ಸದ್ಗುರು: ದೀಪಾವಳಿ ದೀಪಗಳ ಹಬ್ಬ. ದೀಪಾವಳಿಯಲ್ಲಿ, ಪ್ರತಿಯೊಂದು ಪಟ್ಟಣ, ನಗರ ಮತ್ತು ಹಳ್ಳಿಗಳು, ಸಾವಿರಾರು ದೀಪಗಳಿಂದ ಬೆಳಗುತ್ತಿರುವುದನ್ನು ನೀವು ನೋಡುತ್ತೀರಿ. ಆದರೆ ಹಬ್ಬದ ಆಚರಣೆಯು ಕೇವಲ ಹೊರಗಡೆ ದೀಪಗಳನ್ನು ಬೆಳಗಿಸುವುದರ ಬಗ್ಗೆಯಲ್ಲ - ಆಂತರ್ಯದಲ್ಲಿ ಬೆಳಕು ಮೂಡಬೇಕಿದೆ. ಬೆಳಕು ಎಂದರೆ ಸ್ಪಷ್ಟತೆ. ಸ್ಪಷ್ಟತೆಯಿಲ್ಲದೆ, ನಿಮ್ಮ ಪ್ರತಿಯೊಂದು ಗುಣವೂ ನಿಮಗೆ ಬಾಧಕವಾಗುವುದೇ ವಿನಃ, ಉಡುಗೊರೆಯಾಗುವುದಿಲ್ಲ, ಏಕೆಂದರೆ ಸ್ಪಷ್ಟತೆಯಿಲ್ಲದ ವಿಶ್ವಾಸವು ಒಂದು ಆಪತ್ತು. ಇಂದು, ಜಗತ್ತಿನಲ್ಲಿ ಬಹಳ ಕೆಲಸಗಳನ್ನು ಸ್ಪಷ್ಟತೆಯಿಲ್ಲದೆ ಮಾಡಲಾಗುತ್ತಿದೆ.

ಅಗತ್ಯವಿರುವ ಸ್ಪಷ್ಟತೆ ಇಲ್ಲದೆ ನೀವೇನೇ ಮಾಡಲು ಪ್ರಯತ್ನಿಸಿದರೂ ಅದು ಅನಾಹುತವಾಗುತ್ತದೆ. ಬೆಳಕು ನಿಮ್ಮ ದೃಷ್ಟಿಗೆ ಸ್ಪಷ್ಟತೆಯನ್ನು ತರುತ್ತದೆ; ಕೇವಲ ಭೌತಿಕವಾಗಿಯೇ ಅಲ್ಲ. ನೀವು ಜೀವನವನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತೀರಿ ಮತ್ತು ನಿಮ್ಮ ಸುತ್ತಲಿನ ಎಲ್ಲವನ್ನೂ ಎಷ್ಟು ಸ್ಪಷ್ಟವಾಗಿ ಗ್ರಹಿಸುತ್ತೀರಿ ಎಂಬದು ನಿಮ್ಮ ಜೀವನವನ್ನು ನೀವು ಎಷ್ಟು ಸಂವೇದನಾಶೀಲವಾಗಿ ನಡೆಸುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ದೀಪಾವಳಿ ಎಂದರೆ ಕರಾಳ ಶಕ್ತಿಗಳನ್ನು ನಾಶ ಮಾಡಿ ಬೆಳಕು ಮೂಡಿದ ದಿನ ಎಂದು. ಇದು ಮಾನವ ಜೀವನದಲ್ಲಿನ ಸಂಕಟವೂ ಕೂಡ. ತಾವೇ ಸೂರ್ಯನ ಬೆಳಕನ್ನು ತಡೆದಿದ್ದೇವೆಂದು ಅರಿಯದೆ ಕತ್ತಲೆ ತುಂಬಿದ ವಾತಾವರಣದಲ್ಲಿ ಕೊರಗುವ ಕಪ್ಪು ಮೋಡಗಳಂತೆ ಮನುಷ್ಯರೂ ಕೂಡ. ನೀವು ಎಲ್ಲಿಂದಲೋ ಬೆಳಕನ್ನು ತರಬೇಕಿಲ್ಲ. ನಿಮ್ಮೊಳಗೆ ಕಲೆ ಹಾಕಿದ ಕಪ್ಪು ಮೋಡಗಳನ್ನು ಹೊರದೂಡಿದರೆ, ಬೆಳಕು ತಾನಾಗೇ ಮೂಡುತ್ತದೆ. ಬೆಳಿಕಿನ ಹಬ್ಬವು ಇದನ್ನು ನೆನಪು ಮಾಡುತ್ತದೆಯಷ್ಟೆ.


ಈ ಬೆಳಕು ಮತ್ತು ಸ್ಪಷ್ಟತೆಯನ್ನು ನಮ್ಮೊಳಗೆ ಮೂಡಿಸಲು, ಸದ್ಗುರುಗಳು ಈ ದೀಪಾವಳಿಯಂದು ವಿಶೇಷ ಉಡುಗೊರೆಯನ್ನು ನಮಗೆ ನೀಡುತ್ತಿದ್ದಾರೆ. ದೀಪಾವಳಿಯ ಸಮಯದಲ್ಲಿ ಮೂರು ದಿನಗಳವರೆಗೆ, ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್ ಕಾರ್ಯಕ್ರಮವನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತದೆ.

ಇನ್ನರ್ ಇಂಜಿನಿಯರಿಂಗ್:

‘ಇನ್ನರ್ ಇಂಜಿನಿಯರಿಂಗ್’ ಯೋಗ ವಿಜ್ಞಾನದಿಂದ ಆರಿಸಿ ತೆಗೆದ ಯೋಗಕ್ಷೇಮದ ತಂತ್ರಜ್ಞಾನ. ವೈಯಕ್ತಿಕ ಬೆಳವಣಿಗೆಗೆ ಇದನ್ನೊಂದು ಸಮಗ್ರ ಅಭ್ಯಾಸವಾಗಿ ಸಾದರಪಡಿಸಲಾಗುತ್ತಿದೆ. ನೀವು ನಿಮ್ಮ ಜೀವನ, ನಿಮ್ಮ ಕೆಲಸ ಮತ್ತು ನೀವು ವಾಸಿಸುವ ಪ್ರಪಂಚವನ್ನು ನೀವು ಗ್ರಹಿಸುವ ಮತ್ತು ಅನುಭವಿಸುವ ರೀತಿಯನ್ನು ಇದು ಬದಲಾಯಿಸುತ್ತದೆ. ಜೀವನದ ಪ್ರಮುಖ ಅಂಶಗಳನ್ನು ಪರಿಗಣಿಸಲು ಮತ್ತು ಪ್ರಾಚೀನ ಜ್ಞಾನದ ರಹಸ್ಯಗಳನ್ನು ಅರಿತುಕೊಳ್ಳಲು ಸ್ವಯಂ-ರೂಪಾಂತರದ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗದ ಮೂಲತತ್ವ ಮತ್ತು ಧ್ಯಾನಗಳ ಮೂಲಕ ನಿಮ್ಮ ಪರಮ ಸಾಧ್ಯತೆಯನ್ನು ನೀವು ಅನ್ವೇಷಿಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಇನ್ನರ್ ಇಂಜಿನಿಯರಿಂಗ್ ಸ್ವಯಂ-ಪರಿಶೋಧನೆ ಮತ್ತು ರೂಪಾಂತರಕ್ಕೆ ಒಂದು ಅನನ್ಯ ಅವಕಾಶವನ್ನು ನೀಡಿ, ಸಾರ್ಥಕ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ.

ಲಾಭಗಳು:

• ದಿನವಿಡೀ ಹೆಚ್ಚಿನ ಶಕ್ತಿ ಮತ್ತು ಚುರುಕುತನದಿಂದಿರಿ.

• ಸಂವಹನ(ಕಮ್ಯೂನಿಕೇಶನ್) ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸಿ

• ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಂತುಲನೆ ಮತ್ತು ಕ್ಷಮತೆಯನ್ನು ಹೆಚ್ಚಿಸಿಕೊಳ್ಳಿ

• ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸಿಕೊಳ್ಳಿ

• ಅಲರ್ಜಿ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ ಮತ್ತು ಬೆನ್ನು ನೋವು ಸೇರಿದಂತೆ ದೀರ್ಘಕಾಲಿಕ ಕಾಯಿಲೆಗಳಿಂದ ಪರಿಹಾರ ಪಡೆಯಿರಿ.

• ಸಂತೋಷ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಪಡೆಯಿರಿ.

ನೋಂದಣಿ ಫಾರ್ಮ್: