ನೀವು ನಿಮ್ಮದೇ ಮನಸ್ಸನ್ನು ನೋಡಿಕೊಂಡರೆ, ’ನಾನು’ ಅಂತ ನೀವು ಅಂದುಕೊಂಡಿರೋ ನಿಮ್ಮದೇ ವ್ಯಕ್ತಿತ್ವವನ್ನು ನೋಡಿಕೊಂಡರೆ, ಸಾಮಾನ್ಯವಾಗಿ, ನೀವು ವ್ಯಕ್ತಿತ್ವ ಅಂತ ಏನನ್ನು ಕರೀತೀರೋ, ಅದು ಮೂಲಭೂತವಾಗಿ ವಿವಿಧ ಹಂತಗಳ constipation ಅಂದರೆ ಬದ್ಧತೆಯಷ್ಟೆ. ನೀವು ವಹಿಸಿಕೊಂಡಿರೋ ಪಾತ್ರಗಳು, ಅಂದರೆ ನಿಮ್ಮ ವ್ಯಕ್ತಿತ್ವವು ಗಟ್ಟಿಯಾದಷ್ಟು, ನೀವು ನಿಮ್ಮ ಮೇಲೆ ಜಾಸ್ತಿ ಗಾಯಗಳನ್ನು ಹೊಂದುತ್ತೀರಿ. ಅವು ನೀವೇ ಎಳೆದುಕೊಂಡ ಬರೆಗಳಾಗಿರುವುದರಿಂದ, ನೀವವನ್ನು ನಿಮ್ಮ ಬದುಕಿನ ಅನುಭವದ ಬ್ಯಾಡ್ಜ್ ಗಳ ತರಹ ಹೊತ್ತುಕೊಂಡು ತಿರುಗುತ್ತಿದ್ದೀರಿ. ಹಾಗಾಗಿ ಅವು ಮಾಯುವುದಿಲ್ಲ.