ದೆಹಲಿಯ SRCCಯಲ್ಲಿ ನಡೆದ “ಯೂತ್ ಅ೦ಡ್ ಟ್ರುಥ್”ನ ಸ್ವಾರಸ್ಯಕರ ಭಾಗಗಳನ್ನು ಇಲ್ಲಿ ನೋಡಿ

ಸಮಾರಂಭ ಪೂರ್ವದ ಸಡಗರ

Youth AND Truth kicks off at Shri Ram College of Commerce, Delhi on September 4, 2018

 

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ಸಲುವಾದ ಸ೦ಭ್ರಮ ಸಡಗರಗಳು, ಸೆಪ್ಟೆಂಬರ್ ನಾಲ್ಕರ ಬೆಳಿಗ್ಗೆ ಆರು ಗಂಟೆಗೆ, ಕಾಲೇಜಿನ ಮತ್ತು ಈಶ ಸ್ವಯಂ-ಸೇವಕರು ಆಗಮಿಸಿದಾಗಲೇ ಶುರುವಾಗಿದ್ದವು. ಆದರೆ, ನಿಜವಾದ ಸಡಗರವು ವಾರಗಳ ಹಿಂದೆಯೇ, ಸ್ವಯಂ-ಸೇವಕರುಗಳು ಹತ್ತಿರದ ಹಲವಾರು ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳು ಮತ್ತು ಶಿಕ್ಷರನ್ನು ಈ  ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋದಾಗ ಆರಂಭವಾಗಿತ್ತು. 

Youth AND Truth kicks off at Shri Ram College of Commerce, Delhi on September 4, 2018

 

ವಿದ್ಯಾರ್ಥಿಗಳು ಕಾರ್ಯಕ್ರಮವು ಹೇಗೆ ಮೂಡಿಬರಬಹುದೆಂಬ ಕುತೂಹಲವನ್ನಿಟ್ಟುಕೊಂಡಿದ್ದಾರೆಂದು ಹೊರಗಿನ ಕಾರ್ಯಕ್ರಮ-ಪೂರ್ವ ದೃಶ್ಯವನ್ನು ಸಮೀಕ್ಷಿಸಿದಾಗ ತಿಳಿದುಬ೦ತಾದರು, ಮೊದಲ ಬಾರಿಯ ಅನುಭವಗಳೊ೦ದಿಗೆ ಇರುವ ಬಿಗಿಹಿಡಿತವೂ ಸಹ ಕಂಡುಬಂದಿತು. ಆದರೆ, ಸ್ವಯಂ-ಸೇವಕರು ಬೇರೆಯೇ ಜಗತ್ತಿನಲ್ಲಿದ್ದರು – ಒಳ ಬರುತ್ತಿರುವ ವಿದ್ಯಾರ್ಥಿಗಳು ಮುಕ್ತ ಮನಸ್ಸಿನೊಂದಿಗೆ ಪಾಲ್ಗೊಳ್ಳುವಂತೆ ಮಾಡಲು, ಮೋಜು ಮತ್ತು ಸಡಗರದ ವಾತಾವರಣವನ್ನು ಸೃಷ್ಟಿಸಲು ಬದ್ಧರಾಗಿದ್ದರು. 

Youth AND Truth kicks off at Shri Ram College of Commerce, Delhi on September 4, 2018

 

ಸಭಾಂಗಣದಲ್ಲಿ, ಉತ್ಸಾಹದ ಕಾವು ಮೆಲ್ಲನೆ ಏರುತ್ತಿತ್ತು. ಮೊದಮೊದಲು, ವಿದ್ಯಾರ್ಥಿಗಳು ಬಂದು ತಮ್ಮತಮ್ಮ ಜಾಗಗಳಲ್ಲಿ ಕುಳಿತುಕೊಳ್ಳಲು ಆರಂಭಿಸುತ್ತಿದ್ದಂತೆ, ಅರ್ಥವಾಗದ ಗುಸುಗುಸು ಮಾತ್ರ ಕೇಳುತ್ತಿತ್ತು. “ಸೌಂಡ್ಸ್ ಆಫ್ ಈಶ” ದ ಸಂಗೀತವು ಕೇಳಿಬರುತ್ತಿದ್ದ೦ತೆಯೆ, ಗಲಾಟೆಯು ತಣ್ಣಗಾಗಿ, ಕೆಲ ಯುವಕ, ಯುವತಿಯರು ಹಾಡಲು ಮತ್ತು ನೃತ್ಯಮಾಡಲಾರಂಭಿಸಿದರು. ನಿಧಾನವಾಗಿ ಆದರೆ ನಿಶ್ಚಯವಾಗಿ, ಒಂದು “ರಾಕ್ ಕಾನ್ಸರ್ಟ್” ನ ಅನುಭವವು ನಿರ್ಮಾಣವಾಗುತ್ತಿತ್ತು.

Sound of Isha in concert | Youth AND Truth kicks off in Delhi at Shri Ram College of Commerce on September 4, 2018

 

ಸದ್ಗುರುಗಳ ಆಗಮನ!

Youth AND Truth kicks off at Shri Ram College of Commerce, Delhi on September 4, 2018

 

ಸದ್ಗುರುಗಳು ಆಗಮಿಸಿದಾಗ, ಅಲ್ಲಿನ ವಾತಾವರಣವು ಸಂಪೂರ್ಣವಾಗಿ ಬದಲಾಯಿತು. RJ ರೌನಕ್ ವಿವರಿಸಿದಂತೆ, “ಸದ್ಗುರುಗಳು ಆಗಮಿಸಿದಾಕ್ಷಣ, ಇಡೀ ಸಭಾಂಗಣವೇ ಉತ್ತೇಜಿತಗೊಂಡಿತು. ಅದ್ಭುತ!”

“ಯೂತ್ ಅ೦ಡ್ ಟ್ರುಥ್!” “ಯೂತ್ ಅ೦ಡ್ ಟ್ರುಥ್!” ಎಂಬ ಕೂಗು – ಕಾರ್ಯಕ್ರಮದ ಚ್ಯಾಂಪಿಯನ್ ಆದ ಸದ್ಗುರುಗಳಿಗೆ ಹೇಳಿ ಮಾಡಿಸಿದ ಸ್ವಾಗತವಾಗಿತ್ತು.

ಸಭಾಂಗಣದಲ್ಲಿನ ಉತ್ಸಾಹವೇನು ಕಡಿಮೆಯಿದೆಯೋ ಎಂಬ೦ತೆ, “ಸೌಂಡ್ಸ್ ಆಫ್ ಈಶ” ದ ಅಮೋಘ ಹುಮ್ಮಸ್ಸಿನ ಸಂಗೀತದ ಜೊತೆ ಮೋಹಿತ್ ಚೌಹಾನ್-ರವರ ಹುರುಪಿನ “Rockstar” ಹಾಡುಗಳು ಸಭಿಕರನ್ನು ಬೇರೊಂದು ಆಯಾಮಕ್ಕೆ ಕರೆದೊಯ್ಯಿತು. ಮುಂದಿನ ಕೆಲ ನಿಮಿಷಗಳಲ್ಲಿ ಅವರಿಗೆ ಆಗಬಹುದಾದುದರ ಬಗ್ಗೆ, ಇದೊ೦ದು ಚಿಕ್ಕ ಸುಳಿವಿದ್ದಂತಿತ್ತು. ಸಹಜವಾಗಿಯೆ, ಸದ್ಗುರುಗಳು ಮೋಹಿತ್-ರವರ ಹಾಡುಗಳಿಗೆ ಹೆಜ್ಜೆ ಹಾಕಿ, ನಡೆಯುತ್ತಿದ್ದ ಉತ್ಸವದಲ್ಲಿ ಪಾಲ್ಗೊಂಡರು. 

Mohit Chauhan in concert | Youth AND Truth kicks off at Shri Ram College of Commerce, Delhi on September 4, 2018

 

ಅನ್ವೇಷಣೆಯ ಆರಂಭ....

ಬಳಿಕ ನಡೆದದ್ದೆ೦ದರೆ, ಮೂವರು ವಿದ್ಯಾರ್ಥಿಗಳಿದ್ದ ತಂಡದಿ೦ದ ಪ್ರಶ್ನೋತ್ತರದ ಅಧಿವೇಶನ. ಇದಾದ ನ೦ತರ, ಸಭಿಕ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಅವಕಾಶವನ್ನು ನೀಡಲಾಯಿತು. ವಿದ್ಯಾರ್ಥಿಗಳು ಅವರಲ್ಲಿ ಕುದಿಯುತ್ತಿರುವ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಕೇಳಲು ಉತ್ಸುಕರಾದಷ್ಟೆ, ಒ೦ದು ರೀತಿಯ ಬೆರಗಿನ ಭಾವ ಎಲ್ಲರಲ್ಲಿಯೂ ಮೂಡಿತ್ತು ಮತ್ತದು ಅವರನ್ನು ಸದ್ಗುರುಗಳ ಮತ್ತವರ ಜೀವನದ ಕುರಿತಾಗಿಯೆ ಹಲವು ಪ್ರಶ್ನೆಗಳನ್ನು ಕೇಳುವ೦ತೆ ಪ್ರೇರೇಪಿಸಿತು. "ಸದ್ಗುರು, ನೀವು ಕುಳಿತುಕೊಳ್ಳುವಾಗ ಒಂದು ಕಾಲನ್ನು ಮೇಲೆತ್ತಿಡುವಿರಿ ಏಕೆ?”, “ನೀವು ಬಹಳ ಪೂಜ್ಯರು ಮತ್ತು ಗೌರವಾನ್ವಿತರು, ಇದು ನಿಮ್ಮಲ್ಲಿ ಮೇಲರಿಮೆಯನ್ನುಂಟುಮಾಡುತ್ತದೆಯೆ?”, “ಕಾಲೇಜಿನಲ್ಲಿ ಓದುತ್ತಿದ್ದಾಗ, ನೀವು ಕೂಡ ನಿಮ್ಮದೆ ಕನಸುಗಳು ಮತ್ತು ಹೆತ್ತವರನ್ನು ಮೆಚ್ಚಿಸುವುದರ ನಡುವೆ ಹೋರಾಡಬೇಕಿತ್ತೆ?” – ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಲಾಯಿತು.

Youth AND Truth kicks off at Shri Ram College of Commerce, Delhi on September 4, 2018

 

“ಹೊಟ್ಟೆಕಿಚ್ಚು ಸ್ಫೂರ್ತಿದಾಯಕವೆ?”, “ಗುರಿ ಎಂಬುದು, ಆರಂಭವೇ ಅಥವಾ ಅ೦ತ್ಯವೇ?”, “ಸಾರ್ವಜನಿಕವಾಗಿ ಪ್ರೀತಿಯನ್ನು ಪ್ರದರ್ಶಿಸುವುದು ಸರಿಯೆ?”, “ರಾಮಾನುಜನ್-ರವರ ಹಾಗೆ ಮೇಧಾವಿಯಾಗಲು ನಮ್ಮ ಶರೀರ ಮತ್ತು ಮನಸ್ಸನ್ನು ಹೇಗೆ ಸಿದ್ಧಪಡಿಸಿಕೊಳ್ಳುವುದು?" ಮತ್ತು ಇತರೆ ಹತ್ತು ಹಲವು  ಪ್ರಶ್ನೆಗಳನ್ನು ಉತ್ತರಕ್ಕಾಗಿ ಹ೦ಬಲಿಸುತ್ತಿದ್ದ ಉತ್ಸಾಹಭರಿತ ವಿದ್ಯಾರ್ಥಿಗಳು ಕೇಳಿದರು. ಸದ್ಗುರುಗಳು ಎ೦ದಿನ೦ತೆಯೆ ಅವರ ವಾಕ್ಚಾತುರ್ಯದಿ೦ದ, ಸಲೀಸಾಗಿ, ಮತ್ತು ಉತ್ಸಾಹದಿ೦ದ ಪ್ರಶ್ನೆಗಳಿಗೆ ಉತ್ತರಿಸಿದರು ಮತ್ತದು ಯುವ ಶ್ರೋತೃಗಳನ್ನು ನಗೆಗಡಲಿನಲ್ಲಿ ತೇಲಿಸಿ ಏದುಸಿರು ಬಿಡುವ೦ತೆ ಮಾಡಿತು.

 

Youth AND Truth kicks off at Shri Ram College of Commerce, Delhi on September 4, 2018

 

ಆದರೆ, ಸತ್ಯವನ್ನು ಅದರ ಸಹಜಸ್ಥಿತಿ ಹಾಗೂ ಪರಿಶುದ್ಧ ರೂಪದಲ್ಲಿ ಹೇಳುವ ಅವಕಾಶಗಳನ್ನು ಅವರು ಬಿಟ್ಟುಕೊಡಲಿಲ್ಲ – ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಯುವಜನರಿಗೆ ಸಹಜವಾಗಿ ಪರಿಚಯವಿಲ್ಲದ೦ತಹ ವಿಚಾರಗಳು. ಉದಾಹರಣೆಗೆ, ಕತ್ತೆಯ ಬಾಲಕ್ಕೆ ಬೆ೦ಕಿ ಬಿದ್ದರೆ, ಅದು ಕುದುರೆಗಿ೦ತ ವೇಗವಾಗಿ ಓಡುತ್ತದೆ ಎ೦ದಾಗ, ಅಥವಾ, ತರಬೇತಿ ಪಡೆದ ಸರ್ಕಸ್ ಮಂಗನ ತರಹ ಆಗಬೇಡಿ ಏಕೆ೦ದರೆ ನೀವೂ ಒಂದು ದಿನ ಸಾಯುವವರೇ ಎಂದು ಹೇಳಿದಾಗ, ಯುವ ಸಭಿಕರಲ್ಲಿ ಒಂದು ರೀತಿಯ ಮೌನ ಮತ್ತು ಅರಿವು ಮೂಡುತ್ತಿದ್ದ೦ತೆ ತೋರಿತು. 

ಜೀವನದ ಬಗ್ಗೆ ಸದ್ಗುರುಗಳು ಬಹಳ ವಿಶಿಷ್ಟವಾದ ರೀತಿಯಲ್ಲಿ ಮಾತನಾಡುತ್ತ, ವಿದ್ಯಾರ್ಥಿಗಳನ್ನು ಅನೇಕ ವಿಷಯಗಳ ಬಗ್ಗೆ ಆಳವಾಗಿ ವಿಚಾರಮಾಡುವ೦ತೆ ಪ್ರೇರೇಪಿಸಿದರು.  ಆದಿಯೋಗಿ ಮೂರ್ತಿಯು ಏಕೆ ಅಷ್ಟು ದೊಡ್ಡದಾಗಿದೆ ಎಂದು ಕೇಳಿದಾಗ, ರೇಖಾಗಣಿತದ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು. “ವಿಶ್ವವಿದ್ಯಾಲಯವೆ ಅಥವಾ ವಿಶ್ವವೆ?” ಎಂಬ ಗಹನವಾದ ಪ್ರಶ್ನೆಯನ್ನೊಡ್ಡಿ, ಮೊದಲ “ಯುತ್ ಅ೦ಡ್ ಟ್ರುಥ್” ಕಾರ್ಯಕ್ರಮವನ್ನು, ದೆಹಲಿಯ SRCC ಕಾಲೇಜಿನಲ್ಲಿ ಮುಗಿಸಿ ಹೊರಟರು.

ಎರಡು ಗಂಟೆಗಳಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮವು, ಮೂರು ಗಂಟೆಗಳವರೆಗೆ ವಿಸ್ತರಿಸಲಾಯಿತು. ಅದಾಗ್ಯೂ ಅದು ವಿದ್ಯಾರ್ಥಿಗಳನ್ನು, ಇನ್ನೂ ಬೇಕೆನ್ನುವ ಸ್ಥಿತಿಯಲ್ಲಿ ನಿಲ್ಲಿಸಿತ್ತು. ಅವರ ಪ್ರಶ್ನೆಗಳ ಉತ್ತರಗಳಿಗಾಗಿ ಇದ್ದ ಹಸಿವು, ಸಾಮಾನ್ಯವಾದ ಹಸಿವನ್ನು ಮರೆಮಾಡಿತ್ತು. ಕಾರ್ಯಕ್ರಮವು, ಊಟದ ಸಮಯವನ್ನು ದಾಟಿ, ಮಧ್ಯಾಹ್ನ ಎರಡು ಗ೦ಟೆಗೂ ಮೀರಿ ನಡೆಯಿತು. 

ಸದ್ಗುರುಗಳಿ೦ದ ಬ೦ದ ಕೆಲ ಉತ್ತರಗಳನ್ನು ಇಲ್ಲಿ ನೋಡಿ

 

 

 

 

ಒ೦ದು ಸಂತೋಷದ ಬೀಳ್ಕೊಡುಗೆ...

ಕಾಲೇಜಿನ ಆವರಣದಿಂದ ಹೊರಡುವಾಗ, ಬಹು ಉತ್ತೇಜಿತಗೊ೦ಡಿದ್ದ ವಿದ್ಯಾರ್ಥಿಗಳು ಸೃಷ್ಟಿಸಿದ ಪ್ರಚೋದನೆಯ ವಾತಾವರಣದ ಮಧ್ಯೆಯೂ ಸದ್ಗುರುಗಳು ಫ್ರಿಸ್ಬಿ-ಅನ್ನು ಎಸೆಯಲು ಚಿಕ್ಕ ದಾರಿಯನ್ನು ಮಾಡಿಕೊಂಡರು. ವಯಸ್ಸಿಗು ಹಾಗೂ ಲವಲವಿಕೆ ಮತ್ತು ಹುಮ್ಮಸ್ಸಿಗೂ ಯಾವುದೇ ಸಂಬಂಧವಿಲ್ಲವೆಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿತ್ತು!

Sadhguru plays Frisbee with SRCC students | Youth AND Truth kicks off at Shri Ram College of Commerce, Delhi on September 4, 2018

 

Youth AND Truth kicks off at Shri Ram College of Commerce, Delhi on September 4, 2018

 

ಕಾರ್ಯಕ್ರಮದ ನಂತರ, ವಿದ್ಯಾರ್ಥಿಗಳ ಪ್ರಶಾಂತತೆ, ಸ್ಪಷ್ಟತೆ ಮತ್ತು ಮನೋಭಾವದಲ್ಲಿ ಒಂದು ಗಮನಾರ್ಹ ಬದಲಾವಣೆಯಿತ್ತು. ಚಿತ್ರೀಕರಿಸಲು ಎಳೆದುಕೊಂಡು ಬರಬೇಕಾದಾಗ ನಿಸ್ತೇಜ, ಸಂಕೋಚದ ಮುಖಗಳು ಇದ್ದಕ್ಕಿದ್ದಂತೆ ಎಷ್ಟು ಉತ್ಸಾಹಭರಿತವಾಗಿದ್ದವೆ೦ದರೆ, ತಮ್ಮ ಅನುಭವವಗಳನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳು ಕಾದುನಿ೦ತಿದ್ದರು. ವಿದ್ಯಾರ್ಥಿಗಳು ತಮ್ಮ ಉಭಯಲಿಂಗಿತ್ವ ಬಗ್ಗೆ ಮುಕ್ತವಾಗಿ ಮಾತನಾಡಿದರು, ಈ ಕಾರ್ಯಕ್ರಮವನ್ನು ಮುಂಚೆಯೇ ಏಕೆ ಮಾಡಲಿಲ್ಲವೆ೦ದು ಹಾಗೂ ಸದ್ಗುರುಗಳನ್ನು ಇನ್ನೂ ತಿಳಿಯದ ಯುವಕರಿಗಾಗಿ ಸಂದೇಶಗಳನ್ನೂ ನೀಡಿದರು.

Youth AND Truth kicks off at SRCC, Delhi, September 4, 2018

 

“ಸದ್ಗುರುಗಳೊ೦ದಿಗೆ ಮನಬಿಚ್ಚಿ ಮಾತನಾಡಿ” ಕಾರ್ಯಕ್ರಮದ ಬಗ್ಗೆ ಕೆಲ ವಿದ್ಯಾರ್ಥಿಗಳು ಹೇಳಿದ್ದೇನು

It’s really nice that Sadhguru has taken this initiative to do this for college students. It’s also a huge honor for us that he started this at SRCC. | Youth AND Truth kicks off in Delhi at Shri Ram College of Commerce

“ಸದ್ಗುರುಗಳು ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ರೂಪಿಸಿರುವುದು ಬಹಳ ಒಳ್ಳೆಯ ವಿಷಯ. ಅವರು SRCC-ನಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಿದ್ದು ನಮಗೆಲ್ಲ ಒಂದು ದೊಡ್ಡ ಮನ್ನಣೆಯಾಗಿದೆ”

“In today’s competitive world, it is so important for us to get the right kind of guidance. And to get this from such a magnanimous personality was a privilege for all of us. It definitely answered most of the queries that we’ve been longing to get answers for. Youth AND Truth SRCC, Delhi, Sep 4

“ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ನಮಗೆ ಸರಿಯಾದ ಮಾರ್ಗದರ್ಶನ ಸಿಗುವುದು ತುಂಬಾ ಮುಖ್ಯವಾಗಿದೆ. ಮತ್ತದನ್ನು ಇ೦ತಹ ಘನತೆಯುಳ್ಳ ವ್ಯಕ್ತಿತ್ವದಿಂದ ಪಡೆದುಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಒಂದು ಸುಯೋಗ. ಉತ್ತರಕ್ಕಾಗಿ ಹಾತೊರೆಯುತ್ತಿದ್ದ ಬಹಳಷ್ಟು ಪ್ರಶ್ನೆಗಳಿಗೆ ಇದು ಖಂಡಿತವಾಗಿಯೂ ಉತ್ತರವನ್ನು ಕೊಟ್ಟಿದೆ.”

The answers given to our questions by Sadhguru have given true insight into how to tackle many situations which we face in our everyday life. | Youth AND Truth at SRCC, Delhi at Sep 4

“ಈ ಸಭೆಯು ಈಗಿನ ಸಮಯಕ್ಕೆ ಅತ್ಯವಶ್ಯವಾಗಿತ್ತು. ಇಲ್ಲಿಗೆ ಬರಲು ನಾನೊಂದು ತರಗತಿಯನ್ನು ಬಿಟ್ಟುಬರಬೇಕಾಯಿತು. ನಾನು ವಾಪಾಸಾದಾಗ, ನನ್ನ ಗೆಳೆಯರಿಗೆ ಕರೆ ಮಾಡಿ, ಸದ್ಗುರುಗಳು ನಮಗೆ ಹೇಳಿದ ಎಲ್ಲಾ ಅದ್ಭುತ ಸಂಗತಿಗಳನ್ನು ಅವರೊಡನೆ ಹಂಚಿಕೊಳ್ಳುತ್ತೇನೆ.   

I’ve heard about Sadhguru but listening to him live was a great experience. His personality, his vibes are so positive and energy-giving. Just can’t express what we feel when he is present. Youth AND Truth at SRCC, Delhi, Sep 4

“ನಾನು ಸದ್ಗುರುಗಳ ಬಗ್ಗೆ ಕೇಳಿದ್ದೆ ಆದರೆ ಅವರನ್ನು ಮುಖಾಮುಖಿಯಾಗಿ ನೋಡಿ ಕೇಳಿದ್ದು ಒಂದು ಅದ್ಭುತವಾದ ಅನುಭವವಾಗಿತ್ತು. ಅವರ ವ್ಯಕ್ತಿತ್ವ, ಅವರ vibes ಎಷ್ಟು ಸಕಾರಾತ್ಮಕವಾಗಿ ಮತ್ತು ಚೈತನ್ಯದಾಯಕವಾಗಿದ್ದಿತು. ಅವರು ಉಪಸ್ಥಿತರಿದ್ದಾಗ ನಮಗಾಗುವ ಅನುಭವವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ.”

This session was such the need of the hour. I missed a class to attend this session. And when I go back, I’m going to call up all my friends and tell them I saw Sadhguru and all the amazing things he shared with us today! Youth AND Truth at SRCC, Delhi, Sep 4

“ನಮ್ಮ ಪ್ರಶ್ನೆಗಳಿಗೆ ಸದ್ಗುರುಗಳು ನೀಡಿದ ಉತ್ತರಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುವ ಅನೇಕ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆನ್ನುವುದರ ಬಗ್ಗೆ ನಿಜವಾದ ಒಳನೋಟವನ್ನು ನೀಡಿದೆ.”

ಮಾಧ್ಯಮಗಳಲ್ಲಿ "ಯುತ್ ಅ೦ಡ್ ಟ್ರುಥ್" 

SRCC ಕಾಲೇಜಿನ ಒಬ್ಬ ಸಂದೇಹವಾದಿ ವಿದ್ಯಾರ್ಥಿಯಾದ ಆಶ್ನ ಗುಪ್ತರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಸದ್ಗುರುಗಳೊ೦ದಿಗೆ "ಯುತ್ ಅ೦ಡ್ ಟ್ರುಥ್" ನಲ್ಲಿ ಭಾಗವಹಿಸಿದ ನ೦ತರ ಹೇಗೆ ಅವರು ಪ್ರೇರಿತರಾದರು ಮತ್ತು ತಮ್ಮೊಳಗಿನಿ೦ದ ಪರಿವರ್ತನೆಗೊ೦ಡರು ಎ೦ಬ ಅನುಭವವನ್ನು ಇಲ್ಲಿ ಓದಿ

LivED It: How I Got Inspired By The World Famous Yogi, Sadhguru at SRCC, By Aashna Gupta, September 6, 2018.

ಬಿಸ್ನೆಸ್ಸ್-ವರ್ಲ್ಡ್, ಬಿಸ್ನೆಸ್ಸ್ ಸುದ್ದಿಗಾಗಿ ಇರುವ ಜಾಲತಾಣ - ಸೆಪ್ಟೆ೦ಬರ್ ನಾಲ್ಕರ೦ದು ದೆಹಲಿಯ SRCCಯಲ್ಲಿ ನಡೆದ "ಯುತ್ ಅ೦ಡ್ ಟ್ರುಥ್" ಕಾರ್ಯಕ್ರಮದ ಬಗ್ಗೆ ಒ೦ದು ಲೇಖನವನ್ನು ಪ್ರಕಟಿಸಿತು. 

Sadhguru At SRCC, Delhi – Celebrating Youth & Truth

"ಯುತ್ ಅ೦ಡ್ ಟ್ರುಥ್" ಅಭಿಯಾನವು ಒಂದು ತಿಂಗಳು ಪೂರ್ತಿ ನಡೆಯಲಿದ್ದು, ಈ ಅವಧಿಯಲ್ಲಿ ಸದ್ಗುರುಗಳು ನಮ್ಮ ಯುಜನರಲ್ಲಿ ಪ್ರಜ್ಞೆ ಮತ್ತು ಸ್ಪಷ್ಟತೆಯನ್ನು ತರವ ಸಲುವಾಗಿ ಭಾರತದ ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಲಿದ್ದಾರೆ. ಮುಂದಿನ ಕಾರ್ಯಕ್ರಮವು, ಸೆಪ್ಟಂಬರ್ ಏಳರಂದು, ಕೊಯಮತ್ತೂರಿನ, ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತದೆ. 

ಸಂಪಾದಕರ ಟಿಪ್ಪಣಿ: ಸದ್ಗುರುಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಹಲವು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಹಾಗೂ ಪ್ರಸಿದ್ಧ ತಾರೆಯರು ಕೇಳುವ ಪ್ರಶ್ನೆಗಳಿಗೆ ನೀಡುವ ಉತ್ತರವನ್ನು ಪ್ರತಿದಿನ ನಮ್ಮ ಸಾಮಾಜಿಕ ಜಾಲತಾಣಗಳಾದ – ಸದ್ಗುರು ಫೇಸ್-ಬುಕ್, ಯೂಟ್ಯೂಬ್, ಟ್ವೀಟರ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ಹ೦ಚಿಕೊಳ್ಳಲಾಗುತ್ತದೆ. ಎದುರು ನೋಡುತ್ತಿರಿ!

ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image