ಸಾಧನಪಾದ – ಸಾಧನೆಯ ಮೂಲಕ ಮೇಲಕ್ಕೇರು

ಈ ಸರಣಿಯು ನಿಮ್ಮನ್ನು ಸಾಧನಪಾದ ಎನ್ನುವ ಪಯಣದೊಳಗೆ ಕರೆದುಕೊಂಡು ಹೋಗುತ್ತದೆ ಮತ್ತು ಈ ಹಾದಿಯನ್ನು ಅರಸಿ ಬಂದಂತಹ ವ್ಯಕ್ತಿಗಳ ಅನುಭವದ ಅನ್ವೇಷಣೆಯ ಒಳನೋಟವನ್ನು ನಿಮಗೆ ನೀಡುತ್ತದೆ. ಇದರ ಹೆಚ್ಚಿನ ವೀಡಿಯೋಗಳು ಮತ್ತು ಲೇಖನಗಳಿಗಾಗಿ ಎದುರು ನೋಡುತ್ತಿರಿ.
সাধনাপদ - সাধনার মাধ্যমে উত্থান
 

 

ಆಧ್ಯಾತ್ಮಿಕ ಬೆಳವಣಿಗೆಯ ಸಮಯ

ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಬೇಸಿಗೆಯ ಅಯನ ಸಂಕ್ರಾಂತಿ ಮತ್ತು ಚಳಿಗಾಲದ ಅಯನ ಸಂಕ್ರಾಂತಿಯ ನಡುವಿನ ಅವಧಿಯು ತುಂಬ ಮುಖ್ಯ ಮತ್ತು ಮಹತ್ವದ್ದಾಗಿದೆ. ಇದನ್ನು ಸಾಧನಪಾದವೆಂದು ಕರೆಯಲಾಗುತ್ತದೆ ಮತ್ತಿದು ಅತ್ಯಂತ ಮಹತ್ವವುಳ್ಳ ಗ್ರಹಣ ಶಕ್ತಿಯ ಸಮಯ. ಯೋಗ ಪರಂಪರೆಯಲ್ಲಿ ಮತ್ತು ವಿಶೇಷವಾಗಿ ಉತ್ತರಾರ್ಧ ಭೂಗೋಳದಲ್ಲಿ, ಈ ಸಮಯವನ್ನು ಸಾಧನೆಗೆ ಬಹಳ ಅನುಕೂಲಕರವೆಂದು ಪರಿಗಣಿಸಲಾಗಿದೆ ಮತ್ತಿದು ಆಧ್ಯಾತ್ಮಿಕವಾಗುವುದನ್ನು ಒಂದು ಸಹಜ ಪ್ರಕ್ರಿಯೆಯಾಗಿಸುವ ಸಮಯವಾಗಿದೆ. ಈ ಅವಧಿಯಲ್ಲಿ, ಸಾಧನೆಯು ಅತ್ಯುತ್ತಮವಾದ ಫಲಿತಾಂಶವನ್ನು ನೀಡುತ್ತದೆ.

ಲೀಲಾಜಾಲವಾದ ಪರಿವರ್ತನೆಗೆ ಸಮಯ

Sadhanapada – Rising Through Sadhana

 

ಒಬ್ಬ ಮನುಷ್ಯನಿಗೆ ತಾನು ಜಗತ್ತಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ಬಹಳಷ್ಟು ವಿಷಯಗಳಲ್ಲಿ, ತುಂಬ ಮುಖ್ಯವಾದ ಅಂಶಗಳೆಂದರೆ ಸಮತೋಲನ ಮತ್ತು ಸ್ಪಷ್ಟತೆ. ಸಮತೋಲನದ ಜೀವನ ನಡೆಸುವುದು ಕೇವಲ ನಿಮ್ಮ ಹೊರಗಿನ ಚಟುವಟಿಕೆಗಳ ಆಯ್ಕೆಗಿಂತ ಹೆಚ್ಚಿನದ್ದನ್ನು ಒಳಗೊಂಡಿದೆ. ನಿಮ್ಮೊಳಗೆ ಏನಾಗುತ್ತಿದೆ ಎನ್ನುವುದೂ ಕೂಡ ಇಲ್ಲಿ ಮುಖ್ಯವಾಗುತ್ತದೆ. ಸಾಧನಪಾದ ಸಮಯವು ಪ್ರತಿಯೊಬ್ಬರಿಗೂ ಸಹ ಅವರವರ ಮನಸ್ಸು ಮತ್ತು ಭಾವನೆಗಳನ್ನು ಸ್ಥಿರಗೊಳಿಸಿಕೊಳ್ಳುವ ಮೂಲಕ ಜೀವನದ ಯಾವುದೇ ತೆರನಾದ ಸನ್ನಿವೇಶವನ್ನು ಅನಾಯಾಸವಾಗಿ ಎದುರಿಸುವಂತಹ ಒಂದು ಭದ್ರ ಬುನಾದಿಯನ್ನು ಸ್ಥಾಪಿಸಿಕೊಳ್ಳುವ ಸಾಧ್ಯತೆಯನ್ನು ಹೊಂದಿರುವಂತದ್ದಾಗಿದೆ. 

ಅತೀವವಾದ ಸಾಧನೆಗೆ ಸಮಯ

Sadhanapada – Rising Through Sadhana

 

2018ರಲ್ಲಿ, ಮೊದಲ ಬಾರಿಗೆ ಸದ್ಗುರುಗಳು ಸಾಧನಪಾದದ ಸಮಯವನ್ನು ಈಶ ಯೋಗ ಕೇಂದ್ರದ ಪ್ರತಿಷ್ಠಾಪಿತ ಆವರಣದಲ್ಲಿ ಕಳೆಯುವಂತಹ ಅವಕಾಶವನ್ನು ಜನರಿಗೆ ನೀಡಿದ್ದಾರೆ. ಇಪ್ಪತ್ತೊಂದು ದೇಶಗಳಿಂದ ಬಂದಂತಹ ಇನ್ನೂರಕ್ಕಿಂತಲೂ ಹೆಚ್ಚಿನ ಜನ, ತಮ್ಮ ಅಂತರಂಗದ ಪರಿವರ್ತನೆಯ ಕಡೆಗೆ ಒಂದು ಗಮನಾರ್ಹ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ಈ ಅವಕಾಶವನ್ನು  ತಮ್ಮದಾಗಿಸಿಕೊಂಡು, ಸಾಧನಪಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Sadhanapada – Rising Through Sadhana

 

ಕಾರ್ಯಕ್ರಮದ ಅಂಗವಾಗಿ, ಇದರಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು, ದಿನನಿತ್ಯದ ಯೋಗಾಭ್ಯಾಸಗಳು ಮತ್ತು ಸ್ವಯಂಸೇವೆಯನ್ನು ಒಳಗೊಂಡಂತಹ ತೀವ್ರವಾದ ಸಾಧನೆಗೆ ಒಳಗಾಗುತ್ತಾರೆ. ಮಹಾಶಿವರಾತ್ರಿಯಂದು ಈ ಕಾರ್ಯಕ್ರಮವು ಸಮಾಪ್ತಿಯಾಗುವವರೆಗೂ ನಾವು ಇವರ ಪಯಣವನ್ನು ಹಿಂಬಾಲಿಸಿ, ನಮ್ಮ ಬೆಂಬಲವನ್ನು ನೀಡುತ್ತೇವೆ ಹಾಗೂ ಅವರ ಅನುಭವಗಳು ಮತ್ತು ಪರಿವರ್ತನೆಯ ತೆರೆಮರೆಯ ಚಿತ್ರಣಗಳನ್ನು ಪಡೆಯುತ್ತಿರುತ್ತೇವೆ.

 

 
 
  0 Comments
 
 
Login / to join the conversation1