ಕಾವೇರಿ ಕೂಗು

‘ಕಾವೇರಿ ಕೂಗು’ ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ.

YousaveCauvery
wheat grass logo
 

ಒಂದು ಸಮಸ್ಯೆ, ಎರಡು ಮುಖಗಳು

ನಮ್ಮ ಕಾಲದ ಎರಡು ಪ್ರಮುಖ ಸಮಸ್ಯೆಗಳು ನಿಕಟತಮ ಸಂಬಂಧವನ್ನು ಹೊಂದಿದೆ.

 
kaveri river depletion
 

ಬರಿದಾಗುತ್ತಿರುವ ಕಾವೇರಿ

 • ಕಾವೇರಿಯು ಕಳೆದ 70 ವರ್ಷಗಳಲ್ಲಿ 39% ಕ್ಷೀಣಿಸಿದ್ದಾಳೆ.
 • ಕಾವೇರಿ ಜಲಾನಯನ ಪ್ರದೇಶದ ಅರ್ಧದಷ್ಟು ಭಾಗ ತೀವ್ರವಾದ ಅಂತರ್ಜಲದ ಇಳಿಕೆಯಿಂದ ಬಳಲುತ್ತಿದೆ.
 • ನದಿಯ ಜಲಾನಯನ ಪ್ರದೇಶದ 87% ಮರಗಳು ಮಾಯವಾಗಿ ಹೋಗಿವೆ.
 • ಬೇಸಿಗೆಯಲ್ಲಿ ಕಾವೇರಿಯು ಸಮುದ್ರವನ್ನೂ ತಲುಪುತ್ತಿಲ್ಲ.
 • ವರ್ಷದ ಹಲವಾರು ತಿಂಗಳು ಬತ್ತಿಹೋದ, ಮರಳುಗಾಡಿನಂತಿರುವ ನದಿಯ ತಳವಷ್ಟೇ ಲಕ್ಷಾಂತರ ಜನರಿಗೆ ಈಗ ನೋಡಲು ಸಿಗುವುದು.
causes of farmer distress in india
 

ರೈತರ ಬಿಕ್ಕಟ್ಟು

 • ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ರೈತರ ಬವಣೆ ಮತ್ತು ಆತ್ಮಹತ್ಯೆಗಳು ರಾಷ್ಟ್ರೀಯ ಸುದ್ದಿಯ ಮುಖ್ಯಾಂಶಗಳಾಗಿವೆ
 • ತಮಿಳುನಾಡಿನ 83% ರೈತರು ಮತ್ತು ಕರ್ನಾಟಕದ 77% ರೈತರು ಸಾಲದ ಸುಳಿಯಲ್ಲಿದ್ದಾರೆ
 • ಕರ್ನಾಟಕದಲ್ಲಿ ಕಳೆದ 18 ವರ್ಷಗಳಲ್ಲಿ 15 ವರ್ಷಗಳು ಬರಪೀಡಿತವಾಗಿದ್ದವು.
 • 2019 ರಲ್ಲಿ ತಮಿಳುನಾಡಿನ 17 ಜಿಲ್ಲೆಗಳು ಬರಪೀಡಿತ ಸ್ಥಿತಿಯಲ್ಲಿವೆ
 

ಕಾವೇರಿ ನದಿಯು ಏಕೆ ಸಾವಿನ ಅಂಚಿನಲ್ಲಿದೆ?

ಕಾವೇರಿ ನದಿ ನೀರಿನ ಬರಿದಾಗುವಿಕೆ ಮತ್ತು ರೈತರ ಸಂಕಷ್ಟಗಳು ಒಂದೇ ಮೂಲವನ್ನು ಹೊಂದಿವೆ - ಬರಡಾಗುತ್ತಿರುವ ಮಣ್ಣು.

ಎಲ್ಲ ಭಾರತೀಯ ನದಿಗಳಂತೆ ಕಾವೇರಿಯು ಕೂಡ ಅರಣ್ಯಪೋಷಿತ ನದಿ. ಐತಿಹಾಸಿಕವಾಗಿ ಈ ಪ್ರಾಂತ್ಯವೆಲ್ಲ ಅರಣ್ಯ ಹಾಗೂ ಗಿಡಮರಗಳಿಂದ ಆವೃತವಾಗಿತ್ತು. ಪ್ರಾಣಿಗಳ ಗೊಬ್ಬರ ಹಾಗೂ ಗಿಡಮರಗಳ ತ್ಯಾಜ್ಯಗಳಿಂದ ಆ ಪ್ರಾಂತ್ಯದ ಮಣ್ಣಿಗೆ ನಿರಂತರವಾಗಿ ಪೌಷ್ಟಿಕಾಂಶಗಳು ಮತ್ತು ಜೈವಿಕ ಪದಾರ್ಥ ಮರುಪೂರೈಕೆಯಾಗುತ್ತಿತ್ತು.

ಈ ಜೈವಿಕ ಪದಾರ್ಥವು ಅಲ್ಲಿನ ಮಣ್ಣು ನೀರನ್ನು ಹೀರಿಕೊಳ್ಳುವಂತೆ ಮಾಡಿ ಕಾವೇರಿಯನ್ನು ಪೋಷಿಸುತ್ತಿತ್ತು. ಆದರೆ ಜನಸಂಖ್ಯೆ ಹೆಚ್ಚಾಗುತ್ತಾ ಮರಗಳ ದಟ್ಟಣೆ ಕಡಿಮೆಯಾದಂತೆ, ಭೂಮಿಯ ಜೈವಿಕಾಂಶದ ಮರುಪೂರೈಕೆಯಾಗುತ್ತಿಲ್ಲ. ಭೂಮಿಯು ನೀರನ್ನು ಹೀರಿಟ್ಟುಕೊಳ್ಳುತ್ತಿಲ್ಲ, ಅದಕ್ಕೆ ಬದಲಾಗಿ ಭೂಸವೆತ ಉಂಟಾಗುತ್ತಿದೆ.

ಈ ಭೂಮಿಯು ಕಾವೇರಿಯನ್ನು ಪೋಷಿಸುವಲ್ಲಿ ವಿಫಲವಾಗುತ್ತಿದೆ, ಮತ್ತು ಕಾವೇರಿಯು ಬತ್ತಿಹೋಗುತ್ತಿದೆ.

soil erosion causes

ಏಕೈಕ ಪರಿಹಾರ

ಇದಕ್ಕೆ ಪರಿಹಾರ ಮಣ್ಣು. ನಾವು ಮಣ್ಣಿನ ಪೌಷ್ಟಿಕಾಂಶ ಮತ್ತು ಇಂಗಾಲದ ಅಂಶವನ್ನು ಮರುಪೂರೈಕೆ ಮಾಡಿದರೆ, ಅದು ಮತ್ತೊಮ್ಮೆ ಫಲವತ್ತಾಗುತ್ತದೆ, ಮಳೆನೀರನ್ನು ಹೀರಿ ಕಾವೇರಿಯನ್ನು ಪೋಷಿಸುತ್ತದೆ. ಇದು ನದಿಯ ಪರಿಸರವನ್ನು ಪುನರುಜ್ಜೀವನಗೊಳಿಸುವುದಲ್ಲದೆ ರೈತನ ಆರ್ಥಿಕ ಪರಿಸ್ಥಿತಿಯನ್ನೂ ಸುಧಾರಿಸುತ್ತದೆ.

ಮಣ್ಣನ್ನು ಮತ್ತೆ ಫಲವತ್ತಾಗಿಸಲು ಇರುವ ಸುಲಭವಾದ ಮತ್ತು ಅಗ್ಗವಾದ ದಾರಿ ಮರಗಳನ್ನು ನೆಡುವುದು.

 • ಸರ್ಕಾರಿ ಭೂಮಿಯಲ್ಲಿ ಸ್ಥಳೀಯ ಪ್ರಭೇದದ ಮರಗಳನ್ನು ನೆಡಬಹುದು.
 • ಖಾಸಗಿ ಜಮೀನುಗಳಲ್ಲಿ ರೈತರು ಅರಣ್ಯಕೃಷಿಗೆ ಬದಲಾಯಿಸಬಹುದು.ಅಂದರೆ ಸಾಂಪ್ರದಾಯಿಕ ಬೆಳೆಗಳ ಜೊತೆ ಹಣ್ಣುಗಳು ಮತ್ತು ಟಿಂಬರ್ ಮರಗಳನ್ನು ಒಂದೇ ಜಮೀನಿನಲ್ಲಿ ಬೆಳೆಯುವುದು.
YousaveCauvery
plantation of plants
 
"ಕಾವೇರಿ ಕೂಗು" ಅಭಿಯಾನದ ಗುರಿ ಏನು?
seperator
 
 • ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡುವುದು, ಮೊದಲ ಹಂತದಲ್ಲಿ 73 ಕೋಟಿ ಸಸಿಗಳನ್ನು ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ನೆಡುವುದು
 • ರೈತರ ಆದಾಯವನ್ನು ಐದು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಿಸುವುದು
 • ಕಾವೇರಿ ಜಲಾನಯನ ಪ್ರದೇಶದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು 40% ವೃದ್ಧಿಸುವುದು
 
replenish soil
ಮಣ್ಣು

ಮಣ್ಣಿನ ಪೋಷಕಾಂಶಗಳು ಮತ್ತು ಇಂಗಾಲದ ಅಂಶವನ್ನು ಮರುಪೂರೈಸುವುದು. ಇದು ನದಿ ಮತ್ತು ಸುತ್ತಮುತ್ತಲ ಪರಿಸರವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ.

increase kaveri river water
ನದಿ

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸುಮಾರು 40% ವೃದ್ಧಿಸುವುದು.

importance of agroforestry
ರೈತ

ಅರಣ್ಯಕೃಷಿಯ ಉತ್ಪನ್ನಗಳು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಮರಗಳು ಕೀಟಗಳನ್ನು ಕಡಿಮೆ ಮಾಡುತ್ತದೆಯಾದ್ದರಿಂದ ಫಸಲು ಉತ್ತಮವಾಗಿ ಆದಾಯವು ಹೆಚ್ಚುತ್ತದೆ.

 
 

ನದಿಯ ದುಃಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಕಾವೇರಿ ಕೂಗು ಅಭಿಯಾನವು ಲಕ್ಷಾಂತರ ಜನರನ್ನು ತಲುಪಲಿದೆ. ಇದು ಲಕ್ಷಾಂತರ ರೈತರನ್ನು ಸಂಪರ್ಕಿಸಿ ಅರಣ್ಯಕೃಷಿಯ ಪ್ರಯೋಜನಗಳ ಬಗ್ಗೆ ಅವರಿಗೆ ತಿಳಿಸುತ್ತದೆ. ಇದಲ್ಲದೆ ಅರಣ್ಯಕೃಷಿಗೆ ಬದಲಾಗಲು ರೈತರನ್ನು ಬೆಂಬಲಿಸಲು ಆಡಳಿತವರ್ಗದೊಂದಿಗೆ ಕೆಲಸ ಮಾಡುತ್ತದೆ.

ಸದ್ಗುರುಗಳು ಅವಳ ಕೂಗಿಗೆ ಓಗೊಟ್ಟಿದ್ದಾರೆ

ಸೆಪ್ಟೆಂಬರ್ ತಿಂಗಳಿನಲ್ಲಿ, ಸದ್ಗುರು ‘ಕಾವೇರಿ ಕೂಗು’ ಅಭಿಯಾನವನ್ನು ಎರಡು ವಾರಗಳ ಮೋಟರ್ ಸೈಕಲ್ ರ‍್ಯಾಲಿಯೊಂದಿಗೆ ಪ್ರಾರಂಭಿಸುತ್ತಿದ್ದಾರೆ. ಸದ್ಗುರು ಕಾವೇರಿಯ ಮೂಲಸ್ಥಳವಾದ ತಲಕಾವೇರಿಯಿಂದ ತಿರುವಾರೂರಿನವರೆಗೂ ಸಂಚರಿಸುತ್ತಾರೆ. ಅವರು ಪ್ರಮುಖ ನಗರಗಳಲ್ಲಿ ಹಲವು ಬೃಹತ್ ಕಾರ್ಯಕ್ರಮಗಳನ್ನು ನಡೆಸುತ್ತಾರೆ, ಮತ್ತು ಕಾವೇರಿಯುದ್ದಕ್ಕೂ ಇರುವ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ನೂರಾರು ಸಣ್ಣ ಕಾರ್ಯಕ್ರಮಗಳನ್ನೂ ನಡೆಸುತ್ತಾರೆ.

 

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ ...

 

ರ‍್ಯಾಲೀ ಫಾರ್ ರಿವರ್ಸ್

seperator

ರ‍್ಯಾಲೀ ಫಾರ್ ರಿವರ್ಸ್ (‘ನದಿಗಳನ್ನು ರಕ್ಷಿಸಿ’) ಎಂಬುದು ಭಾರತದ ಜೀವಸೆಲೆಗಳನ್ನು ರಕ್ಷಿಸುವ ಸಲುವಾಗಿರುವ ಒಂದು ಅಭಿಯಾನವಾಗಿದೆ. 16.2 ಕೋಟಿಗೂ ಹೆಚ್ಚು ಜನರ ಬೆಂಬಲ ಪಡೆದಿರುವ ಈ ಅಭಿಯಾನವು ಇಂದು ವಿಶ್ವದ ಅತಿದೊಡ್ಡ ಪರಿಸರ ಅಭಿಯಾನವಾಗಿದೆ. ನಮ್ಮ ನದಿಗಳ ದುಃಸ್ಥಿತಿಯ ಬಗ್ಗೆ ಜನಜಾಗೃತಿ ಮೂಡಿಸಲು 2017 ರಲ್ಲಿ ಸದ್ಗುರುಗಳು ಸ್ವತಃ ತಾವೇ 9300 ಕಿಲೋಮೀಟರ್ ಡ್ರೈವ್ ಮಾಡಿ ರ‍್ಯಾಲೀ ಫಾರ್ ರಿವರ್ಸ್ ಪ್ರಾರಂಭಿಸಿದರು.

ನದಿ ಪುನರುಜ್ಜೀವನದ ಕುರಿತ ಕರಡು ನೀತಿ ಶಿಫಾರಸನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಅಕ್ಟೋಬರ್ 2, 2017 ರಂದು ಸದ್ಗುರುಗಳು ಹಸ್ತಾಂತರಿಸಿದರು. ರ‍್ಯಾಲೀ ಫಾರ್ ರಿವರ್ಸ್ ಈಗ ಹಲವಾರು ರಾಜ್ಯಗಳ ನದಿ ಪ್ರದೇಶಗಳಲ್ಲಿ ನಡೆಯುತ್ತಿರುವ ಕೆಲಸದ ಮೂಲಕ ಪರಿಹಾರವನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವತ್ತ ಗಮನ ಹರಿಸಿದೆ.