ಗುರು ಪೌರ್ಣಮಿಯು, ಆದಿಯೋಗಿ ಆದಿಗುರುವಾಗಿ ರೂಪಾಂತರಗೊಂಡ ಪೌರ್ಣಮಿಯ ದಿನವನ್ನು ಆಚರಿಸುತ್ತದೆ. ಹದಿನೈದು ಸಾವಿರ ವರ್ಷಗಳ ಹಿಂದೆ ಅವನು ರವಾನಿಸಿದ ಮುಕ್ತಿಯ ವಿಜ್ಞಾನವು ಅಂದಿನಷ್ಟೆಯೇ ಜೀವಂತವಾಗಿದೆ ಮತ್ತು ಅಗತ್ಯವಾಗಿದೆ.

ಜುಲೈ ೨೭, ೨೦೧೮ ರಂದು, ಗುರು ಪೂರ್ಣಮಿಯ ಸಂದರ್ಭದಂದು ಗುರುವಿನ ಉಪಸ್ಥಿತಿಯಲ್ಲಿ ಆದಿಯೋಗಿ-ಶಿವನಿಗೆ ಕೃತಜ್ಞತೆ ಮತ್ತು ಅರ್ಪಣೆ ಮಾಡುವ ದಿನವನ್ನು ಸಂಭ್ರಮಿಸಲು ಮತ್ತು ಅನುಭವಿಸಲು ನಿಮ್ಮನ್ನು ಈಶಾ ಯೋಗ ಸೆಂಟರ್‌ಗೆ ಆಹ್ವಾನಿಸುತ್ತಿದ್ದೇವೆ. ಅಂದು ಸದ್ಗುರುವಿನೊಡನೆ ಸತ್ಸಂಗವಿರುತ್ತದೆ.

ಗುರು ಪೌರ್ಣಮಿಯ ನಂತರವೇ ಸದ್ಗುರುವಿನೊಂದಿಗೆ ’ಲ್ಯಾಪ್ ಆಫ್ ದ ಮಾಸ್ಟರ್’ ಕಾರ್ಯಕ್ರಮವು ಜುಲೈ ೨೮ ಮತ್ತು ೨೯ ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇನ್ನರ್ ಇಂಜಿನಿಯರಿಂಗ್ ಅಥವಾ ಈಶ ಯೋಗ ಕಾರ್ಯಕ್ರಮವನ್ನು ತೆಗೆದುಕೊಂಡಿರಬೇಕಾಗುತ್ತದೆ.

ಪೂರ್ವ ನೋಂದಣಿಯ ಅಗತ್ಯವಿದೆ.

ಬನ್ನಿ, ಗುರುವಿನ ಅನಂತ ದಯೆಯನ್ನು ಅನುಭವಿಸಿ.

ಸಪ್ರೇಮ ಆಶೀರ್ವಾದಗಳೊಂದಿಗೆ,

ಗುರು ಪೌರ್ಣಮಿಯನ್ನು ಆಚರಿಸಿ