ್ ಕಾರ್ಮೆಲ್ ಕಾಲೇಜಿನಿ೦ದ ಹೊರಬ೦ದೆವು ಮತ್ತಲ್ಲಿ ಉದ್ಗಾರ ತು೦ಬಿದ ಕಾರ್ಯಕ್ರಮವು ಜರುಗಿತು. ಮತ್ತು ಭಾರತದ ಫುಟ್ಬಾಲ್ ಆಟಕ್ಕೆ ಅದ್ಭುತ ಕೊಡುಗೆಯನ್ನು ನೀಡುತ್ತಿರುವ ನಮ್ಮ ಫುಟ್ಬಾಲ್ ಆಟಗಾರರಾದ ಸುನಿಲ್ ಛೆಟ್ರಿಯವರ ಜೊತೆ ನಮ್ಮ ಇನ್ನೊ೦ದು ಕಾರ್ಯಕ್ರಮವಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಇ೦ದು ಗಣೇಶ ಚತುರ್ಥಿ. ಗಣಪತಿ ಎ೦ದರೆ “ಗಣಗಳ ರಾಜ” ಅಥವಾ “ಗಣಗಳ ನಾಯಕ”, ಏಕೆ೦ದರೆ ಅವನು ಅವನ ತಲೆಯನ್ನು ಗಣಗಳಿ೦ದ ಪಡೆದಿರುವನು ಮತ್ತದು ಮಾನವನ ತಲೆಯಲ್ಲದ ಕಾರಣಕ್ಕೆ, ಅವನು ಅಪ್ರತಿಮ ಬುದ್ಧಿಶಾಲಿಯಾದನು. ಅವನ ಬುದ್ಧಿವಂತಿಕೆಯು ಎ೦ತಹುದಾಗಿತ್ತೆ೦ದರೆ, ಜೀವನವು ತ೦ದ್ದೊಡ್ಡುವ ಎಲ್ಲಾ ರೀತಿಯ ವಿಘ್ನಗಳನ್ನು ನಾಶಮಾಡಿ, ಅದರಿ೦ದ ಹೊರಬರುವ೦ತದ್ದಾಗಿತ್ತು. ಆದ್ದರಿ೦ದ ಅವನನ್ನು ವಿಘ್ನೇಶ್ವರ ಎ೦ದು ಕರೆಯಲಾಗುತ್ತದೆ.

ವಿಚಿತ್ರವೆ೦ದರೆ, ಬಹಳ ವರ್ಷಗಳ ನ೦ತರ ಹೀಗೆ ಜರುಗುತ್ತಿದೆ. ನಾನು ತು೦ಬಾ ವರ್ಷಗಳಿ೦ದ ಯಾವುದೇ ರೀತಿಯ ಕುಟು೦ಬದ ಸಮಾರ೦ಭಗಳು, ಹಬ್ಬಗಳು ಹಾಗೂ ಮದುವೆಗಳಿಗೆ ಹೋದವನಲ್ಲ. ಆದರೆ, ಕಳೆದ ವರ್ಷ, ಆಕಸ್ಮಿಕವಾಗಿ, Rally for Rivers ಸಮಯದಲ್ಲಿ ಗಣೇಶ ಚತುರ್ಥಿಯ೦ದು ನಾನು ಮೈಸೂರಿನಲ್ಲಿ ನನ್ನ ಕುಟು೦ಬದ ಜೊತೆಗಿದ್ದೆ. ಮತ್ತೊಮ್ಮೆ ನಾಳೆ ಅದೇ ಗಣೇಶ ಚತುರ್ಥಿಯ೦ದು ನಾನು ಮೈಸೂರಿನಲ್ಲಿರುವ ಹಾಗಾಗಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾರ್ಯಕ್ರಮದ ಆಯೋಜಕರು ನನ್ನನ್ನು ಮೈಸೂರಿನಲ್ಲಿರುವ೦ತೆ ನೋಡಿಕೊ೦ಡದ್ದಕ್ಕೆ ನನ್ನ ಧನ್ಯವಾದಗಳು. ಇದು ವಿಶೇಷವಾಗಿದೆ. ಮತ್ತೂ ಸಡಗರದ ವಿಷಯವೆ೦ದರೆ ನನ್ನ ಶಾಲೆಗೆ, ನಾನು ಓದಿದ ಶಾಲೆಗೆ, ಭರ್ತಿ ನಲವತ್ತೈದು ವರ್ಷಗಳ ಬಳಿಕ ಮರಳಿ ಹೋಗುತ್ತಿರುವುದು. ನಾನಲ್ಲಿ ಎರಡು ವರ್ಷಗಳು ಹೈ-ಸ್ಕೂಲ್ ವ್ಯಾಸ೦ಗವನ್ನು ಮಾಡಿದ್ದೆ. ಮೈಸೂರಿನಲ್ಲಿ ಇದರ ಬಗ್ಗೆ ತು೦ಬಾ ಸ೦ಭ್ರಮ ಮನೆಮಾಡಿದೆ. ಇನ್ನಿತರೆ ಕಾರ್ಯಕ್ರಮಗಳು ಕೂಡ ನಡೆಯಲಿವೆ. ನಾವು ಒ೦ದು ಗು೦ಪಿನ ಜನರೊಟ್ಟಿಗೆ ಚಾಮು೦ಡಿ ಬೆಟ್ಟದ ಮೇಲಿರುವ “ಸದ್ಗುರು ಸ್ಪಾಟ್”ಗೆ ತೆರಳಲಿದ್ದೇವೆ ಮತ್ತು ಮೈಸೂರಿನಲ್ಲಿ ಸ್ವಲ್ಪ ಮೋಟಾರ್ ಸೈಕ್ಲಿ೦ಗ್ ಕೂಡ ಮಾಡಲಿದ್ದೇವೆ. “ಯೂತ್ ಅ೦ಡ್ ಟ್ರುಥ್” ನಲ್ಲೂ ಬಹಳಷ್ಟು ವಿಷಯಗಳು ನಡೆಯುತ್ತಿವೆ ಮತ್ತು ಮೆಲ್ಲಗೆ ಅದರ ಮೇಲಿನ ಉತ್ಸಾಹವು ಎಲ್ಲೆಡೆ ಜಾಸ್ತಿಯಾಗುತ್ತಿದೆ. ಫೇಸ್-ಬುಕ್, ಟ್ವೀಟರ್ ಮತ್ತು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತಾದ ಇನ್ನಷ್ಟು ವಿಷಯಗಳನ್ನು ಹ೦ಚಿಕೊಳ್ಳಲಾಗುತ್ತದೆ. ಸ೦ಪರ್ಕದಲ್ಲಿರಿ!

ನಿಮಗೆಷ್ಟೇ ವಯಸ್ಸಾಗಿರಲಿ, ನೀವು ಯವ್ವನದಿ೦ದಿರಲು ಮತ್ತದರ ಬಗ್ಗೆ ಸತ್ಯವನ್ನು ತಿಳಿಯಲು, ಇದೇ ನಿಮ್ಮಗೆ ಸರಿಯಾದ ಸಮಯ!
 

Love & Grace