ಪಕ್ಷಿನೋಟ
 
ಇನ್ನರ್ ಇಂಜಿನಿಯರಿಂಗ್
seperator
 
ಇನ್ನರ್ ಇಂಜಿನಿಯರಿಂಗ್ ಎಂದರೆ ಯೋಗ ವಿಜ್ಞಾನದ ಮೂಲದಿಂದ ಪಡೆದ ಯೋಗಕ್ಷೇಮಕ್ಕಾಗಿರುವ ತಂತ್ರಜ್ಞಾನ.
ಈ ಆನ್‌ಲೈನ್ ಕೋರ್ಸ್, ಸದ್ಗುರುಗಳು ನಡೆಸಿದ ಏಳು 90 ನಿಮಿಷಗಳ ಸೆಷನ್‌ಗಳನ್ನು ಒಳಗೊಂಡಿದೆ. ನಿಮ್ಮ ಜೀವನ, ನಿಮ್ಮ ಕೆಲಸ ಮತ್ತು ನೀವು ವಾಸಿಸುವ ಪ್ರಪಂಚವನ್ನು, ನೀವು ಗ್ರಹಿಸುವ ಮತ್ತು ಅನುಭವಿಸುವ ವಿಧಾನವನ್ನು ಪರಿವರ್ತಿಸುವ ಸಾಮರ್ಥ್ಯವುಳ್ಳ ಪ್ರಬಲ ಸಾಧನಗಳನ್ನು ಈ ಮಾಡ್ಯೂಲ್‌ಗಳು ಒದಗಿಸುತ್ತವೆ.
ಈ ಕೋರ್ಸ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು, ಯೋಗ ವಿಜ್ಞಾನಗಳ ಮೂಲತತ್ವವನ್ನು ಆಧರಿಸಿದ ಶಾಸ್ತ್ರೀಯ ಯೋಗ ಮತ್ತು ಧ್ಯಾನವು ಜೀವನದ ಮಹತ್ವದ ಅಂಶಗಳೆಡೆಗೆ ಕೇಂದ್ರೀಕರಿಸುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ.
ಇನ್ನರ್ ಇಂಜಿನಿಯರಿಂಗ್ ಸ್ವಯಂ ಅನ್ವೇಷಣೆ ಮತ್ತು ಪರಿವರ್ತನೆಗೆ ಒಂದು ಅದ್ವಿತೀಯ ಅವಕಾಶವನ್ನು ಒದಗಿಸುವುದರೊಂದಿಗೆ ಜೀವನದ ಸಾರ್ಥಕತೆ ಮತ್ತು ಆನಂದಕ್ಕೆ ಎಡೆ ಮಾಡಿಕೊಡುತ್ತದೆ.

ವೈದ್ಯಕೀಯ ವೃತ್ತಿಪರರು ಮತ್ತು ಪೋಲೀಸ್ ಸಿಬ್ಬಂದಿ

ಕರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನಮ್ಮೆಲ್ಲರನ್ನೂ ಸುರಕ್ಷಿತವಾಗಿಡಲು, ತಮ್ಮ ನಿಸ್ವಾರ್ಥ ಸೇವೆ ಮತ್ತು ತ್ಯಾಗಕ್ಕಾಗಿ, ಎಲ್ಲಾ ವೈದ್ಯಕೀಯ ವೃತ್ತಿಪರರು ಮತ್ತು ಪೊಲೀಸ್ ಸಿಬ್ಬಂದಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ. ಕೃತಜ್ಞತೆ ಮತ್ತು ಮೆಚ್ಚುಗೆಯ ಧ್ಯೋತಕವಾಗಿ, ನಿಮ್ಮ ಸ್ವಂತ ಯೋಗಕ್ಷೇಮದ ಸುಧಾರಣೆಗಾಗಿ ನಾವು ಇನ್ನರ್ ಎಂಜಿನಿಯರಿಂಗ್ ಆನ್‌ಲೈನ್ ಅನ್ನು ಉಚಿತವಾಗಿ ನೀಡುತ್ತಿದ್ದೇವೆ.
ಉಚಿತವಾಗಿ ನೋಂದಾಯಿಸಿ
ಕೋರ್ಸ್‌ನ ಮುಖ್ಯ ಅಂಶಗಳು
 
ಕೋರ್ಸ್‌ನ ಮುಖ್ಯ ಅಂಶಗಳು
seperator
 
benefits
ನಿರಾಯಾಸವಾಗಿ ಜೀವನ ಸಾಗಿಸಲು ಬಳಕೆ ಬೇಕಾದ ಸಾಧನಗಳು
benefits
ಜೀವನದ ಪ್ರಮುಖ ಅಂಶಗಳೆಡೆಗೆ ಕೇಂದ್ರೀಕೃತವಾದ ಧ್ಯಾನಗಳು
benefits
ಪುನರುಜ್ಜೀವಗೊಳಿಸುವ ಮತ್ತು ಸಮತೋಲನ ತರವ ಯೋಗಾಭ್ಯಾಸಗಳು
benefits
ಜಾಗೃತಾವಸ್ಥೆ ಮೂಡಿಸಲು ಸಾಧನಗಳು
benefits
ನಿರಂತರ ಬೆಂಬಲ
benefits
ಟ್ರೆಶರ್ ಟ್ರೋವ್ ಮತ್ತು ಪ್ರಶ್ನೋತ್ತರ ವೀಡಿಯೊಗಳ ವೀಕ್ಷಣೆಗೆ ಜೀವನ ಪೂರ್ತಿ ಅವಕಾಶ
ಪಠ್ಯರಚನೆ
 
ಪಠ್ಯರಚನೆ
seperator
 
ತರಗತಿ 1
ಅರಿತುಕೊಳ್ಳಿ ಬದುಕಿನ ನಟ್-ಬೋಲ್ಟ್‌ಗಳನ್ನು
“ಈ ಭೂಗ್ರಹದ ಮೇಲಿರುವ ಅತ್ಯಂತ ಸಂಕೀರ್ಣ ಯಂತ್ರವೆಂದರೆ ಮಾನವ ಶರೀರ. ಆದರೆ ನೀವು ಬಳಕೆದಾರರ ಕೈಪಿಡಿಯನ್ನು (user's manual) ಓದಿಲ್ಲ. ನಾವು ಅದನ್ನು ಅನ್ವೇಷಿಸೋಣ.” -ಸದ್ಗುರು
ತರಗತಿ 2
ಏಕೈಕ ಬಂಧನ
“ನಿಮ್ಮ ಬಯಕೆಯನ್ನು ವ್ಯಾಪಕವಾಗಿ ಅನಾವೃತಗೊಳಿಸಿ; ಅದನ್ನು ಸೀಮಿತಗೊಳಿಸಬೇಡಿ. ನಿಮ್ಮ ಪರಮ ಸ್ವಭಾವ ಇರುವುದು ಮಿತಿಯಿಲ್ಲದ ಬಯಕೆಯಲ್ಲಿ.” -ಸದ್ಗುರು
ತರಗತಿ 3
ಜೀವಿಸಿ... ಪರಿಪೂರ್ಣವಾಗಿ
"ನೀವು ಯಾರೆಂಬುದನ್ನು ಮನಬಂದಂತೆ ಎಲ್ಲೆಯಿಲ್ಲದೆ ವಿಸ್ತರಿಸುವುದರಿಂದ ಮಾತ್ರ ಜೀವನವು ಸಂಪೂರ್ಣವಾಗಿ ಬದುಕಲು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಜೀವವು ತಿಳಿದುಕೊಳ್ಳಲು ಬಯಸುವ ಏಕೈಕ ನೆರವೇರಿಕೆ ಎಂದರೆ ಸಂಪೂರ್ಣವಾಗಿ ಅಥವಾ ಪರಿಪೂರ್ಣವಾಗಿ ಜೀವಿಸುವುದು ಮಾತ್ರವೇ.” -ಸದ್ಗುರು
ತರಗತಿ 4
ನೀವೇನು ಅಂದುಕೊಂಡಿದ್ದೀರೋ ನೀವು ಅದಲ್ಲ
“ನಿಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಸಂಪೂರ್ಣ ಇಚ್ಛೆಯಿಂದ ನಡೆಸುವಾಗ, ನೀವು ಅದರಿಂದ ಸ್ವರ್ಗವನ್ನು ಕಾಣುತ್ತೀರಿ. ನೀವು ಮನಸ್ಸಿಲ್ಲದೆ ಮಾಡುತ್ತಿರುವುದು ಖಚಿತವಾಗಿ ನರಕವೆ.” -ಸದ್ಗುರು
ತರಗತಿ 5
ಮನಸ್ಸು - ಒಂದು ಅದ್ಭುತ ಚಮತ್ಕಾರ
“ಹೆಚ್ಚಿನ ಜನರು ತಮ್ಮ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ನೀವು ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕೆಂದು ನಾನು ಬಯಸುತ್ತೇನೆ.” -ಸದ್ಗುರು
ತರಗತಿ 6
ಸೃಷ್ಟಿಯ ಧ್ವನಿ
"ಪದಗಳು ಮತ್ತು ಅರ್ಥಗಳು ಮಾನವ ಮನಸ್ಸಿಗೆ ಸಂಬಂಧಿಸಿದ ಕ್ಷೇತ್ರಗಳಾಗಿವೆ - ಶಬ್ದಗಳು ಸೃಷ್ಟಿಯ ಅತ್ಯಗತ್ಯ ಭಾಗವಾಗಿದೆ." -ಸದ್ಗುರು
ತರಗತಿ 7
ನಿಮಗೆ ಏನು ಬೇಕೋ ಅದನ್ನು ರೂಪಿಸಿಕೊಳ್ಳಿ
“ನಿಮ್ಮ ಸ್ವಾಸ್ಥ್ಯ ಮತ್ತು ನಿಮ್ಮ ಅಸ್ವಸ್ಥತೆ, ನಿಮ್ಮ ಆನಂದ ಮತ್ತು ನಿಮ್ಮ ದುಃಖ ಎಲ್ಲವೂ ಒಳಗಿನಿಂದ ಬರುತ್ತವೆ. ನೀವು ಸೌಖ್ಯವನ್ನು ಬಯಸಿದರೆ, ಅದು ಅಂತರ್ಮುಖಿಯಾಗುವ ಸಮಯ.” -ಸದ್ಗುರು
ಪ್ರಯೋಜನಗಳು
 
ಪ್ರಯೋಜನಗಳು
seperator
 
benefits
ದಿನವಿಡೀ ಅತ್ಯಂತ ಹುರುಪಿನಿಂದ ಮತ್ತು ಜಾಗೃತಿಯಿಂದ ಇರುವಂತೆ ಮಾಡುತ್ತದೆ
benefits
ಪರಸ್ಪರ ಸಂಪರ್ಕ ಮತ್ತು ಸಂಬಂಧಗಳನ್ನು ಸುಧಾರಿಸುತ್ತದೆ
benefits
ಮಾನಸಿಕ ಸ್ಪಷ್ಟಗೆ, ಭಾವನತ್ಮಕ ಸಂತುಲನೆ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ

 

benefits
ಒತ್ತಡ, ಭಯ ಹಾಗೂ ಆತಂಕವನ್ನು ನಿವಾರಿಸುತ್ತದೆ
benefits
ಅಲರ್ಜಿ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಸ್ಥೂಲಕಾಯ, ಮಧುಮೇಹ ಮತ್ತು ಬೆನ್ನು ನೋವು ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ಪಡೆಯಿರಿ
benefits
ಆನಂದ, ನೆಮ್ಮದಿ ಮತ್ತು ಪರಿಪೂರ್ಣತೆಯನ್ನು ಸಾಧಿಸಿ

 

ಕೋರ್ಸ್ ಶುಲ್ಕ
 
ಕೋರ್ಸ್ ಶುಲ್ಕ
seperator
 
 
ಕೋರ್ಸ್ ಭಾಷೆ ಶುಲ್ಕ Offer Price  
ಇಂಗ್ಲೀಷ್ ₹3,500 ₹2800 ಈಗಲೇ ನೋಂದಾಯಿಸಿ
ಹಿಂದಿ ₹1,500 ₹1,200 ಈಗಲೇ ನೋಂದಾಯಿಸಿ
ತಮಿಳು ₹1,500 ₹1,200 ಈಗಲೇ ನೋಂದಾಯಿಸಿ
ಕನ್ನಡ ₹1,500 ₹1,200 ಈಗಲೇ ನೋಂದಾಯಿಸಿ
ತೆಲುಗು ₹1,500 ₹1,200 ಈಗಲೇ ನೋಂದಾಯಿಸಿ
ಮರಾಠಿ ₹1,500 ₹1,200 ಈಗಲೇ ನೋಂದಾಯಿಸಿ
ಮಲಯಾಳಂ ₹1,500 ₹1,200 ಈಗಲೇ ನೋಂದಾಯಿಸಿ
 
 
ನಿಮ್ಮ ಖಾತೆಯನ್ನು ಬೇರೆ ಭಾಷೆಗಳಲ್ಲಿ ಬದಲಾಯಿಸಲು ಬಯಸಿದಲ್ಲಿ, ಈಗ ದಯವಿಟ್ಟು ಇಂಗ್ಲಿಷ್ ಆಯ್ಕೆಮಾಡಿ.
ನೀವು ಬೇರೆ ಭಾಷೆಯನ್ನು ಆರಿಸಿದರೆ, ಆ ಭಾಷೆ ನಿಮ್ಮ ಖಾತೆಗೆ ಡೀಫಾಲ್ಟ್ ಆಗುತ್ತದೆ ಮತ್ತು ಪುನಃ ನೀವು ಬೇರೆ ಯಾವುದೇ ಭಾಷೆಗೆ ಬದಲಾಯಿಸಲು ಸಾಧ್ಯವಾಗುವುದಿಲ್ಲ.
ತಮಿಳು ಹೊರತುಪಡಿಸಿ ಮಿಕ್ಕ ಎಲ್ಲಾ ಪ್ರಾದೇಶಿಕ ಭಾಷಾ ಕಾರ್ಯಕ್ರಮಗಳನ್ನು ಇಂಗ್ಲಿಷ್‌ನಿಂದ ಅನುವಾದಿಸಲಾಗಿದೆ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಡಬ್ ಮಾಡಲಾಗಿದೆ.
 
Login Information
 
ಲಾಗಿನ್ ಮಾಹಿತಿ
seperator
ನೀವು ಮೊದಲ ಬಾರಿಗೆ ಕೋರ್ಸ್ ಅನ್ನು ಪ್ರವೇಶಿಸುತ್ತಿದ್ದರೆ - ಲಾಗಿನ್ ಲಿಂಕ್ ಹೊಂದಿರುವ ಈಮೇಲ್ ಅನ್ನು ನಿಮ್ಮ ನೋಂದಾಯಿತ ಈಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ.
ನೀವು ಕೋರ್ಸ್ ಅನ್ನು ಮರು ಪ್ರವೇಶಿಸುತ್ತಿದ್ದರೆ - ದಯವಿಟ್ಟು ಇಲ್ಲಿ ಲಾಗಿನ್ ಮಾಡಿ
 
ಸಂಶೋಧನಾ ವರದಿಗಳು
 
ಸಂಶೋಧನಾ ವರದಿಗಳು
seperator
 
 

ಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್

ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ ಅನ್ನು ನಿಯಮಿತವಾಗಿ ಅಭ್ಯಾಸ ಮಾಡಿದ ಭಾಗಿಗಳಲ್ಲಿ ಒತ್ತಡವು 50% ಕ್ಕೂ ಮೀರಿ ಕಡಿಮೆಯಾಗಿದೆ.

ಕಾರ್ಪೊರೇಟ್ ಪ್ರೋಗ್ರಾಂ ರಿಸರ್ಚ್ ಪಾರ್ಟ್ನರ್:

harvard-logo
 

ರಟ್‌ಗರ್ಸ್ ಯೂನಿವರ್ಸಿಟಿ ಸಂಶೋಧನೆ

ಸಾಮರ್ಥ್ಯ, ಆನಂದ, ಪರಿಜ್ಞಾನ ಮತ್ತು ಕೆಲಸದಲ್ಲಿನ ತನ್ಮಯತೆಯು ಮಹತ್ವಪೂರ್ಣವಾಗಿ ವೃದ್ಧಿಸಲು ಇನ್ನರ್ ಇಂಜಿನಿಯರಿಂಗ ಕಾರಣವಾಗಿದೆ

ಕಾರ್ಪೊರೇಟ್ ಪ್ರೋಗ್ರಾಂ ರಿಸರ್ಚ್ ಪಾರ್ಟ್ನರ್:

rutgers-logo
ಸಂಪರ್ಕ ವಿಳಾಸ
 
ಸಂಪರ್ಕ ವಿಳಾಸ
seperator
 
ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ನೋಂದಣಿ ಹಾಗೂ ಇನ್ನರ್ ಇಂಜಿನಿಯರಿಂಗ್ ಕಂಪ್ಲೀಶನ್ ಕಾರ್ಯಕ್ರಮ (ಶಾಂಭವಿ ಮಹಾಮುದ್ರ) ದ ಕುರಿತಾಗಿ ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ.

ಗ್ರಾಹಕ ಸೇವೆ ದೂರವಾಣಿ

ಭಾರತ : +022-4897-2450

 

ಸಾಮಾನ್ಯ ಪ್ರಶ್ನೆಗಳು:

indiasupport@innerengineering.com

ಪ್ರಶ್ನೋತ್ತರಗಳು
 
ಪ್ರಶ್ನೋತ್ತರಗಳು
seperator
 

ಇನ್ನರ್ ಎಂಜಿನಿಯರಿಂಗ್ ಆನ್‌ಲೈನ್ ಎನ್ನವುದು ಸದ್ಗುರುಗಳು ನಡೆಸಿಕೊಡುವ 7 ತರಗತಿಗಳ ಸರಣಿಯಾಗಿದ್ದು, ಪ್ರತಿಯೊಂದೂ 90 ನಿಮಿಷಗಳ ಕಾಲ ಮೂಡಿಬರುವ ವೀಡಿಯೊವನ್ನು ಒಳಗೊಂಡಿದೆ. ಪ್ರತಿ ತರಗತಿ ಮಾರ್ಗದರ್ಶಿತ ಧ್ಯಾನವನ್ನು ಒಳಗೊಂಡಿರುತ್ತದೆ ಮತ್ತು ನಿಮ್ಮ ದಿನನಿತ್ಯದ ಜೀವನದಲ್ಲಿ ಕೋರ್ಸ್‌ನ ಸಾಧನಗಳನ್ನು ನಿಮಗೆ ಅನ್ವಯಿಸಿಕೊಳ್ಳುವ ಸಾಮರ್ಥ್ಯವನ್ನು ನೀಡುವ ಅಭ್ಯಾಸಗಳೊಂದಿಗೆ ಮುಕ್ತಾಯವಾಗುತ್ತದೆ. ಕಾರ್ಯಕ್ರಮವು ಹಂತ-ಹಂತದ ಪ್ರಕ್ರಿಯೆಯಾಗಿರುವುದರಿಂದ, ಪ್ರತಿಯೊಂದು ತರಗತಿಗಳನ್ನು ಸಂಪೂರ್ಣವಾಗಿ ವೀಕ್ಷಿಸಬೇಕಾಗುತ್ತದೆ ಮತ್ತು ಸಂಪೂರ್ಣವಾಗಿ ವೀಕ್ಷಿಸದೆ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.

ಕಾರ್ಯಕ್ರಮವನ್ನು ನೀವು ತರಗತಿಯಲ್ಲಿ ಪ್ರತ್ಯಕ್ಷವಾಗಿ ಉಪಸ್ಥಿತರಿದ್ದು ಅನುಭವಿಸುತ್ತಿರುವಂತೆಯೇ ಮಾಡುವ ಸಲುವಾಗಿ, ರೀವೈಂಡಿಂಗ್, ಫಾಸ್ಟ್ ಫಾರ್ವರ್ಡಿಂಗ್ ಅಥವಾ ಮತ್ತೆ ಮತ್ತೆ ನೋಡುವ ಸೌಲಭ್ಯವನ್ನು ನೀಡಲಾಗಿಲ್ಲ. ತರಗತಿಯಲ್ಲಿ 30 ಸೆಕೆಂಡ್ ರೀವೈಂಡಿಂಗ್ ಸೌಲಭ್ಯವಿರುತ್ತದೆ, ಅದರಲ್ಲಿ ನೀವು ಗಮನಿಸದೇ ಬಿಟ್ಟ ಅಥವಾ ಕೇಳದೇ ಬಿಟ್ಟ ಸಂಗತಿಗಳನ್ನು ಮತ್ತೆ ನೋಡಬಹುದು. ಒಂದು ತರಗತಿಯನ್ನು ಮುಗಿಸಿದ ನಂತರ, ನಿಮ್ಮನ್ನು ವ್ಯವಸ್ಥಿತವಾಗಿ ಮುಂದಿನ ತರಗತಿಗೆ ಕರೆದೊಯ್ಯಲಾಗುವುದು. ಆದ್ದರಿಂದ, ನೀವು ಪ್ರತಿಯೊಂದು ತರಗತಿಯ ಅವಧಿಗೆ ಅಗತ್ಯವಿರುವ ಸಮಯವನ್ನು ಯಾವುದೇ ಅಡೆತಡೆಗಳಿಲ್ಲದೇ ಮೀಸಲಿಡುವುದು ಅತ್ಯಂತ ಅವಶ್ಯಕ..

ಕಾರ್ಯಕ್ರಮವನ್ನು ಪೂರ್ಣಗೊಳಿಸಲು ನಿಮ್ಮ ನೋಂದಾವಣೆಯ ದಿನಾಂಕದಿಂದ ಹಿಡಿದು 30 ದಿನಗಳವರೆಗೆ ನಿಮಗೆ ಕಾಲಾವಕಾಶವಿದೆ.

ಎಲ್ಲಾ ಏಳು ತರಗತಿಗಳನ್ನು ಒಂದೇ ಅವಧಿಯಲ್ಲಿ ಮುಗಿಸಬೇಕಾಗಿಲ್ಲ, ಆದರೂ ತರಗತಿಗಳ ನಡುವೆ ಹೆಚ್ಚಿನ ಕಾಲಾವಕಾಶವನ್ನು ತೆಗೆದುಕೊಳ್ಳುವುದೂ ಒಳ್ಳೆಯದಲ್ಲ. ನೀವು ನಿಮ್ಮ ಸಮಯವನ್ನು ದಿನನಿತ್ಯದ ಚಟುವಟಿಕೆಗಳ ಆಧಾರದ ಮೇಲೆ ನಿರ್ವಹಿಸಬಹುದು, ಆದರೆ ನೋಂದಣಿ ಮಾಡಿಕೊಂಡ ಒಂದು ತಿಂಗಳ ಒಳಗಾಗಿ ನೀವು ಕಾರ್ಯಕ್ರಮವನ್ನು ಮುಗಿಸಬೇಕು.

ಸದ್ಗುರುಗಳು ಸಾಕಷ್ಟು ವರ್ಷಗಳಿಂದ ಸಾವಿರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಮತ್ತು ಕಾರ್ಯಕ್ರಮದ ಬೋನಸ್ ವೀಡಿಯೋಗಳ ವಿಭಾಗದಲ್ಲಿ ಟ್ರೆಷರ್ ಟ್ರೋವ್ ಮೂಲಕ ಪ್ರಶ್ನೋತ್ತರ ಸಂವಾದ ವೀಡಿಯೋಗಳ ಅಮೂಲ್ಯವಾದ ಆಯ್ಕೆ ನಿಮಗೆ ಲಭ್ಯವಿದೆ. ಪ್ರತಿ ತರಗತಿಯನ್ನು ಒಮ್ಮೆ ಪೂರ್ಣಗೊಳಿಸಿದ ನಂತರ ಆ ತರಗತಿಗೆ ಸಂಬಂಧಿಸಿದ ಪ್ರಶ್ನೋತ್ತರ ನಿಮಗೆ ಲಭ್ಯಗೊಳಿಸಲಾಗುತ್ತದೆ.

ಸದ್ಗುರುಗಳ ಯೂಟ್ಯೂಬ್ ವೀಡಿಯೊಗಳು ಜೀವನದ ವಿವಿಧ ಆಯಾಮಗಳ ಬಗ್ಗೆ ಕಣ್ಣು ತೆರೆಸಲು ಒಳನೋಟವನ್ನು ನೀಡುತ್ತವೆ. ಗಾಢವಾದ ಆಂತರಿಕ ಪರಿವರ್ತನೆಯನ್ನು ವ್ಯವಸ್ಥೆಗೊಳಿಸಲು ಇನ್ನರ್ ಇಂಜಿನಿಯರಿಂಗ್ ಒಂದು ಹಂತ-ಹಂತವಾದ ಪ್ರಕ್ರಿಯೆಯಾಗಿದೆ. ಯೂಟ್ಯೂಬ್ ವೀಡಿಯೊಗಳಿಗಿಂತ ಭಿನ್ನವಾಗಿ, ಇದು ನಿಮ್ಮ ಜೀವನವನ್ನು ನೀವು ಬಯಸಿದ ರೀತಿಯಲ್ಲಿ ರಚಿಸಿಕೊಳ್ಳಲು ನೀವೇ ಸಮರ್ಥರಾಗುವಂತಹ ಸಾಧನಗಳು ಮತ್ತು ವಿಧಾನಗಳನ್ನು ಒದಗಿಸುತ್ತದೆ. ಯೂಟ್ಯೂಬ್ ವೀಡಿಯೊಗಳು ಇನ್ನರ್ ಎಂಜಿನಿಯರಿಂಗ್‌ಗೆ ಉತ್ತಮ ಪೂರಕವಾಗಬಹುದಾದರೂ, ಅವು ಕಾರ್ಯಕ್ರಮದ ಬದಲಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ ಪ್ರಸ್ತುತ ಇಂಗ್ಲಿಷ್, ಹಿಂದಿ, ರಷ್ಯನ್, ತಮಿಳು, ತೆಲುಗು, ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದೆ. ನಾವು ಪ್ರಸ್ತುತ ಸ್ಪ್ಯಾನಿಷ್, ಚೈನೀಸ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದ ಮಾಡುವ ಕಾರ್ಯದಲ್ಲಿದ್ದೇವೆ.

ನೀವು ಶಾಂಭವಿ ಮಹಾಮುದ್ರ ಕ್ರಿಯಾವನ್ನು ಕಲಿಯಲು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಪರಿವರ್ತನೆಯನ್ನು ತರಬಲ್ಲ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಲು ಇಚ್ಛಿಸಿದರೆ, ನಿಮ್ಮ ಇನ್ನರ್ ಎಂಜಿನಿಯರಿಂಗ್ ಆನ್‌ಲೈನ್ ಕಾರ್ಯಕ್ರಮವನ್ನು ಮುಗಿಸಿದ ನಂತರ ನೀವು ಇನ್ನರ್ ಎಂಜಿನಿಯರಿಂಗ್ ಸಮಾಪಣೆ ಕಾರ್ಯಕ್ರಮಕ್ಕೆ ಹಾಜರಾಗಬಹುದು.

ಟ್ರೆಶರ್ ಟ್ರೋವ್ ಎನ್ನುವುದು ಪ್ರಶ್ನೋತ್ತರ ವೀಡಿಯೊಗಳ ಸಂಗ್ರಹವಾಗಿದ್ದು, ಅಲ್ಲಿ ಸದ್ಗುರುಗಳು ತರಗತಿಗಳಲ್ಲಿ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ, ಜೊತೆಗೆ ಇತರ ಹೆಚ್ಚುವರಿ ವಿಷಯಗಳು. ನಿರ್ದಿಷ್ಟ ತರಗತಿಯ ಟ್ರೆಶರ್ ಟ್ರೋವ್ ವೀಡಿಯೋವನ್ನು ನೋಡಲು ನೀವು ತರಗತಿಯನ್ನು ಪೂರ್ಣಗೊಳಿಸಬೇಕು. ಉದಾಹರಣೆಗೆ, ತರಗತಿ 2 ಅನ್ನು ಪೂರ್ಣಗೊಳಿಸಿದ ನಂತರವೇ ನೀವು ತರಗತಿ 2ರ ಪ್ರಶ್ನೋತ್ತರ ವೀಡಿಯೊಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. ನೀವು ಎಲ್ಲಾ 7 ತರಗತಿಗಳನ್ನು ಪೂರ್ಣಗೊಳಿಸಿದ ನಂತರ, ನೀವು ಎಲ್ಲಾ ವೀಡಿಯೊಗಳಿಗೆ ಅನಿಯಮಿತ ಪ್ರವೇಶವನ್ನು ಪಡೆಯುತ್ತೀರಿ.

  • Windows ಅಥವಾ Mac OS ಹಾಗೂ ಕೆಲವು Linux ಆವೃತ್ತಿಯೊಂದಿಗೆ ಈಗ ಚಾಲ್ತಿಯಲ್ಲಿರುವ ಬ್ರೌಸರ್ ಗಳು ಇರುವ ಕಂಪ್ಯೂಟರ್.
  • ಆಂಡ್ರ್ಯಾಡ್ ಟ್ಯಾಬ್‍ಲೆಟ್ಸ್ ಮತ್ತು ಫೋನ್ (ಆಂಡ್ರ್ಯಾಡ್ ಆವೃತ್ತಿ 4.2ದೊಂದಿಗೆ ಮತ್ತು ಮೇಲ್ಪಟ್ಟು) (ಇತ್ತೀಚಿನ ಸದ್ಗುರು ಆಪ್‍ನಲ್ಲಿ ಆನ್‍ಲೈನ್ ಕೋರ್ಸ್ ವೀಕ್ಷಿಸಲು ಲಭ್ಯವಿದೆ)
  • IOS ಉಪಕರಣಗಳು (ಇತ್ತೀಚಿನ ಸದ್ಗುರು ಆಪ್‍ನಲ್ಲಿ ಆನ್‍ಲೈನ್ ಕೋರ್ಸ್ ವೀಕ್ಷಿಸಲು ಲಭ್ಯವಿದೆ)
  • ಇಂಟರ್ನೆಟ್‍ನ ಅವಶ್ಯಕತೆಗಳು
  • ವೀಡಿಯೋ ಸ್ಪಷ್ಟವಾಗಿ ಪ್ರಸಾರವಾಗಲು ಕನಿಷ್ಠ 350kbps ಡೌನ್‌ಲೋಡ್ ವೇಗ ಇರುವ ಒಂದು ಬ್ರಾಡ್ ಬ್ಯಾಂಡ್ ಸಂಪರ್ಕ (ಡಿಸ್ಎಲ್, ಕೇಬಲ್ ಅಥವಾ ಸ್ಯಾಟಲೈಟ್) ಅವಶ್ಯಕ. ನೀವು ನಿಮ್ಮ ಇಂಟರ್ನೆಟ್ ಸಂಪರ್ಕದ ವೇಗವನ್ನು bandwidthplace.com ನಲ್ಲಿ ಪರೀಕ್ಷಿಸಬಹುದು.
  • ಉತ್ತಮ ವಿಡಿಯೋ ಗುಣಮಟ್ಟಕ್ಕಾಗಿ, ತರಗತಿಗಳನ್ನು ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ ನೋಡುವುದು ಉತ್ತಮ.
  • ಬೆಂಬಲಿಸುವ ಆಪರೇಟಿಂಗ್ ಸಿಸ್ಟಮ್: Windows 7, 8 or Mac OS X version 10.1.5 ಅಥವಾ ಅದಕ್ಕೂ ನಂತರದ್ದು.
  • ಬೆಂಬಲಿಸುವ ಬ್ರೌಸರ್: Internet Explorer, Firefox, Google Chrome (recommended) or Safari
  • ಕೋರ್ಸ್‌ಗೆ ಅಗತ್ಯವಾದ ತಂತ್ರಾಂಶಗಳೆಲ್ಲವೂ ಬಿಲ್ಟ್ ಇನ್ ಆಗಿರುವುದರಿಂದ ಗೂಗಲ್ ಕ್ರೋಮ್ ಬ್ರೌಸರ್ ಅನ್ನು ನಾವು ಶಿಫಾರಸು ಮಾಡುತ್ತೇವೆ.

ಎಲ್ಲಾ ತರಗತಿಗಳನ್ನೂ ವೈರ್ ಅಥವಾ ವೈರ್ಲೆಸ್ ಸಂಪರ್ಕ ಎರಡರಲ್ಲೂ ನೋಡಬಹುದು. ಉತ್ತಮ ವಿಡಿಯೋ ಗುಣಮಟ್ಟಕ್ಕಾಗಿ, ತರಗತಿಗಳನ್ನು ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ ನೋಡುವುದು ಉತ್ತಮ.

ವೀಡಿಯೊವನ್ನು ವೀಕ್ಷಿಸಲು ನೀವು ಬಳಸುತ್ತಿರುವ ಕಂಪೂಟರ್ ಇಂಟರ್ನೆಟ್‍ಗೆ ಸಂಪರ್ಕಗೊಂಡಿದೆ ಎಂಬುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಿ.

ನೀವು ಉತ್ತಮ ಸಂಪರ್ಕವನ್ನು ಹೊಂದಿದ್ದರೂ ಇನ್ನೂ ನಿಮಗೆ ವೀಡಿಯೊವನ್ನು ಪ್ರಾರಂಭಿಸಲು ಸಾಧ್ಯವಾಗದಿದ್ದರೆ, ದಯವಿಟ್ಟು cacheಯನ್ನು ತೆರವುಗೊಳಿಸಿ, ಲಾಗೌಟ್ ಮಾಡಿ ನಂತರ ಮತ್ತೆ ಲಾಗಿನ್ ಮಾಡಿ. ಸಮಸ್ಯೆ ಇನ್ನೂ ಮುಂದುವರೆದರೆ, ಸಹಾಯಕ ತಂಡವನ್ನು ಸಂಪರ್ಕಿಸಿ info@InnerEngineering.com ಅಥವ ನಂ. (844) 474-2436 ಗೆ ಕರೆಮಾಡಿ.

ಹೌದು, ಎಲ್ಲಾ ತರಗತಿಗಳನ್ನು ಫುಲ್ ಸ್ಕ್ರೀನ್‍ನಲ್ಲಿ ವೀಕ್ಷಿಸಬಹುದು. ನೀವು ವೀಡಿಯೊವನ್ನು ನೋಡಲು ಪ್ರಾರಂಭಿಸಿದಾಗ, control barನಲ್ಲಿ ಫುಲ್ ಸ್ಕ್ರೀನ್‍ ಆಯ್ಕೆಯನ್ನು ಕ್ಲಿಕ್ ಮಾಡಿ.

ವೀಡಿಯೊಗಳನ್ನು ವೀಕ್ಷಿಸಲು ನಿಮಗೆ ಕನಿಷ್ಠ 350kbps ಇಂಟರ್ನೆಟ್ ವೇಗದ ಅಗತ್ಯವಿದೆ. ನೀವು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು (DSL, Cable, or Satellite) ಬಳಸಲು ಶಿಫಾರಸು ಮಾಡಲಾಗಿದೆ. ನಿಮ್ಮ ಇಂಟರ್ನೆಟ್ ವೇಗವನ್ನು bandwidthplace.com ನಲ್ಲಿ ಪರೀಕ್ಷಿಸಬಹುದು. ನಿಮ್ಮ ಸಂಪರ್ಕದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ ದಯವಿಟ್ಟು ನಿಮ್ಮ ಇಂಟರ್ನೆಟ್ ಪೂರೈಕೆದಾರರನ್ನು ಸಂಪರ್ಕಿಸಿ.

ಹೆಚ್ಚಿನ Windows systems‌ಗಳಲ್ಲಿ ನೀವು desktop‌ನಲ್ಲಿ ಎಲ್ಲಿಯಾದರೂ ಬಲ ಕ್ಲಿಕ್ ಮಾಡಬಹುದು, "Properties" ಕ್ಲಿಕ್ ಮಾಡಿ, ನಂತರ dialog box ಮೇಲ್ಭಾಗದಲ್ಲಿರುವ "Screen Saver" ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿಂದ ನಿಮ್ಮ ಸ್ಕ್ರೀನ್‌ ಸೇವರ್ ಅನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಅದು ಒಂದು ಗಂಟೆಗೂ ಹೆಚ್ಚು ಕಾಲ ಬರುದಿರುವಂತೆ ಸೆಟ್ಟಿಂಗ್‌ಗಳನ್ನು ಹೊಂದಿಸಬಹುದು. ಹೆಚ್ಚಿನ Mac systemsಗಳಿಗಾಗಿ, Apple ಐಕಾನ್‌ಗೆ ಹೋಗಿ ಮತ್ತು "System Preferences" ಕ್ಲಿಕ್ ಮಾಡಿ "Hardware" ಅಡಿಯಲ್ಲಿ, "Energy Saver" ಕ್ಲಿಕ್ ಮಾಡಿ. ನಂತರ ಕಂಪ್ಯೂಟರ್ ಮತ್ತು display ಅನ್ನು 1.5 ಗಂಟೆಗಳ ಅಥವಾ ಹೆಚ್ಚಿನ ಸಮಯದ ನಂತರ ನಿದ್ರೆಗೆ ಹೋಗುವಂತೆ ಹೊಂದಿಸಿ ಅಥವಾ "Never" ಆಯ್ಕೆಮಾಡಿ.